Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
ಏಪ್ರಿಲ್ 23ರಿಂದ ಮೀನ ರಾಶಿಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ರಾಹು ಮೀನ ರಾಶಿಯಲ್ಲಿ ಇದೆ, ಇದೀಗ ಮಂಗಳ ಕೂಡ ಇದೇ ರಾಶಿಗೆ ಸಂಚರಿಸಲಿದೆ. ಜೂನ್ 1ರವರೆಗೆ ಈ ಯೋಗ ಇರಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಈ ಯೋಗ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಇದು ಹೆಚ್ಚು ನಕರಾತ್ಮಕ ಪ್ರಭಾವ ಬೀರುವುದು.

ಈ ಅಂಗಾರಕ ಯೋಗ ಯಾವ ರಾಶಿಗಳಲ್ಲಿ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:
ಮೀನ ರಾಶಿ
ಮೀನ ರಾಶಿಯ ಮೊದಲ ಮನೆಯಲ್ಲಿ ಮಂಗಳ-ರಾಹು ಸಂಯೋಗವು ರೂಪುಗೊಂಡಿದೆ, ಹೀಗಿರುವಾಗ ಮೀನ ರಾಶಿಯವರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಚಿಕ್ಕ ಆರೋಗ್ಯ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಲು ಹೋಗಬೇಡಿ
ಕುಂಭ ರಾಶಿ
ಕುಂಭ ರಾಶಿಯ ಎರಡನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಎರಡನೇ ಮನೆಯಲ್ಲಿ ಅಂಗಾರಕ ಯೋಗ ಇದ್ದರೆ ಹಣಕಾಸಿನ ತೊಂದರೆ ಉಂಟಾಗುವುದು. ಈ ಅವಧಿಯಲ್ಲಿ ಸಾಲ ಕೇಳಿದರೂ ಸಿಗುವುದು ಕಷ್ಟ, ಇದರಿಂದ ನಿಮ್ಮ ಚಿಂತೆ ಹೆಚ್ಚಾಗುವುದು.
ಮಕರ ರಾಶಿ
ಮಕರ ರಾಶಿಯಲ್ಲಿ 3ನೇ ಮನೆಯಲ್ಲಿ ಮಂಗಳ ಮತ್ತು ರಾಹು ಸಂಯೋಗವಾಗಿದ್ದು, ಈ ಮನೆಯಲ್ಲಿ ಉಂಟಾಗಿರುವುದರಿಂದ ಸಹೋದರಿ ಅಥವಾ ಸಹೋದರನಿಗೆ ಹಾನಿಯನ್ನು ಉಂಟುಮಾಡುತ್ತದೆ, ಈ ಅವಧಿಯಲ್ಲಿ ಅವರು ಹೆಚ್ಚಿ ತೊಂದರೆ ಅನುಭವಿಸಬೇಕಾಗುತ್ತದೆ.
ಧನು ರಾಶಿ
ಧನು ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಮಂಗಳ ಮತ್ತು ರಾಹುಗಳ ಸಂಯೋಗವಾಗಿದೆ, ಈ ಯೋಗದಿಂದ ತುಂಬಾನೇ ಸಮಸ್ಯೆ ಉಣಟಾಗುವುದು, ಆರೋಗ್ಯದ ಸಮಸ್ಯೆ ಉಂಟಾಗುವುದು, ಆರ್ಥಿಕ ನಷ್ಟ ಉಂಟಾಗುವುದು, ಮನೆಯಲ್ಲಿ ಸಂತೋಷ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ 5ನೇ ಮನೆಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗವಾಗಿದೆ, ಈ ಮನೆಯಲ್ಲಿ ಉಂಟಾಗಿರುವ ಅಂಗಾರಕ ಯೋಗದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ನಿಮ್ಮ ಚಿಂತೆ ಹೆಚ್ಚಾಗಲಿದೆ.
ತುಲಾ ರಾಶಿ
ತುಲಾ ರಾಶಿಯಲ್ಲಿ ರಾಹು ಮತ್ತು ಮಂಗಳ 6ನೇ ಮನೆಯಲ್ಲಿ ಸಂಯೋಗವಾಗಿದೆ. ಈ ಸಂಯೋಗದ ಸಮಯದಲ್ಲಿ ಕೆಟ್ಟ ಚಟುವಟಿಕೆಗಳ ಆಸಕ್ತಿ ತೋರಿಸುತ್ತೀರಿ, ಇದರಿಂದ ಮನೆ ನೆಮ್ಮದಿ ಹಾಳಾಗುವುದು.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ 7ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವುದು, ಅನೈತಿಕ ಸಂಬಂಧಗಳಿದ್ದರೆ ಸಂಗಾತಿಗೆ ತಿಳಿದು ಬರುವುದು. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುವುದು, ವಿವಾಹ ಜೀವನ ಕಾಪಾಡಲು ಯತ್ನಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಅಂಗಾರಕ ಯೋಗ, ಈ ಸಮಯದಲ್ಲಿ ಗಾಡಿಯನ್ನು ಎಚ್ಚರಿಕೆಯಿಂದ ಚಲಾಯಿಸಿ. ಅಲ್ಲದೆ ಆರೋಗ್ಯ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಈ ಅವಧಿಯಲ್ಲಿ ಎಲ್ಲಾ ರೀತಿಯಲ್ಲೂ ಸ್ವಲ್ಪ ಜಾಗ್ರತೆವಹಿಸಿ.
ಕರ್ಕ ರಾಶಿ
ಜಾತಕದ ಒಂಬತ್ತನೇ ಮನೆಯಲ್ಲಿ ಅಂಗಾರಕ ಯೋಗ ಇರಲಿದೆ. ವಿದೇಶ ಪ್ರಯಾಣ ಮಾಡುತ್ತೀರಿ, ಆದರೆ ತುಂಬಾ ಸಮಸ್ಯೆ ಎದುರಾಗುವುದು.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ 10ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಈ ಅವಧಿಯಲ್ಲಿ ತಂದೆಗೆ ಅನಾರೋಗ್ಯ ಸಮಸ್ಯೆ ಉಂಟಾಗುವುದು. ಅವರ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ.
ವೃಷಭ ರಾಶಿ
ವೃಷಭ ರಾಶಿಯಲ್ಲಿ 11ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಈ ಅವಧಿಯಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿದರೆ ತೊಂದರೆ ಅನುಭವಿಸಬೇಕು. ಯಾವುದೇ ಅಡ್ಡಮಾರ್ಗ ಹಿಡಿಯಬೇಡಿ.
ಮೇಷ ರಾಶಿ
ಜಾತಕದ ಹನ್ನೆರಡನೇ ಮನೆಯಲ್ಲಿ ಮಂಗಳ ಮತ್ತು ರಾಹು ಇರುವುದರಿಂದ, ಹಣದ ಖರ್ಚು ಹೆಚ್ಚಾಗುವುದು, ಅಲ್ಲದೆ ಜೂಜು ಮುಂತಾದ ದುಂದು ವೆಚ್ಚ ಹೆಚ್ಚಾಗುವುದು. ಇದರಿಂದ ಮನೆಯಲ್ಲಿ ಸಮಸ್ಯೆ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications