Latest Updates
-
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ!
ಏಪ್ರಿಲ್ 05ರ ಶನಿವಾರದಂದು ನಿಮಗೆ ಯಾವ ರೀತಿ ಲಾಭಗಳು ಕಾದಿವೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 05ರ ರಾಶಿಫಲ ಇಲ್ಲಿದೆ ನೋಡಿ
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನವು ಅತ್ಯಂತ ಶುಭವಾಗುವ ನಿರೀಕ್ಷೆ ಇದೆ. ನೀವು ಹೊಸ ಯೋಜನೆ ರೂಪಿಸಲು ಮುಂದಾದರೆ ನಿಮಗೆ ಶುಭ ತರುವಂತಹ ಹಲವು ವಿಚಾರಗಳು ಎದುರಾಗಲಿದೆ. ಮನೆಯ ವಾತಾವರಣವು ಸಾಮಾನ್ಯಕ್ಕಿಂತಲು ಶಾಂತಿಯಿಂದ ಕೂಡಿರಲಿದೆ. ಬೇರೆಯವರ ಕಷ್ಟಗಳಿಗೆ ನೆರವಾಗಬಹುದು. ಹಲವು ದಿನಗಳಿಂದ ನೀವು ಬಾಕಿ ಉಳಿಸಿದ್ದ ಕೆಲಸ ಇಂದು ಪೂರ್ಣ ಆಗಲಿದೆ. ಸಮಯವನ್ನು ಪರಿಪೂರ್ಣವಾಗಿ ಇಂದು ಬಳಸಿಕೊಳ್ಳಿ. ಪ್ರೀತಿಯ ವಿಚಾರವಾಗಿ ನಿಮ್ಮ ಪರವಾದ ಒಲವು ಇರಲಿದೆ, ಹಣಕಾಸು ವಿಚಾರದಲ್ಲಿ ನಿಮ್ಮದೇ ಗೆಲುವಾಗಬಹುದು. ಇಂದು ಹೊಸ ಗೆಳೆಯರ ಪರಿಚಯವಾಗಬಹುದು. ಉದ್ಯೋದಲ್ಲಿನ ಒತ್ತಡ ಕೂಡ ಇಂದು ಕಡಿಮೆ ಆಗುವ ನಿರೀಕ್ಷೆ ಇದೆ.
ವೃಷಭ ರಾಶಿ
ಇಂದು ನಿಮಗೆ ತುಂಬಾ ಫಲಪ್ರದ ದಿನವಾಗಲಿದೆ. ನಿಮ್ಮ ವ್ಯವಹಾರವನ್ನು ವಿದೇಶಕ್ಕೆ ಕೊಂಡೊಯ್ಯುವ ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಬಹುದು. ವ್ಯಾಪಾರಿಗಳು ಈ ದಿನದಂದು ಅನಿರೀಕ್ಷಿತವಾದ ಬದಲಾವಣೆಗಳಿಗೆ ಒಳಗಾಗಬೇಕಾಗಬಹುದು. ಹಲವು ದಿನಗಳ ನಿಮ್ಮ ಶ್ರಮವು ಇಂದು ಫಲ ನೀಡಲಿದೆ. ಅನಗತ್ಯ ವಿಚಾರಗಳಿಂದ ನೀವು ದೂರ ಉಳಿಯುವುದು ಉತ್ತಮ. ನಿಮ್ಮ ಮಗುವಿನ ಅಧ್ಯಯನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಇಂದು ನಿಮಗೆ ಉತ್ಸಾಹಭರಿತ ದಿನವಾಗಿರುತ್ತದೆ. ನೀವು ಹೊಸ ಯೋಜನೆಯನ್ನು ಪ್ರಾರಂಭಿಸಿದರೆ, ಅದರಲ್ಲಿ ಉತ್ತಮ ಹಣ ಗಳಿಸುವ ಸೂಚನೆ ಇದೆ. ಅವಿವಾಹಿತರಲ್ಲಿ ದೊಡ್ಡ ಸುದ್ದಿ ಕಾದಿದೆ.

ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಅತ್ಯಂತ ಫಲದಾಯಕ ದಿನ. ಏಕೆಂದರೆ ನಿಮ್ಮ ಬಹುದಿನದ ಬಯಕೆಯಂತೆ ಈ ದಿನ ಹೊಸ ಕೆಲಸಗಳು ಹುಡುಕಿ ಬರಬಹುದು. ಹಾಗೆ ಉದ್ಯೋಗ ಮಾಡುವವರು ಈ ದಿನ ವೇತನ ಹೆಚ್ಚಳ, ಬಡ್ತಿ, ವರ್ಗಾವಣೆಯ ವಿಚಾರವಾಗಿ ಖುಷಿಯಾಗಿರುತ್ತಾರೆ. ನೀವು ಇಂದು ಪ್ರವಾಸಕ್ಕೆ ಹೋದರೆ, ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಕುಟುಂಬದಲ್ಲಿ ಶುಭ ಕಾರ್ಯದ ಕುರಿತು ಯೋಜನೆಗಳು ರೂಪಿಸುತ್ತಾರೆ. ನಿಮ್ಮ ವೈವಾಹಿಕ ಜೀವದಲ್ಲಿ ಸಣ್ಣ ಪುಟ್ಟ ಮನಸ್ಥಾಪ ಬರಬಹುದು, ಆದ್ರೆ ಮಾತುಕತೆಯ ಮೂಲಕ ನಿವಾರಿಸಿಕೊಳ್ಳಿ. ವ್ಯವಹಾರವನ್ನು ಮುನ್ನಡೆಸಲು ನೀವು ಬಯಸಿದರೆ ಮತ್ತು ಹಣಕಾಸಿನ ಅಡೆತಡೆಗಳು ನಿಮ್ಮ ದಾರಿಯಲ್ಲಿ ಬರುತ್ತಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
ಕರ್ಕ ರಾಶಿ
ಈ ದಿನವು ನಿಮಗೆ ಪರಸ್ಪರ ಸಹಕಾರದ ಭಾವನೆಯನ್ನು ತರಲಿದೆ. ನಿಮ್ಮ ಆತ್ಮೀಯರು ಅಥವಾ ಸ್ನೇಹಿತರಿಂದ ನೀವು ಬೆಂಬಲ ಒಡೆಯಲಿದ್ದೀರಿ. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ದಿನ ಪೂರಕ ವಾತಾವರಣ ಇರಲಿದೆ. ಹಣಕಾಸಿನ ವಿಷಯಗಳಲ್ಲಿ ನೀವು ಯಾವುದೇ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಕೆಲಸದಲ್ಲಿ ಜವಾಬ್ದಾರಿ ಇರಲಿ.
ಸಿಂಹ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ನೀವು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಣೆ ಆಗಲಿದೆ. ಹೂಡಿಕೆ ಮಾಡಿದ್ದ ಹಣದಿಂದ ಲಾಭ ಮಾಡುವ ದಿನ ಇದಾಗಲಿದೆ. ಪ್ರೀತಿಯ ವಿಚಾರದಲ್ಲಿ ಹಿಂದೆಂದಿಗಿಂತಲೂ ಉತ್ತಮ ದಿನವಿದು. ನಿಮ್ಮ ಪೋಷಕರ ಆರೋಗ್ಯದ ಮೇಲೆ ಗಮನವಿರಲಿ. ಹೊಸ ಕೆಲಸ ಆರಂಭಿಸಿದ್ದರೆ ಈ ದಿನ ನಿಮ್ಮ ಕಷ್ಟಗಳು ನಿವಾರಣೆಯಾಗಬಹುದು. ಬಾಕಿ ಉಳಿದ ಹಣ ನಿಮ್ಮ ಕೈ ಸೇರಬಹುದು. ಕೆಲಸದ ಸ್ಥಳದಲ್ಲಿ ತಾಳ್ಮೆ ಮತ್ತು ಧೈರ್ಯದಿಂದ ಕೆಲಸ ಮಾಡಬೇಕು.
ಕನ್ಯಾ ರಾಶಿ
ಇಂದು ನಿಮ್ಮ ಖರ್ಚುಗಳ ಮೇಲೆ ನಿಯಂತ್ರಣ ಕಾಯ್ದುಕೊಳ್ಳುವುದು ಉತ್ತಮ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿದ್ದರೆ ಈ ದಿನ ನಿವಾರಿಸಿಕೊಳ್ಳಲು ಸೂಕ್ತ ದಿನ. ಅನಗತ್ಯ ವೆಚ್ಚಗಳಿಂದಾಗಿ ನಿಮ್ಮ ಬಜೆಟ್ ಅಸಮತೋಲನವಾಗಬಹುದು. ಅದು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನೀವು ತುಂಬಾ ಕಷ್ಟಪಡಬೇಕಾಗಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ಪ್ರಯೋಜನವನ್ನು ಪಡೆಯುವ ಸಾಧ್ಯತೆಯೂ ಇದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಜನರು ತಮ್ಮ ಕಠಿಣ ಪರಿಶ್ರಮದಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಡಬಾರದು. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳಿವೆ.
ತುಲಾ ರಾಶಿ
ಇಂದು ನೀವು ಚಿಂತನಶೀಲವಾಗಿ ಕೆಲಸ ಮಾಡುವ ದಿನವಾಗಿರುತ್ತದೆ. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಕೆಲವು ವಿವಾದಗಳನ್ನು ಹೊಂದಿರಬಹುದು. ಕೋಪದಲ್ಲಿ ತಪ್ಪು ಪದಗಳನ್ನು ಬಳಸಬೇಡಿ ಹಾಗೆ ತಾಳ್ಮೆಯಿಂದ ಕಷ್ಟಗಳ ಎದುರಿಸಿದರೆ ನಿಮಗೆ ಒಳಿತಾಗಲಿದೆ. ವ್ಯಾಪಾರಸ್ಥರು ಇಂದು ಮಿಶ್ರ ಫಲಕ್ಕೆ ಒಳಗಾಗುತ್ತಾರೆ. ಆದಾಯ ಹೆಚ್ಚಾಗುವ ಜೊತೆಗೆ ಖರ್ಚು ಕೂಡ ಹೆಚ್ಚಾಗಬಹುದು, ಹೀಗಾಗಿ ಯಾವುದೇ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಕೌಟುಂಬಿಕ ಜೀವನದಲ್ಲಿ ಈ ದಿನ ಸಂತಸ ಇರಲಿದೆ.
ವೃಶ್ಚಿಕ ರಾಶಿ
ಇಂದು ನೀವು ಯಾವುದೇ ಚರ್ಚೆಯಿಂದ ದೂರವಿರಬೇಕಾದ ದಿನವಾಗಿರುತ್ತದೆ. ನೀವು ಉದ್ಯಮಿಯಾಗಿದ್ದರೆ ಮತ್ತು ದೀರ್ಘಕಾಲದವರೆಗೆ ನಿಮ್ಮ ಪ್ರಮುಖ ಕೆಲಸದಲ್ಲಿ ಸರ್ಕಾರದ ಕೆಲವು ಅಡಚಣೆಗಳು ಇದ್ದಲ್ಲಿ ನಿವಾರಣೆ ಆಗುವ ಸಾಧ್ಯತೆ ಅಧಿಕವಾಗಿದೆ. ಪಾಲುದಾರಿಕೆ ಉದ್ಯಮದಲ್ಲಿದ್ದರೆ ನಿಮ್ಮ ವ್ಯವಹಾರದಲ್ಲಿ ಏರುಪೇರು ನೋಡಬಹುದು, ಲೆಕ್ಕಾಚಾರಗಳು ಸಮಸ್ಯೆಗಳ ತರಬಹುದು. ಹಣಕಾಸಿನ ವಿಚಾರದಲ್ಲಿ ಗೊಂದಲದಲ್ಲಿ ನೀವು ಸಿಲುಕಬಹುದು. ಆದರೆ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆ ನಿವಾರಣೆ ಆಗಲಿದೆ.
ಧನು ರಾಶಿ
ಇಂದು ನೀವು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಬಹುದು, ಆದರೆ ಈ ದಿನವು ಅತ್ಯಂತ ಒತ್ತಡವಾಗಿ ಪರಿಣಮಿಸಬಹುದು, ವಾಹನ ಚಾಲಕರು ಬಹಳ ಎಚ್ಚರಿಕೆ ವಹಿಸಬೇಕು. ನಿಮ್ಮ ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ನಿಮ್ಮ ಕೆಲಸದ ಜೊತೆಗೆ ನಿಮ್ಮ ಕುಟುಂಬ ಸದಸ್ಯರಿಗೂ ಸಮಯ ಮೀಸಲಿಡುತ್ತೀರಿ. ನಿಮ್ಮ ಕೆಲಸದಲ್ಲಿ ಯಾವುದಾದರು ಬದಲಾವಣೆ ನೀವು ಬಯಸಿದರೆ ಈ ದಿನ ಸೂಕ್ತ ಅವಕಾಶ ಪಡೆಯಬಹುದು. ಸಂಗಾತಿಗಾಗಿ ಇಂದು ನಿಮ್ಮ ಬಿಡುವಿಲ್ಲದ ದಿನಚರಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಹಣದ ವಿಷಯದಲ್ಲಿ ನಿಮಗೆ ಸಾಮಾನ್ಯ ದಿನ ಎನ್ನಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ಕಾಡಬಹುದು. ನಿಗದಿತ ಆರೋಗ್ಯ ತಪಾಸಣೆ ಮರೆಯಬೇಡಿ.
ಮಕರ ರಾಶಿ
ಇಂದು ನೀವು ಬಹಳ ಪ್ರಯಾಣಿಸಬೇಕಾಗಬಹುದು. ಕೆಲಸದ ನಿಮಿತ್ತ ಮನೆಯಿಂದ ಬಹಳ ಕಾಲ ಹೊರಗೆ ಇರಬೇಕಾಗುತ್ತದೆ. ಹೀಗಾಗಿ ನಿಮ್ಮ ಆರೋಗ್ಯದ ಮೇಲೆ ಕಾಳಜಿ ಇಡುವುದು ಉತ್ತಮ. ನಿಮ್ಮ ಪ್ರಗತಿಗೆ ಅಡ್ಡಿಯಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಫಿಟ್ನೆಸ್ ಕಡೆ ಗಮನವಿಡಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣ ಇರುತ್ತದೆ, ಏಕೆಂದರೆ ನೀವು ಹಿರಿಯ ಸದಸ್ಯರ ಮಾತುಗಳಿಗೆ ಪ್ರಾಮುಖ್ಯತೆ ನೀಡುತ್ತೀರಿ. ಮನೆಗೆ ಬೇಕಾದ ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ಹಣ ನೀಡಿದ್ದರ ಬಗ್ಗೆ ಲೆಕ್ಕ ಇಡುವುದು ಸೂಕ್ತ.
ಕುಂಭ ರಾಶಿ
ಇಂದು ದೇವಾಲಯ ಭೇಟಿಗೆ ನೀವು ಮುಂದಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಕೆಲಸಗಳಿಂದ ವಿಶ್ರಾಂತಿ ಪಡೆಯುವ ಕಡೆಗೆ ನೀವು ಗಮನವಿಡಬಹುದು. ಮಕ್ಕಳ ಕಡೆಯಿಂದ ಒತ್ತಡ ಎದುರಿಸಬೇಕಾಗಬಹುದು. ಸಣ್ಣ ಪುಟ್ಟ ಅನಾರೋಗ್ಯವನ್ನು ಸಹ ನಿರ್ಲಕ್ಷಿಸಲು ಹೋಗಬೇಡಿ. ಉದರ ಸಂಬಂಧಿ ಸಮಸ್ಯೆ ಇದ್ದರೆ ಚಿಕಿತ್ಸೆ ಪಡೆಯುವುದು ಉತ್ತಮ. ನಿಮ್ಮ ಕೆಲಸಗಳಲ್ಲಿ ಅಡ್ಡಿಯಾಗುವ ವಿಚಾರಗಳನ್ನು ಧೈರ್ಯವಾಗಿ ಎದುರಿಸಿ. ನಿಮ್ಮ ಬಯಕೆಯ ದಿನಗಳು ಹತ್ತಿರವಾಗುತ್ತಿವೆ. ಯಾವುದೇ ವಿಚಾರವಾದರು ಪ್ರಮಾಣಿಕ ಪ್ರಯತ್ನ ಇರಲಿ.
ಮೀನ ರಾಶಿ
ನಿಮ್ಮ ಕಡೆಯಿಂದ ಕಷ್ಟಪಟ್ಟು ಕೆಲಸ ಮಾಡುತ್ತೀರಿ, ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಕೆಲವು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಇಂದು ವ್ಯಾಪಾರ ವರ್ಗದವರಿಗೆ ತುಂಬಾ ಒಳ್ಳೆಯ ದಿನ. ಲಾಭದಾಯಕ ದಿನವಾಗಿ ಪರಿವರ್ತಿಸುವ ಅವಕಾಶ ನಿಮ್ಮದಾಗಲಿದೆ. ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











