Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್‌ನಲ್ಲಿದೆ 4 ಗ್ರಹಗಳ ಸ್ಥಾನ ಬದಲಾವಣೆ: ಈ 3 ರಾಶಿಯವರು ಪಡೆಯುವಿರಿ ಇದರ ಪ್ರಯೋಜನ
ಪ್ರತಿ ತಿಂಗಳು ಕೆಲವೊಂದು ರಾಶಿಗಳ ರಾಶಿ ಬದಲಾವಣೆಯಾಗುತ್ತದೆ, ಯಾವ ಗ್ರಹ ರಾಶಿ ಬದಲಾವಣೆ ಮಾಡುವುದೋ ಪ್ರತಿಯೊಂದು ರಾಶಿಯಲ್ಲಿ ಅದರ ಸ್ಥಾನ ಭಿನ್ನವಾಗಿರುತ್ತದೆ, ಅದರಂತೆ ಅದು ಬೀರುವ ಪ್ರಭಾವ ಕೂಡ ಭಿನ್ನವಾಗಿರುತ್ತದೆ. ಗ್ರಹಗಳ ಸ್ಥಾನ ನಮಗೆ ಅನುಕೂಲಕರವಾಗಿದ್ದರೆ ನಾವು ಪ್ರಗತಿ ಕಾಣುತ್ತೇವೆ, ಇಲ್ಲದಿದ್ದರೆ ಅನೇಕ ಸವಾಲುಗಳು ಎದುರಾಗಬಹುದು, ಹೀಗಾಗಿ ಜ್ಯೋತಿಷ್ಯದಲ್ಲಿ ಕಾರ್ತಿಕ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ.
ನವೆಂಬರ್ ತಿಂಗಳಿನಲ್ಲಿ ಕೆಲ ಪ್ರಮುಖ ಗ್ರಗಳು ರಾಶಿ ಬದಲಾವಣೆ ಮಾಡುತ್ತಿವೆ, ಆ ಗ್ರಹಗಳೆಂದರೆ

ಶುಕ್ರನು ಧನು ರಾಶಿಗೆ ಸಂಚರಿಸಲಿದೆ
ಜ್ಯೋತಿಷ್ಯದಲ್ಲಿ ಶುಕ್ರನನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರ ಗ್ರಹ ನವೆಂಬರ್ 7 ಮುಂಜಾನೆ 03:39ಕ್ಕೆ ಧನು ರಾಶಿಗೆ ಬದಲಾವಣೆ ಮಾಡುತ್ತಿದೆ.
ಶನಿ ಮಾರ್ಗಿಯಾಗಲಿದೆ
ಇದೀಗ ಶನಿಯು ವಕ್ರೀಯ ಚಲನೆಯಲ್ಲಿದೆ ನವೆಂಬರ್ 15ಇಂದ ಶನಿಯು ಮತ್ತೆ ನೇರ ಚಲನೆ ಮಾಡಲಿದೆ. ಶನಿಯು ಮಾರ್ಗಿಯಾದಾಗ ಶನಿದೆಸೆಯಿಂದಾಗಿ ತೊಂದರೆ ಅನುಭವಿಸುತ್ತಿರುವವರು ನಿರಾಳವಾಗಬಹುದು, ಕಷ್ಟಗಳು, ಸವಾಲುಗಳು ಕಡಿಮೆಯಾಗಲಿದೆ.
ವೃಶ್ಚಿಕ ಸಂಕ್ರಾಂತಿ
ಪ್ರತಿ 30 ದಿನಕ್ಕೊಮ್ಮೆ ಸೂರ್ಯನು ರಾಶಿ ಬದಲಾವಣೆ ಮಾಡುತ್ತದೆ. ನವೆಂಬರ್ 16ಕ್ಕೆ ಸೂರ್ಯನು ವೃಶ್ಚಿಕ ರಾಶಿಗೆ ಸಂಚಾರ ಮಾಡಲಿದ್ದಾಎ.
ಬುಧನ ವಕ್ರೀಯ ಚಲನೆ
ನವೆಂಬರ್ 26 ರಿಂದ ಬುಧನು ವಕ್ರೀಯ ಚಲನೆ ಮಾಡಲಿದ್ದಾನೆ, ಇದು ಕೂಡ ಗ್ರಹಗಳ ಮೇಲೆಪರಿಣಾಮ ಬೀರಲಿದೆ.
ಈ ಗ್ರಹಗಳ ಸಂಚಾರದಿಂದಾಗಿ ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುವಿರಿ
ಮೇಷ ರಾಶಿ
ಮೇಷ ರಾಶಿಯವರಿಗೆ ಈ ನಾಲ್ಕೂಗ್ರಹಳ ಸಂಚಾರ ಅನುಕೂಲಕರವಾಗಿದೆ. ಈ ಅವಧಿ ಆರ್ಥಿಕವಾಗಿ ನಿಮಗೆ ಪ್ರಯೋಜನಕಾರಿಯಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರಲಿದೆ. ಹೊಸ ಉದ್ಯೋಗಕ್ಕೆ ಪ್ರುಯತ್ನ ಮಾಡುತ್ತಿದ್ದರೆ ಈ ಸಮಯದಲ್ಲಿ ನೀವು ಬಯಸಿದ ಕೆಲಸ ಸಿಗಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಈ ಅವಧಿಯಲ್ಲಿ ಗಳಿಕೆ ಚೆನ್ನಾಗಿ ಇರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು.
ಕುಂಭ ರಾಶಿ
ಈ ಗ್ರಹಗಳ ಸಂಚಾರದಿಂದಾಗಿ ಕುಂಭ ರಾಶಿಯವರು ಉತ್ತಮ ಪ್ರಯೋಜನ ಪಡೆಯುವಿರಿ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಹೀಗಾಗಿ ಕೆಲಸದ ಕಡೆಗೆ ಗಮಹರಿಸಲು ಸಾಧ್ಯವಾಗುವುದು, ಇದರಿಂದ ಉತ್ತಮ ಪ್ರಯೋಜನ ಕೂಡ ಪಡೆಯುತ್ತೀರಿ. ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುವಿರಿ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ. ಈ ಮಾಸ ಗ್ರಹಗಳ ಸ್ಥಾನ ನಿಮಗೆ ಅನುಕೂಲಕರವಾಗಿರುವುದರಿಂದ ಹೆಚ್ಚಿನ ಚಿಂತೆಯಿಲ್ಲದೆ ಆರಾಮವಾಗಿ ಕಳೆಯಬಹುದು.
ವೃಶ್ಚಿಕ ರಾಶಿ
ನವೆಂಬರ್ ಮಾಸದಲ್ಲಿ ಗ್ರಹಗಳ ಸಂಚಾರ ವೃಶ್ಚಿಕ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಈ ಸಮಯ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿಗೆ ಒಳ್ಳೆಯದಿದೆ. ನಿಮ್ಮ ಬಹು ಸಮಯದ ಆಸೆ ಈಡೇರಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುವಿರಿ. ಆಸ್ತಿ ಖರೀದಿ ಬಗ್ಗೆ ಆಲೋಚಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಆಸ್ತಿ ಮಾರಾಟ ಅಥವಾ ಖರೀದಿ ಮಾಡುವವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











