Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
50 ವರ್ಷದ ಬಳಿಕ ಡಬಲ್ ರಾಜಯೋಗ: ಯಾರಿಗೆಲ್ಲಾ ಬರಲಿದೆ ಧನಲಾಭದ ಶುಭಗಾಲ!
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಚಲನೆಯನ್ನು ದೊಡ್ಡ ವಿದ್ಯಮಾನವಾಗಿ ಪರಿಗಣಿಸುವುದು ನೋಡಬಹುದು. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದು ನೋಡಬಹುದು. ಹಾಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಈ ಗ್ರಹಗಳ ಚಲನೆಯಿಂದಾಗುವ ಪರಿಣಾಮ ನೋಡಬಹುದು.
ಗ್ರಹಗಳು ಕೂಡ ನಿರ್ಧಿಷ್ಟ ಸಮಯದಲ್ಲಿ ನಿರ್ಧಿಷ್ಟ ರಾಶಿಗಳಿಗೆ ಚಲಿಸುವುದು ಜ್ಯೋತಿಷ್ಯದಲ್ಲಿ ಪ್ರಮುಖ ವಿದ್ಯಮಾನ. ಹಾಗೆ ಒಂದೇ ರಾಶಿಗೆ ಒಂದಕ್ಕಿಂತ ಹೆಚ್ಚು ಗ್ರಹಗಳ ಚಲನೆಯೂ ನೋಡಬಹುದು. ಈ ಸಮಯದಲ್ಲಿ ರಾಶಿಯಲ್ಲಿನ ಸಂಯೋಗದಿಂದ ಹಲವು ರೀತಿಯ ಯೋಗಗಳು ರೂಪುಗೊಳ್ಳುವುದು ಗಮನಿಸಬಹುದು.

ಈ ಯೋಗಗಳು ಶುಭ ಹಾಗೂ ಅಶುಭ ಕಾರಕಗಳಾಗಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿವೆ. ಅದ್ರಲ್ಲೂ ಈಗ ಶುಕ್ರ ತನ್ನದೇ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ. ಇನ್ನೊಂದೆಡೆ ಬುಧ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ರಾಜಯೋಗವು ಕೂಡ ರೂಪುಗೊಳ್ಳುತ್ತದೆ.
ಶುಕ್ರನು ಸೆಪ್ಟೆಂಬರ್ ತಿಂಗಳಲ್ಲಿ ತನ್ನ ರಾಶಿ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಬುಧನ ಸಂಚಾರ ಕೂಡ ಇದೇ ಸಮಯದಲ್ಲಿ ನಡೆಯುವುದು ರಾಜಯೋಗ ರೂಪುಗೊಳ್ಳುವುದು ನೋಡಬಹುದು. ಈ ರಾಜಯೋಗಗಳಿಂದ ಹಲವರಿಗೆ ಲಾಭದಾಯಕವಾಗಲಿದೆ. ಹಣ, ಆಸ್ತಿ, ಸಂಪತ್ತು, ದಾಂಪತ್ಯ ಸಂಬಂಧವಾಗಿ ಉತ್ತಮವಾಗಬಹುದು. ಹಾಗಾದ್ರೆ ಈ ಮಾಲವ್ಯ ಮತ್ತು ಬುಧಾದಿತ್ಯ ರಾಜಯೋಗದಿಂದ ಯಾರಿಗೆ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯವರಿಗೆ ಮಾಲವ್ಯ ಮತ್ತು ಬುಧಾದಿತ್ಯ ರಾಜಯೋಗವು ಉತ್ತಮ ಲಾಭಗಳಿಗೆ ಕಾರಣವಾಗಲಿದೆ. ಉದ್ಯಮಿಗಳು ಲಾಭದಾಯಕ ದಿನಗಳ ನೋಡಲಿದ್ದಾರೆ. ವ್ಯಾಪಾರಿಗಳು, ಸ್ವಂತ ಉದ್ಯಮ ನಡೆಸುತ್ತಿದ್ದವರು ಹಲವು ದಿನಗಳಿಂದ ಬಯಸಿದ್ದಂತ ದಿನಗಳು ಎದುರಾಗಲಿವೆ. ನಿಮ್ಮಲ್ಲಿ ಖರ್ಚುಗಳ ನಿಭಾಯಿಸಲು ಆದಾಯ ಹೆಚ್ಚಳವಾಗಲಿದೆ. ನಿಮ್ಮ ದಾಂಪತ್ಯ ಜೀವನವು ಸುಖಕರವಾಗಲಿದೆ. ಅದರಲ್ಲೂ ನವವಿವಾಹಿತರಲ್ಲಿದ್ದ ಮನಸ್ತಾಪವೊಂದು ನಿವಾರಣೆಯಾಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರವು ನ್ಯಾಯಾಲಯ ಅಥವಾ ವ್ಯಾಜ್ಯಗಳಿಂದ ಕೂಡಿದ್ದರೆ ನಿಮಗೆ ಲಾಭವಾಗುವ ನಿರೀಕ್ಷೆ ಇದೆ. ನಿಮಗೆ ಹಳೆಯ ಬಾಕಿ ಸಾಲಗಳು ಮರುಪಾವತಿಯಾಗುವ ಸಾಧ್ಯತೆ ದಟ್ಟವಾಗಿದೆ.
ತುಲಾ ರಾಶಿ
ಮಾಲವ್ಯ ಮತ್ತು ಬುಧಾದಿತ್ಯ ರಾಜಯೋಗದಿಂದ ತುಲಾ ರಾಶಿಯವರಲ್ಲಿ ಅನೇಕ ರೀತಿಯ ಲಾಭಗಳ ನೋಡಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸ ಮಾಡುವಿರಿ. ಅಚ್ಚರಿಯ ಬೆಳವಣಿಗೆಯಲ್ಲಿ ನಿಮಗೆ ಧನಲಾಭದ ಖಚಿತತೆ ಇರಲಿದೆ. ಉದ್ಯೋಗದಲ್ಲಿನ ನಿಮ್ಮ ಪ್ರಗತಿಯು ಎಲ್ಲರಿಗೂ ಅಚ್ಚರಿ ತರುವ ರೀತಿ ಬೆಳವಣಿಗೆಯಾಗಲಿದೆ. ಮನೆ ನಿರ್ಮಾಣ ಕಾಮಗಾರಿಯಲ್ಲಿ ನೀವು ತೊಡಗಿದ್ದರೆ ಹಣಕಾಸು ಸಂಬಂಧಿ ಸಮಸ್ಯೆ ದೂರಾಗಲಿದೆ. ನಿಮ್ಮ ಉಳಿತಾಯ, ಹೂಡಿಕೆ ಹೆಚ್ಚಾಗಲಿದೆ.
ಕುಂಭ ರಾಶಿ
ಮಾಲವ್ಯ ಮತ್ತು ಬುಧಾದಿತ್ಯ ರಾಜಯೋಗವು ಕುಂಭ ರಾಶಿಯವರಿಗೆ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲದೊಂದಿಗೆ, ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತೀರಿ. ನಿರುದ್ಯೋಗಿಗಳು ಉತ್ತಮ ವೇತನದ ಕೆಲಸ ಪಡೆಯಲಿದ್ದಾರೆ. ಕುಟುಂಬದಲ್ಲಿದ್ದ ಹಣಕಾಸು ಸಂಬಂಧಿ ಒತ್ತಡವು ನಿಮ್ಮ ಸಹಕಾರದ ಮೂಲಕ ನಿವಾರಣೆ ಮಾಡಬಹುದು. ಹೊಸ ವಾಹನ ಖರೀದಿಯ ಲಾಭವಿದೆ. ದಾಂಪತ್ಯ ಸಂಬಂಧವಾಗಿ ಪ್ರವಾಸಗಳ ಮೂಲಕ ಸಂತೋಷ ಇರಲಿದೆ. ಆರ್ಥಿಕ ವಿಚಾರದಲ್ಲಿ ನಿಮಗೆ ಸಮತೋಲನ ಸ್ಥಿತಿ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications