Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರ ವರ್ಷ ಭವಿಷ್ಯ ಪ್ರಕಾರ ಧನು ರಾಶಿಯವರಿಗೆ ಯಾವೆಲ್ಲಾ ವಿಷಯದಲ್ಲಿ ಅನುಕೂಲಕರ?
2025ರ ವರ್ಷ ಭವಿಷ್ಯ ಪ್ರಕಾರ ಧನು ರಾಶಿಯವರಿಗೆ ಹೊಸ ವರ್ಷದಲ್ಲಿ ಗ್ರಹಗತಿಗಳ ಸ್ಥಾನವು ಅನುಕೂಲಕರವಾಗಿದೆಯೇ? ವೃತ್ತಿ ಬದುಕು ಹೇಗಿರಲಿದೆ, ವ್ಯಾಪಾರಸ್ಥರಿಗೆ ಹೇಗಿರಲಿದೆ? ಪ್ರೀತಿ, ಕುಟುಂಬ ಜೀವನ ಹೇಗಿರಲಿದೆ? ವಾಹನ, ಆಸ್ತಿ ಖರೀದಿಯ ಅದೃಷ್ಟವಿದೆಯೇ ? ಈ ಬಗ್ಗೆ ಹೊಸ ವರ್ಷದ ಭವಿಷ್ಯ ಏನು ಹೇಳಿದೆ ಎಂದು ನೋಡೋಣ:

ವೃತ್ತಿ ಬದುಕು
ಧನು ರಾಶಿಯವರು ಹೊಸ ವರ್ಷದಲ್ಲಿ ಮೇ ತಿಂಗಳವರೆಗೆ ಯಾವುದೇ ಕೆಲಸ ಬದಲಾವಣೆಗೆ ಪ್ರಯತ್ನಿಸದಿದ್ದರೆ ಒಳ್ಳೆಯದು. ಮೇ ನಂತರ ಉದ್ಯೋಗದಲ್ಲಿ ನಿಮಗೆ ಹೊಸ ಅವಕಾಶಗಳು ದೊರೆಯಬಹುದು, ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುವವರು ಈ ಅವಧಿಯಲ್ಲಿ ಪ್ರಯತ್ನ ಮಾಡಿದರೆ ಒಒಳ್ಳೆಯಸಿಗಲಿದೆ, ಬಡ್ತಿಗಾಗಿ ಕಾಯುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆ ನಡೆಯಲಿದೆ.
ವ್ಯಾಪಾರಸ್ಥರು ಮಾರ್ಚ್ ತಿಂಗಳವರೆಗೆ ತುಂಬಾನೇ ಜಾಗ್ರತೆವಹಿಸಬೇಕು, ವರ್ಷದ ಆರಂಭದಲ್ಲಿ ಕೆಲಸ ಕಾರ್ಯಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗಬಹುದು. ಮಾರ್ಚ್ ಬಳಿಕ ನಿಮ್ಮ ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ಅಲ್ಲದೆ ಹೊಸ ವರ್ಷದಲ್ಲಿ ಬುಧನ ಅನುಗ್ರಹ ಕೂಡ ನಿಮ್ಮ ರಾಶಿಯ ಮೇಲಿರಲಿದೆ, ಇದರಿಂದಾಗಿ ನೀವು ಅನುಕೂಲಕರ ಫಲಿತಾಂಶ ಪಡೆಯುತ್ತೀರಿ.
ಆರ್ಥಿಕ ಜೀವನ
ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ಶನಿಯ ಸ್ಥಾನ ನಿಮ್ಮ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲ ಒಡಿಸಲು ಸಹಾಯ ಮಾಡುತ್ತದೆ. ಹಣಕ್ಕೆ ಸಂಬಂಧಿಸಿದ ನಮ್ಮ ಪ್ರಯತ್ನಗಳಿಗೆ ಫಲ ಸಿಗಲಿದೆ. ವರ್ಷದ ಎರಡನೇ ಭಾಗದಲ್ಲಿ ಅತ್ಯಧಿಕ ಹಣ ಗಳಿಸಲು ಸಾಧ್ಯವಾಗುವುದು. ಅಲ್ಲದೆ ಈ ಅವಧಿ ಹೂಡಿಕೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಅಲ್ಲದೆ ಹಣವನ್ನು ಉಳಿತಾಯ ಮಾಡಲು ಕೂಡ ಸಾಧ್ಯವಾಗಲಿದೆ.
ಪ್ರೇಮ ಹಾಗೂ ಕುಟುಂಬ ಜೀವನ
ಪ್ರೀತಿ ಜೀವನ ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಒಳ್ಳೆಯ ಹೊಂದಾಣಿಕೆ ಇರಲಿದೆ. ನೀವು ಪ್ರೀತಿ ವಿಷಯದಲ್ಲಿ ಏನಾದರು ಮುನಿಸು ಬಂದರೆ ಲಘುವಾಗಿ ತೆಗೆದುಕೊಳ್ಳಬೇಡಿ. ಚಿಕ್ಕ ಸಮಸ್ಯೆಗಳನ್ನು ಬಗೆಹರಿಸಿ ನಿಮ್ಮ ಸಂಬಂಧವನ್ನು ಬಲ ಪಡಿಸಲು ಪ್ರಯತ್ನಿಸಬೇಕು. ಮದುವೆ ಸಂಬಂಧಿತ ತೀರ್ಮಾನ ತೆಗೆದುಕೊಳ್ಳಲು ಈ ಅವಧಿ ಅನುಕೂಲಕರವಾಗಿದೆ.
ಅವಾಹಿತರು ಮದುವೆ ಸಂಬಂಧ ಹುಡುಕುತ್ತಿದ್ದರೆ ವರ್ಷದ ದ್ವಿತೀಯಾರ್ಧ ನಿಮಗೆ ಉತ್ತಮವಾಗಿರಲಿದೆ. ವೈವಾಹಿಕ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ.
ಆರೋಗ್ಯ ಜೀವನ
ಧನು ರಾಶಿಯವರು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಲಾಗುವುದು. ನೀವು ನಮ್ಮ ಜೀವನಶೈಲಿ ಕಡೆಗೆ ಹೆಚ್ಚಿನ ಗಮನಹರಿಸಬೇಕು, ನೀವು 2025ರ ಮಾರ್ಚ್‌ನಿಂದ ಮೇ ತಿಂಗಳ ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಆಗಾಗ ಆರೋಗ್ಯದಲ್ಲಿ ಏರಳಿತ ಕಂಡು ಬರಲಿದೆ. ವರ್ಷದ ಕೊನೆಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.
ಮನೆ ಮತ್ತು ಆರೋಗ್ಯದ ದೃಷ್ಟಿಯಿಂದ ಹೇಗಿರಲಿದೆ?
ಮನೆ ನಿರ್ಮಾಣದ ವಿಷಯದಲ್ಲಿ ಈ ಅವಧಿ ದುರ್ಬಲವಾಗಿದೆ. ಆಸ್ತಿ ಖರೀದಿ ಅಥವಾ ಮಾರಾಟದಲ್ಲಿ ಅಡೆತಡೆಗಳು ಉಂಟಾಗಬಹುದು. ರಿಯಲ್ ಎಸ್ಟೇಟ್ ಸಂಬಂಧಿತ ವ್ಯವಹಾರದಲ್ಲಿ ತುಂಬಾನೇ ಜಾಗ್ರತೆವಹಿಸಿ. ಮನೆ ಕಟ್ಟುತ್ತಿದ್ದರೆ ಕೆಲ ಅಡೆತಡೆ ಎದುರಿಸಬಹುದು.
ವಾಹನ ಖರೀದಿಗೆ ದ್ವಿತೀಯಾರ್ಧ ತುಂಬಾ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಕಾರು ಖರೀದಿಗೆ ಪ್ರಯತ್ನಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿದೆ. ನೀವು ವಾಹನವನ್ನು ಖರೀದಿಸಲು ಮೇ ನಂತರ ಪ್ರಯತ್ನಿಸಿದರೆ ವಾಹನ ಖರೀದಿಸುವ ಆಸೆ ಈಡೇರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications