ಏಪ್ರಿಲ್ 03ರ ಗುರುವಾರ ನಿಮ್ಮ ರಾಶಿಫಲದಲ್ಲಿ ಏನಿದೆ?

ಜ್ಯೋತಿಷ್ಯಶಾಸ್ತ್ರ ಪ್ರಕಾರ ಏಪ್ರಿಲ್ 03ರ ರಾಶಿಫಲ ನೋಡೋಣ:

ಮೇಷ ರಾಶಿ

ಈ ದಿನ ನಿಮಗೆ ಹಲವು ಕಾರಣಗಳಿಂದಾಗಿ ಶುಭವಾಗುತ್ತಿದೆ. ನಿಮ್ಮ ಬಹಳ ಸಮಯದ ಆಸೆಯೊಂದು ಈ ಸಮಯದಲ್ಲಿ ನೆರವೇರಲಿದೆ. ಹಾಗೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮಗೆ ಬರಬೇಕಿದ್ದ ಹಣವೊಂದು ಬಹಳ ಬೇಗ ನಿಮ್ಮ ಕೈ ಸೇರಬಹುದು. ಅನೇಕ ಸಮಯದಿಂದ ನೀವು ಮಾಡಲು ಇಷ್ಟಪಟ್ಟಿದ್ದ ಕೆಲಸ ಮಾಡಿ ಮುಗಿಸುವಿರಿ. ವ್ಯಾಪಾರಿ ಸಂಬಂಧ ಜನರಲ್ಲಿ ಈ ದಿನ ಬಹಳಷ್ಟು ಓಡಾಟ ಇರಬಹುದು. ನಿಮ್ಮ ಹಲವು ಕೆಲಸಗಳು ಅತ್ಯಂತ ಸುಲಭವಾಗಿ ನಡೆಯಲಿದೆ. ಆದರೆ ಈ ದಿನ ನಿಮ್ಮ ಖರ್ಚು ವೆಚ್ಚಗಳ ನಿಭಾಯಿಸುವ ಕುರಿತು ಆದಷ್ಟು ಗಮನವಿಡಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ವೃತ್ತಿ ಜೀವನದಲ್ಲೂ ಕೂಡ ಧನಾತ್ಮಕ ಬದಲಾವಣೆ ನೋಡಬಹುದಾಗಿದೆ. ನಿಮ್ಮ ಯಶಸ್ಸಿಗೂ ಮೊದಲೇ ಯೋಜನೆಗಳ ಕುರಿತಾಗಿ ಬೇರೆಯವರಿಗೆ ತಿಳಿಸದಿರುವುದು ಉತ್ತಮ.

Here is April 03 daily horoscope prediction for 12 zodiac signs read on 03

ವೃಷಭ ರಾಶಿ

ನಿಮ್ಮ ದಿನದ ಆರಂಭದಲ್ಲಿ ಆತಂಕ ಎದುರಿಸಬೇಕಾಗಬಹುದು ಏಕೆಂದರೆ ಈ ದಿನ ನಿಮ್ಮ ಅತ್ಯಂತ ಅಮೂಲ್ಯ ವಸ್ತುವೊಂದು ನಿಮ್ಮಿಂದ ದೂರಾಗಬಹುದು. ಈ ದಿನ ನೀವು ಕೆಲಸದ ಕಾರಣಕ್ಕೆ ದೂರ ಪ್ರಯಾಣಕ್ಕೆ ಮುಂದಾಗಬಹುದು. ಉದ್ಯೋಗದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು. ಮನೆಗಾಗಿ ನೀವು ಬಹಳ ಸಮಯದಿಂದ ಬಯಸಿದ್ದ ಬದಲಾವಣೆ ಮಾಡಲು ಮುಂದಾಗಬಹುದು. ಹಲವು ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳನ್ನು ನೀವು ಪೂರ್ಣ ಮಾಡಬಹುದು. ಆರೋಗ್ಯದ ಕಡೆಗೆ ಹೆಚ್ಚು ಗಮನ ಇಡುವುದು ಉಳಿತು. ಈ ಸಮಯದಲ್ಲಿ ನಿಮ್ಮ ಸಂಬಂಧಿಕರು ಶುಭ ಸುದ್ದಿ ನೀಡಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟಗಾರರು ಲಾಭ ಮಾಡತ್ತಾರೆ. ಯಾವುದೇ ಕೆಲಸವನ್ನಾದರು ಬಹಳ ಎಚ್ಚರಿಕೆಯಿಂದ ಮಾಡಲು ಮುಂದಾಗಿ.

ಮಿಥುನ ರಾಶಿ

ನೀವು ಇಂದು ಯಾವ ರೀತಿಯ ನಿರ್ಧಾರಗಳ ತೆಗೆದುಕೊಳ್ಳುತ್ತೀರಿ ಅನ್ನುವುದರ ಮೇಲೆ ಇಂದಿನ ದಿನ ನಿಮ್ಮ ಲಾಭ ನಷ್ಟದ ಲೆಕ್ಕಾಚಾರ ನಿಂತಿದೆ. ನೀವಿಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ. ರೈತರಾಗಿದ್ದವರಿಗೆ ಈ ದಿನ ಶುಭವಾಗುತ್ತಿದೆ. ಹಾಗೆ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಏಜೆಂಟ್ ಇದ್ದರೆ ಈ ದಿನ ಲಾಭ ಮಾಡಬಹುದು. ಬಂಧುಗಳಿಂದ ಉತ್ತಮ ಸಹಕಾರ ಪಡೆಯಲಿದ್ದೀರಿ. ನೀವು ಮಾಡಬೇಕು ಎಂದು ಬಯಸಿರುವ ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸಿ. ನಿಮ್ಮಿಂದಾಗಿ ಮನೆಯಲ್ಲಿ ಶಾಂತಿ ಇರಲಿದೆ. ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ನಿಮಗೆ ಶುಭವಾಗುತ್ತದೆ. ಕೆಲಸದಲ್ಲಿ ಶ್ರಮ ವಹಿಸಿ. ಮನೆಯಲ್ಲಿ ಹೇಳಿರುವ ಕೆಲಸಗಳ ಮರೆಯದೇ ಇರುವುದು ಉತ್ತಮ.

ಕರ್ಕ ರಾಶಿ

ಕರ್ಕ ರಾಶಿಯವರು ಇಂದು ಹತ್ತಾರು ಕೆಲಸಗಳನ್ನು ಒಟ್ಟಿಗೆ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಬಹುದು. ಹಾಗೆ ದೂರ ಪ್ರಯಾಣದಂತಹ ಕೆಲಸಕ್ಕೂ ಮುಂದಾಗಬಹುದು. ಯಾವ ಕಡೆಗೆ ನಿಮ್ಮ ಗುರು ಇದೆಯೋ ಅದನ್ನೇ ಮುಂದುವರೆಸಿ. ಮನೆಗಾಗಿ ನೀವು ದುಬಾರಿ ಬೆಲೆಯ ವಸ್ತು ಖರೀದಿಗೆ ಮುಂದಾಗಬಹುದು. ಹಾಗೆ ಖರ್ಚು ಮಾಡುವ ಮುನ್ನ ಮತ್ತೆ ಆಲೋಚಿಸಿ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯಲಿದೆ. ವ್ಯವಹಾರದಲ್ಲಿ ದೊಡ್ಡ ನಿರ್ಧಾರಕ್ಕೆ ಮುಂದಾಗುವುದು ಬೇಡ. ಹಲವು ಕಾರಣದಿಂದಾಗಿ ನಿಲ್ಲಿಸಿದ್ದ ಕೆಲಸವನ್ನು ಒಂದು ಮತ್ತೆ ಆರಂಭಿಸಲು ಉತ್ತಮ ಸಮಯ. ಕೈ ಸಾಲಗಳನ್ನು ತೀರಿಸುವುದು ಬಹಳ ಉತ್ತಮ.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಬಹಳ ಖರ್ಚು ಮಾಡಬೇಕಾದ ಸ್ಥಿತಿ ಬರಲಿದೆ. ಆದರೆ ನೀವು ಊಹಿಸದ ಮೂಲದಿಂದ ನಿಮಗೆ ಧನಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಸಮಯ ನೀವು ಬಯಸಿದ್ದ ವಸ್ತು ಈಗ ಕೈ ಸೇರುವ ಹಂತಕ್ಕೆ ಬರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗೆ ಸ್ನೇಹಿತರಿಂದ ಸಹಾಯ ಪಡೆಯಬಹುದು. ಅಪರಿಚಿತರಿಂದ ಸಮಸ್ಯೆ ಎದುರಾಗಬಹುದು. ವಾಹನ ಚಾಲಕರು ಕೂಡ ಅಪಾಯ ಎದುರಿಸಬೇಕಾಗಬಹುದು. ಹಣಕಾಸಿನ ವಿಚಾರದಲ್ಲಿ ಈ ದಿನ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳ ಇರಿಸಿ. ಆರೋಗ್ಯದ ಕಡೆಗೆ ನೀವು ಗಮನಹರಿಸಬೇಕು. ಇಲ್ಲದಿದ್ದರೆ ಚಿಕಿತ್ಸಾ ವೆಚ್ಚ ಹೆಚ್ಚಾಗಬಹುದು. ನಿಮ್ಮ ಕಡೆಯಿಂದ ಬೇರೆಯವರಿಗೆ ಈ ದಿನ ಸಹಾಯಾಗಲಿದೆ. ದಾಂಪತ್ಯದಲ್ಲಿ ಸುಖ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಈ ದಿನ ಮಿಶ್ರಫಲ ನೋಡಬಹುದು. ದಿನ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಆದರೆ ಖರ್ಚು ಹೆಚ್ಛಾಗುವ ಸಾಧ್ಯತೆ ಇದೆ. ಹೂಡಿಕ, ಹಾಗೂ ಉಳಿತಾಯ ಸಂಬಂಧ ನೀವು ಒಗ್ಗೂಡಿಸಿದ್ದ ಹಣ ಮತ್ತೊಂದು ಕಾರಣಕ್ಕೆ ಬಳಸಬಹುದು. ಸರ್ಕಾರಿ ಕೆಲಸಗಳು ಅಡೆತಡೆಯಿಂದ ಕೂಡಿರಬಹುದು. ಹಾಗೆ ಉದ್ಯೋಗದ ಸ್ಥಳದಲ್ಲಿ ಒತ್ತಡ ನೋಡಬಹುದು. ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಈ ದಿನ ನಿಮಗೆ ಬಹಳ ಮುಖ್ಯ ಎನಿಸಲಿದೆ. ಹಾಗೆ ಅವರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ.

ತುಲಾ ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ.
ಈ ದಿನ ನೀವು ಕೋಪದಿಂದ ಯಾವುದೇ ಮಾತನಾಡಬೇಡಿ. ಹೊಸ ಪ್ರಯತ್ನಗಳ ಮಾಡಲು ನೀವು ಮುಂದಾಗುತ್ತಿದ್ದರೆ ಈ ದಿನ ಧನಾತ್ಮಕ ರೀತಿಯಲ್ಲಿ ಬದಲಾವಣೆ ನೋಡುತ್ತೀರಿ. ಪಾಲುದಾರಿಕೆ ವ್ಯವಹಾರದಲ್ಲಿರುವವರ ಲಾಭಾಂಶ ಹೆಚ್ಚಳದ ಕಡೆಗೆ ಒಲವು ಇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ. ಅವಿವಾಹಿತರಿಗೆ ಈ ದಿನ ಶುಭ ಸುದ್ದಿ ಕೇಳುವ ಭಾಗ್ಯವಿದೆ.

ವೃಶ್ಚಿಕ ರಾಶಿ

ಈ ದಿನ ಕೆಲಸ ಕಾರ್ಯವು ತುಂಬಾ ಚೆನ್ನಾಗಿ ನಡೆಯಲಿದೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹಲವರ ಬೆಂಬಲ ಪಡೆಯುತ್ತೀರಿ. ಹಣಕಾಸು ವಿಚಾರವಾಗಿ ಏರಿಳಿತಗಳ ನೋಡಬಹುದು. ಆದರೆ ಇಂದಿನ ನಿಮ್ಮ ಉಳಿತಾಯವು ಬಹಳ ಸಹಾಯಕ್ಕೆ ಬರಲಿದೆ. ವ್ಯಾಪಾರಿಗಳು ಲಾಭದ ದಿನವಾಗಿ ಪರಿವರ್ತಿಸಲು ಹಲವು ಅವಕಾಶ ಸಿಗಲಿದೆ. ಷೇರು ಹೂಡಿಕೆಗೆ ಇದು ಸೂಕ್ತ ಸಮಯವಲ್ಲ. ನೀವು ಮಧುಮೇಹದಂತಹ ಸಮಸ್ಯೆಗೆ ತುತ್ತಾಗಿದ್ದರೆ ಈ ದಿನ ಎಚ್ಚರಿಕೆ ವಹಿಸುವುದು ಮುಖ್ಯ. ಕುಟುಂಬಸ್ಥರ ಪರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ.

ಧನು ರಾಶಿ

ಧನು ರಾಶಿಯರವರಲ್ಲಿ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಮನೆ, ಕುಟುಂಬ, ಮಕ್ಕಳ ಕುರಿತಾಗಿ ಹೆಚ್ಚು ಆಲೋಚಿಸುತ್ತೀರಿ. ಬೇಡದ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಅವಾಹಿತರಿಗೆ ಈ ದಿನ ಮದುವೆ ಪ್ರಸ್ತಾಪ ಬರಬಹುದು. ಕೆಲವು ಸಮಸ್ಯೆಗಳನ್ನು ನೀವು ಎದುರಿಸಿದರು ಅದನ್ನು ಏಕಾಂಗಿಯಾಗಿ ಬಗೆಹರಿಸಿಕೊಳ್ಳುತ್ತೀರಿ. ಹಾಗೆ ನಿಮ್ಮ ದೂರ ಸಂಬಂಧಿಕರ ದಿಢೀರ್ ಸಂಪರ್ಕದಿಂದ ಹೊಸ ಸುದ್ದಿ ಕೇಳುವಿರಿ. ಬಹಳ ಕಾಲದಿಂದ ನೀವು ಬಯಸಿದ್ದ ವಸ್ತುವನ್ನು ಪಡೆಯಲು ಇಂದು ನೀವು ಹೆಚ್ಚು ಶ್ರಮ ಹಾಕುತ್ತೀರಿ. ನಿಮ್ಮ ಹಣವನ್ನು ಅಗತ್ಯಕ್ಕಿಂತ ಹೆಚ್ಚು ವ್ಯಯಿಸುವುದನ್ನು ಕಡಿಮೆ ಮಾಡಿ.

ಮಕರ ರಾಶಿ

ಮಕರ ರಾಶಿಯ ಮಂದಿ ಈ ದಿನದಂದು ಬಹಳ ಎಚ್ಚರಿಕೆ ವಹಿಸಬೇಕು. ಉದ್ಯೋಗದ ಸ್ಥಳದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆಹಾರ ಕ್ರಮದ ಮೇಲೆ ಗಮನವಿಡಿ. ಬಹಳ ಕಾಲ ಮನೆಯಿಂದ ಹೊರಗೆ ಕಾಲ ಕಳೆಯುವುದನ್ನು ಕಡಿಮೆ ಮಾಡಿ. ವಿವಾಹಿತರಲ್ಲಿ ಖರ್ಚು ಹೆಚ್ಚಾಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಚಿಕ್ಕ ನಿರ್ಲಕ್ಷ್ಯ ಸಮಸ್ಯೆ ಹೆಚ್ಚಿಸಬಹುದು. ಪೋಷಕರು ಅಥವಾ ಹಿರಿಯರ ಆರೋಗ್ಯ ಏರುಪೇರಾಗಬಹುದು.

ಕುಂಭ ರಾಶಿ

ಈ ದಿನ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ. ಆರ್ಥಿಕ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ, ಈ ದಿನ ನಿಮ್ಮ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗವುದರಿಂದ ನೀವು ನಿರಾಳವಾಗುತ್ತೀರಿ. ಮನೆಯಲ್ಲಿನ ಸಮಸ್ಯೆಗಳನ್ನು ಇಂದು ನಿವಾರಣೆ ಮಾಡಲು ನೀವು ಮುಂದಾಗಬಹುದು. ದೊಡ್ಡ ಹೂಡಿಕೆಯ ಮೊತ್ತ ನಿಮ್ಮ ಕೈ ಸೇರಬಹುದು. ಆಸ್ತಿ ವಿಚಾರವಾಗಿ ಉದ್ಭವಿಸಿದ್ದ ಸಮಸ್ಯೆಗಳನ್ನು ಕುಳಿತು ಮಾತುಕತೆಯ ಮೂಲಕ ನಿವಾರಿಸಿಕೊಳ್ಳಿ. ಮನೆಯಲ್ಲಿನ ವಸ್ತುಗಳು ಹಾಳಾಗಬಹುದು.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನದಂದು ಬಹಳ ಆತ್ಮವಿಶ್ವಾಸದಲ್ಲಿ ಕಳೆಯಲಿದ್ದಾರೆ. ನಿಮ್ಮ ಸುತ್ತಮುತ್ತಲು ಧನಾತ್ಮಕ ವಿಚಾರಗಳು ತುಂಬಿರಲಿದೆ. ಪೋಷಕರು ಹೇಳಿದ ಮಾತುಗಳನ್ನು ನಿರ್ಲಕ್ಷಿಸಬೇಡಿ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವವರು ಇಂದು ಒಳ್ಳೆಯ ಸುದ್ದಿ ಕೇಳುವರು. ವಿದ್ಯಾರ್ಥಿಗಳಿಗೆ ಇಂದು ಕಠಿಣವಾಗಿರಲಿದೆ. ನೀವು ಬ್ಯಾಂಕ್ ಮೂಲಕ ಸಾಲ ಪಡೆಯಲು ಮುಂದಾಗುವುದಾದರೆ ಈ ದಿನ ಅದಕ್ಕೆ ಪೂರಕ ವಾತಾವರಣ ಎರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-03-daily-horoscope-prediction-for-12-zodiac-signs-in-kannada

Here is April 03 daily horoscope prediction for 12 zodiac signs read on... ಏಪ್ರಿಲ್ 03ರ ದಿನ ಭವಿಷ್ಯ
Story first published: Thursday, April 3, 2025, 5:54 [IST]
X
Desktop Bottom Promotion