ಅಕ್ಟೋಬರ್‌ನಲ್ಲಿದೆ 6 ಗ್ರಹಗಳ ಸಂಚಾರ: ಈ 8 ರಾಶಿಯವರಿಗೆ ಅದೃಷ್ಟದ ಮಾಸ

ಅಕ್ಟೋಬರ್‌ ಅಂದ್ರೆ ಹಬ್ಬಗಳ ಸಂಭ್ರಮ, ಈ ಮಾಸ ಅಕ್ಟೋಬರ್‌ 3ರಿಂದ ಸಂಭ್ರಮ ಶುರುವಾದರೆ ತಿಂಗಳ ಕೊನೆಯವರೆ ಸಂಭ್ರಮವೇ, ಹಾಗಾಗಿ ಈ ಅಕ್ಟೋಬರ್ ಮಾಸ ತುಂಬಾನೇ ಸಡಗರದ ಮಾಸವಾಗಿದೆ.

ಪ್ರತಿಮಾಸ ನವಗ್ರಹಗಳಲ್ಲಿ ಕೆಲವೊಂದು ಗ್ರಹಗಳ ರಾಶಿ ಬದಲಾವಣೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ಅವಧಿ ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುವುದು, ಅದರಂತೆ ಈ ಅಕ್ಟೋಬರ್‌ ಮಾಸದಲ್ಲಿಯೂ ಕೆಲ ಪ್ರಮುಖ ಗ್ರಹಗಳ ಸಂಚಾರವಿದೆ.

ಈ ಮಾಸ ಯಾವೆಲ್ಲಾ ಗ್ರಹಗಳ ಸಂಚಾರವಿದೆ? ಈ ಗ್ರಹಗಳ ಸಂಚಾರ ಯಾವ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿರಲಿದೆ ನೋಡೋಣ:

6 planet transit in October

ಅಕ್ಟೋಬರ್‌ ಮಾಸದಲ್ಲಿರುವ ಗ್ರಹಗಳ ಸಂಚಾರ

ಅಕ್ಟೋಬರ್ 9ಕ್ಕೆ ಬೆಳಗ್ಗೆ 10.1ಕ್ಕೆ ದೇವಗುರು ಮಿಥುನ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ.
ಅಕ್ಟೋಬರ್‌ 13 ಸಂಜೆ 5:49ಕ್ಕೆ ಬುಧ ವೃಶ್ಚಿಕ ರಾಶಿಗೆ ಸಂಚರಿಸಲಿದೆ
ಅಕ್ಟೋಬರ್‌ 17ಕ್ಕೆ ತುಲಾ ರಾಶಿಗೆ ಸೂರ್ಯ ಸಂಚರಿಸಲಿದೆ.
ಮಂಗಳ ಅಕ್ಟೋಬರ್ 20ಕ್ಕೆ ಕರ್ಕ ರಾಶಿಗೆ ಸಂಚರಿಸಲಿದೆ.
ಅಕ್ಟೋಬರ್ 22ಕ್ಕೆ ಬುಧನು ತುಲಾ ರಾಶಿಗೆ ಸಂಚರಿಸಲಿದೆ
ಅಕ್ಟೋಬರ್ 29ಕ್ಕೆ ಬುಧನು ವೃಶ್ಚಿಕ ರಾಶಿಗೆ ಸಂಚರಿಸಲಿದೆ

ಅಲ್ಲದೆ ವೈದಿಕ ದೃಷ್ಟಿಯಿಂದ ಅಕ್ಟೋಬರ್‌ 2ಕ್ಕೆ ಸೂರ್ಯಗ್ರಹಣವೂ ಇದೆ.
ಅಶ್ವಿನಿ ಮಾಸದ ಕೃಷ್ಣ ಪಕ್ಷ ಅಮವಾಸ್ಯೆಗೆ ಸೂರ್ಯಗ್ರಹಣವಿದೆ.
ಭಾರತದ ಕಾಲಮಾನ ಪ್ರಕಾರ ರಾತ್ರಿ 9:13ಕ್ಕೆ ಸಂಚರಿಸಲಿದೆ

ಅಕ್ಟೋಬರ್ ಮಾಸ ಗ್ರಹ ಸಂಚಾರ ಈ ರಾಶಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ:

ವೃಷಭ ರಾಶಿ:
ಈ ಗ್ರಹಗಳ ಸಂಚಾರ ವೃಷಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ.ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ.ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿ ತುಂಬಾ ಶುಭವಾಗಿರಲಿದೆ, ವೃತ್ತಿ ಬದುಕಿನಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ಆರ್ಥಿಕ ಪ್ರಯತ್ನಹಳಿಗೆ ಉತ್ತಮ ಫಲ ಸಿಗಲಿದೆ, ಹೂಡಿಕೆಯ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿರಲಿದೆ. ಇನ್ನು ಈ ಅವಧಿಯಲ್ಲಿ ಗಾಡಿ ಖರೀದಿಸಬೇಕೆಂದು ಬಯಸಿದ್ದರೆ ನಿಮ್ಮಾಸೆ ಈಡೇರಲಿದೆ.

ಕರ್ಕ ರಾಶಿ
ಈ ಗ್ರಹಗತಿಗಳ ಪ್ರಭಾವ ಅಕ್ಟೋಬರ್ ಮಾಸ ಅನುಕೂಲಕರವಾಗಿರಲಿದೆ. ನಿಮ್ಮ ವ್ಯಾಪಾರ-ವ್ಯವಹಾರ ಉತ್ತಮವಾಗಿ ನಡೆಯುವುದರಿಂದ ಹಣಕಾಸು ಉತ್ತಮವಾಗಿರಲಿದೆ. ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೂ ಗ್ರಹಗತಿಗಳ ಸ್ಥಾನ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು
ಪಡೆಯುತ್ತೀರಿ. ಇನ್ನು ಆರ್ಥಿಕ ದೃಷ್ಟಿಯಿಂದಲೂ ಈ ಸಮಯ ನಿಮಗೆ ಅನುಕೂಲಕರವಾಗಿರಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಮಯ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಈ ಅವಧಿ ಹಣಕಾಸಿನ ದೃಷ್ಟಿಯಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರಲಿದೆ.

ತುಲಾ ರಾಶಿ
ಈ ಗ್ರಹತಿಗಳ ಪ್ರಭಾವದಿಂದ ತುಲಾ ರಾಶಿಯವರು ಕೂಡ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿ ಈ ಅವಧಿ ಪ್ರಯೋಜನಕಾರಿಯಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.

ಮಕರ ರಾಶಿ
ಈ ಗ್ರಹಗಳ ಸ್ಥಾನದಿಂದ ಮಕರ ರಾಶಿಯವರು ಕೂಡ ಉತ್ತಮ ಪ್ರಯೋಜನ ಪಡೆಯುತ್ತೀರಿ, ಹೂಡಿಕೆಯಿಂದ ಲಾಭ ಗಳಿಸುತ್ತೀರಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.

ಮೀನ ರಾಶಿ
ಈ ಗ್ರಹಗಳ ಸ್ಥಾನವು ಮೀನ ರಾಶಿಯವರಿಗೂ ಅನುಕೂಲಕರವಾಗಿದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ, ಆರೋಗ್ಯ ಚೆನ್ನಾಗಿರಲಿದೆ, ಆರ್ಥಿಕ ದೃಷ್ಟಿಯಿಂದಲೂ ಉತ್ತಮ ಪ್ರಯೋಜನ ಪಡೆಯುತ್ತೀರಿ. ಹೂಡಿಕೆಯ ದೃಷ್ಟಿಯಿಂದಲೂ ಈ ಸಮಯ ಅನುಕೂಲರವಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

6 Planet Transit In October Month: Lucky To These Zodiac

There are 6 planet transit in October month: These zodiac gets more benefits, read on.
Story first published: Tuesday, October 1, 2024, 15:00 [IST]
X
Desktop Bottom Promotion