Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
37 ವರ್ಷದ ಬಳಿಕ ಅಪರೂಪದ ಸೂರ್ಯ ಗ್ರಹಣ: ಕೆಡುಕು, ನೋವು, ನಷ್ಟಕ್ಕೆ ದಾರಿ! ಯಾರಿಗೆ ಸಮಸ್ಯೆ!
2026 ರ ಮೊದಲ ಸೂರ್ಯಗ್ರಹಣವು ಫೆಬ್ರವರಿ 17 ರ ಮಂಗಳವಾರ ಸಂಭವಿಸುತ್ತಿದೆ. ಭಾರತದಲ್ಲಿ ಗೋಚರ ಆಗದೇ ಇದ್ದರೂ ಆ ಸಮಯದಲ್ಲಿ ಗ್ರಹಗತಿಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ಖಚಿತ. ಹಾಗೆ ಕುಂಭ ರಾಶಿಯಲ್ಲಿ ಈ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಸೂರ್ಯನು ರಾಹುವಿನ ಜೊತೆಯಾಗಿ ಧನಿಷ್ಠ ನಕ್ಷತ್ರದೊಂದಿಗೆ ಕುಂಭ ರಾಶಿಯಲ್ಲಿ ಚಲಿಸುವ ಸಮಯದಲ್ಲಿ ಈ ಗ್ರಹಣ ಉಂಟಾಗುತ್ತಿದೆ.
37 ವರ್ಷದ ಬಳಿಕ ಕುಂಭ ರಾಶಿಯಲ್ಲಿ ಈ ಸೂರ್ಯಗ್ರಹಣ ಸಂಭವಿಸುತ್ತಿದೆ. ಹೀಗಾಗಿ ಇದೊಂದು ಅಪರೂಪದ ಗ್ರಹಣವೆಂದು ಸಹ ಪರಿಗಣಿಸಲಾಗಿದೆ. ಈ ಸಮಯದಲ್ಲಿ ರಾಹು, ಬುಧ, ಶುಕ್ರ ಮತ್ತು ಚಂದ್ರರು ಸಹ ಕುಂಭ ರಾಶಿಯಲ್ಲಿ ಸಾಗುತ್ತಾರೆ. ಇದು ಅಪರೂಪದ ಸಂಯೋಗಗಳಿಗೆ ಕಾರಣವಾಗಲಿದೆ. ಈ ಗ್ರಹಗಳು ಕುಂಭ ರಾಶಿಯಲ್ಲಿ ಒಟ್ಟಿಗೆ ಕಾಣಿಸಿದ್ದು 1989ರ ಮಾರ್ಚ್ 7ರಂದು.

ಈ ಬಾರಿ ಸೂರ್ಯ ಮತ್ತು ರಾಹುವಿನ ಸಂಯೋಗವು ಕುಂಭ ರಾಶಿಯಲ್ಲಿ ಗ್ರಹಣ ಯೋಗವನ್ನು ಅತ್ಯಂತ ಪ್ರಬಲವಾಗಿಸುತ್ತದೆ. ಈ ಅಪರೂಪದ ಗ್ರಹಣವು ಕುಂಭ ಮೀನ ಮತ್ತು ಇತರ ಮೂರು ರಾಶಿ ಜನರ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗಾದ್ರೆ ಈ ಗ್ರಹಣ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಸೂರ್ಯಗ್ರಹಣವು ನಿಮ್ಮ 9 ನೇ ಮನೆಯಲ್ಲಿ ಸಂಭವಿಸುತ್ತದೆ. ಇದು ನಿಮ್ಮ ಮೇಲೆ ಕೆಟ್ಟ ಪರಿಣಾಮಕ್ಕೆ ಕಾರಣವಾಗಲಿದೆ. ಅದ್ರಲ್ಲೂ ಮನೆ, ಮಕ್ಕಳು, ಕುಟುಂಬ ಸಂಬಂಧಿತ ವಿಚಾರದಲ್ಲಿ ನಿಮಗೆ ಅನವಶ್ಯಕ ಸಮಸ್ಯೆಗಳು ಬರಬಹುದು. ಅನಗತ್ಯ ಖರ್ಚುಗಳು, ಮಾನಸಿಕ ನೆಮ್ಮದಿ ಹಾಳು ಮಾಡುವಂತಹ ಹಲವು ಘಟನೆಗಳು ನಡೆಯಬಹುದು. ವ್ಯಾಪಾರಿ ಮಂದಿಗೆ ಈ ಸಮಯ ಕಠಿಣಾಗಲಿದೆ. ನವವಿವಾಹಿತರಲ್ಲಿ ಮನಸ್ತಾಪಗಳು ದೊಡ್ಡದಾಗುವ ಸಮಯ ಇದಾಗುತ್ತದೆ. ವಿದ್ಯಾರ್ಥಿಗಳು ಓದಿನ ವಿಚಾರದಲ್ಲಿ ಅಡ್ಡಿಗಳ ನೋಡಬಹುದು. ಪ್ರಯಾಣಗಳು ಅಶುಭಗಳ ತರುವ ಸಾಧ್ಯತೆ ಹೆಚ್ಚಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯ 7 ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ನಿಮ್ಮ ಸಂಗಾತಿಯೊಂದಿಗೆ ಉದ್ವಿಗ್ನತೆ ಮತ್ತು ಸಂಘರ್ಷದ ಸಾಧ್ಯತೆಯಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ತೊಂದರೆಗಳನ್ನು ಎದುರಿಸಬಹುದು. ವ್ಯಾಪಾರ ನಷ್ಟ ಅಥವಾ ಮೋಸಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಕೆಲಸದ ಹೊರೆ ಮತ್ತು ಒತ್ತಡ ಎರಡೂ ಹೆಚ್ಚಾಗಬಹುದು. ವಾಹನ ಸಂಬಂಧಿತ ವಿಚಾರಗಳು ಮತ್ತಷ್ಟು ಜಟಿಲವಾಗುತ್ತವೆ. ರಾಜಕೀಯವಾಗಿ ಗುರುತಿಸಿಕೊಂಡವರಿಗೆ ಈ ಸಮಯವು ಹಿನ್ನಡೆ ಅನುಭವಿಸಲು ಕಾರಣವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ 6ನೇ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇದು ಅಡ್ಡಿಗಳು ಆಪತ್ತುಗಳ ತರಬಹುದು. ನಿಮ್ಮ ಆರೋಗ್ಯ ಸಾಮಾನ್ಯವಾಗಿರುವುದಿಲ್ಲ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ಕೆಲಸಗಳಲ್ಲಿ ನಿಧಾನಗತಿ ಇರಲಿದೆ. ಬಹು ಸಮಯದ ಆಸೆಯೊಂದು ಈಡೇರಿಸಿಕೊಳ್ಳಲು ಆಗದೆ ಇರುವ ಸಮಯ. ಸ್ವಂತ ಉದ್ಯಮಿಗಳಲ್ಲಿ ಲಾಭ ಕಡಿಮೆಯಾಗಬಹುದು. ಆರೋಪಗಳ ಎದುರಿಸಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಲಗ್ನ ಮನೆಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಕುಂಭ ರಾಶಿಯ ಮೇಲೆ ಗ್ರಹಣವು ಹೆಚ್ಚಿನ ಪರಿಣಾಮ ಬೀರುತ್ತದೆ. ಸೂರ್ಯನೊಂದಿಗೆ ರಾಹುವಿನ ಉಪಸ್ಥಿತಿಯು ದೈಹಿಕ ನೋವಿನ ಸಾಧ್ಯತೆಯನ್ನು ಹೆಚ್ಚಿಸಬಹುದು. ನಿಮ್ಮ ಕುಟುಂಬ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ವಾಹನ ಸಂಬಂಧಿತ ವಿಚಾರವು ನಷ್ಟದಿಂದ ಕೂಡಿರಬಹುದು. ಬಹು ಸಮಯದಿಂದ ಬರಬೇಕಿದ್ದ ಹಣ ಮತ್ತೆ ಸಿಲುಕಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications



