ಏಪ್ರಿಲ್ 04ರ ಶುಕ್ರವಾರದಂದು ಯಾವೆಲ್ಲಾ ರಾಶಿಯವರಿಗೆ ಶುಭ..?

ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 04ರ ರಾಶಿಫಲ ಇಲ್ಲಿದೆ ನೋಡಿ:

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಾರೆ. ನಿಮ್ಮ ದೈನಂದಿನ ಕೆಲಸಗಳು ಎಂದಿಗಿಂತ ಹೆಚ್ಚು ನಿಧಾನಗತಿಯಲ್ಲಿ ನಡೆಯಲಿದೆ. ನಿಮಗೆ ಬೇರೆ ಕೆಲಸಕ್ಕೆ ಆಫರ್ ಸಿಗುವ ಸಾಧ್ಯತೆಯೂ ಇದೆ. ದೂರದಲ್ಲಿ ವಾಸಿಸುವ ಕುಟುಂಬ ಸದಸ್ಯರನ್ನು ನೀವು ಕಳೆದುಕೊಳ್ಳಬಹುದು. ನಿಮ್ಮ ಯಾವುದೇ ವ್ಯವಹಾರಗಳ ಬಗ್ಗೆ ನೀವು ಆಲಸ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಈ ದಿನ ಶುಭವಾಗುತ್ತಿದೆ. ಹಾಗೆ ಸರ್ಕಾರಿ ನೌಕರರು ಶ್ರಮ ವಹಿಸಿ ಕೆಲಸ ಮಾಡುವುದು ಉತ್ತಮ ಆರ್ಥಿಕವಾಗಿ ಈ ದಿನ ಸುಮಾರಾಗಿರಲಿದೆ.

ವೃಷಭ ರಾಶಿ

ಇಂದು ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಕುಟುಂಬ ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕಾಗುತ್ತದೆ. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮನೆಯ ವಾತಾವರಣವು ಶಾಂತವಾಗಿರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧದಲ್ಲಿ ಸುಧಾರಿಸಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ನೋಡಬಹುದು ಇದು ನಿಮಗೆ ನೆಮ್ಮದಿ ತರಲಿದೆ. ಹಲವು ದಿನದಿಂದ ಬಯಸಿದ್ದ ವಸ್ತುವೊಂದು ನಿಮ್ಮ ಕೈ ಸೇರಲಿದೆ.

April-04-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನವು ಆರೋಗ್ಯಕರ ಲಾಭಗಳಿಂದ ತುಂಬಿದೆ. ವಾಹನಗಳನ್ನು ಬಳಸುವುದರಿಂದ ದೂರವಿರುವುದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಸವಾಲುಗು ಎದುರಾಗಬಹುದು. ನಿಮ್ಮದಲ್ಲದ ವಸ್ತುಗಳಿಂದ ನೀವು ದೂರವೇ ಇರುವುದು ಉತ್ತಮ. ಸ್ನೇಹಿತರ ಮಾತಿನಿಂತೆ ಅಸಾಧ್ಯ ಕೆಲಸಗಳಿಗೆ ಇಂದು ಮುಂದಾಗಬೇಡಿ. ಇಂದು ದೀರ್ಘಕಾಲದಿಂದ ಸಿಲುಕಿಕೊಂಡಿರುವ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ.

ಕರ್ಕ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ದಿನವಾಗಲಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ನೀವು ತಾಳ್ಮೆಯಿಂದಿರಬೇಕು. ಉದ್ಯೋಗದ ಸ್ಥಳದಲ್ಲಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮುಂದಾಗಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಯಾವುದೇ ಹಳೆಯ ಸಾಲವನ್ನು ಕೂಡ ಮರಳಿಸಬಹುದು. ನಿಮ್ಮ ಪ್ರಗತಿಯ ಕನಸು ಶೀಘ್ರದಲ್ಲೇ ಈಡೇರುವ ಬಲವಾದ ಸಾಧ್ಯತೆಯೂ ಇದೆ. ಮಕ್ಕಳ ವಿಚಾರದಲ್ಲಿ ಇಂದು ಹೆಚ್ಚು ಗಮನವಿಡಿ. ನಿಮ್ಮ ಹಣಕಾಸು ವಿಚಾರವಾಗಿ ಹೇಳುವುದಾದರೆ ಇಂದು ಅನಗತ್ಯವಾಗಿ ಹಣ ಕಳೆದುಕೊಳ್ಳಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಈ ದಿನವು ಅತ್ಯಂತ ಹೆಚ್ಚಿನ ಒತ್ತಡಕ್ಕೆ ಒಳಗಾಗಬಹುದು. ಮನೆಯಲ್ಲಿ ನಿಮ್ಮ ಪರವಾದ ಒಲವು ಇರುವುದಿಲ್ಲ, ಮದುವೆ ಸಂಬಂಧ ಒತ್ತಡ ಹೆಚ್ಚಾಗಬಹುದು. ನೀವು ಆಸ್ತಿ ಖರೀದಿಸಲು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಕುಟುಂಬ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ಈ ದಿನ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇದರಿಂದ ಅನಗತ್ಯ ಸಮಸ್ಯೆಗಳ ನೀವು ಎದುರಿಸಬೇಕಾಗಬಹುದು. ಆಧ್ಯಾತ್ಮಿಕ ಒಲವು ಹೆಚ್ಚಾಗಬಹುದು. ನೀವು ಬುದ್ಧಿವಂತಿಕೆಯಿಂದ ವರ್ತಿಸಿದರೆ ವಿಷಯ ದೊಡ್ಡದಾಗುವುದಿಲ್ಲ. ಹಣದ ಸ್ಥಿತಿ ಚೆನ್ನಾಗಿರುತ್ತದೆ. ನೀವು ಅಧಿಕ ಖರ್ಚು ಮಾಡುವುದನ್ನು ತಪ್ಪಿಸುವುದು ಸೂಕ್ತ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.

ಕನ್ಯಾ ರಾಶಿ

ಅವಿವಾಹಿತ ಮಂದಿಗೆ ಈ ದಿನ ಬಹಳ ಶುಭವಾಗಬಹುದು. ನೀವು ಉದ್ಯೋಗ ಹುಡುಕುತ್ತಿರುವ ಅವಿವಾಗಿತರಾಗಿದ್ದರೆ ನಿಮಗಾಗಿ ಸೂಕ್ತ ಕೆಲಸಗಳು ಸಿಗಬಹುದು. ನಿಮ್ಮ ಸುತ್ತಲಿನ ಪರಿಸರ ಆಹ್ಲಾದಕರವಾಗಿರುತ್ತದೆ. ನೀವು ನಿಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ಬಡವರ ಸೇವೆಗಾಗಿ ಖರ್ಚು ಮಾಡುತ್ತೀರಿ. ನೀವು ಯಾವುದೇ ದೈಹಿಕ ನೋವಿನಿಂದ ಬಳಲುತ್ತಿದ್ದರೆ ಅದು ಕೂಡ ದೂರವಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ನೆನೆಪಿನಿಂದ ಸಂಪೂರ್ಣ ಮಾಡಿ. ವಾಹನ ಚಾಲಕರಲ್ಲಿ ಎಚ್ಚರಿಕೆ ಅಗತ್ಯ.

ತುಲಾ ರಾಶಿ

ಈ ದಿನವು ನಿಮಗೆ ಸಂಪತ್ತು ಮತ್ತು ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗಲಿದೆ. ನೀವು ವ್ಯಾಪಾರಿ ವಲಯದಲ್ಲಿದ್ದರೆ ಈ ದಿನ ಬಹಳಷ್ಟು ಲಾಭದಾಯಕ ಹೆಜ್ಜೆಯನ್ನಿಡುತ್ತೀರಿ. ಹಾಗೆ ಸ್ವಂತ ಉದ್ಯಮ ನಡೆಸುತ್ತಿದ್ದರೆ ಅದರ ಪ್ರಗತಿಗಾಗಿ ದೊಡ್ಡ ನಿರ್ಧಾರ ಕೈಗೊಳ್ಳುವಿರಿ, ಈ ದಿನ ಪಟ್ಟ ಶ್ರಮವು ಮುಂದೆ ಉತ್ತಮ ಫಲುತಾಂಶ ತಂದು ಕೊಡಲಿದೆ. ಮನೆಗೆ ನೀವು ವಸ್ತುವೊಂದನ್ನು ಖರೀದಿಸಬಹುದು. ನಿಗದಿತ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ. ಇಂದು ಜೀವನ ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು.

ವೃಶ್ಚಿಕ ರಾಶಿ

ನೀವು ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಖರ್ಚುಗಳ ಮೇಲೆ ಗಮನವಿಡಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಸುಧಾರಿಸಲು ಪ್ರಯತ್ನಿಸಿ. ನೀವು ವ್ಯಾಪಾರಿಗಳಾಗಿದ್ದರೆ ಇಂದು ದೊಡ್ಡ ನಿರ್ಧಾರಕ್ಕೆ ಮುಂದಾಗಬೇಡಿ. ಕೌಟುಂಬಿಕ ವಿಚಾರದಲ್ಲಿ ಸುಖ ಶಾಂತಿ ಇರಲಿದೆ. ಪೋಷಕರೊಂದಿಗೆ ನಿಮ್ಮ ಸಂಬಂಧ ಹಿತವಾಗಿರುತ್ತದೆ. ಹಿರಿಯ ಸಹೋದರರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ನೀವು ಕೆಲವು ಹೊಸ ಜನರನ್ನು ಭೇಟಿಯಾಗುತ್ತೀರಿ. ಯಾರಾದರೂ ನಿಮಗೆ ಕೆಲಸದ ಬಗ್ಗೆ ಸಲಹೆ ನೀಡಬಹುದು. ಮುಖ್ಯ ಕೆಲಸವೊಂದನ್ನು ನೀವು ಮರೆತುಬಿಡಬಹುದು.

ಧನು ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ನೀವು ಕೆಲವು ಕೆಲಸವನ್ನು ಬಾಕಿ ಇಡುವುದು ಸಮಸ್ಯೆಗೆ ಕಾರಣವಾಗಬಹುದು. ಹಾಗೆ ಹಣಕಾಸು ವಿಚಾರದಲ್ಲಿ ಎಲ್ಲರನ್ನು ಬಹುಬೇಗ ನಂಬುವುದು ಕೂಡ ಸಮಸ್ಯೆಗಳಿಗೆ ದಾರಿಯಾಗಬಹುದು. ನಿಮ್ಮ ಸಮಸ್ಯೆಗಳಿಗೆ ಏಕಾಂಗಿಯಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ನಿಮ್ಮಲ್ಲಿ ಹೊಸತನ್ನು ಮಾಡುವ ಮನೋಬಲ ಹೆಚ್ಚಾಗಬಹುದು. ಆತ್ಮೀಯರೊಬ್ಬರ ವಿಚಾರದಲ್ಲಿ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು.

ಮಕರ ರಾಶಿ

ಮಕರ ರಾಶಿಯವರು ಈ ದಿನ ಬಹಳಷ್ಟು ಒತ್ತಡದಿಂದ ಇರಬೇಕಾಗುತ್ತದೆ. ದಿನದ ಆರಂಭದಿಂದಲೂ ಕೆಲಸಗಳು ಹೆಚ್ಚಾಗಬಹುದು. ಇಂದು ನೀವು ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮತ್ತೊಂದೆಡೆ ಉದ್ಯೋಗಿಗಳು ಕಚೇರಿಯಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಈ ದಿನ ಯಾರ ಮಾತಿನಂತೆಯೂ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ. ನಿಮ್ಮ ಆಲೋಚನೆಗೆ ಹೆಚ್ಚು ಒತ್ತು ನೀಡಿ. ಬಹಳ ಕಾಲದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡುವಿರಿ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ದಿನದಂದು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಹಾಗೆ ಅವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ದೀರ್ಘಕಾಲದ ಕಠಿಣ ಪರಿಶ್ರಮ ಇಂದು ಯಶಸ್ವಿಯಾಗಬಹುದು. ನೀವು ಪೂರ್ವಜರ ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಅದರಿಂದ ಲಾಭ ಮಾಡಬಹುದು. ಉದ್ಯೋಗಿಗಳು ಈ ದಿನ ಬಹಳ ಕೆಲಸ ಮಾಡಿದರೂ ಕಠಿಣ ದಿನವಾಗಿ ಅವರಿಗೆ ಪರಿಣಮಿಸಲಿದೆ. ನಿಮ್ಮ ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ಸಂತೋಷದ ಕ್ಷಣ ಇರಲಿದೆ. ಮನೆಯಲ್ಲಿ ಶುಭ ಕಾರ್ಯ ಸಂಬಂದ ಚರ್ಚೆ ನಡೆಯಲಿದೆ. ಮೂಳೆ, ಕೀಲು ಸಂಬಂಧಿ ಸಮಸ್ಯೆ ಹೊಂದಿದ್ದರೆ ಎಚ್ಚರಿಕೆ ಇಡಿ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನ ಬಹಳ ಕಾಲದ ಹಣಕಾಸು ಸಮಸ್ಯೆಯಿಂದ ಹೊರ ಬರಬಹುದು. ಆದ್ರೆ ಎಲ್ಲಿಯೂ ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಲು ಮುಂದಾಗಬೇಡಿ. ಇಂದು ನಿಮ್ಮ ಕುಟುಂಬಸ್ಥರಿಂದ ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು. ಹಣದ ವಿಷಯದಲ್ಲಿ ದುಬಾರಿಯಾಗಲಿದೆ, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಬಾಕಿ ಉಳಿಸಿದ್ದ ಕೆಲಸಗಳ ಪೂರ್ಣ ಮಾಡಿ. ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ಒತ್ತಡ ಗಮನಾರ್ಹವಾಗಿ ಹೆಚ್ಚಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-04-daily-horoscope-prediction-for-12-zodiac-signs-in-kannada

Here is April 04 daily horoscope prediction for 12 zodiac signs read on... ಏಪ್ರಿಲ್ 04ರ ದಿನ ಭವಿಷ್ಯ
Story first published: Friday, April 4, 2025, 6:04 [IST]
X
Desktop Bottom Promotion