Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ರಾಹು-ಮಂಗಳ ಸಂಯೋಗದಿಂದ ಅಂಗಾರಕ ಯೋಗ: ಈ ರಾಶಿಯವರಲ್ಲಿ ಹಣಕಾಸು ನಷ್ಟ, ದಾಂಪತ್ಯದಲ್ಲಿ ಸಂಕಷ್ಟ
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಳ ಚಲನೆ ಹಾಗೂ ಅವುಗಳ ಸ್ಥಾನದಲ್ಲಿನ ಬದಲಾವಣೆಯಿಂದ ಆಗುವ ಪರಿವರ್ತನೆಗಳನ್ನು ಬಹಳ ಮುಖ್ಯವಾದ ವಿದ್ಯಮಾನಗಳೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಗ್ರಹಗಳು ಕೂಡ ನಿರ್ಧಿಷ್ಟ ಸಮಯದಲ್ಲಿ ರಾಶಿ ಬದಲಿಸುವುದು, ತಮ್ಮ ಪಥ ಬದಲಾಯಿಸುವುದು ನೋಡಬಹುದು. ಹಾಗೆ ಎಲ್ಲಾ ಗ್ರಹಗಳ ಜೊತೆಗೆ ಎರಡು ನೆರಳಿನ ಗ್ರಹಗಳನ್ನು ಸಹ ಪ್ರಮುಖ ಎಂದು ಕರೆಯಲಾಗಿದೆ.
ರಾಹು ಹಾಗೂ ಕೇತುವನ್ನು ನೆರಳಿನ ಗ್ರಹಗಳೆಂದು ಕರೆಯಲಾಗಿದೆ. ಜನವರಿಯಲ್ಲಿ ಕೇತು ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಹಾಗೆ ರಾಹು ಕುಂಭ ರಾಶಿ ಪ್ರವೇಶಿಸಲಿದ್ದಾನೆ. ರಾಹು 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಚಲಿಸಲಿದ್ದಾನೆ. ಕುಂಭ ರಾಶಿಗೆ ರಾಹು ಚಲಿಸುವ ಸಮಯದಲ್ಲಿಯೇ ಮಂಗಳ ಕೂಡ ಕುಂಭ ರಾಶಿಗೆ ಚಲಿಸುತ್ತಾನೆ.

ಈ ಮಂಗಳ ಹಾಗೂ ರಾಹು ಒಂದೇ ರಾಶಿಯಲ್ಲಿ ಇದ್ದಾಗ ಅಪರೂಪದ ಯೋಗವೊಂದು ರೂಪುಗೊಳ್ಳಲಿದೆ. ಕುಂಭ ರಾಶಿಯಲ್ಲಿ ಅಂಗಾರಕ ಯೋಗ ಸೃಷ್ಟಿಯಾಗಲಿದೆ. ಈ ಯೋಗವು ಸುಮಾರು 18 ವರ್ಷಗಳ ನಂತರ ರೂಪುಗೊಳ್ಳಲಿದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅಶುಭ ಯೋಗವೆಂದು ಪರಿಗಣಿಸಲಾಗುತ್ತದೆ. ಈ ಯೋಗದ ಪರಿಣಾಮವು ಎಲ್ಲಾ ರಾಶಿ ಜನರಲ್ಲೂ ನೋಡಬಹುದು. ಆದ್ರೆ ಕೆಲ ರಾಶಿಗಳಲ್ಲಿ ಇದು ಹಲವು ರೀತಿಯ ಅಡ್ಡಿಗಳ ತರುವುದು ನೋಡಬಹುದು.
ಮೀನ ರಾಶಿ
ಮೀನ ರಾಶಿಯ 12ನೇ ಮನೆಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗದಿಂದಾಗಿ ಅಂಗಾರಕ ಯೋಗವು ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಮೀನ ರಾಶಿ ಜನರ ಆರ್ಥಿಕ ನಷ್ಟ ಹೆಚ್ಚಾಗಬಹುದು. ನಿಮ್ಮ ಬಹುನಿರೀಕ್ಷಿತ ಆದಾಯ ಮೂಲವು ನಿಮಗೆ ಹಣಕಾಸಿನ ಸಮಸ್ಯೆಗಳಿಂದ ತುಂಬಿರಬಹುದು. ನಿಮ್ಮ ಮೇಲೆ ದೊಡ್ಡ ಆರೋಪಗಳು ಕೇಳಿಬರಬಹುದು. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರದೆ ಇರಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿನ ನ್ಯಾಯಲಯ ಸಂಬಂಧಿ ವಿಚಾರಗಳು ಮತ್ತಷ್ಟು ವಿಳಂಬ ವಾಗಬಹುದು. ಕುಟುಂಬ ವಿಚಾರದಲ್ಲಿಯೂ ಸಹ ಈ ಸಮಯ ಬಹಳಷ್ಟು ಅಡ್ಡಿಗಳನ್ನು ತರಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗದಿಂದಾಗಿ ಅಂಗಾರಕ ಯೋಗವು ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಕರ್ಕ ರಾಶಿ ಜನರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಅದ್ರಲ್ಲೂ ಹೃದಯ ಸಂಬಂಧಿ ಅಥವಾ ಉಸಿರಾಟ ಸಂಬಂಧಿ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಎಚ್ಚರ ವಹಿಸಬೇಕಿದೆ. ವಾಹನ ಸಂಬಂಧಿತ ವಿಚಾರದಲ್ಲಿ ನೋವು, ನಷ್ಟ ಅನುಭವಿಸಬಹುದು. ಹಾಗೆ ಹಣದ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಹಣ ನಷ್ಟವಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ 6ನೇ ಮನೆಯಲ್ಲಿ ಮಂಗಳ ಮತ್ತು ರಾಹುವಿನಿಂದ ಅಂಗಾರಕ ಯೋಗ ಸೃಷ್ಟಿಯಾಗಲಿದೆ. ಇದರಿಂದಾಗಿ ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಇದು ನಿಮ್ಮ ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಕೌಟುಂಬಿಕ ಸಮಸ್ಯೆಗಳು ಹೆಚ್ಚಳದ ಸಮಯ ಇದು. ಹೆಚ್ಚಿದ ವೈದ್ಯಕೀಯ ವೆಚ್ಚಗಳಿಂದಾಗಿ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ನಿರುದ್ಯೋಗಿಗಳಿಗೆ ಈ ಸಮಯ ಮತ್ತಷ್ಟು ಕಠಿಣ ಆಗಿರಲಿದೆ. ಅವಿವಾಹಿತರಲ್ಲಿ ಉದ್ಯೋಗ ಸಂಬಂಧಿತ ಹಾಗೆ ವಿವಾಹ ಸಂಬಂಧಿತ ಸಮಸ್ಯೆಗಳಿವೆ. ನಿಮ್ಮ ವ್ಯವಹಾರಗಳಲ್ಲಿ ದೊಡ್ಡ ಅಡ್ಡಿಗಳನ್ನು ಎದುರಿಸುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications