Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಏಪ್ರಿಲ್ 02ರ ಬುಧವಾರ ನಿಮ್ಮ ರಾಶಿಫಲದಲ್ಲಿ ಏನಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 02 ರ ರಾಶಿಫಲ ಇಲ್ಲಿದೆ ನೋಡಿ:
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಹೊಸ ಉತ್ಸಾಹವನ್ನು ತಂದಿದೆ. ದೀರ್ಘಕಾಲದಿಂದ ನೀವು ಯಾವುದಾದರು ಕೆಲಸಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಈ ದಿನ ಅದನ್ನು ನಿವಾರಿಸಿಕೊಳ್ಳಬಹುದು. ಜನರ ಆಲೋಚನೆಗಳು ಮತ್ತು ನಿಮ್ಮ ಬಗ್ಗೆ ಹೇಳಲಾದ ವಿಷಯಗಳಿಂದ ನೀವು ಗೊಂದಕ್ಕೊಳಗಾಗುತ್ತೀರಿ. ನಿಮ್ಮ ಕುಟುಂಬ ನಿಮ್ಮ ಕೆಲಸದ ಸಂಬಂಧ ಸಂತೋಷ ಪಡುತ್ತಾರೆ. ನಿಮ್ಮ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೀವು ಉತ್ತಮ ವೈದ್ಯರನ್ನು ಸಂಪರ್ಕಿಸಿ.

ವೃಷಭ ರಾಶಿ
ಇಂದು ನಿಮ್ಮ ಕೆಲಸ ಕಾರ್ಯಗಳಲ್ಲು ಸುಲಭದ ಯಶಸ್ಸು ಪಡೆಯಬಹುದು. ಬಹಳ ಕಾಲದಿಂದ ನೀವು ಮಾಡಬೇಕೆಂದಿದ್ದ ಕೆಲಸವು ನೆನಪಾಗಲಿದೆ. ವ್ಯಾಪಾರಿಗಳಲ್ಲಿ ಈ ದಿನ ಶುಭಕರವಾಗಿರಲಿದೆ. ನಿಮ್ಮ ಕಠಿಣ ಪರಿಶ್ರಮದಿಂದ ವ್ಯವಹಾರದಲ್ಲಿ ಮುನ್ನಡೆಯುವಿರಿ. ನಾಳೆ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಬಹಳ ದಿನಗಳಿಂದ ನಡೆಯುತ್ತಿದ್ದ ಮುನಿಸು ಶಮನಾಗಲು ಕುಳಿತು ಮಾತುಕತೆಯ ಅಗತ್ಯವಿರಲಿದೆ, ಈ ದಿನ ಸೂಕ್ತವಾಗಿರಲಿದೆ. ಮಕ್ಕಳಿಂದ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ಸಹಾಯಕ್ಕಾಗಿ ಸ್ನೇಹಿತರ ಬೆಂಬಲ ಪಡೆಯಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ಮಿಥುನ ರಾಶಿ
ಇಂದು ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದಾಗಿದೆ. ಅದರಲ್ಲೂ ನೀವು ವ್ಯಾಪಾರಸ್ಥರಾಗಿದ್ದರೆ ಈ ದಿನ ಲಾಭದಾಯಕವಾಗಲಿದೆ. ವ್ಯವಹಾರಿಕವಾಗಿ ನೀವು ಎದುರಿಸುತ್ತಿದ್ದ ಅಡಚಣೆಗಳು ನಿವಾರಣೆ ಆಗಬಹುದು. ವೈಯಕ್ತಿಕ ಜವಾಬ್ದಾರಿಗಳನ್ನು ಮರೆಯಬೇಡಿ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಇರಬಹುದು. ಆದ್ರೆ ನೀವು ಸುಲಭವಾಗಿ ಅದನ್ನು ನಿಭಾಯಿಸುತ್ತೀರಿ. ವಿಶ್ರಾಂತಿ ಪಡೆಯುವ ದಿನವೂ ಹೌದು. ಬಹಳ ದಿನದಿಂದ ಬಯಸಿದ್ದ ವಸ್ತುವೊಂದು ನಿಮ್ಮ ಕೈ ಸೇರಲಿದೆ.
ಕರ್ಕ ರಾಶಿ
ಈ ದಿನ ನೀವು ಮನೆಯ ಕಡೆಯಿಂದ ಶುಭ ಸುದ್ದಿ ಕೇಳುವಿರಿ. ನಿಮ್ಮ ಕೆಲಸದ ವೇಗ ನಿಧಾನವಾಗಿರುತ್ತದೆ. ನೀವು ಕುಟುಂಬದ ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನಿಸುವುದರಲ್ಲಿ ನಿರತರಾಗಿರುತ್ತೀರಿ. ಕೆಲಸದ ನಡುವೆ ಎದುರಾಗುತ್ತಿದ್ದ ತೊಡಕುಗಳು ದೂರಾಗಬಹುದು. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಅಪೂರ್ಣ ಕೆಲಸಗಳ ಸಮಯಕ್ಕೆ ಸರಿಯಾಗಿ ಮುಗಿಸುವುದು ಉತ್ತಮ. ನಿಮ್ಮ ಮನೆಯಲ್ಲಿನ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ. ಹಣಕಾಸು ವಿಚಾರವಾಗಿ ನೀವು ಎಚ್ಚರಿಕೆಯಿಂದ ವ್ಯವಹಾರ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಬಹಳ ಸಮಯ ಕೆಲಸದ ಒತ್ತಡದಲ್ಲಿ ಕಳೆಯಬೇಕಾಗುತ್ತದೆ, ಆದ್ರೆ ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ. ಬಹುತೇಕ ನೀವು ಭವಿಷ್ಯದ ಚಿಂತೆಯಲ್ಲಿ ಈ ದಿನ ಕಳೆಯಬೇಕಾಗುತ್ತದೆ. ಎಲೆಕ್ಟ್ರಾನಿಕ್ಸ್ ಉದ್ಯಮಿಗಳಿಗೆ ಲಾಭದ ಸಾಧ್ಯತೆಗಳಿವೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ವ್ಯವಹಾರದಲ್ಲಿ ಯಶಸ್ಸಿಗೆ ಹಲವು ಅವಕಾಶಗಳು ಸಿಗುತ್ತವೆ. ಪ್ರೇಮಿಗಳ ನಡುವಿನ ತಪ್ಪು ತಿಳುವಳಿಕೆಯು ಬಗೆಹರಿಯಲಿದೆ. ಕುಟುಂಬಸ್ಥರಿಂದ ನಿಮಗೆ ಬೆಂಬಲ ಇರಲಿದೆ. ಹಾಗೆ ಯಾವುದಾದರು ಸರ್ಕಾರಿ ಕಡತಗಳು, ದಾಖಲೆ ಸಂಬಂಧ ಕಚೇರಿಗೆ ನೀವು ಅಲೆದಾಡುತ್ತಿದ್ದರೆ ಈ ದಿನ ಆ ಕುರಿತ ಫಲಿತಾಂಶ ಸಿಗಲಿದೆ.
ಕನ್ಯಾ ರಾಶಿ
ಇಂದು ನಿಮ್ಮ ಹೂಡಿಕೆ ಹಾಗೂ ಉಳಿತಾಯ ಹೆಚ್ಚಳವಾಗುವ ಸಂಭವವಿದೆ. ಅನಗತ್ಯ ಖರ್ಚುಗಳಿಂದ ದೂರವಿರಿ. ಈ ದಿನ ನಿಮಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ, ಇದು ನಿಮ್ಮಲ್ಲಿ ಆರ್ಥಿಕ ಸಮಸ್ಯೆ ಹೆಚ್ಚು ಮಾಡಬಹುದು. ಹಾಗೆ ಉದರ ಸಂಬಂಧಿ ಸಮಸ್ಯೆಗೆ ನೀವು ಒಳಗಾಗಬಹುದು. ಹೀಗಾಗಿ ಆದಷ್ಟು ಮನೆಯ ಊಟ, ತಿಂಡಿ ಮಾಡುವ ಕುರಿತಾಗಿ ಯೋಚಿಸಿ. ಮಕ್ಕಳ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ವ್ಯಾಪಾರಿಗಳಿಗೆ ಈ ದಿನ ಅದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಅವಿವಾಹಿತರಲ್ಲಿ ಈ ದಿನ ಶುಭವಾಗುತ್ತದೆ. ನಿಮ್ಮ ಸಂಬಂಧಗಳು ಗಟ್ಟಿಯಾಗಲು ಉತ್ತಮ ಕೆಲಸ ಮಾಡುವಿರಿ. ರಾಜಕೀಯದಲ್ಲಿ ಹೆಸರು ಮಾಡಬೇಕು ಎಂದುಕೊಂಡಿರುವವರಿಗೆ ಈ ದಿನ ಶುಭ ಸಂಕೇತಗಳ ತರಲಿದೆ.
ತುಲಾ ರಾಶಿ
ಇಂದು ತುಲಾ ರಾಶಿಯ ಜನರಿಗೆ ಅತ್ಯಧಿಕ ಲಾಭದ ದಿನವಾಗಬಹುದು. ಬಹಳ ಕಾಲದಿಂದ ನೀವು ಬಾಕಿ ಹಣ ವಸೂಲಾತಿಯಲ್ಲಿ ತೊಡಗಿದ್ದರೆ ಈ ದಿನ ಸಂದಾಯವಾಗಹುದು. ಹೀಗಾಗಿ ನಿಮ್ಮ ಆರ್ಥಿಕ ಸ್ಥಿತಿಗಳು ಇಂದಿನಿಂದ ಸುಧಾರಣೆಯಾಗಬಹುದು. ಪ್ರೀತಿ ಪಾತ್ರರ ಜೊತೆಗೆ, ಸ್ಮೇಹಿತರ ಜೊತೆಗೆ ಮನಸ್ಥಾಪ ಮೂಡುವ ಸಾಧ್ಯತೆ ಇದೆ. ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಉತ್ತಮ. ಮನೆಯಲ್ಲಿ ಕೆಲವೊಂದು ವಿಚಾರವಾಗಿ ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ನಿರ್ಧಾರಗಳನ್ನು ಬದಲಾಯಿಸದೆ ಇರುವುದು ಉತ್ತಮ. ಚಿಲ್ಲರೆ ವ್ಯಾಪಾರಿಗಳು ಲಾಭ ಮಾಡುವ ದಿನವಾಗಲಿದೆ. ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗೆ ನೀವು ತುತ್ತಾಗಬಹುದು.
ವೃಶ್ಚಿಕ ರಾಶಿ
ಇಂದು ನಿಮ್ಮ ಕುಟುಂಬಸ್ಥರು ಶುಭ ಕಾರ್ಯದ ಕುರಿತಾಗಿ ಚರ್ಚೆಯಲ್ಲಿ ತೊಡಗಬಹುದು. ಇಂದು ನಿಮಗೆ ಸ್ನೇಹಿತರಿಂದ ಯಾವುದಾದರು ವಿಚಾರವಾಗಿ ಸಹಕಾರ ಸಿಗಲಿದೆ. ಬಹಳ ದಿನಗಳಿಂದ ಬೇಡಿಕೆ ಇಟ್ಟ ವಸ್ತು ನಿಮ್ಮ ಕೈ ಸೇರಲಿದೆ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ನೀವು ಕೆಲವು ಗಂಭೀರವಾದ ಆಂತರಿಕ ಸಮಸ್ಯೆಗಳ ಕುರಿತಾಗಿ ಯೋಚಿಸಬೇಕಾಗಬಹುದು. ಕಚೇರಿಯ ವಿಚಾರವಾಗಿ ನಿಮ್ಮ ವೈಯಕ್ತಿಕ ವಸ್ತುವೊಂದನ್ನು ಬಳಸಬೇಕಾಗಬಹುದು. ಯಾವುದೇ ಕಲಸವನ್ನು ಇದು ಅರ್ಧಕ್ಕೆ ನಿಲ್ಲಿಸಬೇಡಿ. ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನ ಲಾಭದಾಯಕ. ನಿಮ್ಮ ಬುದ್ದಿವಂತಿಕೆ ಉಪಯೋಗಿಸಿ ಲಾಭ ಹೆಚ್ಚು ಮಾಡಿಕೊಳ್ಳಬಹುದು.
ಧನು ರಾಶಿ
ಇಂದು ನಿಮ್ಮಲ್ಲಿ ಸಂತೋಷದ ದಿನ ನೋಡಬಹುದು. ನಿಮ್ಮಲ್ಲಿ ಶಾಂತಿ ಇರಲಿದೆ. ಯಾವುದೇ ವಿಚಾರವಾಗಿ ತಾಳ್ಮೆ ಕಳೆದುಕೊಳ್ಳಲು ಮುಂದಾಗಬೇಡಿ. ಎಲ್ಲಾ ನಿರ್ಧಾರಗಳನ್ನು ಮತ್ತೆ ಮತ್ತೆ ಆಲೋಚಿಸಿ ತೆಗೆದುಕೊಳ್ಳಿ. ಕಲಾವಿದರು ಈ ದಿನ ಶುಭ ಸುದ್ದಿ ಕೇಳುತ್ತಾರೆ. ಸಮಾಜಮುಖಿ ಕಾರ್ಯ ಮಾಡುವವರು ಉತ್ತಮ ಹೆಸರು ಮಾಡುತ್ತಾರೆ. ಹಲವು ದಿನದ ಕನಸೊಂದು ಇಂದು ನನಸಾಗಲಿದೆ. ನಿಮ್ಮಿಂದ ಸಹಾಯ ಪಡೆದವರು ಇಂದು ನಿಮ್ಮ ವಿರುದ್ಧವಾಗಿ ಮಾತನಾಡಬಹುದು. ಕಷ್ಟದಲ್ಲಿರುವವರಿಗೆ ನೀವಿಂದು ಸಹಾಯ ಮಾಡುತ್ತೀರಿ. ಹೊಸ ಸವಾಲುಗಳ ಎದುರಿಸಲು ನೀವು ಸಿದ್ದರಾಗಬೇಕಾಗುತ್ತದೆ. ದಾಂಪತ್ಯದಲ್ಲಿ ಒಬ್ಬರನೊಬ್ಬರು ಅರಿತುಕೊಳ್ಳುವುದು ಮುಖ್ಯ.
ಮಕರ ರಾಶಿ
ಈ ದಿನ ನೀವು ಯಾವುದೇ ಕ್ಷೇತ್ರದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೂ ಅದರಲ್ಲಿ ಪ್ರಗತಿ ಸಾಧಿಸುವಿರಿ. ಭವಿಷ್ಯದಲ್ಲಿ ಮಾಡಬೇಕಾದ ಕೆಲಸವೊಂದರ ಕುರಿತು ನೀವು ಚಿಂತೆಯಲ್ಲಿ ಮುಳುಗುತ್ತೀರಿ. ವೇತನಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದೆ. ಪಿಂಚಣಿ ಅಥವಾ ಸರ್ಕಾರದ ಯಾವುದಾದರು ಧನ ಸಹಾಯ ಪಡೆಯುತ್ತಿದ್ದವರು ಈ ದಿನ ಶುಭ ಸುದ್ದಿ ಕೇಳುವಿರಿ. ಪಂಚೇಂದ್ರಿಯಕ್ಕೆ ಸಂಬಂಧಿಸಿದ ಚಿಕ್ಕಪುಟ್ಟ ಸಮಸ್ಯೆಗೆ ನೀವು ಒಳಗಾಗಬಹುದು, ಇದು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಹೀಗಾಗಿ ಒತ್ತಡ ಕೂಡ ಹೆಚ್ಚಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಆತ್ಮೀಯರಿಂದ ನೋವಿನ ಮಾತುಗಳ ಆಲಿಸಬೇಕಾಗಬಹುದು. ಇಷ್ಟ ದಿನದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಲು ಇಂದು ಶುಭ ದಿನವಾಗಿದೆ. ತಂದೆ ತಾಯಿಯ ಆರೋಗ್ಯದ ಕಡೆಗೆ ಹೆಚ್ಚು ಗಮನವಿಡಿ. ನೀವು ವಾಹನ ಚಲಾಯಿಸುವವರಾಗಿದ್ದರೆ ಇಂದು ಬಹಳ ಎಚ್ಚರಿಕೆ ಇಡಬೇಕಾಗುತ್ತದೆ. ದೇವಾಲಯ ಭೇಟಿಗೆ ಮುಂದಾಗಬಹುದು. ವ್ಯಾಪಾರಸ್ಥರು ಇಂದು ದೊಡ್ಡ ಗ್ರಾಹಕರೊಂದಿಗೆ ವ್ಯವಹರಿಸಲು ಅವಕಾಶವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲ ನೋಡಬಹುದು. ನಿಮ್ಮ ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ನಿಮ್ಮ ಆಲೋಚನೆಗಳನ್ನು ಆದಷ್ಟು ಬೇರೆಯವರ ಜೊತೆಗೆ ಹಂಚಿಕೊಳ್ಳದೆ ಇರುವುದು ಉತ್ತಮ. ಕೆಲಸವನ್ನು ಪ್ರಮಾಣಿಕವಾಗಿ ಮುಗಿಸುವುದರಿಂದ ಉತ್ತಮ ಪ್ರತಿಫಲ ಪಡೆಯಲಿದ್ದೀರಿ. ಆರೋಗ್ಯದ ಕಡೆಗೂ ಗಮನವಿಡಿ. ನಿಮ್ಮ ವೈಯಕ್ತಿಕ ವಿಚಾರವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











