Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಈ ಭಾರಿಯ ಶಿವರಾತ್ರಿ ತುಂಬಾನೇ ವಿಶೇಷವಾಗಿದೆ, 60 ವರ್ಷಗಳಬಳಿಕ ಈ ಅಪೂರ್ವ ಘಟನೆ ಸಂಭವಿಸಲಿದೆ
ಈ ವರ್ಷ ಮಹಾಶಿವರಾತ್ರಿ ಫೆಬ್ರವರಿ 26ಕ್ಕೆ ಬಂದಿದೆ. ಹಿಂದೂಗಳ ಸಡಗರ-ಸಂಭ್ರಮದ ಆಚರಣೆ ಮಹಾಶಿವರಾತ್ರಿ. ಅಲ್ಲದೆ ಈ ವರ್ಷ 144 ವರ್ಷದಲ್ಲಿ ನಡೆಯುವ ಕುಂಭಮೇಳ ಕೂಡ ನಡೆಯುತ್ತಿದೆ, ಇನ್ನು ವೈದಿಕ ದೃಷ್ಟಿಯಿಂದಲೂ ಈ ದಿನ ತುಂಬಾನೇ ಮಹತ್ವದ್ದಾಗಿದೆ. ಈ ದಿನದಂದು ಸೂರ್ಯ, ಬುಧ, ಶನಿ ಮೂರೂ ಗ್ರಹಗಳು ಕುಂಭ ರಾಶಿಯಲ್ಲಿ ಇರಲಿದೆ ಹಾಗಾಗಿ ಈ ದಿನ ಧಾರ್ಮಿಕ ಕಾರಣಗಳಿಂದ ತುಂಬಾನೇ ವಿಶೇಷವಾಗಿದೆ:

ಶಿವರಾತ್ರಿಯಂದು ಈ ವಿಶೇಷ ಯೋಗಗಳುಉಂಟಾಗಲಿದೆ
ಈ ವರ್ಷ ಬುಧವಾರದಂದು ಶಿವರಾತ್ರಿ ಬಂದಿದೆ, ಅಲ್ಲದೆ ಮಕರ ರಾಶಿಯಲ್ಲಿ ಚಂದ್ರ ಇರಲಿದೆ ಅಲ್ಲದೆ ಶ್ರಾವಣ ಹಾಗೂ ಧನಿಷ್ಠ ನಕ್ಷತ್ರಗಳ ಸಂಯೋಗ ಕೂಡ ಉಂಟಾಗಿದೆ ಪರಿಘ ಯೋಗ, ಶಿವ ಯೋಗ ಉಂಟಾಗಿದೆ. ಹಾಗಾಗಿ ಈ ದಿನ ಶಿವನ ಪೂಜೆಯಿಂದ ವಿಶೇಷಫಲ ದೊರೆಯಲಿದೆ.
60 ವರ್ಷಗಳ ಬಳಿಕ ಶಿವರಾತ್ರಿಯಂದು ಮೂಡಿ ಬಂದಿದೆ
ಈ ವರ್ಷ ಮಹಾಶಿವರಾತ್ರಿಯಂದು ಕುಂಭ ರಾಶಿಯಲ್ಲಿ ಸೂರ್ಯ, ಬುಧ, ಶನಿ ಈ ಮೂರು ಗ್ರಹಗಳ ಸಂಯೋಗ ಉಂಟಾಗಲಿದೆ, ಇದರಿಂದಾಗಿ ತ್ರಿಗ್ರಹ ಉಂಟಾಗಲಿದೆ.
ಮತ್ತೊಂದು ವಿಶೇಷವೆಂದರೆ ಮಹಾಶಿವರಾತ್ರಿಯ ಸಮಯದಲ್ಲಿ ಬುಧಾದಿತ್ಯ ಯೋಗ ಇರಲಿದೆ, ಬುಧಾದಿತ್ಯ ಯೋಗ 31 ವರ್ಷಗಳ ಬಳಿಕ ಉಂಟಾಗಲಿದೆ, ಅಲ್ಲದೆ ಸುಮಾರು ಏಳು ವರ್ಷಗಳ ಬಳಿಕ ಬುಧವಾರದಂದು ಮಹಾಶಿವರಾತ್ರಿ ಬಂದಿದೆ, ಹೀಗೆ ಈ ಎಲ್ಲಾ ಕಾರಣಗಳಿಂದ ಮಹಾಶಿವರಾತ್ರಿ ತುಂಬ ವಿಶೇಷವಾಗಿರಲಿದೆ.
ಮಹಾಶಿವರಾತ್ರಿಯಂದು ಪೂಜೆ ಮಾಡುವುದರಿಂದ ವಿಶೇಷ ಫಲ ನೀಡಲಿದೆ:
ಈ ದಿನ ಮಹಾಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ನೆರವೇರಲಿದೆ.
ಈ ದಿನ ಉಪವಾಸವಿದ್ದು ಶಿವನನ್ನು ಆರಾಧಿಸಿ
ಈ ದಿನ ಮಹಾಶಿವನಿಗೆ ಪೂಜೆ ಸಲ್ಲಿದೆ, ಬೆಳಗ್ಗೆ ಎದ್ದಾಗ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
ಶಿವರಾತ್ರಿಯಂದು ಪೂಜೆ ಸಲ್ಲಿಸುವುದರಿಂದ ವರ್ಷದ ಫಲ ಸಿಗಲಿದೆ.
ಶಿವ ರಾತ್ರಿಯಂದು ಪೂಜಾ ಸಮಯ
ಪ್ರದೋಷ ಕಾಲ ಪೂಜಾ ಸಮಯ: ಸಂಜೆ 5:48ರಂದ ರಾತ್ರಿ 08:26ರವರೆಗೆ ಇದೆ.
ಮಧ್ಯರಾತ್ರಿ ಬೆಳಗ್ಗೆ 12 ಗಂಟೆಯಿಂದ 12:59ರವರೆಗೆ ಇರಲಿದೆ.
ಶಿವರಾತ್ರಿ ಪ್ರಹರ ಪೂಜೆ
ಮೊದಲ ಪ್ರಹರ ಫೆಬ್ರವರಿ 26: ಬೆಳಗ್ಗೆ 06:19ರಿಂದ 0:26ರವರೆಗೆ ಇದೆ
ಎರಡನೇ ಪ್ರಹರ: ಫೆಬ್ರವರಿ 26: ಬೆಳಗ್ಗೆ 09:26ರಿಂದ 12:34ರವರೆಗೆ
ಮೂರನೇ ಪ್ರಹರ: ಫೆಬ್ರವರಿ 27 ರಾತ್ರಿ 12:34ರಿಂದ ಮುಂಜಾನೆ 3:41ರವರೆಗೆ
4ನ ಪ್ರಹರ: ಫೆಬ್ರವರಿ 27 ಬೆಳಗ್ಗೆ 03:41ರಿಂದ 06:48ರವರೆಗೆ ಇದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
