Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ ವರ್ಷ ಈ 5 ದಿನ ಮದುವೆಯಾಗುವುದಾದರೆ ಘಳಿಗೆ, ನಕ್ಷತ್ರ ಏನೂ ನೋಡಬೇಕಾಗಿಲ್ಲ
ಮದುವೆ ಮಾಡುವಾಗ ಶುಭ ದಿನ ನೋಡಿ ಮದುವೆ ಗೊತ್ತು ಮಾಡುತ್ತಾರೆ. ಶುಭ ದಿನದಲ್ಲಿ, ಶುಭ ಘಳಿಗೆಯಲ್ಲಿ ವೈವಾಹಿಕ ಬದುಕಿಗೆ ಕಾಲಿಡುವುದರಿಂದ ಅವರ ಬದುಕು ತುಂಬಾ ಚೆನ್ನಾಗಿರುತ್ತದೆ ಎಂಬ ನಂಬಿಕೆ. ಅದರಲ್ಲಿಯೂ ಗುರು ಹಿರಿಯರು ನಿಶ್ಚಯಿಸಿರುವ ಮದುವೆಯಾದರೆ, ಲವ್ ಕಂ ಅರೇಂಜ್ ಮ್ಯಾರೇಜ್ ಆದರೂ ಕೂಡ ಶುಭ ಘಳಿಗೆಯಲ್ಲಿಯೇ ತಾಳು ಕಟ್ಟಲಾಗುವುದು. ತಿಂಗಳಿನಲ್ಲಿ ಕೆಲವೊಂದು ದಿನಗಳಷ್ಟೇ ಮದುವೆ ಮಾಡಲು ಶುಭ ದಿನವಾಗಿರುತ್ತದೆ, ಹಾಗಾಗಿ ಆ ದಿನಗಳನ್ನು ನೋಡಿ ಮದುವೆ ಗೊತ್ತು ಮಾಡುತ್ತಾರೆ.

ಆದರೆ ಕೆಲವೊಂದು ದಿನಗಳಿವೆ, ಆ ದಿನ ಮದುವೆಯಾಗುವುದಾದರೆ ಯಾವ ಪುರೋಹಿತರ ಬಳಿ ಕೇಳಬೇಕಾಗಿಲ್ಲ, ಇದೇ ಸಮಯದಲ್ಲಿ ತಾಳಿ ಕಟ್ಟಬೇಕೆಂದಿಲ್ಲ, ಆ ದಿನ ಪೂರ್ತಿ ಮದುವೆಗೆ ಶುಭವಾಗಿರುತ್ತದೆ, ಅಲ್ಲದೆ ಮದುವೆಯಾಗಲು ಅತ್ಯಂತ ಶ್ರೇಷ್ಠ ದಿನವಾಗಿರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ, ಈ ವರ್ಷ ನಿಮ್ಮ ಮನೆಯಲ್ಲಿ ನಿಮಗೆ ಅಥವಾ ಮನೆಯ ಇತರ ಸದಸ್ಯರಿಗೆ ಮದುವೆಯಿದ್ದರೆ ನಿಮಗೆ ಹೊಂದಾಣಿಕೆಯಾಗುವ ದಿನ ಸಿಗದಿದ್ದರೆ ಈ ದಿನದಂದು ಯಾವುದೇ ಹಿಂಜರಿಕೆಯಲ್ಲಿದೆ ಮದುವೆಯಾಗಬಹುದು. ಇದನ್ನು ಅಬುಜ್ ಮುಹೂರ್ತ ಎಂದು ಕರೆಯಲಾಗುವುದು.
ಮದುವೆ ಕಾರ್ಯಕ್ರಮಕ್ಕೆ ಅತ್ಯಂತ ಶ್ರೇಷ್ಠವವಾಗಿದೆ ಈ ಅಬುಜ್ ಮುಹೂರ್ತ
ಈ ದಿನ ಶುಭ ಕಾರ್ಯಗಳಿಗೆ ಅತ್ಯಂತ ಶುಭವಾಗಿರುತ್ತದೆ. ಮದುವೆ ಮುಂತಾದ ಶುಭ ಕಾರ್ಯಗಳನ್ನು ಈ ದಿನ ಮಾಡಬಹುದು, ಆ ದಿನಗಳು ಯಾವುದೆಂದರೆ:
ದೇವ್ ಉತ್ಥಾನಿ ಏಕಾದಶಿ
ಬಸಂತ್ ಪಂಚಮಿ
ಅಕ್ಷಯ್ ತೃತೀಯಾ
ವಿಜಯದಶಮಿ
ಈ ದಿನಾಂಕಗಳನ್ನು ಸಿದ್ಧ ಮುಹೂರ್ತ ಎಂದು ಎಂದು ಕರೆಯಲಾಗುವುದು. ಈ ದಿನಾಂಕಗಳಲ್ಲಿ ಮದುವೆಯಾಗಲು ಸೂಕ್ತವಾಗಿದೆ.
ಮದುವೆಗೆ ಹೇಗೆ ಮುಹೂರ್ತ ನೋಡಲಾಗುವುದು:
ದಿನಾಂಕ, ನಕ್ಷತ್ರ, ದಿನ ಎಲ್ಲವನ್ನೂ ನೋಡಿ ಮದುವೆ ಮುಹೂರ್ತ ನಿಶ್ಚಯ ಮಾಡಲಾಗುವುದು. ಇಬ್ಬರ ಜನ್ಮ ದಿನಾಂಕ ಹಾಗೂ ನಕ್ಷತ್ರಗಳ ಹೊಂದಾಣಿಕೆ ಇವೆಲ್ಲಾ ನೋಡಿ ಮದುವೆಗೆ ದಿನ ಗೊತ್ತು ಮಾಡುತ್ತಾರೆ.
ಮುಂಬರುವ ತಿಂಗಳಿನಲ್ಲಿ ಮದುವೆಗೆ ಶುಭ ಮುಹೂರ್ತ ಯಾವ ದಿನಾಂಕಗಳಲ್ಲಿವೆ ಎಂದು ನೋಡುವುದಾದರೆ
ಫೆಬ್ರವರಿ 2: ಬೆಳಗ್ಗೆ 09:13ರಿಂದ ಮಾರನೇಯ ದಿನ ಬೆಳಗ್ಗೆ 07:09ರವರೆಗೆ ಶುಭ ದಿನವಿದೆ
ಫೆಬ್ರವರಿ 3: ಬೆಳಗ್ಗೆ 07:09ರಿಂದ ಸಂಜೆ 05:40ರವರೆಗೆ ಉತ್ತಮ ಸಮಯವಿದೆ
ಫೆಬ್ರವರಿ12: ರಾತ್ರಿ 01:58ರಿಂದ ಬೆಳಗ್ಗೆ 07:04ರವರೆಗೆ ಉತ್ತಮವಾಗಿದೆ
ಫೆಬ್ರವರಿ 14: ರಾತ್ರಿ 11:09ರಿಂದ ಮಾರನೇಯ ದಿನ ಬೆಳಗ್ಗೆ 07:03ರವೆರೆಗ ಇದೆ
ಫೆಬ್ರವರಿ 15:ರಾತ್ರಿ 11:51ರಿಂದ ಮಾರನೇಯ 07:02ರವರೆಗೆ ಇದೆ
ಫೆಬ್ರವರಿ 18: ಬೆಳಗ್ಗೆ 09:52ರಿಂದ ಮಾರನೇಯ ದಿನ ಬೆಳಗ್ಗೆ 7 ಗಂಟೆಯವರೆಗೆ ಇದೆ
ಫೆಬ್ರವರಿ 23: ಏಕಾದಶಿ, ಮಧ್ಯಾಹ್ನ 01:55ರಿಂದ ಸಂಜೆ 06:42ರವರೆಗೆ ಇದೆ
ಫೆಬ್ರವರಿ 25: ಬೆಳಗ್ಗೆ 08:15ರಿಂದ ಸಂಜೆ 06:30ರವರೆಗೆ ಇದೆ.
ಈ ದಿನಾಂಕಗಳಲ್ಲಿ ಮದುವೆಗೆ ಶುಭ ಮುಹೂರ್ತವಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











