Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಏಪ್ರಿಲ್ 06ರ ರಾಮನವಮಿಯಂದು ನಿಮ್ಮ ರಾಶಿಫಲದಲ್ಲಿ ಏನಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 06ರ ರಾಶಿಫಲ ಇಲ್ಲಿದೆ ನೋಡಿ
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಇಂದು ಹಲವು ವಿಚಾರದಲ್ಲಿ ನಿಮ್ಮ ನಿರ್ಧಾರ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು. ಅನಗತ್ಯ ಚರ್ಚೆಗಳು, ಗಲಾಟೆ, ಚರ್ಚೆಯಂತಹ ವಿಚಾರಗಳಿಗೆ ಮುಂದಾಗಬೇಡಿ. ಹೊಸ ವ್ಯಾಪಾರ ಒಪ್ಪಂದಕ್ಕೆ ನೀವು ಮುಂದಾಗಬಹುದು. ಭವಿಷ್ಯದಲ್ ನಿಮಗೆ ಯಶಸ್ಸ ತರುವ ನಿರ್ಧಾರ ತೆಗೆದುಕೊಳ್ಳಲು ಈ ದಿನವನ್ನು ಬಳಸಿಕೊಳ್ಳಿ, ಆದರೆ ನಿಮ್ಮ ಹತ್ತಿರದವರಿಂದ ನೀವು ನಿರೀಕ್ಷಿಸುವ ಬೆಂಬಲ ಸಿಗದಿರಬಹುದು. ಕೌಟುಂಬಿಕ ವಿಚಾರವಾಗಿ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ನೋಡಬಹುದು. ಅವಿವಾಹಿತರಲ್ಲಿ ಅನಾರೋಗ್ಯ ಸಮಸ್ಯೆ ನಿವಾರಣೆ ಸಾಧ್ಯವಿದೆ.
ವೃಷಭ ರಾಶಿ
ಇಂದು ವೃಷಭ ರಾಶಿಯವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿ ಹೊಸ ಶತ್ರುಗಳು ಹೊರಹೊಮ್ಮಬಹುದು, ಆದ್ದರಿಂದ ಅವರನ್ನು ಗುರುತಿಸುವುದು ಮುಖ್ಯ. ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳಿಗಿಂತ ತರ್ಕವನ್ನು ಅವಲಂಬಿಸುವುದು ಉತ್ತಮ. ಕೆಲಸದ ವಿಚಾರವಾಗಿ ಇದ್ದ ಅಡ್ಡಿ ಆತಂಕ ದೂರಾಗಲಿದೆ. ನೀವು ಮಾನಸಿಕವಾಗಿಯೂ ಚಡಪಡಿಕೆ ಅನುಭವಿಸುವ ಸಾಧ್ಯತೆಯಿದೆ. ಹೊಸ ವ್ಯಾಪಾರ ಉದ್ಯಮಗಳನ್ನು ಪ್ರಾರಂಭಿಸುವುದನ್ನು, ಹಾಗೆ ಅಪರಿಚಿತರಿಂದ ಉದ್ಯೋಗದ ಭರವಸೆಯಂತಹ ವಿಚಾರದಿಂದ ದೂರ ಉಳಿಯುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಉತ್ಪಾದಕ ದಿನವನ್ನು ನಿರೀಕ್ಷಿಸಬಹುದು. ಇಂದು ನಿಮಗೆ ಆಶಾದಾಯಕ ದಿನವಾಗಿರುತ್ತದೆ. ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ನಿವಾರಣೆಯಾಗಬಹುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಬೆಂಬಲ ಅಥವಾ ಸಹಕಾರ ನೀಡಬಹುದು. ಖರ್ಚುಗಳ ಕುರಿತಂತೆ ಎಚ್ಚರಿಕೆ ಅಗತ್ಯ, ಈ ದಿನ ಅನಗತ್ಯ ಖರ್ಚುಗಳಿಗೆ ನೀವು ಒಳಗಾಗಬೇಕಾಗಬಹುದು. ನಿಮ್ಮ ನಿರ್ಧಾರಗಳಿಂದ ಈ ದಿನ ಉತ್ತಮ ಫಲಿತಾಂಶ ನೋಡಬಹುದು. ನಿಮ್ಮ ಕೆಲಸಕ್ಕೆ ಅಡ್ಡಿಯಾಗುವ ಹಲವು ವಿಚಾರಗಳು ದೂರಾಗಲಿವೆ.
ಕರ್ಕ ರಾಶಿ
ಕೆಲಸದಲ್ಲಿ ನೀವು ಇಂದು ಮಿಶ್ರ ಫಲಿತಾಂಶ ಪಡೆಯಬಹುದು. ನಿಮ್ಮ ಕೆಲಸವು ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ್ದರೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಅಥವಾ ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನದಂದು ಹೊಸ ರೀತಿಯ ಬದಲಾವಣೆ ನೋಡಬಹುದು. ಹಣದ ವಿಷಯದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ಯಾವುದೇ ದೊಡ್ಡ ಖರ್ಚು ಮಾಡುವುದನ್ನು ತಪ್ಪಿಸುವುದು ಬಹಳ ಉತ್ತಮ. ದಾಂಪತ್ಯದಲ್ಲಿ ಈ ದಿನ ಸಣ್ಣ ಪುಟ್ಟ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಯಾವ ವಿಚಾರದಲ್ಲೂ ತಾಳ್ಮೆ ಕಳೆದುಕೊಳ್ಳಬೇಡಿ. ಸಮಯಕ್ಕೆ ಸರಿಯಾಗಿ ಕೆಲಸಗಳ ಪೂರ್ಣಗೊಳಿಸುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಸವಾಲಿನ ದಿನ ಆಗಬಹುದು. ನೀವು ಕೆಲಸ ಹುಡುಕುತ್ತಿದ್ದರೆ ಉತ್ತಮ ಅವಕಾಶ ಕೈ ತಪ್ಪಬಹುದು. ಕೆಲವು ಆರೋಗ್ಯ ಸಮಸ್ಯೆ ಕಾಡಬಹುದು. ಚರ್ಮ ಸಂಬಂಧಿ ಸಮಸ್ಯೆ ವ್ಯಾಪಾರಸ್ಥರು ಇಂದು ಯೋಗ್ಯವಾದ ಲಾಭವನ್ನು ಪಡೆಯಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಗಾಢವಾಗಬಹುದು. ನಿಮ್ಮ ನಡುವೆ ಯಾವುದೋ ವಿಚಾರದಲ್ಲಿ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಹಣಕಾಸು ವಿಚಾರವಾಗಿ ಎಚ್ಚರಿಕೆ ಇಂದ ಇರಿ, ವ್ಯವಹಾರ ಸಂಬಂಧ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಹಲವು ರೀತಿಯಲ್ಲಿ ಲಾಭ ಮಾಡುವ ದಿನ. ನಿಮ್ಮ ಮನೆಯ ವಾತಾವರಣವು ನಿಮ್ಮ ಪರವಾದ ಒಲವು ಹೊಂದಿರಲಿದೆ. ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೀವು ಮುಂದಾಗಬಹುದು. ಆದ್ರೆ ಈ ಪ್ರಯತ್ನದಲ್ಲಿ ಹಲವು ಸವಾಲು ಎದುರಾಗಬಹುದು. ನೀವು ಚಿಕ್ಕ ಲಾಭದಾಯಕ ವಿಷಯಗಳಿಗೂ ಗಮನ ಕೊಡಬೇಕು. ನೀವು ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡಬೇಕಾಗಬಹುದು, ಅದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಸಂಬಳ ಪಡೆಯುವವರು ಕಚೇರಿಯಲ್ಲಿ ಸಮಯವನ್ನು ಹೆಚ್ಚು ಕಳೆಯಬೇಕಾಗಬಹುದು. ಮನೆಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಸಂತೋಷದ ದಿನವಾಗಿ ಕಳೆಯಬಹುದು. ನಿಮ್ಮ ಪೋಷಕರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವು ಇಂದು ಕೊನೆಗೊಳ್ಳುತ್ತವೆ. ನೀವು ಸಂಬಂಧಿಯನ್ನು ಮುಖ್ಯ ಕೆಲಸಕ್ಕಾಗಿ ಭೇಟಿಯಾಗಬಹುದು. ಕಚೇರಿ ಕೆಲಸಗಳನ್ನು ಆತುರದಿಂದ ಮಾಡುವುದರಿಂದ ದೋಷಗಳು ಉಂಟಾಗಬಹುದು, ಆದ್ದರಿಂದ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಹೆಚ್ಚು ಸುಧಾರಿಸುತ್ತದೆ. ಅದೃಷ್ಟದ ಮೇಲಿನ ನಂಬಿಕೆಗಿಂತ ಶ್ರಮದ ಮೇಲೆ ನಂಬಿಕೆ ಇಡಿ. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ಎಲ್ಲಾ ಕೆಲಸಗಳು ನಿಮ್ಮ ಆಲೋಚನೆಯಂತೆ ಮುಗಿಯಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಮಿಶ್ರ ದಿನವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಶುಭಕರ ದಿನ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಇಂದು ಸವಾಲಿನ ದಿನವಾಗಿದೆ. ನಿಮ್ಮ ಸಂಗಾತಿಯೊಂದಿಗೆ ಘರ್ಷಣೆ ಸಾಧ್ಯ. ಇಂದು ಸ್ವಲ್ಪ ಆರ್ಥಿಕ ನಷ್ಟವೂ ಆಗಬಹುದು. ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಹೆಚ್ಚಾಗಲಿದೆ. ಅಧಿಕಾರಿಗಳ ಒತ್ತಡವು ನಿಮ್ಮ ಮೇಲೆ ಹೆಚ್ಚಾಗುತ್ತದೆ. ಹಲವು ದಿನದಿಂದ ಬಯಸಿದ್ದ ವಸ್ತುವೊಂದನ್ನು ನೀವು ಪಡೆದುಕೊಳ್ಳಬಹುದು. ವಾಹನ ಚಾಲಕರು ಎಚ್ಚರಿಕೆ ಇಡಿ.
ಧನು ರಾಶಿ
ಧನು ರಾಶಿಚಕ್ರದ ಜನರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ನಿಮಗೆ ತುಂಬಾ ಒಳ್ಳೆಯ ದಿನವಾಗಬಹುದು. ನೀವು ತುಂಬಾ ಉಲ್ಲಾಸ ಮತ್ತು ಚೈತನ್ಯವನ್ನು ಅನುಭವಿಸುವಿರಿ. ಮನೆಯ ಸದಸ್ಯರೊಂದಿಗೆ ಸಂತಸದ ಕ್ಷಣಗಳ ಕಳೆಯುವಿರಿ. ಹೀಗಾಗಿ ನಿಮ್ಮ ಮನದಲ್ಲಿ ಶಾಂತಿ ನೆಲೆಸಲಿದೆ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಆಪ್ತರೊಬ್ಬರಿಂದ ಅಗತ್ಯ ಕೆಲಸಕ್ಕೆ ನೆರವು ಪಡೆಯಬಹುದು. ಯಾವುದೇ ಕೆಲಸವನ್ನಾದರು ಶ್ರಮ ವಹಿಸಿ ಮಾಡುವುದು ಬಹಳ ಮುಖ್ಯ. ಹೀಗಾಗಿ ಹಣದ ವಿಷಯದಲ್ಲಿ ಇಂದು ತುಂಬಾ ದುಬಾರಿ ದಿನ ಆಗಬಹುದು. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರ ಆಗಬಹುದು, ನಿಮ್ಮ ಕೆಲಸದಲ್ಲಿ ಸುಲಭದ ಪ್ರತಿಫಲ ನೋಡುತ್ತೀರಿ. ಕೆಲಸದ ಹೊರೆ ಕಡಿಮೆಯಾಗುತ್ತದೆ. ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಕಾನೂನು ಸಮಸ್ಯೆಗಳು ಉದ್ಭವಿಸಿದರೆ, ಅನುಭವಿ ವ್ಯಕ್ತಿಗಳಿಂದ ಸಲಹೆ ಪಡೆಯಿರಿ. ನೀವು ಇತರರಿಗೆ ಸಹಾಯ ಮಾಡುವುದರಿಂದ ನಿಮ್ಮ ಕೆಲಸ ಪೂರ್ಣಗೊಳ್ಳದಿರಬಹುದು. ಉದ್ಯೋಗಿಗಳು ತಮ್ಮ ಕೈಯಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ಶ್ರಮಕ್ಕೆ ಇಂದು ಫಲ ಸಿಗುತ್ತದೆ. ಇಂದು ವ್ಯಾಪಾರಿಗಳಿಗೆ ಸರಾಸರಿ ದಿನವಾಗಲಿದೆ. ಅವರು ದೊಡ್ಡ ನಿರ್ಧಾರಕ್ಕೆ ಮುಂದಾಗುವುದು ಉತ್ತಮವಲ್ಲ.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ದಿನ ಹಲವು ಕೆಲಸಗಳನ್ನು ಒಂದೇ ಬಾರಿ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಬಹುದು. ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಇಂದು ಕೊನೆಗೊಳ್ಳುತ್ತದೆ. ಕಚೇರಿಯಲ್ಲಿ ಹೊಸ ಶತ್ರುಗಳು ಹೊರಹೊಮ್ಮಬಹುದು. ಚಿನ್ನ, ಬೆಳ್ಳಿ, ಆಸ್ತಿ, ಆಹಾರ ಮತ್ತು ಪಾನೀಯ ಇತ್ಯಾದಿಗಳ ವ್ಯಾಪಾರ ಮಾಡುವ ಜನರು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನ.
ಮೀನ ರಾಶಿ
ಕೆಲಸದ ವಿಚಾರಗಾಗಿ ನೀವಿಂದು ಬೇರೆ ಊರುಗಳಿಗೆ ಅಥವಾ ದೂರ ಪ್ರಯಾಣಕ್ಕೆ ಮುಂದಾಗಬಹುದು. ತಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ಬಡ್ತಿ ರೂಪದಲ್ಲಿ ಪಡೆಯುವ ಬಲವಾದ ಸಾಧ್ಯತೆಯಿದೆ. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಬಯಸಿದರೆ, ಶೀಘ್ರದಲ್ಲೇ ಯಶಸ್ಸನ್ನು ಪಡೆಯಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











