Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆ.27ಕ್ಕೆ ಚಂದ್ರ ಮಂಗಳನ ಸಂಯೋಗದಿಂದ ಮಹಾಲಕ್ಷ್ಮಿ ಯೋಗ: ಹಣದ ಸಮಸ್ಯೆ ಮರೆತುಬಿಡಿ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಅದ್ರಲ್ಲೂ ಚಂದ್ರನ ಚಲನೆಯನ್ನು ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿ ಪರಿಗಣಿಸಲಾಗಿದೆ. ಚಂದ್ರನು ಒಂದೇ ರಾಶಿಯಲ್ಲಿ ಎರಡೂವರೆ ದಿನಗಳ ಕಾಲ ಇರುತ್ತಾನೆ. ಆತ ವೇಗವಾಗಿ ಚಲಿಸುತ್ತಾನೆ. ಹಾಗೆ ಎಲ್ಲಾ ಗ್ರಹಗಳೊಂದಿಗೂ ಸಂಯೋಗವಾಗುತ್ತಾನೆ.
ಚಂದ್ರನು ಪ್ರತಿ ರಾಶಿಯಲ್ಲಿ ಚಲಿಸುವಾಗಲು ಒಂದೊಂದು ಗ್ರಹಗಳ ಜೊತೆಗೆ ಸಂಯೋಗವಾಗುತ್ತಾನೆ. ಆದ್ರೆ ಎಲ್ಲಾ ಗ್ರಹಗಳಲ್ಲೂ ಆತನ ಸಂಯೋಗ ವಿಶೇಷ ಲಾಭಗಳಿಗೆ ಕಾರಣವಾಗದೆ ಇದ್ದರೂ ಪರಿಣಾಮವಂತೂ ಇದ್ದೇ ಇರಲಿದೆ. ಹಾಗೆ ಈಗ ಚಂದ್ರನು ಕನ್ಯಾ ರಾಶಿಗೆ ಪ್ರವೇಶಿಸುವುದು ಉತ್ತಮ ಲಾಭಕ್ಕೆ ಕಾರಣವಾಗುತ್ತಿದೆ.

ಚಂದ್ರನು ಈ ರೀತಿ ಕನ್ಯಾ ರಾಶಿ ಪ್ರವೇಶಿಸುವಾಗ ಕನ್ಯಾ ರಾಶಿಯಲ್ಲಿ ಮಂಗಳನೊಂದಿಗೆ ಸಂಯೋಗವಾಗಲಿದ್ದಾನೆ. ಆಗಸ್ಟ್ 27ರಂದು ಚಂದ್ರ ಹಾಗೂ ಮಂಗಳನ ಸಂಯೋಗವಾಗುತ್ತಿದೆ. ಚಂದ್ರ ಹಾಗೂ ಮಂಗಳನ ಸಂಯೋಗ ಅಪರೂಪವಲ್ಲ. ಆಗಾಗ ಸಂಭವಿಸುವ ವಿದ್ಯಮಾನವಾಗಿದೆ. ಆದ್ರೆ ಕನ್ಯಾ ರಾಶಿಯಲ್ಲಿ ಸಂಯೋಗವಾಗುವುದು ಬಹಳ ಅಪರೂಪವಾಗಿದೆ.
ಈ ಸಮಯದಲ್ಲಿ ಚಂದ್ರ ಹಾಗೂ ಮಂಗಳನ ಸಂಯೋಗವು ವಿಶೇಷ ರಾಜಯೋಗಕ್ಕೆ ಕಾರಣವಾಗುತ್ತಿದೆ. ಈ ಸಂಯೋಗದ ಸಮಯದಲ್ಲಿ ಮಹಾಲಕ್ಷ್ಮಿ ರಾಜಯೋಗ ಉಂಟಾಗುತ್ತಿದೆ. ಈ ರಾಜಯೋಗವು ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಸಹಕಾರಿಯಾಗಲಿದೆ. ಹಾಗೆ ಹಲವು ರಾಶಿಗಳಿಗೆ ಈ ಅಪರೂಪದ ರಾಜಯೋಗವು ಹಲವು ರೀತಿ ಲಾಭಕ್ಕೆ ಕಾರಣವಾಗುತ್ತಿದೆ. ಯಾರಿಗೆ ಈ ಸಂಯೋಗದಿಂದ ಶುಭವಾಗಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿಯೇ ಚಂದ್ರ ಹಾಗೂ ಮಂಗಳನ ಸಂಯೋಗವಾಗುತ್ತಿರುವುದು ಅದ್ಭುತ ಲಾಭಗಳ ತರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭಕರ ಸಮಯ ಇದಾಗಿರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ. ಕನ್ಯಾ ರಾಶಿಯ ಮೊದಲ ಮನೆಯಲ್ಲಿ ಈ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಇದರಿಂದ ನಿಮ್ಮ ಕೌಟುಂಬಿಕ ವಿಚಾರಗಳಲ್ಲಿ ಸುಖ, ಶಾಂತಿ ಇರಲಿದೆ. ಈ ರಾಶಿ ಜನರ ಮೌಲ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನೀವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಜೀವನದಲ್ಲಿ ನೀವು ದೀರ್ಘಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆಯ ಆಗಲಿದೆ. ದೀರ್ಘಕಾಲದ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ 3 ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಇದು ನಿಮ್ಮ ದಾಂಪತ್ಯ ಸುಖ ತರಬಹುದ, ನಿಮ್ಮ ಮಾತುಗಾರಿಕೆಯ ಕೌಶಲ್ಯ ವೃದ್ಧಿಸಲಿದೆ. ಇದರಿಂದಾಗಿ ನಿಮ್ಮ ಬುದ್ದಿವಂತಿಕೆಯ ಕೆಲಸಗಳು ಪೂರ್ಣವಾಗಲಿವೆ. ವ್ಯಾಪಾರಿ ವಲಯದಲ್ಲಿ ಪ್ರಗತಿಗೆ ಹಲವು ಅವಕಾಶಗಳಿರಲಿದೆ.
ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಉತ್ತಮ ಮಾತನಾಡುವ ಕೌಶಲ್ಯದಿಂದಾಗಿ ನಿಮ್ಮ ಹಲವು ಕೆಲಸಗಳಿಗೆ ಲಾಭದಾಯಕ.
ಕುಂಭ ರಾಶಿ
ಕುಂಭ ರಾಶಿಯವರ 8ನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗವು ಉಂಟಾಗುತ್ತಿದೆ. ಇದು ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ತರಬಹುದು. ಆರ್ಥಿಕ ವಿಚಾರಗಳು ನೀವು ಬಯಸಿದಂತೆ ನಡೆಯಲಿವೆ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ನೀವು ಬಹಳ ಸಮಯದಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ನಿಮಗೆ ಉತ್ತಮ ಉದ್ಯೋಗ ಸಿಗಬಹುದು. ನಿಮ್ಮ ಆದಾಯ ಮೂಲ ಹೆಚ್ಚಿಸಿಕೊಳ್ಳುವ ಕೆಲಸ ಮಾಡುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











