Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 ವರ್ಷದ ಬಳಿಕ ತ್ರಿಗ್ರಹಿ ಯೋಗ: ಈ ರಾಶಿಯವರು ಕೋಟ್ಯಧಿಪತಿಯಾಗುವ ಲಾಭವಿದೆ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಹಾಗೆ ಗ್ರಹಗಳು ಒಂದೊಂದು ರಾಶಿಗೆ ಚಲಿಸುವಾಗಲು ಆ ರಾಶಿಯಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಈ ರೀತಿಯ ಸಂಯೋಗಗಳು ಹಲವು ರೀತಿಯ ಯೋಗಗಳಿಗೆ ಕಾರಣವಾಗುತ್ತದೆ. ಅದ್ರಲ್ಲೂ ಅಪರೂಪಕ್ಕೆ ಉಂಟಾಗುವ ಯೋಗವು ಹಲವು ರೀತಿಯಲ್ಲಿ ಶುಭಕರವಾಗುತ್ತದೆ. ಹಾಗೆ ವ್ಯಕ್ತಿಯೊಬ್ಬರ ಜೀವನದಲ್ಲಿ ಬದಲಾವಣೆ ತರಲು ಕಾರಣವಾಗುತ್ತವೆ.
ಹಾಗೆ ಈ ಗ್ರಹಗಳ ಸಂಚಾರವು ಹಲವು ರೀತಿಯ ಯೋಗಗಳ ರೂಪಿಸುವುದು ಎಲ್ಲಾ 12 ಗ್ರಹಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಸದ್ಯ ಈಗ ಸೆಪ್ಟೆಂಬರ್‌ನಲ್ಲಿ ಸೂರ್ಯನ ಸಂಚಾರದಿಂದ ಅಪರೂಪದ ಯೋಗ ಉಂಟಾಗುತ್ತಿದೆ. ಈಗ ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರದದಿಂದ ಅಪರೂಪದ ಯೋಗ ರೂಪುಗೊಳ್ಳುತ್ತಿದೆ. ಬುಧ ಹಾಗೂ ಸೂರ್ಯ ಸೆಪ್ಟೆಂಬರ್‌ನಲ್ಲಿ ಒಟ್ಟಿಗೆ ಸಿಂಹ ರಾಶಿಯಲ್ಲಿ ಚಲಿಸುತ್ತಾರೆ.

ಈ ಎರಡು ಗ್ರಹಗಳ ಸಂಯೋಜನೆಯು ಬುಧಾದಿತ್ಯ ರಾಜಯೋಗವನ್ನು ರೂಪಿಸುತ್ತದೆ. ಅದೇ ಸಮಯದಲ್ಲಿ ಚಂದ್ರನು ಕೂಡ ಸಿಂಹ ರಾಶಿಯಲ್ಲಿ ಚಲಿಸುತ್ತಾನೆ. ಇದರಿಂದ ಸಿಂಹ ರಾಶಿಯಲ್ಲಿ ಚಂದ್ರ, ಸೂರ್ಯ, ಬುಧ ಗ್ರಹಗಳ ಅಪರೂಪದ ಸಂಯೋಗವಾಗಲಿದೆ, ಇದು 30 ವರ್ಷಗಳ ಬಳಿಕ ಸಂಭವಿಸುವ ವಿದ್ಯಮಾನವಾಗಿದೆ. ಇದರಿಂದ ತ್ರಿಗ್ರಹ ಯೋಗ ರೂಪಗೊಳ್ಳಲಿದೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು.
ಸಿಂಹ ರಾಶಿಯಲ್ಲಿ ರೂಪುಗೊಂಡ ತ್ರಿಗ್ರಾಹಿ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಇರಲಿದೆ. ಯಾರಿಗೆ ಇದು ಶುಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯ ಮೊದಲ ಮನೆಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ನಿಮ್ಮ ರಾಶಿಯಲ್ಲಿ ಅದ್ಭುತ ಬದಲಾವಣೆಗಳ ನೋಡಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯ ಸಮಯ. ಕೆಲ ವರ್ಷದಿಂದ ನಿಮ್ಮ ಹಣ ಉಳಿಸಲು ಆಗದೆ ವ್ಯಯವಾಗುತ್ತಿದ್ದ ಕೆಲಸ ಅಥವಾ ವ್ಯವಹಾರದಿಂದ ಮುಕ್ತಿ ಪಡೆಯಲಿದ್ದೀರಿ. ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ. ನ್ಯಾಯಾಲಯ, ಆಸ್ತಿ ಕುರಿತಾದ ನಿಮ್ಮ ಸಮಸ್ಯೆಗಳು ದೂರಾಗಲಿವೆ. ಅವಿವಾಹಿತರಿಗೆ ಬಹಳ ಉತ್ತಮ ಸಮಯ ಆಗಿರಲಿದೆ. ನಿಮ್ಮ ನಾಯಕತ್ವ ಕೌಶಲ್ಯವು ನಿಮಗೆ ಲಾಭದಾಯಕ ದಿನಗಳ ತರಲಿದೆ. ಹಾಗೆ ಉದ್ಯೋಗದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ತುಲಾ ರಾಶಿ
ತುಲಾ ರಾಶಿಯ 11 ನೇ ಮನೆಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿ ಜನರಿಗೆ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯಬಹುದು. ಹಾಗೆ ನಿಮ್ಮ ಹಣಕಾಸಿನ ವಿಚಾರವಾಗಿಯೂ ನಿಮಗೆ ಉತ್ತಮ ಸಮಯ. ಹೊಸ ಆದಾಯದ ಅವಕಾಶಗಳು ನಿಮಗೆ ಒಲಿದು ಬರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ವಾಹನ ಸಂಬಂಧಿ ಲಾಭವಿದೆ. ಕುಟುಂಬದಲ್ಲಿ ಇದ್ದಂತಹ ದೊಡ್ಡ ಚಿಂತೆಯೊಂದು ನಿಮ್ಮಿಂದಾಗಿ ದೂರಾಗಲಿದೆ. ಚಿನ್ನ ಬೆಳ್ಳಿ ಖರೀದಿಗೆ ನೀವು ಮುಂದಾಗಬಹುದು.
ಕರ್ಕ ರಾಶಿ
ತ್ರಿಗ್ರಹ ಯೋಗವು ಕರ್ಕ ರಾಶಿಯ 2ನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದರಿಂದಾಗಿ ಕರ್ಕ ರಾಶಿಯವರ ಹೊಸ ವ್ಯವಹಾರಗಳು ಕೈ ಹಿಡಿಯಲಿದೆ. ನಿಮ್ಮ ಹಣವು ಯಾವ ಬಳಿಯಾದ್ರು ಸಿಲುಕಿದ್ದರೆ ಈ ಸಮಯದಲ್ಲಿ ನಿಮಗೆ ವಾಪಾಸು ಬರಬಹುದು. ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆಯು ನಿಮ್ಮಲ್ಲಿ ಶಾಂತಿ ತರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಕೆಲಸ ಸಿಗಬಹುದು. ವೇತನ, ಬಡ್ತಿ ವಿಚಾರವಾಗಿ ನಿಮಗೆ ಉತ್ತಮ ದಿನವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications