Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಮುಂಬರುವ ದಿನಗಳಲ್ಲಿ ರೂಪುಗೊಳ್ಳಲಿದೆ 6 ಮಹಾ ಯೋಗ: ಯಾವ 4 ರಾಶಿಯವರಿಗೆ ಅಧಿಕ ಶುಭಫಲ?
ನವೆಂಬರ್‌ನಲ್ಲಿ ನೀವು ಏನಾದರೂ ಶುಭ ಕಾರ್ಯ ಮಾಡಬೇಕುಅಥವಾ ಏನಾದರೂ ವಸ್ತುಗಳನ್ನು ಖರೀದಿಸಬೇಕು ಎಂದಾದರೆ ಈ 6 ಶುಭ ಯೋಗದಲ್ಲಿ ಮಾಡಿ ತುಂಬಾನೇ ಒಳ್ಳೆಯದು. ಈ ತಿಂಗಳಿನಲ್ಲಿ ಕೆಲ ಗ್ರಹಗಳ ಸಂಯೋಗದಿಂದ ಪಂಚಮಹಾಪುರುಷ ಯೋಗದ ಜೊತೆಗೆ ಇನ್ನು ಹಲವು ಯೋಗಗಳು ರೂಪುಗೊಳ್ಳಲಿದೆ. ಈ ಯೋಗಗಳು ಯಾವುವು ಎಂದು ನೋಡೋಣ:

ನವೆಂಬರ್ 12ಕ್ಕೆ ಆಯುಷ್ಮಾನ್ ಯೋಗ ರೂಪುಗೊಳ್ಳಲಿದೆ.
ಕೇತು ಈ ಯೋಗದ ಅಧಿಪತಿ. ಯಾರು ಈ ಯೋಗದಲ್ಲಿ ಜನಿಸುತ್ತಾರೋ ಅವರು ಜೀವನದಲ್ಲಿ ತುಂಬಾನೇ ಪ್ರಗತಿ ಹೊಂದುತ್ತಾರೆ, ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಲಾಗುವುದು. ಇವರಲ್ಲಿ ನಾಯಕತ್ವದ ಗುಣಗಳು ತುಂಬಾನೇ ಉತ್ತಮವಾಗಿರುತ್ತದೆ. ಯಾರು ಈ ಯೋಗದಲ್ಲಿ ಜನಿಸಿರುತ್ತಾರೋ ಅವರು ತುಂಬಾನೇ ಸುಖ ಜೀವನ ನಡೆಸುತ್ತಾರೆ. ಯಾವುದೇ ಸಮಸ್ಯೆಯಾದರೆ ನಿವಾರಿಸುವ ಚಾಕಚಕ್ಯತೆ ಅವರಲ್ಲಿ ಇರುತ್ತದೆ ಎಂದು ಹೇಳಲಾಗುವುದು.
ನವೆಂಬರ್ 12ರಂದೇ ಶನಿಯಿಂದ ರೂಪುಗೊಳ್ಳಲಿದೆ ಮಹಾಪುರುಷ ಯೋಗ
ಯಾರು ಈ ಯೋಗದಲ್ಲಿ ಜನಿಸುತ್ತಾರೋ ಅವರು ಬದುಕಿನಲ್ಲಿ ತುಂಬಾನೇ ಪ್ರಗತಿ ಹೊಂದುತ್ತಾರೆ ಎಂದು ಹೇಳಲಾಗುವುದು. ಈ ಯೋಗ ಹೊಸ ಉದ್ಯಮ ಪ್ರಾರಂಭಿಸಲು ಕೂಡ ತುಂಬಾನೇ ಶುಭವಾಗಿದೆ. ಈ ಶುಭ ಯೋಗದಲ್ಲಿ ಮಗು ಜನಿಸಿದರೆ ಆ ಮಗುವಿಗೆ ರಾಜಯೋಗ ಎಂದು ಹೇಳಲಾಗುವುದು. ಈ ಶುಭಯೋಗದಲ್ಲಿ ಜನಸಿದವರ ಮೇಲೆ ಶನಿಯ ಕೃಪೆ ಇರಲಿದೆ.
ಮಂಗಳ ವೃಶ್ಚಿಕ ರಾಶಿಗೆ ಸಂಚರಿಸಿದಾಗ ರುಚಕ ಯೋಗ
ಇದು ಪಂಚ ಮಹಾಪುರುಷ ಯೋಗ ಏರ್ಪಡಲಿದೆ, ಇದನ್ನು ಪಂಚಮಹಾಪುರುಷ ಯೋಗ ಎಂದು ಕೂಡ ಕರೆಯಲಾಗುವುದು. ಮಂಗಳವು ನವೆಂಬರ್ 16ಕ್ಕೆ ವೃಶ್ಚಿಕ ರಾಶಿಗೆ ಸಂಚರಿಸಲಿದೆ.
ಸೂರ್ಯ, ಮಂಗಳ ಗ್ರಹದ ಸಂಯೋಗದಿಂದ ಯುಕ್ತ ಯೋಗ
ಸೂರ್ಯ ಹಾಗೂ ಮಂಗಳ ವೃಶ್ಚಿಕ ರಾಶಿಯಲ್ಲಿದ್ದಾಗ ಯುಕ್ತ ಯೋಗ ಏರ್ಪಡಲಿದೆ. ಈ ಯೋಗ ನಿಮ್ಮಲ್ಲಿ ಶಕ್ತಿ ಹೆಚ್ಚಿಸಲಿದೆ. ಆರ್ಮಿ, ಪೊಲೀಸ್ ವೃತ್ತಿಯಲ್ಲಿರುವವರೆಗೆ ಈ ಯೋಗ ತುಂಬಾನೇ ಒಳ್ಳೆಯದು.
ನವೆಂಬರ್ 17ಕ್ಕೆ ತ್ರಿಗ್ರಹ ಯೋಗ
ನವೆಂಬರ್ 17ಕ್ಕೆ ಸೂರ್ಯ, ಬುಧ, ಮಂಗಳ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಸೇರುವುದರಿಂದ ತ್ರಿಗ್ರಹ ಯೋಗ ಉಂಟಾಗಲಿದೆ. ಈ ಮೂರು ಯೋಗದಿಂದಾಗಿ ಸೌಕರ್ಯಗಳು ಹೆಚ್ಚಾಗಲಿದೆ. ಈ ಜೀವನದಲ್ಲಿ ವೃತ್ತಿ ಜೀವನದಲ್ಲಿ ಪ್ರಗತಿ ಸಿಗಲಿದೆ.
ನವೆಂಬರ್ 24ಕ್ಕೆ ಅಮೃತ್ ಸಿದ್ಧಿ ಯೋಗ
ಏನಾದರೂ ಹೊಸ ಕೆಲಸ ಪ್ರಾರಂಭಿಸಲು, ಆಸ್ತಿ ಖರೀದಿಸಲು, ಗಾಡಿ ಖರೀದಿಸಲು ಈ ಯೋಗ ತುಂಬಾನೇ ಶುಭವಾಗಿದೆ.
ಈ ಎಲ್ಲಾ ಯೋಗಗಳು ಈ ರಾಶಿಯವರಿಗೆ ಹೆಚ್ಚು ಶುಭಫಲ ನೀಡಲಿದೆ
ಮೇಷ ರಾಶಿ
ನೀವು ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುತ್ತೀರಿ, ಆರ್ಥಿಕವಾಗಿ ಈ ತಿಂಗಳು ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮ ಗೌರವ ಹೆಚ್ಚಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರೂ ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುವಿರಿ, ರಾಜಕೀಯ ಕ್ಷೇತ್ರದಲ್ಲಿ ಇರುವವರ ಕೀರ್ತಿ ಹೆಚ್ಚಾಗಲಿದೆ. ನೀವು ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇದು ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ನೀವು ಆರ್ಥಿಕವಾಗಿ ತುಂಬಾ ಪ್ರಯೋಜನ ಕಾಣುವಿರಿ. ನಿಮ್ಮ ಉದ್ಯಮ ಮತ್ತಷ್ಟು ಬೆಳೆಯಲಿದೆ, ಈ ಅವಧಿಯಲ್ಲಿ ಅದೃಷ್ಟ ಬೆಂಬಲ ಇರುವುದರಿಂದ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಯಶಸ್ಸು ಪಡೆಯಲು ಸಾಧ್ಯವಾಗುವುದು.
ಕುಂಭ ರಾಶಿ
ವಿದೇಶದಲ್ಲಿ ಅಧ್ಯನಕ್ಕೆ ಹೋಗಲು ಬಯಸುವವರಿಗೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ಇರಲಿದೆ. ಈ ರಾಶಿಯವರ ಉದ್ಯಮ ಬೆಳೆಯಲಿದೆ. ನಿಮ್ಮ ಆತ್ಮವಿಶ್ವಾಸ, ಧೈರ್ಯ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications