2025ರ ರಾಶಿಫಲ ಪ್ರಕಾರ ಹೊಸ ವರ್ಷ ಪ್ರೇಮಿಗಳಿಗೆ, ವಿವಾಹಿತರಿಗೆ, ಅವಾಹಿತರಿಗೆ ಹೇಗಿರಲಿದೆ?

ಜ್ಯೋತಿಷ್ಯ ಪ್ರಕಾರ 2025ನೇ ವರ್ಷವು ಸಂಬಂಧದ ದೃಷ್ಟಿಯಿಂದ ನಿಮಗೆ ಹೇಗಿದೆ ನೋಡೋಣ:

ಮೇಷ ರಾಶಿ
2025ರ ವರ್ಷವು ಪ್ರೇಮಿಗಳಿಗೆ ಅನುಕೂಲಕರವಾಗಿದೆ. ನೀವು ಮದುವೆಯ ತೀರ್ಮಾನ ತೆಗೆದುಕೊಳ್ಳಬಹುದು. ಅವಾಹಿತರಿಗೆ ಮದುವೆ ಯೋಗ ಕೂಡಿ ಬರಬಹುದು. ಈ ವರ್ಷ ನಿಮಗೆ ಗುರುಬಲ ಚೆನ್ನಾಗಿದೆ. ವೈವಾಹಿಕ ಬದುಕಿನ ಕಡೆಗೆ ಗಮನಹರಿಸಬೇಕು, ಚಿಕ್ಕ ಪುಟ್ಟ ಸಮಸ್ಯೆ ದೊಡ್ಡದು ಮಾಡಲು ಹೋಗಬೇಡಿ.

2025 Yearly Love Horoscope

ವೃಷಭ ರಾಶಿ
ವೃಷಭ ರಾಶಿಯ ಅವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಆದರೆ ವರ್ಷದ ಮಧ್ಯದಲ್ಲಿ ಕೇತು ಮತ್ತು ಶನಿ ನಿಮಗೆ ಸ್ವಲ್ಪ ತೊಂದರೆಯನ್ನು ಉಂಟು ಮಾಡಬಹುದು, ಇದರಿಂದ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುವುದು, ಆದರೆ ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಬೇಕು, ವರ್ಷದ ಕೊನೆಯಲ್ಲಿ ಸಮಸ್ಯೆ ಬಗೆಹರಿಯಲಿದೆ.

ಮಿಥುನ ರಾಶಿ

ನೀವು ಪ್ರೀತಿಯಲ್ಲಿದ್ದರೆ ಹೊಸ ವರ್ಷ ನಿಮಗೆ ಅನುಕೂಲಕರವಾಗಿದೆ. ನೀವು ಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಇನ್ಉ ಅವಾಹಿತರಿಗೆ ಗುರುಬಲ ಚೆನ್ನಾಗಿರುವುದರಿಂದ ಮದುವೆ ಯೋಗ ಕೂಡಿ ಬರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಚಿಕ್ಕ ಪುಟ್ಟ ಮನಸ್ತಾಪ ಬಂದರೆ ಅದನ್ನು ದೊಡ್ಡದು ಮಾಡಲು ಬಿಡಬೇಡಿ.

ಕರ್ಕ ರಾಶಿ
2025ನೇ ವರ್ಷವು ಸಂಬಂಧದ ವಿಷಯದಲ್ಲಿ ನಿಮಗೆ ಅನುಕೂಲಕರವಾಗಿದೆ. ಕೆಲ ಅಭಿಪ್ರಾಯ ವ್ಯತ್ಯಾಸ ನಿಮ್ಮ ಹಾಗೂ ಸಂಗಾತಿನಡುವೆ ಬಂದರೂ ಎಲ್ಲವೂ ಸರಿಯಾಗಲಿದೆ. ಕೆಲವೊಂದು ಪರಿಸ್ಥಿತಿಯಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದೆ ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸರಿಯಾಗಲಿದೆ, ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ.

ಸಿಂಹ ರಾಶಿ
ಸಿಂಹ ರಾಶಿಯಯವರಿಗೆ ಸಂಬಂಧದ ವಿಷಯದಲ್ಲಿ ಹೊಸ ವರ್ಷವು ಅನುಕೂಲಕರವಾಗಿದೆ. ನೀವು ಪ್ರೀತಿಯಲ್ಲಿದ್ದರೆ ಅದರ ಬಗ್ಗೆ ಹೇಳಲು ಈ ವರ್ಷವು ಅನುಕೂಲಕರವಾಗಿದೆ. ವಿವಾಹಿತರು ಮೇ ತಿಂಗಳವರೆಗೆ ಜಾಗ್ರತೆವಹಿಸಬೇಕು, ಕೆಲವೊಂದು ಅಭಿಪ್ರಾಯ ವ್ಯತ್ಯಾಸ ಬರಬಹುದು, ಆದರೆ ನಂತರ ಎಲ್ಲವೂ ಸರಿಯಾಗಲಿದೆ, ವೈವಾಹಿಕ ಬದುಕು ಚೆನ್ನಾಗಿರಲಿದೆ.

ಕನ್ಯಾ ರಾಶಿ
ಪ್ರೇಮಿಗಳು ಈ ವರ್ಷ ಜಾಗ್ರತೆವಹಿಸಬೇಕು. ವೈವಾಹಿಕ ಜೀವನದಲ್ಲಿ ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು, ನಿಮ್ಮ ನಡುವೆ ಬರುವ ಚಿಕ್ಕ ಪುಟ್ಟ ಅಭಿಪ್ರಾಯ ವ್ಯತ್ಯಾಸ ದೊಡ್ಡದು ಮಾಡಲು ಹೋಗಬೇಡಿ. ವಿವಾಹಕ್ಕೆ ಸಂಬಂಧ ನೋಡುತ್ತಿದ್ದರೆ ಈ ವರ್ಷವು ಅನುಕೂಲಕರವಾಗಿದೆ, ವಿವಾಹಿತರ ವೃತ್ತಿ ಬದುಕಿನ ಜೊತೆಗೆ ಕುಟುಂಬ ಬದುಕಿನ ಕಡೆಗೆ ಹೆಚ್ಚು ಗಮನಹರಿಸಿದರೆ ಒಳ್ಳೆಯದು.

ತುಲಾ ರಾಶಿ
ತುಲಾ ರಾಶಿಯವರು ಸಂಬಂಧ ಉಳಿಸಿಕೊಳ್ಳಲು ಹೆಚ್ಚು ಗಮನಹರಿಸಬೇಕು, ಪ್ರೇಮಿಗಳಿಗೆ ಕೆಲ ಅಡೆತಡೆಗಳು ಬರಬಹುದು, ಇನ್ನು ಮದುವೆಗೆ ಸಂಬಂಧಿಸಿದ ನಿರ್ಧಾರಗಳನ್ನು ಮೇ ನಂತರ ತೆಗೆದುಕೊಳ್ಳುವುದು ಒಳ್ಳೆಯದು. ಏಕೆಂದರೆ ಮೇ ನಂತರ ಗುರುಬಲ ಚೆನ್ನಾಗಿದೆ.

ವೃಶ್ಚಿಕ ರಾಶಿ
ವರ್ಷದ ಆರಂಭ ಸಂಬಂಧದ ವಿಷಯದಲ್ಲಿ ಅಉಕೂಲಕರವಾಗಿದೆ, ಆದರೆ ನಂತರ ನಿಮ್ಮ ನಡುವೆ ಕೆಲ ಅಭಿಪ್ರಾಯ ವ್ಯತ್ಯಾಸ ಬರಬಹುದು, ಮೂರನೇಯ ವ್ಯಕ್ತಿಯ ಮಾತು ಕೇಳಿ ಸಂಗಾತಿ ಜೊತೆ ಕೋಪಗೊಳ್ಳುವುದು ಮಾಡಬೇಡಿ, ಕುಟುಂಬದವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಲು ಎಚ್ಚರವಹಿಸಿ.

ಧನು ರಾಶಿ
ಸಂಬಂಧದ ವಿಷಯದಲ್ಲಿ ಹೊಸ ವರ್ಷವು ಧನು ರಾಶಿಗೆ ಅನುಕೂಲಕರವಾಗಿದೆ, ಆದರೆ ಚಿಕ್ಕ ಸಮಸ್ಯೆ ದೊಡ್ಡದಾಗದಂತೆ ಎಚ್ಚರವಹಿಸಿ, ಮದುವೆ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ವರ್ಷವು ಅನುಕೂಲಕರವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ 2025ರ ವರ್ಷವು ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಸಾಮರಸಯ ಚೆನ್ನಾಗಿರಲಿದೆ, ಮನೆಯಲ್ಲಿ ನೆಮ್ಮದಿ ಇರಲಿದೆ.

ಕುಂಭ ರಾಶಿ
ಕುಂಭ ರಾಶಿ 2025ನೇ ವರ್ಷವು ಕುಟುಂಬದ ದೃಷ್ಟಿಯಿಂದ ಶುಭ ಫಲ ನೀಡಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಬಹುದು.

ಮೀನ ರಾಶಿ
ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರ ಜೊತೆಗೆ ಮದುವೆಯಾಗಬಹುದು, ಚಿಕ್ಕಪುಟ್ಟ ಸಮಸ್ಯೆ ನ ಬಗೆಹರಿಸಲು ಪ್ರಯತ್ನಿಸಬೇಕು,ಸಂಗಾತಿಯ ಭಾವನೆಗಳನ್ನು ಗೌರವಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2025 Yearly Love Horoscope Prediction For 12 Zodiac Signs In Kannada

Here is 2025 Yearly Love Horoscope Prediction for your zodiac signs, read on...
Story first published: Tuesday, December 31, 2024, 23:33 [IST]
X
Desktop Bottom Promotion