Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ಸಂಚಾರ, ಬುಧ 2 ಬಾರಿ ರಾಶಿ ಬದಲಾಯಿಸಲಿದೆ: ಈ 3 ರಾಶಿಯವರಿಗೆ ಅದೃಷ್ಟದ ಬೆಂಬಲವಿದೆ
ಮೇ ತಿಂಗಳು ವೈದಿಕ ಶಾಸ್ತ್ರದ ದೃಷ್ಟಿಯಿಂದ ತುಂಬಾನೇ ಪ್ರಮುಖವಾಗಿದೆ, ಏಕೆಂದರೆ ಗುರು ವೃಷಭ ರಾಶಿಗೆ ಸಂಚರಿಸಲಿದೆ, ಅಲ್ಲದೆ ಈ ತಿಂಗಳಿನಲ್ಲಿ ಇನ್ನು ಹಲವು ಗ್ರಹಗಳ ಸಂಚಾರವಿದೆ, ಈ ಸಂಚಾರ ರಾಶಿಗಳ ಮೇಲೆ ಬೀರಿರುವ ಪ್ರಭಾವವೇನು?

ಮೇ 1: ವೃಷಭ ರಾಶಿಗೆ ಗುರು ಸಂಚಾರ
ಮೇ 7-ಜೂನ್6ರವರೆಗೆ ಗುರು ಅಸ್ತ
ಮೇ7ಕ್ಕೆ ಬುಧ ಮೀನ ರಾಶಿಗೆ ಸಂಚಾರ
ಅದಾಗಿ ಮೂರೇ ದಿನಕ್ಕೆ ಬುಧ ಮತ್ತೆ ಮೇಷ ರಾಶಿಗೆ ಸಂಚಾರ
ಮೇ 14ಕ್ಕೆ ಸೂರ್ಯ ಸಂಚಾರ
ಮೇ 15ಕ್ಕೆ ವೃಷಭ ರಾಶಿಯಲ್ಲಿ ಸೂರ್ಯ-ಗುರು ಸಂಯೋಗ
ಮೇ 19ಕ್ಕೆ ವೃಷಭ ರಾಶಿಗೆ ಶುಕ್ರ ಸಂಚಾರ
ವೃಷಭ ರಾಶಿ
ವೃಷಭ ರಾಶಿಯಲ್ಲಿ ತಿಂಗಳ ಮೊದಲ ದಿನವೇ ಗುರು ಲಗ್ನ ಮನೆಗೆ ಸಂಚರಿಸಲಿದೆ. ಗುರು ಇನ್ನು ಒಂದು ವರ್ಷ ವೃಷಭ ರಾಶಿಯಲ್ಲಿಯೇ ಇರಲಿದೆ. ಅದಾದ ಬಳಿಕ ಸೂರ್ಯ, ಶುಕ್ರ ಕೂಡ ಇದೇ ರಾಶಿಯನ್ನು ಸಂಚರಿಸಲಿದೆ, ಇದರಿಂದ ವೃಷಭ ರಾಶಿ ಮೇ ತಿಂಗಳಿನಲ್ಲಿ ತ್ರಿಗ್ರಹ ಯೋಗವಿದೆ. ಈ 3 ಪ್ರಮುಖ ರಾಶಿಗಳ ಸಂಚಾರದಿಂದ ವೃಷಭ ರಾಶಿಯವರಿಗೆ ಈ ತಿಂಗಳು ತುಂಬಾ ಅದೃಷ್ಟಕರವಾಗಿದೆ. ನಿಮ್ಮ ರಾಶಿಯಲ್ಲಿ ಹಲವು ರೀತಿಯ ರಾಜಯೋಗ ಸೃಷ್ಟಿಯಾಗಲಿದೆ. ಗಜಲಕ್ಷ್ಮಿ, ಗಜಕೇಸರ, ಶುಕ್ರಾದಿತ್ಯ ಯೋಗ ಉಂಟಾಗುವುದರಿಂದ ಈ ತಿಂಗಳು ನಿಮಗೆ ತುಂಬಾನೇ ಅದ್ಭುತವಾಗಿದೆ.
ಈ ಗ್ರಹಗಳ ಸಂಚಾರ ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ. ಅಪೂರ್ಣವಾಗಿದ್ದ ಕೆಲಸ ಪೂರ್ಣಗೊಳ್ಳಲಿದೆ. ನಿಮ್ಮ ಆರ್ಥಿಕ ಸ್ಥಿತಿ ಈ ತಿಂಗಳು ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಧನ ಲಾಭ ಪಡೆಯುತ್ತಾರೆ. ಇನ್ನು ಕೆಲಸದಲ್ಲಿ ಬದಲಾವಣೆ ಮಾಡಬೇಕೆಂದು ಬಯಸುವವರಿಗೆ ಈ ಸಮಯ ತುಂಬಾ ಅದೃಷ್ಟಕರವಾಗಿದೆ. ನೀವು ಸಂದರ್ಶನ ನೀಡಿದ ಕಂಪನಿಯಲ್ಲಿ ಕೆಲಸ ಸಿಗಲಿದೆ.
ಇನ್ನು ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಸಮಯದಲ್ಲಿ ಮದುವೆಯ ಮಾತುಕತೆ ನಡೆಯಲಿದೆ.
ಸಿಂಹ ರಾಶಿ
ಮೇ ತಿಂಗಳಲ್ಲಿ ಪ್ರಮುಖ ಗ್ರಹಗಳ ಸಂಚಾರ ಸಿಂಹ ರಾಶಿಯವರಿಗೆ ಅನುಕೂಲಕರವಾಗಿದೆ. ಬುಧ 2 ಬಾರಿ ರಾಶಿ ಬದಲಾವಣೆ ಮಾಡುತ್ತದೆ. ಗುರು, ಸೂರ್ಯ, ಶುಕ್ರ ಸಂಚಾರ ವೃಷಭ ರಾಶಿಯಲ್ಲಿ ಆಗಲಿದೆ. ಈ ಗ್ರಹಗಳ ಸಂಚಾರ ಸಿಂಹ ರಾಸಿಯವರ ಮೇಲೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ನಿಮ್ಮ ರಾಶಿಯಲ್ಲಿ ಗುರು 10ನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಈ ಸಮಯ ತುಂಬಾ ಚೆನ್ನಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಸುದ್ದಿ ಪಡೆಯಬಹುದು. ಪ್ರೇಮಿಗಳು ವಿವಾಹವಾಗಲು ಬಯಸುವುದಾದರೆ ಈ ತಿಂಗಳು ಉತ್ತಮವಾಗಿದೆ.
ಕುಂಭ ರಾಶಿ
ಕುಂಭ ರಾಶಿಯ ಲಗ್ನ ಮನೆಯಲ್ಲಿ ಶನಿ ಇದೆ. ಇನ್ನು ಮೇ ತಿಂಗಳಿನಲ್ಲಿ ಆಗುವ ಗ್ರಹಗಳ ಸಂಚಾರವು ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಶುಭ ಗ್ರಹಗಳ ಸಂಯೋಜನೆಯೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆಯಿಂದ ಉತ್ತಮ ಲಾಭ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ಬರಲಿದೆ.
ವಿವಾಹಿತರ ಬದುಕು ತುಂಬಾ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚಾಗಲಿದೆ, ಇನ್ನು ಈ ಅವಧಿಯಲ್ಲಿ ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರಿಗೆ ಸಮಯ ತುಂಬಾ ಒಳ್ಳೆಯದಿದೆ, ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
