Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಪ್ರಿಲ್‌ನಲ್ಲಿದೆ 4 ಪ್ರಮುಖ ಗ್ರಹಗಳ ಸಂಚಾರ: ಈ ಗ್ರಹಗಳ ಪ್ರಭಾವ ಈ 3 ರಾಶಿಯವರಿಗೆ ಮಂಗಳಕರ
ಏಪ್ರಿಲ್‌ನಲ್ಲಿ 4 ಗ್ರಹಗಳ ಸಂಚಾರವಿದೆ, ಕೆಲವೊಂದು ಗ್ರಹಗಳ ಸಮಯೋಗವಿದೆ. ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರದ್ದೇ ಆದರ ಪ್ರಭಾವ ಬೀರಲಿದೆ. ಈ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳು ರಾಶಿ ಬದಲಾಯಿಸಲಿದೆ.
ಇನ್ನು ರಾಹು ಮೀನ ರಾಶಿಯಲ್ಲಿದೆ, ಗುರುವು ಮೇಷ ರಾಶಿಯಲ್ಲಿದೆ. ಶನಿಯು ಕುಂಭ ರಾಶಿಯಲ್ಲಿ ಇರಲಿದೆ. ಏಪ್ರಿಲ್ 6ಕ್ಕೆ ಶನಿಯು ಪೂರ್ವಭಾದ್ರವನ್ನು ನಕ್ಷತ್ರ ಪ್ರವೇಶಿಸುತ್ತಾನೆ. ಹೀಗೆ ಗ್ರಹಗಳ ಈ ಎಲ್ಲಾ ಬದಲಾವಣೆ 12 ರಾಶಿಗಳ ಮೇಲೆ ಇರಲಿದೆ, ಅದರಲ್ಲೂ ಈ 3 ರಾಶಿಯವರಿಗೆ ಒಳ್ಳೆಯದು.

ಗ್ರಹಗಳ ಸಂಚಾರ
ಏಪ್ರಿಲ್ 13ಕ್ಕೆ ಮೇಷ ರಾಶಿಗೆ ಸೂರ್ಯ ಸಂಚಾರ
ಏಪ್ರಿಲ್ 9ಕ್ಕೆ ಮೀನ ರಾಶಿಗೆ ಬುಧನ ಸಂಚಾರ
ಏಪ್ರಿಲ್ 25ಕ್ಕೆ ಮೇಷ ರಾಶಿಗೆ ಶುಕ್ರ ಸಂಚಾರ
ಏಪ್ರಿಲ್ 23ಕ್ಕೆ ಮೀನ ರಾಶಿಗೆ ಮಂಗಳ ಸಂಚಾರ
ಏಪ್ರಿಲ್ 23, ಹುಣ್ಣಿಮೆ
ಯಾವೆಲ್ಲಾ ಗ್ರಹಗಳ ಸಂಯೋಗವಿದೆ?
ಏಪ್ರಿಲ್ 1ಕ್ಕೆ ಮೀನದಲ್ಲಿ ರಾಹು-ಮತ್ತು ಶುಕ್ರ ಸಂಯೋಗ : ಈ ಸಂಯೋಗ 38 ದಿನ ಇರಲಿದೆ.
ಏಪ್ರಿಲ್ 1ಕ್ಕೆ ಮೀನ ರಾಶಿಗೆ ಶುಕ್ರ ಸಂಚಾರ ಮಾಡದಾಗ ಅದೇ ರಾಶಿಯಲ್ಲಿ ಇರುವ ರಾಹು ಜೊತೆ ಸಂಯೋಗವಾಗಲಿದೆ.
ಏಪ್ರಿಲ್ 14ಕ್ಕೆ ಮೇಷ ರಾಶಿಯಲ್ಲಿ ಸೂರ್ಯ-ಗುರು ಸಂಯೋಗ: ಈ ಸಂಯೋಗ 24 ದಿನ ಇರಲಿದೆ
ಪ್ರತಿ ತಿಂಗಳು ಸೂರ್ಯ ರಾಶಿ ಬದಲಾವಣೆ ಮಾಡುತ್ತಲೇ ಇರುತ್ತಾನೆ, ಈ ತಿಂಗಳಿನಲ್ಲಿ ಮೊದಲ ಮಾಸವಾದ ಮೇಷ ರಾಶಿಗೆ ಸಂಚರಿಸಲಿದೆ. ಇದೇ ರಾಶಿಯಲ್ಲಿ ಅದೃಷ್ಟವನ್ನು ನೀಡುವ ಗುರುವಿದ್ದು ಈ ಎರಡು ಗ್ರಹಗಳ ಸಂಯೋಗವಿದೆ.
ಏಪ್ರಿಲ್ 23ಕ್ಕೆ ಮೀನ ರಾಶಿಯಲ್ಲಿ ಮಂಗಳ ರಾಹುವಿನ ಸಂಯೋಗ: ಈ ಸಂಯೋಗ 39 ದಿನ ಇರಲಿದೆ.
ಮಂಗಳವನ್ನು ಕ್ಷುದ್ರ ಗ್ರಹವೆಂದು ಪರಿಗಣಿಸಲಾಗುವುದು, ರಾಹುವನ್ನು ಅಶುಭ ಫಲ ನೀಡುವ ಗ್ರಹವೆಂದು ಕರೆಯಲಾಗುವುದು, ಈ ತಿಂಗಳಿನಲ್ಲಿನೀ ಎರಡೂ ಗ್ರಹಗಳ ಸಂಯೋಗವಾಗಲಿದೆ.
ಸಿಂಹ ರಾಶಿ
ಈ ತಿಂಗಳಿನಲ್ಲಿ ನಿಮ್ಮ ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿ ಇರಲಿದೆ, ನೀವು ಬಯಸಿದ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಅಲ್ಲದೆ ಈ ಅವಧಿಯಲ್ಲಿ ನೀವು ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಈ ಅವಧಿಯಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ, ನೀವು ನಿಮ್ಮ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಲು ಸಾಧ್ಯವಾಗುವುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಎಲ್ಲಾ ಗ್ರಹಗಳ ಸ್ಥಾನ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ, ಸಂಪತ್ತು ವೃದ್ಧಿಯಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿ ಇರಲಿದೆ. ಈ ಅವಧಿಯಲ್ಲಿ ನೀವು ಯಾವುದೇ ನಿರ್ಧಾರಗಳನ್ನು ಉತ್ತಮವಾಗಿ ತೆಗೆದುಕೊಳ್ಳುತ್ತೀರಿ. ಇದರಿಂದ ಮುಂದೆ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಲ ಲಾಭ ಗಳಿಸಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಉದ್ಯೋಗ ಹುಡುಕುತ್ತಿದ್ದರೆ ಈ ಅವಧಿ ಉತ್ತಮವಾಗಿರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಪಡೆಯಲು ಸಾಧ್ಯವಾಗುವುದು. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ, ಸ್ವಂತ ವ್ಯವಹರ ಮಾಡುವವರು ಈ ಸಮಯದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತಾರೆ.
ಹೀಗೆ ಈ ತಿಂಗಳಿನಲ್ಲಿ ಎಲ್ಲಾ ಗ್ರಹಗಳು ಈ 3 ರಾಶಿಯವರ ಮೇಲೆ ಹೆಚ್ಚು ಅನುಕೂಲಕ ಪ್ರಭಾವ ಬೀರಲಿದೆ, ವತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಖುಷಿ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications