Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರ ವರ್ಷ ಭವಿಷ್ಯ ಪ್ರಕಾರ ಮೀನ ರಾಶಿಯವರಿಗೆ ಹೇಗಿರಲಿದೆ? ವೃತ್ತಿ ಬದುಕು, ಆರ್ಥಿಕ ಬದುಕು ಹೇಗಿರಲಿದೆ?
2025ರ ವರ್ಷ ಭವಿಷ್ಯ ಪ್ರಕಾರ ಮೀನ ರಾಶಿಯವರಿಗೆ ಹೇಗಿರಲಿದೆ? ಈ ಅವಧಿಯಲ್ಲಿ ಉದ್ಯೋಗ ಜೀವನ, ಆರ್ಥಿಕ ಬದುಕು ಹೇಗಿರಲಿದೆ? ಭೂಮಿ, ಕಟ್ಟಡ, ವಾಹನದಲ್ಲಿ ಗ್ರಹಗಳ ಸ್ಥಾನ ಅನುಕೂಲಕರವಾಗಿದೆಯೇ? ಎಂದು ನೋಡೋಣ ಬನ್ನಿ:

ಉದ್ಯೋಗ ಬದುಕು
ವೃತ್ತಿ ಬದುಕು ನೋಡುವುದಾದರೆ ಹೊಸ ವರ್ಷವು ಸರಾಸರಿಗಿಂತ ಉತ್ತಮವಾಗಿರಲಿದೆ. ಇಡೀ ವರ್ಷದಲ್ಲಿ ಕೆಲ ತಿಂಗಳನಲ್ಲಿ ಕೆಲ ಸವಾಲುಗಳು ಬರಬಹುದು, ಕೆಲ ತಿಂಗಳುಗಳು ಉತ್ತಮವಾಗಿರಲಿದೆ,ಆದರೆ ಕೇತುವಿನ ಬೆಂಬಲ ನಿಮಗಿರಲಿದೆ. ನೀವು ಸಹೋದ್ಯೋಗಿಗಳನ್ನು ಹೆಚ್ಚಾಗಿ ಬೆಂಬಲಿಸಬೇಡಿ, ನಿಮ್ಮ ಕೆಲಸವನ್ನು ನೀವೇ ಮಾಡಿ ಮುಗಿಸಲು ಪ್ರಯತ್ನಿಸಬೇಕು. ನಿಮ್ಮ ಕೆಲಸದ ಕಡೆಗೆ ಗಮನಹರಿಸಿ.
ಉದ್ಯೋಗಿಗಳಿಗೆ ಈ ಅವಧಿ ಮಿಶ್ರಫಲ, ನಿಮಗೆ ವರ್ಷದ ಕೆಲ ತಿಂಗಳುಗಳು ತುಂಬಾ ಅನುಕೂಲಕರವಾಗಿರುತ್ತದೆ, ಇನ್ನು ಕೆಲವು ಸಮಯ ಸವಾಲಿನಿಂದ ಕೂಡಿರುತ್ದೆ.ನೀವು ಅಗ್ಯತಕ್ಕೆ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ಕೆಲವೊಮ್ಮೆ ಸವಾಲುಗಳು ಬಂದರೂ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಆರ್ಥಿಕ ಜೀವನ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಹೊಸ ವರ್ಷವು ಮಿಶ್ರಫಲ. ಹಣಕಾಸಿನ ವಿಷಯದಲ್ಲಿ ಮಿಶ್ರಫಲ, ವರ್ಷದ ಆರಂಭಗಳಲ್ಲಿ ಕೆಲ ಸವಾಲುಗಳನ್ನು ಎದುರಿಸಬಹುದು, ಮಾರ್ಚ್ ನಂತರದ ಸಮಯ ಅನುಕೂಲಕರವಾಗಿದೆ. ಮೇ ತಿಂಗಳಿನಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮ ಶ್ರಮದ ಶೇ. 70ರಿಂದ 80ರಷ್ಟು ಪ್ರತಿಫಲ ದೊರೆಯಲಿದೆ. ಅಲ್ಲದೆ ಶನಿ ಸಾಡೇಸಾತಿ ಪ್ರಭಾವವಿರುವುದರಿಂದ ಆರ್ಥಿಕ ಸಮಸ್ಯೆ ಉಂಟಾಗುವುದು. ಹಣದ ಖರ್ಚು ಹೆಚ್ಚಿರಲಿದೆ. ಯಾವುದೇ ದೊಡ್ಡ ಖರ್ಚು ಮಾಡದಂತೆ ಸಲಹೆ ನೀಡಲಾಗುವುದು.
ಪ್ರೀತಿ, ಕುಟುಂಬ ಜೀವನ
ಪ್ರೀತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ. ಪ್ರೇಮಿಗಳಿಗೆ ಈ ಅವಧಿಯಲ್ಲಿ ಯಾವುದೇ ತೊಂದರೆಯಿಲ್ಲ. ಪ್ರೇಮಿಗಳಿಗೆ ವರ್ಷದ ಬಹುಪಾಲು ಸಮಯವು ಅನುಕೂಲಕರವಾಗಿರಲಿದೆ. ಚಿಕ್ಕ ಪುಟ್ಟ ಸಮಸ್ಯೆಗಳು ಬರಬಹುದು, ಅದನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಕುಟುಂಬ ಜೀವನ
ಅವಾಹಿತರಿಗೆ ಮದುವೆಗೆ ಈ ವರ್ಷ ಅನುಕೂಲಕರವಾಗಿದೆ, ಮದುವೆಗೆ ಒಳ್ಳೆಯ ಸಂಬಂಧ ಬರಬಹುದು. ಆದರೆ ಮದುವೆಯಲ್ಲಿ ಕೆಲ ಅಡೆತಡೆಗಳು ಉಂಟಾಗಬಹುದು, ರಾಹು-ಕೇತುಗಳ ಸ್ಥಾನವು ಮದುವೆಯನ್ನು ದುರ್ಬಲಗೊಳಿಸುತ್ತದೆ. ಆದರೆ ಗುರುವು ಮದುವೆಯ ಬಲವನ್ನು ಬಲಪಡಿಸುತ್ತದೆ.
ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಬರಬಹುದು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವು ತುಂಬಾ ತಾಳ್ಮೆಯಿಂದ ಬಗೆಹರಿಸಬೇಕು.
ಆರೋಗ್ಯ
ನೀವು ಆರೋಗ್ಯದ ಬಗ್ಗೆ ಗಮನಹರಿಸಬೇಕು, ರಾಹು-ಕೇತುಗಳ ಸಂಚಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ನೀವು ಆಹಾರಕ್ರಮದ ಕಡೆಗೆ ಗಮನಹರಿಸಿ. ಆಹಾರಕ್ರಮದ ಕಡೆಗೆ, ಆರೋಗ್ಯಕರ ಜೀವನಶೈಲಿ ಕಡೆಗೆ ಗಮಹರಿಸಿ.
ಭೂಮಿ, ಕಟ್ಟಡ, ವಾಹನಗಳ ವಿಷಯದಲ್ಲಿ ಹೊಸ ವರ್ಷ ಹೇಗಿರಲಿದೆ?
ಮನೆ ಕಟ್ಟುವುದು, ಆಸ್ತಿ ಖರೀದಿ ಅಂತ ಪ್ರಯತ್ನ ಮಾಡಿದರೆ ನಿಮ್ಮ ಗುರಿ ಮುಟ್ಟಲು ಸಾಧ್ಯವಾಗಬಹುದು, ಕೆಲ ಸವಾಲುಗಳು ಬರಬಹುದು,ಆದರೆ ಅವುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದು. ವಾಹನ ಖರೀದಿ ಬಗ್ಗೆ ಯೋಚಿಸುವುದಾದರೆ ಮೇ ತಿಂಗಳ ಮಧ್ಯ ಭಾಗದವರಿಗೆ ಸಮಯ ತುಂಬಾ ಚೆನ್ನಾಗಿದೆ, ಈ ಅವಧಿಯಲ್ಲಿ ಪ್ರಯತ್ನಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications