Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
18 ವರ್ಷದ ಬಳಿಕ ಶುಕ್ರ-ಕೇತು ಒಂದೇ ರಾಶಿಗೆ ಚಲನೆ: ನಿಮ್ಮ ಅದೃಷ್ಟ ಬದಲಾಗುತ್ತೆ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಎಷ್ಟು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ ಎಂಬುದನ್ನು ನೀವು ಕೂಡ ತಿಳಿದಿದ್ದೀರಿ. ಒಂದು ನಿರ್ಧಿಷ್ಟ ಸಮಯದಲ್ಲಿ ಗ್ರಹಗಳು ನಿರ್ದಿಷ್ಟ ರಾಶಿಯಲ್ಲಿ ಚಲಿಸುವುದು ಬಹಳಷ್ಟು ಜನರ ಮೇಲೆ ಹಾಗೆ ಅವರ ರಾಶಿಗಳಲ್ಲಿ ಬದಲಾವಣೆ ತರಲು ಕಾರಣವಾಗುತ್ತವೆ. ಈ ಗ್ರಹಗಳ ಚಲನೆಯಲ್ಲಿ ಆಗುವ ಸ್ಥಾನ ಪಲ್ಲಟವು ಎಲ್ಲರ ಮೇಲೆ ಪರಿಣಾಮ ಬೀರುವುದು ನೋಡಬಹದು.
ಕೆಲವು ಗ್ರಹಗಳು ಹಲವು ವರ್ಷಗಳ ಬಳಿಕ ಒಂದು ರಾಶಿಗೆ ಚಲಿಸುತ್ತವೆ. ಹಾಗೆ ಆ ರಾಶಿಯಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾದಾಗ ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯನ್ನು ನಾವು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಿರುವಾಗ, ಕೇತು ಸಹ ಸಂಚರಿಸುವುದು ನೋಡಬಹುದು.

ಕೇತು ಈಗ ಪ್ರಸ್ತುತ ಸಿಂಹ ರಾಶಿಯಲ್ಲಿ ಚಲಿಸುತ್ತದೆ. ಇದೇ ವೇಳೆ ಶುಕ್ರ ಕೂಡ ಸಿಂಹ ರಾಶಿಗೆ ಚಲಿಸಲಿದ್ದಾನೆ. ಶುಕ್ರನನ್ನು ಸಂಪತ್ತು, ಆರ್ಥಿಕತೆ, ಐಶ್ವರ್ಯ, ಆಸ್ತಿ ವಿಚಾರವಾಗಿ ಪ್ರಮುಖ ಗ್ರಹ. ಹಾಗೆ ಶುಕ್ರನ ಆಶೀರ್ವಾದವು ಶುಕ್ರದೆಸೆಗೆ ಕಾರಣವಾತ್ತದೆ ಇನ್ನು ಸಿಂಹ ರಾಶಿಯಲಿ ಈ ಎರಡೂ ಗ್ರಹಗಳ ಸಂಯೋಗವು ಹಲವು ರೀತಿಯಲ್ಲಿ ಲಾಭದಾಯಕವಾಗುತ್ತಿದೆ.
ಸೆಪ್ಟೆಂಬರ್‌ನಲ್ಲಿ ಸಿಂಹ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗ ಉಂಟಾಗುತ್ತಿದೆ. ಈ ಸಂಯೋಗವು 18 ವರ್ಷಗಳ ಬಳಿಕ ಉಂಟಾಗುತ್ತಿದೆ. ಹೀಗಾಗಿ ಈ ರಾಶಿಗಳು ಹಲವು ರೀತಿಯ ಲಾಭ ಪಡೆಯುತ್ತಿವೆ. ಹಾಗಾದ್ರೆ ಯಾರಿಗೆ ಈ ಸಂಯೋಗಗಳು ಶುಭ ಹಾಗೂ ಲಾಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕೇತು ಮತ್ತು ಶುಕ್ರರ ಸಂಯೋಜನೆಯು ಕರ್ಕ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ನೀವು ಅನೇಕ ಶುಭ ಕಾರ್ಯಗಳಿಗೆ ಹಾಗೆ ಹಲವು ಹೊಸ ವಿಚಾರಗಳಲ್ಲಿ ತೊಡಗುತ್ತೀರಿ. ನಿಮ್ಮ ವಾಹನ ಸಂಬಂಧಿ ಕನಸೊಂದು ನನಸಾಗಬಹುದು. ದಾಂಪತ್ಯ ವಿಚಾರವಾಗಿ ನಿಮಗೆ ಉತ್ತಮ ದಿನಗಳು ಎದುರಾಗುತ್ತವೆ. ಪಿತ್ರಾರ್ಜಿತ ಆಸ್ತಿ ಕುರಿತಾಗಿ ಹಲವು ದಿನದಿಂದ ನಿಮಗೆ ಸಮಸ್ಯೆ ಎದುರಾಗಿದ್ದರೆ ಈ ಸಮಯದಲ್ಲಿ ನಿವಾರಣೆಯ ಶುಭ ಸಂಕೇತವಾಗರಲಿದೆ. ದೀರ್ಘಕಾಲದ ಹಣಕಾಸಿನ ವಿಚಾರದಲ್ಲಿ ಲಾಭದಾಯಕವಾಗುತ್ತದೆ.
ಧನು ರಾಶಿ
ಕೇತು ಮತ್ತು ಶುಕ್ರ ಸಂಯೋಜನೆಯಿಂದ ಧನು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತವೆ. ಧನು ರಾಶಿಯ 9ನೇ ಮನೆಯಲ್ಲಿ ಕೇತು ಹಾಗೂ ಶುಕ್ರನ ಸಂಯೋಗ ಉಂಟಾಗುತ್ತದೆ. ಇದರಿಂದ ನಿಮ್ಮ ಹಲವು ರೀತಿಯ ಲಾಭಗಳು ಪಡೆಯುತ್ತೀರಿ. ವ್ಯವಹಾರ ಹಾಗೂ ವ್ಯಾಪಾರದಲ್ಲಿ ಪ್ರಗತಿ ನೋಡುವಿರಿ. ನಿಮ್ಮ ಉಳಿತಾಯ ಹೆಚ್ಚಳವಾಗುವ ಸಮಯ. ನಿಮ್ಮ ಹೂಡಿಕೆಗಳಿಂದ ಲಾಬ ಪಡೆಯುತ್ತೀರಿ. ಸರ್ಕಾರಿ ಕೆಲಸದಕ್ಕೆ ಪ್ರಯತ್ನಿಸುತ್ತಿದ್ದರಿಗೆ ಧನಾತ್ಮಕ ವಿಚಾರಗಳು ನಡೆಯಲಿದೆ. ನಿಮ್ಮ ಆಸ್ತಿ ವಿಚಾರವಾಗಿ ಯಾವುದಾದರು ಸಮಸ್ಯೆ ಎದುರಿಸಿದ್ದರೆ ಪರಿಹಾರವಾಗಲಿದೆ.
ವೃಶ್ಚಿಕ ರಾಶಿ
ಕೇತು ಮತ್ತು ಶುಕ್ರರ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ಉತ್ತಮ ಪ್ರಯೋಜನಗಳನ್ನು ನೀಡಲಿದೆ. ವೃಶ್ಚಿಕ ರಾಶಿಯ 10ನೇ ಮನೆಯಲ್ಲಿ ಶುಕ್ರ ಹಾಗೂ ಕೇತುವಿನ ಸಂಯೋಗವಾಗುವುದು ಹಣಕಾಸಿನ ವಿಚಾರವಾಗಿ ಅದೃಷ್ಟ ನಿಮ್ಮದಾಗಲಿದೆ. ಹಲವು ಒಪ್ಪಂದಗಳು ನಿಮಗೆ ಲಾಭ ತರಬಹುದು. ವಿದೇಶ ಪ್ರವಾಸದಂತಹ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ದೀರ್ಘಕಾಲದ ಅನಾರೋಗ್ಯವು ಸುಧಾರಣೆ ಆಗಲಿದೆ. ವ್ಯಾಪಾರಿಗಳು ಬಹುದೊಡ್ಡ ಲಾಭ ಮಾಡಲಿದ್ದಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
