ಹೊಸ ವರ್ಷದಲ್ಲಿ ತುಲಾ ರಾಶಿಯವರ ವೃತ್ತಿ ಜೀವನ, ಆರ್ಥಿಕ ಸ್ಥಿತಿ, ಪ್ರೀತಿ ಜೀವನ ಹೇಗಿರಲಿದೆ?

2025ರ ವರ್ಷ ಫಲದ ಪ್ರಕಾರ ತುಲಾ ರಾಶಿಯವರ ಭವಿಷ್ಯ ನೀಡಲಾಗಿದೆ. ಹೊಸ ವರ್ಷವು ನಿಮ್ಮ ವೃತ್ತಿ ಬದುಕಿಗೆ ಹೇಗಿರಲಿದೆ? ಆರ್ಥಿಕ ಬದುಕಿಗೆ ಪ್ರಯೋಜನಕಾರಿಯೇ? ವಾಹನ ಅಥವಾ ಆಸ್ತಿ ಖರೀದಿಸಲು ಈ ಅವಧಿ ಅನುಕೂಲಕರವಾಗಿದೆಯೇ ಎಂದು ನೋಡೋಣ ಬನ್ನಿ:

2025 Yearly Horoscope

ವೃತ್ತಿ ಜೀವನ

ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಹೊಸ ವರ್ಷವು ತುಲಾ ರಾಶಿಯವರಿಗೆ ಚೆನ್ನಾಗಿರಲಿದೆ. ವರ್ಷದ ಆರಂಭದಲ್ಲಿ ಕೆಲ ಸವಾಲುಗಳು ಬರಬಹುದು, ಆದರೆ ನೀವು ಕೆಲಸ ಬದಲಾವಣೆಯ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಮಾರ್ಚ್‌ ಬಳಿಕ ಪ್ರಯತ್ನಿಸಿದರೆ ಒಳ್ಳೆಯದು ಎಂದು ಸಲಹೆ ನೀಡಲಾಗುವುದು, ಅದರಲ್ಲಿಯೂ ಮೇ ತಿಂಗಳು ನಿಮಗೆ ಉತ್ತಮ ಅವಕಾಶಗಳು ದೊರೆಯಬಹುದು, ಮಧ್ಯ ವರ್ಷದ ಬಳಿಕ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ.

ವ್ಯಾಪಾರಿಗಳು ವರ್ಷದ ಆರಂಭದ ತಿಂಗಳಿನಲ್ಲಿ ಜಾಗ್ರತೆವಹಿಸಬೇಕು, ಯಾವುದೇ ದೊಡ್ಡ ಆರ್ಥಿಕ ವ್ಯವಹಾರ ಮಾಡಲು ಹೋಗಬೇಡಿ. ಆದರೆ ಮಾರ್ಚ್‌ನಲ್ಲಿ ಶನಿಯು ರಾಶಿ ಬದಲಾವಣೆ ಮಾಡಿದ ಬಳಿಕ ನೀವು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಮೇ ತಿಂಗಳಿನಲ್ಲಿ ಗುರು ಸಂಚಾರ ಕೂಡ ನಿಮಗೆ ಅನುಕೂಲಕರ ಫಲಿತಾಂಶ ನೀಡಲಿದೆ. ವ್ಯಾಪಾರ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿರಲಿದೆ.


ಆರ್ಥಿಕ ಜೀವನ

ಆರ್ಥಿಕವಾಗಿ ನೋಡುವುದಾದರೆ ಈ ವರ್ಷ ನಿಮಗೆ ಮಿಶ್ರಫಲ. ಕೆಲ ಸಮಯ ನಿಮಗೆ ಅನುಕೂಲಕರವಾಗಿರಲಿದೆ, ಇನ್ನು ಕೆಲ ಸಮಯ ದುರ್ಬಲವಾಗಿರುತ್ತದೆ, ಆರ್ಥಿಕ ತೊಂದರೆ ಉಂಟಾಗುವುದು. ಮೇ ತಿಂಗಳಿನಲ್ಲಿ ಗುರು ಸಂಚಾರದ ಬಳಿಕ ನೀವು ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಮೇ ತಿಂಗಳವರೆಗೆ ನೀವು ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಬೇಕು, ಅಗ್ಯತಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗಬೇಡಿ.

ಪ್ರೀತಿ, ಕುಟುಂಬ ಜೀವನ

ಪ್ರೇಮಿಗಳಿಗೆ 2025 ಮಿಶ್ರಫಲ. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಅನಗ್ಯತ ಸಂಶಯ ನಿಮ್ಮ ಸಂಬಂಧ ಹಾಳು ಮಾಡಬಹುದು. ಪ್ರೀತಿ ಜೀವನದಲ್ಲಿ ಒತ್ತಡ ಇರಲಿದೆ. ವರ್ಷದ ಆರಂಭದ ತಿಂಗಳು ನೀವು ಹೆಚ್ಚು ಜಾಗ್ರತೆವಹಿಸಬೇಕು, ಮದುವೆಗೆ ಸಂಬಂಧಿಸಿದ ನಿರ್ದಾರಕ್ಕೂ ಈ ಸಮಯ ಅನುಕೂಲಕರವಲ್ಲ, ಆದರೆ ಮೇ ತಿಂಗಳಿನಲ್ಲಿ ಗುರು ಸಂಚಾರದ ಬಳಿಕ ನಿಮ್ಮ ಸಂಬಂಧ ಸುಧಾರಿಸಲಿದೆ. ಮದುವೆಯ ನಿರ್ಧಾರ ತೆಗೆದುಕೊಳ್ಳಲು ಈ ಅವಧಿ ಅನುಕೂಲಕರವಾಗಿದೆ.

ಕುಟುಂಬದಲ್ಲಿಯೂ ಮಿಶ್ರಫಲ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು, ನೀವು ಸಮಧಾನದಿಂದ ಪರಿಸ್ಥಿತಿ ಬಗೆಹರಿಸಲು ಪ್ರಯತ್ನಿಸಬೇಕು. ವೈವಾಹಿಕ ಜೀವನದಲ್ಲಿ ಚಿಕ್ಕ ಪುಟ್ಟ ಸಮಸ್ಯೆ ದೊಡ್ಡದು ಮಾಡಲು ಬಿಡಬೇಡಿ.

ಆರೋಗ್ಯ

ಈ ವರ್ಷ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ಈ ಅವಧಿಯಲ್ಲಿ ಸೊಂಟ ನೋವು, ಮೈ ಕೈ ನೋವಿನ ಸಮಸ್ಯೆವಿರಬಹುದು. ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು, ನಿರ್ಲಕ್ಷ್ಯ ದುಬಾರಿಯಾಗಬಹುದು. ವರ್ಷದ ಆರಂಭದಲ್ಲಿ ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಔಷಧಿಗಳನ್ನು ನಿಯಮಿತವಾಗಿ ತೆಗೆದುಕೋಳ್ಳಬೇಕು.

ವಾಹನ, ಆಸ್ತಿ ಖರೀದಿಗೆ ಹೊಸ ವರ್ಷ ಅನುಕೂಲಕರವಾಗಿದೆಯೇ?

ನೀವು ಮನೆಕಟ್ಟಬೇಕು ಅಥವಾ ಆಸ್ತಿ ಖರೀದಿಸಬೇಕು ಅಥವಾ ಗಾಡಿ ಖರೀದಿಸಬೇಕು ಎಂದು ಬಯಸಿದರೆ ಯಾವುದೇ ತೊಂದರೆಯಿಲ್ಲ, ನಿಮ್ಮ ಆಸೆ ಈಡೇರಿಸುವ ಸಾಧ್ಯತೆ ಇದೆ. ವಾಹನ ಖರೀದಿಸಲು ನಿಮಗೆ ವರ್ಷದ ಎರಡನೇ ಭಾಗ ತುಂಬಾನೇ ಅನುಕೂಲಕರವಾಗಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2025 Yearly Horoscope Prediction For Libra Zodiac Signs Or Tula Rashi In Kannada

2025 Yearly Horoscope Prediction For Libra Zodiac Signs Or Tula Rashi, here is tula rashi financial, career, business prediction read on..
X
Desktop Bottom Promotion