Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಸಂಖ್ಯಾಶಾಸ್ತ್ರ ಪ್ರಕಾರ ಯಾವ ಸಂಖ್ಯೆಯ ಜೋಡಿಗಳ ನಡುವೆ ಒಳ್ಳೆಯ ಹೊಂದಾಣಿ ಇರಲಿದೆ
ಮದುವೆ ಎಂಬುವುದು ಒಂದು ಹೆಣ್ಣು-ಗಂಡು ಜೊತೆಗೂಡಿ ನಡೆಸಿಕೊಂಡು ಹೋಗುವ ಸುಂದರ ಜೀವನ. ಇಬ್ಬರು ಜೊತೆಯಾಗಿ ಬಾಳಲು ಅಲ್ಲಿ ಪ್ರೀತಿ ಬೇಕು, ನಂಬಿಕೆ ಇರಬೇಕು ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರ ನಡುವೆ ಹೊಂದಾಣಿಕೆ ಇರಬೇಕು, ಆದರೆ ಮಾತ್ರ ಜೀವನ ತುಂಬಾನೇ ಚೆನ್ನಾಗಿರಲಿದೆ.
ಈ ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರವು ಈ ರೀತಿ ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿರಲು ಅವರ ಗಣಗಳು, ಸಂಖ್ಯಾಶಾಸ್ತ್ರ ಪ್ರಕಾರ ಅವರ ಜನ್ಮ ಸಂಖ್ಯೆಗಳ ನಡುವೆ ಹೊಂದಾಣಿಕೆ ಇರಬೇಕೆಂದು ಹೇಳಲಾಗುವುದು. ಏಕೆಂದರೆ ಮೊದಲೇ ಹೇಳಿದಂತೆ ಇಬ್ಬರ ಸ್ವಭಾವದ ನಡುವೆ ತುಂಬಾನೇ ಹೊಂದಾಣಿಕೆ ಇರಬೇಕು.

ಸಂಖ್ಯಾಶಾಸ್ತ್ರ ಪ್ರಕಾರ ಯಾವ ಸಂಖ್ಯೆಗೆ ಯಾವ ಜೋಡಿಯವರು ತುಂಬಾನೇ ಒಳ್ಳೆಯ ಮ್ಯಾಚ್ ಆಗುತ್ತಾರೆ ಎಂದು ನೋಡೋಣ ಬನ್ನಿ:
ಈ ಸಂಖ್ಯಾ ಲೆಕ್ಕವನ್ನು ಹೇಗೆ ಮಾಡಬೇಕು?
ಉದಾರಣೆಗೆ ನಾವು ಯಾವುದೇ ದಿನಾಂಕದ 10ನೇ ತಾರೀಕಿನಂದು ಜನಿಸಿದ್ದರೆ ನಮ್ಮ ಜನ್ಮ ಸಂಖ್ಯೆ 1(1+0=1). ನಾವು 24ನೇ ತಾರೀಕಿನಂದು ಜನಿಸಿದ್ದರೆ ನಿಮ್ಮ ಜನ್ಮ ಸಂಖ್ಯೆ 6 (2+4=6)ಹೀಗೆ ಲೆಕ್ಕ ಹಾಕಬೇಕು.
ನಿಮ್ಮ ಜನ್ಮ ಸಂಖ್ಯೆಗೆ ಯಾವ ಸಂಖ್ಯೆಯವರು ಹೊಂದಿಕೊಳ್ಳುತ್ತಾರೆ ಎಂದು ನೋಡೋಣ ಬನ್ನಿ:
ಸಂಖ್ಯೆ 1 ನಿಮ್ಮದಾಗಿದ್ದರೆ 2, 3, 4, 5, 6, 9 ಸಂಖ್ಯೆಯವರು ಒಳ್ಳೆಯ ಜೋಡಿಯಾಗುತ್ತಾರೆ.
ಸಂಖ್ಯೆ 2 ನಿಮ್ಮದಾಗಿದ್ದರೆ 1, 2, 3, 5
ಸಂಖ್ಯೆ 3 ನಿಮ್ಮದಾಗಿದ್ದರೆ 1, 2, 3, 5, 9
ಸಂಖ್ಯೆ 4 ನಿಮ್ಮದಾಗಿದ್ದರೆ 1,5, 6, 7
ಸಂಖ್ಯೆ 5 ನಿಮ್ಮದಾಗಿದ್ದರೆ 1, 2, 4, 5, 6, 8
ಸಂಖ್ಯೆ 6 ನಿಮ್ಮದಾಗಿದ್ದರೆ 4,5,6,7,8
ಸಂಖ್ಯೆ 7 ನಿಮ್ಮದಾಗಿದ್ದರೆ 4 5, 6, 8
ಸಂಖ್ಯೆ 8 ನಿಮ್ಮದಾಗಿದ್ದರೆ 5,6, 8
ಸಂಖ್ಯೆ 9 ನಿಮ್ಮದಾಗಿದ್ದರೆ 9,5, 8
ಸಂಖ್ಯೆ 1
ಸಂಖ್ಯಾಸಾಸ್ತ್ರ ಪ್ರಕಾರ 1 ಸಂಖ್ಯೆಯವರನ್ನು ಆಕರ್ಷಿಸುವುದು ಕಷ್ಟ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸ್ವಂತವಾಗಿ ತೆಗೆದುಕೊಳ್ಳಲು ಇಚ್ಚಿಸುತ್ತಾರೆ, ಇವರು ಹೆಚ್ಚಾಗಿ ತಮ್ಮ ಬಾಲ್ಯ ಸ್ನೇಹಿತರನ್ನು ಇಷ್ಟಪಟ್ಟು ಮದುವೆಯಾಗುತ್ತಾರೆ.
ಸಂಖ್ಯೆ 2
ಸಂಖ್ಯಾಶಾಸ್ತ್ರ ಪ್ರಕಾರ ಈ ಸಂಖ್ಯೆಯವರು ಸಂಬಂಧದಲ್ಲಿ ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸುತ್ತಾರೆ. ಅಲ್ಲದೆ ಎಲ್ಲಾ ಸಮಸ್ಯೆಯನ್ನು ತುಂಬಾ ತಾಳ್ಮೆಯಿಂದ ನಿಭಾಯಿಸುತ್ತಾರೆ.
ಸಂಖ್ಯೆ 3
ಅವರಿಗೆ ಅವರು ಹೇಳುವುದನ್ನು ಕೇಳಿಸಿಕೊಳ್ಳುವ ಸಂಗಾತಿ ಬೇಕು. ಅಲ್ಲದೆ ಇವರು ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನ ನೀಡುವವರು, ಇವರು ತಮ್ಮ ಜೊತೆ ಇರುವವರು ಖುಷಿಯಾಗಿರಬೇಕೆಂದು ಬಯಸುತ್ತಾರೆ.
ಸಂಖ್ಯೆ 4
ಇವರು ಆಡಂಬರವನ್ನು ಇಷ್ಟಪಡಲ್ಲ, ತುಂಬಾ ಸರಳವಾಗಿರುವುದನ್ನು ಇಷ್ಟಪಡುತ್ತಾರೆ, ಮದುವೆ ಕೂಡ ತುಂಬಾ ಸರಳವಾಗಿರಬೇಕೆಂದು ಬಯಸುತ್ತಾರೆ. ಇವರು ಸಂಗಾತಿ ಜೊತೆಗೆ ಸದಾ ನಿಂತುಕೊಳ್ಳುತ್ತಾರೆ, ಆದ್ದರಿಂದ ಇವರ ಬಗ್ಗೆ ಸಂಗಾತಿಗೆ ಗೌರವ ಹೆಚ್ಚಿರಲಿದೆ.
ಸಂಖ್ಯೆ 5
ಇವರು ತಕ್ಷಣ ಪ್ರತಿಕ್ರಿಯಿಸುವ ಸ್ವಭಾವದವರು, ನಂತರ ನಾವು ಹಾಗೆ ಮಾಡಬಾರದಿತ್ತು ಎಂದು ಬೇಸರ ಪಡುತ್ತಾರೆ. ಇವರ ಸ್ವಭಾವಕ್ಕೆ ಹೊಂದಿಕೊಂಡು ಹೋಗುವ ಸಂಗಾತಿ ಸಿಕ್ಕರೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ.
ಸಂಖ್ಯೆ 6
ಇವರು ಸುಲಭದಲ್ಲಿ ಪ್ರೀತಿಯಲ್ಲಿ ಬೀಳುವುದಿಲ್ಲ, ಪ್ರೀತಿಯಲ್ಲಿ ಬಿದ್ದರೆ ಅದನ್ನು ಬಿಡಲ್ಲ, ಇವರು ಸಂಗಾತಿಯನ್ನು ತುಂಬಾನೇ ಇಷ್ಟಪಡುತ್ತಾರೆ.
ಸಂಖ್ಯೆ 7
ಇವರು ಯಾರನ್ನೂ ಸುಲಭವಾಗಿ ನಂಬುವುದಿಲ್ಲ, ಇವರು ತಮ್ಮ ಬಳವಣಿಗೆಗೆ ಜೊತೆಯಾಗಿ ನಿಲ್ಲುವವರನ್ನು ಇಷ್ಟಪಡುತ್ತಾರೆ.
ಸಂಖ್ಯೆ 8
ಇವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ, ಒಂದು ವೇಳೆ ತಮ್ಮ 20ರ ಹರೆಯದಲ್ಲಿ ಪ್ರೀತಿಯಲ್ಲಿ ಇಲ್ಲ ಎಂದರೆ ಇವರು ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನಹರಿಸುವವರು ಆಗಿರುತ್ತಾರೆ.
ಸಂಖ್ಯೆ 9
ಇವರು ಸಂಖ್ಯೆ 9ರ ಜೊತೆ ತುಂಬಾನೇ ಚೆನ್ನಾಗಿ ಇರುತ್ತಾರೆ. ಉಳಿದಂತೆ 5, 8 ಸಂಖ್ಯೆಯವರ ಜೊತೆಯೂ ಹೊಂದಾಣಿಕೆ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications