Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್‌ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
2025ರ ವರ್ಷ ಭವಿಷ್ಯ ಪ್ರಕಾರ ವೃಶ್ಚಿಕ ರಾಶಿಯವರಿಗೆ ವಾಹನ ಭಾಗ್ಯವಿದೆ, ವೃತ್ತಿ ಬದುಕು, ಆರ್ಥಿಕ ಬದುಕು ಹೇಗಿರಲಿದೆ?
2025ರ ವರ್ಷ ಭವಿಷ್ಯ ಪ್ರಕಾರ ವೃಶ್ಚಿಕ ರಾಶಿಯವರಿಗೆ ಹೊಸ ವರ್ಷದಲ್ಲಿ ಗ್ರಹಗತಿಗಳ ಸ್ಥಾನವು ಅನುಕೂಲಕರವಾಗಿದೆಯೇ? ವವೃತ್ತಿ ಬದುಕು ಹೇಗಿರಲಿದೆ, ವ್ಯಾಪಾರಸ್ಥರಿಗೆ ಹೇಗಿರಲಿದೆ? ಪ್ರೀತಿ, ಕುಟುಂಬ ಜೀವನ ಹೇಗಿರಲಿದೆ? ವಾಹನ, ಆಸ್ತಿ ಖರೀದಿಯ ಅದೃಷ್ಟವಿದೆಯೇ ? ಈ ಬಗ್ಗೆ ಹೊಸ ವರ್ಷದ ಭವಿಷ್ಯ ಏನು ಹೇಳಿದೆ ಎಂದು ನೋಡೋಣ:

ವೃತ್ತಿ ಜೀವನ
ವೃಶ್ಚಿಕ ರಾಶಿಯವರ 2025ರ ವರ್ಷ ಫಲ ನೋಡಿದಾಗ ಹೊಸ ವರ್ಷದಲ್ಲಿ ನೀವು ಜಾಗ್ರತೆವಹಿಸಬೇಕು. ಏಕೆಂದರೆ ಹೊಸ ವರ್ಷದ ಆರಂಭದಲ್ಲಿ ಶನಿಯು ನಿಮ್ಮ ಆರನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮಗೆ ಕೆಲಸದಲ್ಲಿ ತೃಪ್ತಿ ಇರಲ್ಲ, ವೃತ್ತಿ ಬದುಕಿನಲ್ಲಿ ತುಂಬನೇ ಒತ್ತಡಗಳಿರಬಹದು. ಶನಿಯು ಮಾರ್ಚ್‌ನಲ್ಲಿ ರಾಶಿ ಬದಲಾವಣೆ ಮಾಡಲಿದೆ, ಅದರ ನಂತರದ ಅವಧಿ ನಿಮಗೆ ಅನುಕೂಲಕರವಾಗಲಿದೆ. ಇನ್ನು ನೀವು ಕೆಲಸದ ಬದಲಾವಣೆಯ ಬಗ್ಗೆ ಆಲೋಚಿಸುತ್ತಿದ್ದರೆ ಮೇ ತಿಂಗಳ ಒಳಗಡೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಲಾಗುವುದು. ಇನ್ನು ವಿದೇಶದಲ್ಲಿ ಕೆಲಸದಲ್ಲಿದ್ದರೆ ಹೊಸ ವರ್ಷವು ನಿಮಗೆ ಲಾಭದಾಯಕವಾಗಿರಲಿದೆ, ಇನ್ನು ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರೆಗೂ ಈ ಸಮಯ ತುಂಬಾನೇ ಅನುಕೂಲಕರವಾಗಿದೆ.
ವ್ಯಾಪಾರಿಗಳ ವೃತ್ತಿ ಭವಿಷ್ಯ ನೋಡುವುದಾದರೆ ಈ ವರ್ಷ ನಿಮಗೆ ಮಿಶ್ರಫಲ, ಅದರಲ್ಲಿಯೂ ವರ್ಷದ ಆರಂಭದ ತಿಂಗಳಿನಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡದಿದ್ದರೆ ಒಳ್ಳೆಯದು. ನೀವು ವ್ಯಾಪಾರದಲ್ಲಿ ಏನಾದರು ಬದಲಾವಣೆ ಮಾಡುವುದಾದರೆ ಮೇ ನಂತರ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಲಾಗುವುದು.
ಅಲ್ಲದೆ ರಾಹು 10ನೇ ಮನೆಗೆ ಸಂಚರಿಸುವುದರಿಂದ ವ್ಯಾಪಾರದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ, ಇರುವ ವ್ಯವಹಾರದ ಕಡೆಗೆ ಹೆಚ್ಚಿನ ಗಮನಹರಿಸಿ. ಅಗ್ಯತಬಿದ್ದರೆ ಹಿರಿಯರ ಅಥವಾ ಅನುಭವಿಗಳ ಸಲಹೆ ಪಡೆಯಿರಿ. ವ್ಯಾಪಾರದಲ್ಲಿ ಹೆಚ್ಚು ಜಾಗ್ರತೆವಹಿಸಿ.
ಆರ್ಥಿಕ ಜೀವನ
ಆರ್ಥಿಕವಾಗಿ ನೋಡುವುದಾದರೆ ಹೊಸ ವರ್ಷವು ನಿಮಗೆ ಮಿಶ್ರಫಲ. ಬುಧನ ಸಂಚಾರ ನಿಮಗೆ ಅನುಕೂಲಕರ ಫಲಿತಾಂಶ ಬೀರಲಿದೆ. ಆದಾಯದಲ್ಲಿ ಯಾವುದೇ ತೊಂದರೆಯಿಲ್ಲಲ, ಗುರು ಕೂಡ ಲಾಭದ ಮನೆ ನೋಡುತ್ತಿದೆ,ಹೀಗಾಗಿ ಆದಾಯದಲ್ಲಿ ಸಮಸ್ಯೆ ಇರಲ್ಲ. ಆದರೆ ಯಾವುದೇ ದೊಡ್ಡ ಹೂಡಿಕೆಗೆ ಈ ಸಮಯ ಅನುಕೂಲಕರವಲ್ಲ. ನೀವು ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ, ಉಳಿತಾಯದ ಕಡೆಗೆ ಹೆಚ್ಚು ಗಮನಹರಿಸಿದರೆ ಒಳ್ಳೆಯದು.
ಪ್ರೀತಿ, ಕುಟುಂಬ ಜೀವನ
ಪ್ರೇಮಿಗಳಿಗೆ ಹೊಸ ವರ್ಷವು ಉತ್ತಮವಾಗಿದೆ, ಮೇ ತಿಂಗಳ ನಂತರ ರಾಹು ಕೇತುಗಳ ಪ್ರಭಾವ ಕಡಿಮೆಯಾಗುವುದರಿಂದ ನಿಮ್ಮ ನಡುವಿನ ಭಿನ್ನಾಭಿಪ್ರಾಯ ದೂರಾಗಲಿದೆ. ಇನ್ನು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ವರ್ಷದ ಮೊದಲ ಭಾಗ ನಿಮಗೆ ಅನುಕೂಲಕರವಾಗಿದೆ. ವೈವಾಹಿಕ ಬದುಕಿನಲ್ಲಿ ಏರಳಿತವಿರಬಹುದು. ಆದರೆ ಭಿನ್ನಾಭಿಪ್ರಾಯ ಬೇಗನೆ ದೂರಾಗಲಿದೆ, ನಂತರ ಸಂತೋಷದಿಂದ ಇರುತ್ತೀರಿ. ಕುಟುಂಬ ಜೀವನದಲ್ಲಿ ಮೊದಲಾರ್ಧ ಭಾಗ ನಿಮಗೆ ಅನುಕೂಲಕರವಾಗಿದೆ, ವರ್ಷದ ದ್ವಿತೀಯಾರ್ಧ ಭಾಗದಲ್ಲಿ ಕುಟುಂಬದವರ ಜೊತೆಗೆ ಸಂಬಂಧ ಸ್ವಲ್ಪ ದುರ್ಬಲವಾಗಬಹುದು.
ಆರೋಗ್ಯ
ಈ ವರ್ಷ ಆರೋಗ್ಯದ ಕಡೆಗೆ ಗಮನಹರಿಸಬೇಕು. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಅಂತ ಯಾವುದೇ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ. ನೀವು ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಬೇಕು.
ವಾಹನ, ಮನೆ ಖರೀದಿಸಲು ಅನುಕೂಲಕರವಾಗಿದೆಯೇ?
ಮನೆ ಖರೀದಿ ಅಥವಾ ಆಸ್ತಿ ಮಾರಾಟ ವಿಷಯದಲ್ಲಿ ಈ ಅವಧಿ ಅನುಕೂಲಕರವಾಗಿದೆ. ವಾಹನ ಖರೀದಿ ಮಾಡುವ ಆಲೋಚನೆಯಲ್ಲಿದ್ದರೆ ಏಪ್ರಿಲ್‌ನಿಂದ ಮೇ ನಡುವಿನ ಅವಧಿ ಅನುಕೂಲಕರವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











