Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾ ಶಿವರಾತ್ರಿ ಸಮಯದಲ್ಲೇ 300 ವರ್ಷದ ಬಳಿಕ ಅಪರೂಪದ ಗ್ರಹ ಸಮ್ಮಿಲನ: ಹುಡುಕಿ ಬರಲಿದೆ ಅದೃಷ್ಟ
ಜ್ಯೋತಿಷ್ಯದ ಪ್ರಕಾರ ಫೆಬ್ರವರಿ 15 2026 ರಂದು ಆಚರಿಸಲಾಗುವ ಮಹಾಶಿವರಾತ್ರಿಯಂದು ಒಂದು ಪ್ರಮುಖ ಖಗೋಳ ಘಟನೆ ಸಂಭವಿಸಲಿದೆ. ಈ ಶುಭ ದಿನದಂದು, ಕಳೆದ 300 ವರ್ಷಗಳಲ್ಲಿ ಕಾಣದ ಅಪರೂಪದ ಗ್ರಹ ಜೋಡಣೆ ರೂಪುಗೊಳ್ಳುತ್ತಿದೆ. ಈ ದಿನವು ನಾಲ್ಕು ಪ್ರಮುಖ ರಾಜಯೋಗಗಳು ಮತ್ತು 12 ಶುಭ ಯೋಗಗಳ ಏಕಕಾಲಿಕ ಸಂಗಮವನ್ನು ಸೂಚಿಸುತ್ತದೆ.
ಕುಂಭ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ರಾಹುವಿನ ಉಪಸ್ಥಿತಿಯು ಚತುರ್ಗ್ರಹಿ ಯೋಗಕ್ಕೆ ಕಾರಣವಾಗುತ್ತಿದೆ. ಇದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಉಂಟು ಮಾಡುವುದು ನೋಡಬಹುದು. ಹಾಗೆ ಪ್ರೀತಿ, ಆಯುಷ್ಯ, ಸೌಭಾಗ್ಯ, ಸಾಧ್ಯ, ಶಿವ, ಶುಕ್ಲ, ಶೋಭನ್, ಸರ್ವಾರ್ಥಸಿದ್ಧಿ, ಚಂದ್ರಮಂಗಲ, ತ್ರಿಗ್ರಹಿ, ರಾಜ ಮತ್ತು ಧ್ರುವ ಎಂಬ ಹನ್ನೆರಡು ಶುಭ ಯೋಗಗಳು ಏಕಕಾಲದಲ್ಲಿ ಸಕ್ರಿಯವಾಗಿರುತ್ತವೆ.

ಈ ಯೋಗಗಳ ಜೊತೆಗೆ, ಸೂರ್ಯ, ಬುಧ ಮತ್ತು ಶುಕ್ರರ ಸಂಯೋಗವು ನಾಲ್ಕು ಪ್ರಮುಖ ರಾಜಯೋಗಗಳನ್ನು ಸೃಷ್ಟಿಸುತ್ತಿದೆ. ಬುಧಾದಿತ್ಯ, ಲಕ್ಷ್ಮಿ ನಾರಾಯಣ ಮತ್ತು ಶುಕ್ರಾದಿತ್ಯ ಯೋಗ ಕೂಡ ಇದೇ ಸಮಯದಲ್ಲಿ ನಾವು ನೋಡಬಹುದು. ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಸಹ ನೋಡಬಹುದು. ಹಾಗಾದ್ರೆ ಈ ಗ್ರಹಗಳ ಸಂಚಾರವು ಯಾವೆಲ್ಲಾ ರಾಶಿಯವರಿಗೆ ಶುಭಯೋಗವನ್ನು ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಈ ಅಪರೂಪದ ಸಂಯೋಗಗಳು ಮೇಷ ರಾಶಿ ಜನರಿಗೆ ಅತ್ಯಂತ ಅನುಕೂಲಕರ ಸಮಯವನ್ನು ತರಲಿದೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿನ ಏಳುಬೀಳುಗಳು ನಿವಾರಣೆಯಾಗಲಿದೆ. ಆರ್ಥಿಕ ತೊಡಕುಗಳು ಅದ್ರಲ್ಲೂ ಬಹುಕಾಲದ ಉಳಿತಾಯ, ಹೂಡಿಕೆ ವಿಚಾರಗಳು ನಿಮಗೆ ಲಾಭದಾಯಕವಾಗಲಿವೆ. ವ್ಯವಹಾರ ಸಂಬಂಧವಾಗಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ಮಹಾಶಿವರಾತ್ರಿಯು ಸಂತೋಷ ಮತ್ತು ಗೌರವ ತರುತ್ತದೆ. ನಿಮ್ಮ ಕೌಟುಂಬಿಕ ವಿಚಾರವಾಗಿ ಇದ್ದಂತಹ ದೊಡ್ಡ ಕನಸುಗಳು ಈಡೇರಲಿದೆ. ಆಪ್ತರ ಮಧುರ ಮಾತುಗಳಿಂದ ನಿಮ್ಮಲ್ಲಿ ಸಂತಸದ ವಾತಾವರಣ ಇರಲಿದೆ. ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೂ ಕೂಡ ಅಡೆತಡೆಗಳಿಲ್ಲದೆ ನಿಮಗೆ ಪೂರ್ಣವಾಗುತ್ತದೆ. ಹೊಸ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ಸಮಯದಲ್ಲಿ ಅಚ್ಚರಿಯ ಅವಕಾಶಗಳು ಅರಸಿ ಬರಲಿವೆ. ಕಾನೂನು ಅಡತಡೆಗಳು ನಿವಾರಣೆಯಾಗಲಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ಸಮಯವು ಬಹಳ ಅನುಕೂಲವನ್ನು ತರಲಿದೆ. ಈ ಸಮಯ ಹೊಸ ಆಸ್ತಿಯನ್ನು ಪಡೆಯಲು ಅಥವಾ ಹೂಡಿಕೆ ಮಾಡಲು ಉತ್ತಮವಾಗಿರುತ್ತದೆ. ನೀವು ಹೊಸ ಮನೆಯನ್ನು ಖರೀದಿಸಲು ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಲಾಭದಾಯಕವಾಗಲಿದೆ. ಕುಟುಂಬದಲ್ಲಿನ ಯಾವುದೇ ದೀರ್ಘಕಾಲದ ಉದ್ವಿಗ್ನತೆಗಳು ಬಗೆಹರಿಯುತ್ತವೆ. ವಾಹನ ಖರೀದಿಯ ಲಾಭವಿದೆ. ನಿಮ್ಮ ಅದೃಷ್ಟದ ಕಾರಣದಿಂದಾಗಿ ದಿಢೀರ್ ಲಾಭದಾಯಕ ದಿನಗಳು ಬರಲಿವೆ. ಆರೋಗ್ಯವೂ ಸುಧಾರಿಸುವ ಸಮಯ ಇದಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications
