Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
50 ವರ್ಷಗಳ ನಂತರ ಅಪರೂಪದ ತ್ರಿಗ್ರಹಿ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಲಾಭ!
ವೈದಿಕ ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಗ್ರಹಗಳ ಚಲನೆಯು ಹಲವು ರೀತಿಯಲ್ಲಿ ಎಲ್ಲಾ ಗ್ರಹಗಳ ಮೇಲೆಯೂ ಪರಿಣಾಮ ಬೀರುವುದನ್ನು ಕೂಡ ನಾವು ನೋಡಿರುತ್ತೇವೆ. ಹೀಗಾಗಿ ಗ್ರಹಗಳ ಸ್ಥಾನಪಲ್ಲಟವು ಬಹಳಷ್ಟು ಲಾಭದ ಜೊತೆಗೆ ಅಶುಭವನ್ನೂ ಕೂಡ ತರುವುದು ನೋಡಬಹುದು.
ನವಗ್ರಹಗಳು ತಮ್ಮ ರಾಶಿಯನ್ನು ಕಾಲಕಾಲಕ್ಕೆ ಬದಲಾಯಿಸುತ್ತವೆ ಮತ್ತು ಇತರ ಗ್ರಹಗಳೊಂದಿಗೆ ಸಂಯೋಗವಾಗುತ್ತವೆ. ಈ ಸಂಯೋಗವು ವಿವಿಧ ಯೋಗಗಳಿಗೆ ಕಾರಣವಾಗುತ್ತದೆ. ಈ ರೀತಿಯಲ್ಲಿ ರೂಪುಗೊಂಡ ಯೋಗಗಳ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅವರ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಿಗೆ ಇದು ಕಾರಣವಾಗುತ್ತದೆ.

ಸದ್ಯ ಈಗ ಪ್ರಸ್ತುತ ದಿನಮಾದಲ್ಲಿ ಗುರುವಿನ ಚಲನೆಯ ಕುರಿತಾಗಿ ನಾವು ತಿಳಿದುಕೊಳ್ಳಬೇಕಿದೆ. ಗುರು ಮಿಥುನ ರಾಶಿಯಲ್ಲಿ ಪ್ರಯಾಣಿಸುವಾಗ ಹಲವು ರೀತಿಯ ಯೋಗಕ್ಕೆ ಕಾರಣವಾಗುತ್ತಾನೆ. ಏಕೆಂದರೆ ಮಿಥುನದಲ್ಲಿ ಈಗಾಗಲೇ ಶುಕ್ರನ ಸಂಚಾರವಿದೆ. ಹೀಗಾಗಿ ಗುರು ಮತ್ತು ಶುಕ್ರ ಒಂದೇ ರಾಶಿಯಲ್ಲಿ ಪ್ರಯಾಣಿಸುವುದು ಹಲವು ರೀತಿಯಲ್ಲಿ ಯೋಗಕ್ಕೆ ಕಾರಣವಾಗುತ್ತದೆ.
ಹಾಗೆ ಈ ಆಗಸ್ಟ್ 18ರಂದು ಚಂದ್ರನು ಕೂಡ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಶುಕ್ರ, ಗುರು ಮತ್ತು ಚಂದ್ರನ ಸಂಯೋಗವಾಗುತ್ತದೆ. ಮಿಥುನ ರಾಶಿಯಲ್ಲಿ ಈ ಮೂರು ಗ್ರಹಗಳ ಸಂಯೋಗವು ಪ್ರಬಲ ತ್ರಿಗ್ರಹಿ ಯೋಗಕ್ಕೆ ಕಾರಣವಾಗಲಿದೆ. ಇದರಿಂದ ಯಾರಿಗೆಲ್ಲಾ ಶುಭವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ತುಲಾ ರಾಶಿಯ 9 ನೇ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಮೇಷ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಬಹಳ ಸಮಯದಿಂದ ಅಡ್ಡಿಯಾಗಿ ಉಳಿಸಿಕೊಂಡಿದ್ದ ವಿಚಾರವೊಂದು ಬಗೆಹರಿಸಲಿದೆ. ಬಾಡಿಗೆ ಮನೆ ನಿವಾಸಿಗಳ ಬಹುತೇಕ ಸಮಸ್ಯೆಗಳಿಂದ ಹೊರಬರಬಹುದು. ಹೊಸ ಆಸ್ತಿ ಖರೀದಿ, ಕಟ್ಟಡ ವಿಚಾರವಾಗಿದ್ದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಮದುವೆ ಕುರಿತ ಅಚ್ಚರಿ ಫಲಿತಾಂಶಗಳಿಗೆ ಈ ಯೋಗವು ಕಾರಣವಾಗುತ್ತದೆ. ವ್ಯಾಪಾರದಲ್ಲಿನ ಪ್ರಗತಿಯಿಂದಾಗಿ ನಿಮಗೆ ಹಣಕಾಸಿನ ಲಾಭವಿರಲಿದೆ. ಮನೆಗಾಗಿ ನೀವು ಬಹಳ ಸಮಯದಿಂದ ಬಯಸಿದಂತಹ ವಸ್ತುಗಳ ಖರೀದಿಗೆ ಇದು ಬಹಳ ಉತ್ತಮವಾಗಿದೆ. ದಾಂಪತ್ಯ ಸುಖ ಒಲಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಮೊದಲ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ಮಿಥುನ ರಾಶಿಯವರಲ್ಲಿನ ವ್ಯವಹಾರ, ಹಣಕಾಸು ವಿಚಾರವಾಗಿ ಇಷ್ಟು ದಿನಗಳಿಂದ ಎದುರಿಸಿದ್ದ ಸಮಸ್ಯೆ ಬಗೆಹರಿಯಲಿದೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ಜಂಟಿ ವ್ಯವಹಾರಗಳು, ಹೋಟೆಲ್ ಉದ್ಯಮಿಗಳಿಗೆ ಬಹಳ ಅನುಕೂಲಕರ ದಿನಗಳಿವೆ. ನ್ಯಾಯಾಲಯ, ಆಸ್ತಿ ವಿಚಾರವಾಗಿ ನಿಮಗೆ ಮೇಲುಗೈ ಇರಲಿದೆ. ನಿಮ್ಮ ಪೂರ್ವ ನಿರ್ಧರಿತ ಕೆಲಸಗಳಲ್ಲಿ ಧನಾತ್ಮಕ ವಿಚಾರಗಳಿವೆ. ಉದ್ಯೋಗ ಹುಡುಕುತ್ತಿದ್ದವರಿಗೆ ಅಚ್ಚರಿಯ ಅವಕಾಶಗಳು ಸಿಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ 10 ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಇದು ಕನ್ಯಾ ರಾಶಿಯಲ್ಲಿ ಈ ರಾಶಿಚಕ್ರ ಚಿಹ್ನೆಗಳು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತವೆ. ಹಣಕಾಸಿನ ವಿಚಾರವಾಗಿ ಒತ್ತಡಗಳಿದ್ದರೂ ಸಮರ್ಥವಾಗಿ ಅನ್ನು ಎದುರಿಸುತ್ತೀರಿ. ಉದ್ಯೋಗ ಹುಡುಕುತ್ತಿದ್ದರೆ ನಿಮಗೆ ಆಪ್ತರ ಸಹಕಾರದಿಂದಾಗಿ ಉತ್ತಮ ಅವಕಾಶ ಸಿಗಲಿದೆ. ಉದ್ಯಮಿಗಳು ಎರಡು ಪಟ್ಟು ಲಾಭ ಮಾಡಬಹುದು. ವ್ಯಪಾರ ವಿಸ್ತರಣೆಗೆ ಇದು ಬಹಳ ಸೂಕ್ತ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications











