Latest Updates
-
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ
2025ರ ವರ್ಷ ಭವಿಷ್ಯ ಪ್ರಕಾರ ಕುಂಭ ರಾಶಿಯವರಿಗೆ ಯಾವೆಲ್ಲಾ ವಿಷಯದಲ್ಲಿ ಹೇಗಿರಲಿದೆ?
2025ರ ವರ್ಷ ಭವಿಷ್ಯ ಪ್ರಕಾರ ಕುಂಭ ರಾಶಿಯವರಿಗೆ ಹೇಗಿರಲಿದೆ? ಈ ಅವಧಿಯಲ್ಲಿ ಉದ್ಯೋಗ ಜೀವನ, ಆರ್ಥಿಕ ಬದುಕು ಹೇಗಿರಲಿದೆ? ಭೂಮಿ, ಕಟ್ಟಡ, ವಾಹನದಲ್ಲಿ ಗ್ರಹಗಳ ಸ್ಥಾನ ಅನುಕೂಲಕರವಾಗಿದೆಯೇ? ಎಂದು ನೋಡೋಣ ಬನ್ನಿ:

ಉದ್ಯೋಗ
ಉದ್ಯೋಗದ ದೃಷ್ಟಿಯಿಂದ ನೋಡುವುದಾದರೆ ಹೊಸ ವರ್ಷವು ನಿಮಗೆ ಹಿಂದಿನ ವರ್ಷಕ್ಕಿಂತ ಚೆನ್ನಾಗಿರಲಿದೆ, ಕೆಲಸದಲ್ಲಿ ಯಾವುದೇ ದೊಡ್ಡ ಅಡಚಣೆ ಉಂಟಾಗುವುದಿಲ್ಲ. ಇನ್ನು ಈ ವರ್ಷ ನೀವು ಉದ್ಯೋಗ ಬದಲಾಯಿಸಲು ಪ್ರಯತ್ನಿಸಿದ್ದರೆ ಈ ವರ್ಷ ನಿಮಗೆ ಒಳ್ಳೆಯದಿದೆ, ಒಳ್ಳೆಯ ಕಡೆ ಕೆಲಸ ಸಿಗಬಹುದು. ಮೇ ತಿಂಗಳವರೆಗೆ ರಾಹುವಿನ ಅಡೆತಡೆ ಸ್ವಲ್ಪ ಇದ್ದರೂ ಅದೇನು ನಿಮಗೆ ದೊಡ್ಡ ಸಮಸ್ಯೆ ಅಂತ ಅನಿಸಲ್ಲ.
ನಿಮಗೆ ವಹಿಸಿರುವ ಕೆಲಸವನ್ನು ಸಮರ್ಥವಾಗಿ ಮಾಡಿಕೊಂಡು ಹೋಗಲು ಪ್ರಯತ್ನಿಸಿ, ಹೊಸ ಜವಾಬ್ದಾರಿಗಳು ಬರುವುದು, ನೀವು ಬಡ್ತಿಗಾಗಿ ಕಾಯುತ್ತಿದ್ದರೆ ಈ ವರ್ಷವು ನಿಮಗೆ ಅನುಕೂಲಕರವಾಗಿದೆ.
ಇನ್ನು ವ್ಯಾಪಾರಸ್ಥರಿಗೂ ಈ ಅವಧಿ ಈ ಹಿಂದಿನ ವರ್ಷಕ್ಕಿಂತ ತುಂಬಾನೇ ಚೆನ್ನಾಗಿರಲಿದೆ, ಉಂಟಾದ ನಷ್ಟವನ್ನು ತುಂಬಲು ಈ ವರ್ಷದಲ್ಲಿ ಸಾಧ್ಯವಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಅಲ್ಲದೆ ವ್ಯಾಪಾರ ವಿಸ್ತರಣೆಗೆ ಬಯಸುತ್ತಿದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿದೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಕೂಡ ಉತ್ತಮ ಲಾಭ ಪಡೆಯುತ್ತೀರಿ.
ಆರ್ಥಿಕ ಬದುಕು
ಆರ್ಥಿಕ ಜೀವನ ಕೂಡ ಸುಧಾರಿಸಲಿದೆ, ಅದರಲ್ಲಿಯೂ ದ್ವಿತೀಯಾರ್ಧವು ಗಳಿಕೆಯ ದೃಷ್ಟಿಯಿಂದ ಉತ್ತಮವಾಗಿದೆ, ಆದರೆ ಉಳಿತಾಯ ಕಷ್ಟವಾಗಬಹುದು, ಖರ್ಚು ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದು. ಇನ್ನು ಶನಿಯ ಸ್ಥಾನ ಕೂಡ ಹಣ ಉಳಿತಾಯ ಮಾಡಲು ಅಡಚಣೆ ಉಂಟು ಮಾಡುವುದು, ಖರ್ಚು ನಿಭಾಯಿಸಿಕೊಂಡು ಹೋಗುವುದು ಕಷ್ಟವಾಗದ ಕಾರಣ ದೊಡ್ಡ ಚಿಂತೆ ಇರಲ್ಲ.
ಪ್ರೀತಿ-ಕುಟುಂಬ ಜೀವನ ಹೇಗಿರಲಿದೆ?
ಪ್ರೇಮಿಗಳಿಗೆ ಹೊಸ ವರ್ಷವು ಅನುಕೂಲಕರವಾಗಿದೆ, ಏಕೆಂದರೆ ವರ್ಷದ ಬಹುಪಾಲು ಸಮಯ ಶುಕ್ರ ಕೂಡ ನಿಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇರಲಿದೆ, ಮೇಯಿಂದ ಗುರು ಕೂಡ ನಿಮಗೆ ಅನುಕೂಲಕರವಾದ ಫಲಿತಾಂಶ ನೀಡಲಿದೆ, ಹಾಗಾಗಿ ಪ್ರೇಮ ಜೀವನ ತುಂಬಾ ಚೆನ್ನಾಗಿರಲಿದೆ. ಇನ್ನು ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಲು ಮದುವೆ ಸಂಬಂಧಿತ ನಿರ್ಧಾರ ತೆಗೆದುಕೊಳ್ಳಲು ಕೂಡ ಈ ಅವಧಿ ಅನುಕೂಲಕರವಾಗಿದೆ.
ಅವಾಹಿತರಿಗೆ ಮದುವೆ ಸಂಬಂಧ ಹುಡುಕಲು ಈ ಸಮಯ ಅನುಕೂಲಕರವಾಗಿರಲಿದೆ.
ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಕುಟುಂಬದವರ ಮಧ್ಯ ಕೆಲ ಅಭಿಪ್ರಾಯ ವ್ಯತ್ಯಾಸ ಉಂಟಾಗಬಹುದು, ವೈವಾಹಿಕ ಜೀವನದಲ್ಲಿ ಕೆಲ ಅಭಿಪ್ರಾಯ ವ್ಯತ್ಯಾಸ ಉಂಟಾಗಬಹುದು.
ಆರೋಗ್ಯ ಜೀವನ
ಆರೋಗ್ಯದ ದೃಷ್ಟಿಯಿಂ ಈ ವರ್ಷ ಮಿಶ್ರಫಲ,ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ಶನಿ ಸಾಡೇಸಾತಿ ಇರುವುದರಿಂದ ಈ ಅವಧಿಯಲ್ಲಿ ಸವಾಲುಗಳನ್ನು ಎದುರಿಸಬಹುದು. ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.
ಭೂಮಿ, ಕಟ್ಟಡ,ವಾಹನದ ವಿಷಯದಲ್ಲಿ ಹೊಸ ವರ್ಷ ಹೇಗಿರಲಿದೆ?
ನೀವು ಭೂಮಿಗೆ ಹೂಡಿಕೆ ಮಾಡಲು ಬಯಸಿದರೆ ಈ ಅವಧಿ ಸ್ವಲ್ಪ ಕಷ್ಟವಾಗಬಹುದು. ಮನೆ ಕಟ್ಟಲು ಕಷ್ಟವಾಗಬಹುದು, ಹೀಗಾಗಲೇ ಮನೆ ಕಟ್ಟುತ್ತಿದ್ದರೆ ಮನೆ ಪೂರ್ಣಗೊಳಿಸಲು ಕೆಲ ಸವಾಲುಗಳನ್ನು ಎದುರಿಸಬಹುದು. ವಾಹನ ಖರೀದಿ ವಿಚಾರದಲ್ಲಿ ಈ ಅವಧಿ ಅನಕೂಲಕರವಾಗಿದೆ. ನೀವು ನಿಮ್ಮ ಬಜೆಟ್‌ಗಿಂತ ಹೆಚ್ಚು ಲಕ್ಷುರಿಯ ವಾಹನ ಖರೀದಿಸಲು ಮಾಡಬೇಡಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











