Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಯಾವ ನಕ್ಷತ್ರದವರಿಗೆ ಸಿಗಲಿದೆ ಧನಲಾಭ..! ಯಾರಿಗೆಲ್ಲಾ ಅದೃಷ್ಟ ಗೊತ್ತಾ?
ನಾವು ಯಾವ ನಕ್ಷತ್ರದಲ್ಲಿ ಜನಿಸಿದ್ದೀರಾ ಎಂಬುದು ನಿಮ್ಮ ಭವಿಷ್ಯ ನಿರ್ಧರಿಸುವ ಅಂಶವಾಗಿರಲಿದೆ. ಪ್ರತಿ ರಾಶಿಗೆ ಮಾತ್ರವಲ್ಲದೆ ಪ್ರತಿ ನಕ್ಷತ್ರ ಮತ್ತು ವಿಶಿಷ್ಟ ನಕ್ಷತ್ರಗಳಿಂದ ನಿಮಗೆ ಲಾಭವಾಗುವ ದಿನಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ನಕ್ಷತ್ರದ ಆಧಾರದಲ್ಲಿ ನಿಮ್ಮ ಮುಂದಿನ ದಿನಗಳ ಕುರಿತು ಹೇಳಲಾಗಿದೆ. 2025ರಲ್ಲಿ ಯಾವ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಅದೃಷ್ಟ ಪಡೆಯಲಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2025ರಲ್ಲಿ ಕೆಲವು ನಕ್ಷತ್ರದಲ್ಲಿ ಜನಿಸಿದವರಲ್ಲಿ ಅತ್ಯುತ್ತಮ ಅದೃಷ್ಟ ನೋಡಬಹುದು. ಅವರಲ್ಲಿ ಧನ ಲಾಭ, ಆರ್ಥಿಕ ಲಾಭ ಗಳಿಸಲಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ. 2025 ರಲ್ಲಿ ಭವಿಷ್ಯ ಉಜ್ವಲವಾಗಿ ಕಾಣುವ ಕೆಲವು ನಕ್ಷತ್ರಗಳಿವೆ. ಹಾಗಾದ್ರೆ 2025 ಯಾವ ಜನ್ಮ ನಕ್ಷತ್ರದವರಿಗೆ ಲಾಭ ತರಲಿದೆ ಎಂಬುದನ್ನು ನಾವಿಂದು ನೋಡೋಣ.

ರೋಹಿಣಿ ನಕ್ಷತ್ರ
2025 ರೋಹಿಣಿ ನಕ್ಷತ್ರದವರಿಗೆ ಕೆಲಸ ಮತ್ತು ವ್ಯವಹಾರದಲ್ಲಿ ಲಾಭದಾಯಕ ದಿನಗಳು ಕಂಡುಬರಲಿದೆ. ನಿಮ್ಮ ದೈನಂದಿನ ಜೀವನದಲ್ಲಿ ನಿಮಗೆ ಲಾಭದಾಯಕ ಮಾರ್ಗಗಳ ಹುಡುಕಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಅವಿವಾಹಿತರಲ್ಲಿ ವಿವಾಹ ಯೋಗವಿದೆ. ಆಸ್ತಿ, ಮನೆ ಖರೀದಿಯ ನಿಮ್ಮ ಆಸೆಗಳು ಈಡೇರಬಹುದು. ಬಹುಕಾಲದ ಸಮಸ್ಯೆಗಳು ನಿವಾರಣೆಯಾಗಲಿದೆ.
ಕೃತಿಕಾ ನಕ್ಷತ್ರ
ಈ ನಕ್ಷತ್ರಗಳು 2025 ರಲ್ಲಿ ಎಲ್ಲಾ ತೊಂದರೆಗಳನ್ನು ನಿವಾರಿಸಬಹುದು ಮತ್ತು ಉತ್ತಮ ಮತ್ತು ಸಂತೋಷದ ಜೀವನ ನೀವು ಹೊಂದಲಿದ್ದೀರಿ. ಉದ್ಯೋಗಿಗಳಿಗೆ ಒಳ್ಳೆಯ ಸಮಯವಾಗಿರಲಿದೆ. ನಿಮ್ಮ ದೈನಂದಿನ ಕಾರ್ಯ ಕಲಾಪಗಳು ಅಡ್ಡಿಗಳಿಲ್ಲದೆ ನಡೆಯಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಹೊಸ ಜವಾಬ್ದಾರಿಗಳ ಹೊರಬೇಕಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲೂ ಶ್ರಮ ಹಾಕಬೇಕಾಗುತ್ತದೆ. ಹಣಕಾಸು ಸ್ಥಿತಿ ನಿಮ್ಮಲ್ಲಿ ಉತ್ತಮವಾಗುತ್ತಾ ಸಾಗಲಿದೆ. ಸಾಲಗಳೆಲ್ಲವು ತೀರಲಿವೆ.
ಆರಿದ್ರಾ ನಕ್ಷತ್ರಾ
ಆರಿದ್ರಾ ನಕ್ಷತ್ರದವರಲ್ಲಿ ಆರ್ಥಿಕ ಸವಾಲುಗಳು ಕಡಿಮೆಯಾಗಲಿದೆ. ನಿಮ್ಮ ವ್ಯವಹಾರಗಳು ಲಾಭದಾಯಕವಾಗಲಿದೆ. ಹೊಸ ಯೋಜನೆಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ. ಆರ್ಥಿಕವಾಗಿ ಲಾಭದಾಯಕ ವ್ಯವಹಾರಗಳನ್ನು ಪ್ರಾರಂಭಿಸಬಹುದು. ಹೊಸ ಹೂಡಿಕೆಗಳನ್ನು ಮಾಡಲು ಅವಕಾಶಗಳನ್ನು ಹುಡುಕಲಾಗುತ್ತದೆ ಇದು ಆರ್ಥಿಕ ಲಾಭವನ್ನು ನೀಡುತ್ತದೆ. ಚಿಕ್ಕರೆ ವ್ಯಾಪಾರಿಗಳಲ್ಲಿ ಆರ್ಥಿಕ ಲಾಭ ನೋಡಬಹುದು.
ಸ್ವಾತಿ ನಕ್ಷತ್ರ
ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು 2025 ರಲ್ಲಿ ಐಷಾರಾಮಿ ಜೀವನವನ್ನು ಹೊಂದುವ ಅದೃಷ್ಟವನ್ನು ಹೊಂದಿರುತ್ತಾರೆ. ಈ ಅವಧಿಯು ಹೊಸ ವ್ಯವಹಾರವನ್ನು ಪ್ರಾರಂಭಿಸುವವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಈಗಾಗಲೇ ವ್ಯಾಪಾರದಲ್ಲಿರುವವರು ಬೆಳವಣಿಗೆಗೆ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಪ್ರಯತ್ನಗಳು ಗೌರವವನ್ನು ತಂದುಕೊಡುತ್ತವೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಬಹುದು.
ವಿಶಾಖ ನಕ್ಷತ್ರ
ಈ ವರ್ಷ ನಿಮಲ್ಲಿ ಸಂತೋಷ, ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ. 2025ರಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಲಾಭದಾಯಕವಾಗಿ ಬದಲಾಗಲಿದೆ. ಬಾಕಿಯಿರುವ ಕೆಲಸವನ್ನು ಒಂದರ ನಂತರ ಒಂದರಂತೆ ಪೂರ್ಣಗೊಳಿಸುವ ವರ್ಷವಾಗಲಿದೆ. ಅವಿವಾಹಿತರಿಗೆ ಈ ವರ್ಷ ಶುಭ ಕಾಲವಾಗಲಿದೆ.
ರೇವತಿ ನಕ್ಷತ್ರ
ರೇವತಿ ನಕ್ಷತ್ರದ ಮಂದಿ 2025ರಲ್ಲಿ ಎಲ್ಲಿದಲ್ಲದ ಆರ್ಥಿಕ ಲಾಭಕ್ಕೆ ಕಾರಣರಾಗುತ್ತಾರೆ. ನಿಮ್ಮ ಆರೋಗ್ಯದಲ್ಲಿ ಬಹಳ ಸುಧಾರಣೆ ಕಾಣುತ್ತೀರಿ, ನಿಮ್ಮ ಶ್ರಂಕ್ಕೆ ತಕ್ಕಂತಹ ಪ್ರತಿಫಲ ನಿಮಗೆ ಸಿಗಲಿದೆ. ನಿಮ್ಮ ಆದಾಯ ದ್ವಿಗುಣವಾಗುವ ಸಾಲವಿದು. ನೀವು ಮಾಡಿದ್ದ ಹೂಡಿಕೆಗಳು ನಿಮಗೆ ಲಾಭದಾಯಕವಾಗಿ ಹಿಂದಿರುಗಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಹಾಕಿರುವ ಶ್ರಮ ಹಾಗೂ ಹಣ ನಿಮಗೆ ಉತ್ತಮ ಪ್ರತಿಫಲ ನೀಡಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications