Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರ ವರ್ಷ ಭವಿಷ್ಯ ಪ್ರಕಾರ ಮಕರ ರಾಶಿಯವರಿಗೆ ಹೊಸ ವರ್ಷ ಹೇಗಿರಲಿದೆ?
2025ರ ವರ್ಷ ಭವಿಷ್ಯ ಪ್ರಕಾರ ಮಕರ ರಾಶಿಯ ವರ್ಷ ಭವಿಷ್ಯ ನೀಡಿದ್ದು ಹೊಸ ವರ್ಷವು ಮಕರ ರಾಶಿಯವರ ವೃತ್ತಿ ಬದುಕು, ಆರ್ಥಿಕ ಜೀವನ, ಕುಟುಂಬ ಜೀವನಕ್ಕೆ ಹೇಗಿರಲಿದೆ ಎಂದು ನೋಡೊಣ ಬನ್ನಿ:

ವೃತ್ತಿ ಬದುಕು
2025ರ ರಾಶಿಫಲ ಪ್ರಕಾರ ವೃತ್ತಿ ಜೀವನದಲ್ಲಿ ಮಿಶ್ರಫಲ, ಉದ್ಯೋಗದಲ್ಲಿ ಬದಲಾವಣೆ ಬಯಸುವುದಾದರೆ ಮಾರ್ಚ್ ನಂತರ ಮಾಡುವುದು ಒಳ್ಳೆಯದು. ಮೇ ತಿಂಗಳಿನಲ್ಲಿ ಗುರುವಿನ ಸಂಚಾರ ನಡೆಯಲಿದೆ, ಅಲ್ಲಿಂದ ಉದ್ಯೋಗದಲ್ಲಿ ನೀವು ಮತ್ತಷ್ಟು ಉತ್ತಮ ಅವಕಾಶ ಪಡೆಯಬಹುದು. ಆದರೆ 2ನೇ ಮನೆಗೆ ರಾಹು ಬಂದಾಗ ಉದ್ಯೋಗದಲ್ಲಿ ಹೆಚ್ಚಿನ ಸವಾಲುಗಳು ಬರಬಹುದು, ಈ ಅವಧಿಯಲ್ಲಿ ನೀವು ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ.
ವ್ಯಾಪಾರಿಗಳಿಗೂ ವರ್ಷದ ಆರಂಭ ಅಷ್ಟೊಂದು ಅನುಕೂಲಕರವಲ್ಲ, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಿಮಗೆ ಉತ್ತಮವಾಗಿರಲಿದೆ, ಮಾರ್ಚ್ ಬಳಿಕ ಪರಿಸ್ಥಿತಿ ಸುಧಾರಿಸಲಿದೆ. ಗುರುವಿನ ದೃಷ್ಟಿ ನಿಮ್ಮ ರಾಶಿಯ 10ನೇ ಮನೆಯ ಮೇಲಿರುವುದರಿಂದ ನೀವು ಅನುಕೂಲಕರ ಫಲಿತಾಂಶ ಪಡೆಯುತ್ತೀರಿ,ಅಲ್ಲದೆ ವರ್ಷದ ಬಹುತೇಕ ಸಮಯ ಬುಧವು ಕೂಡ ನಿಮಗೆ ಅನುಕೂಲಕರವಾಗಿರಲಿದೆ. ವರ್ಷದ ದ್ವಿತೀಯಾರ್ಧದಲ್ಲಿ ನೀವು ಬಯಸಿದ ಹಣ ಪಡೆಯಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
ಆರ್ಥಿಕ ಸ್ಥಿತಿ
2025ರ ವರ್ಷವು ಆರ್ಥಿಕವಾಗಿ ಅನುಕೂಲಕರವಾಗಿದೆ, ಮೇ ತಿಂಗಳವರೆಗೆ ನೀವು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗಲಿದೆ, ಗುರುವಿನ ಸ್ಥಾನ ದುರ್ಬಲವಾಗಿದ್ದರೂ ಹಣ ಗಳಿಕೆಯಲ್ಲಿ ಗುರುವಿನ ಬೆಂಬಲ ಇರಲಿದೆ, ಆದರೆ ಹಣವನ್ನು ಉಳಿತಾಯ ಮಾಡುವುದು ಕಷ್ಟವಾಗುವುದು, ಹೆಚ್ಚು ಖರ್ಚು ಬರಲಿದೆ, ನೀವು ಬಜೆಟ್ ಮೀರಿ ಖರ್ಚು ಮಾಡದೆ ಹೋದರೆ ಉತ್ತಮವಾಗಿ ನಿರ್ವಹಿಸಬಹುದು. ಹಣದ ಹೂಡಿಕೆ ಬಗ್ಗೆ ಜಾಗ್ರತೆವಹಿಸಬೇಕು.
ಕುಟುಂಬ ಜೀವನ
ಪ್ರೇಮಿಗಳಿಗೆ 2025ರ ವರ್ಷವು ಅನುಕೂಲಕರವಾಗಿದೆ, ಅದರಲ್ಲಿಯೂ ಮದುವೆ ಕುರಿತ ತೀರ್ಮಾನ ತೆಗೆದುಕೊಳ್ಳಲು ವರ್ಷದ ಮೊದಲಾರ್ಧ ಅನುಕೂಲಕರವಾಗಿದೆ. ವೈವಾಹಿಕ ಜೀವನದ ದೃಷ್ಟಿಯಿಂದಲೂ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆದರೆ ವೈವಾಹಿಕ ಸಂಬಂಧವನ್ನು ಬಲಪಡಿಸಲು ನೀವು ಪ್ರಯತ್ನ ಕೂಡ ಹಾಕಬೇಕಾಗುತ್ತದೆ.ಕುಟುಂಬದವರ ಜೊತೆಗೆ ಬಾಂಧವ್ಯ ಚೆನ್ನಾಗಿರಲಿದೆ.
ಆರೋಗ್ಯ
ಆರೋಗ್ಯ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರಲಿದೆ, ನೀವು ಆಹಾರಕ್ರಮ,ಜೀವನ ಶೈಲಿ ಕಡೆಗೆ ಗಮನಹರಿಸಿ. ಹೊಟ್ಟೆಗೆ ಸಂಬಂಧಿಸಿದ ಆರೋಗ್ಯದ ಕಡೆಗೆ ಗಮನಹರಿಸಿ.
ಭೂಮಿ, ವಾಹನ ಖರೀದಿಗೆ ಲಕ್ ಇದೆಯೇ?
ಭೂಮಿಯ ದೃಷ್ಟಿಯಿಂದ ಹೊಸ ವರ್ಷವು ನಿಮಗೆ ಅನುಕೂಲಕರವಾಗಿದೆ, ಮನೆ ಕಟ್ಟಲು ಪ್ರಯತ್ನ ಮಾಡಿದರೆ ಈ ವ್ಷ ಅನುಕೂಲಕರವಾಗಿದೆ. ವಾಹನ ಖರೀದಿ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಹೊಸ ವರ್ಷದಲ್ಲಿ ನಿಮ್ಮ ಆಯ್ಕೆಯ ಹೊಸ ವಾಹನ ಖರೀದಿಸಲು ಸಾಧ್ಯವಾಗುವುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications