Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
2025ರಲ್ಲಿ ಈ 7 ರಾಶಿಯವರು ವೃತ್ತಿ ಬದುಕಿನಲ್ಲಿ ಅದ್ಭುತ ಯಶಸ್ಸು ಪಡೆಯುತ್ತೀರಿ
ವೃತ್ತಿ ಬದುಕಿನಲ್ಲಿ ಏನಾದರು ಅಡೆತಡೆ ಸಮಸ್ಯೆ ಎದುರಾದರೆ ಅದು ಸಮಯ ದೋಷದಿಂದವಿರಬಹುದು, ಅದೇ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸಲು ಗ್ರಹಗತಿಗಳ ಸ್ಥಾನ ಅನುಕೂಲಕರವಾಗಿರಬೇಕು ಎಂದು ಜ್ಯೋತಿಷ್ಯಶಾಸ್ತ್ರ ಬಲವಾಗಿ ನಂಬುತ್ತದೆ. 2025ರ ಭವಿಷ್ಯ ಪ್ರಕಾರ ವೃತ್ತಿ ಬದುಕಿನ ದೃಷ್ಟಿಯಿಂದ ಹೊಸ ವರ್ಷ ಕೆಲ ರಾಶಿಗಳಿಗೆ ತುಂಬಾನೇ ಧನಾತ್ಮಕವಾಗಿರಲಿದೆ.
ಹೊಸ ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಈ ರಾಶಿಯವರು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು. ಈ ವರ್ಷ ಕೆಲಸದಲ್ಲಿ ಏನದರು ಅಡೆತಡೆ ಅಥವಾ ಅಭದ್ರತೆ ಅನುಭವಿಸಿದ್ದರೆ ಅದೆಲ್ಲವೂ ದೂರಾಗಿ 2025ನೇ ವರ್ಷ ವೃತ್ತಿ ಜೀವನದ ದೃಷ್ಟಿಯಿಂದ ಈ ರಾಶಿಯವರಿಗೆ ಅದ್ಭುತ ವರ್ಷವಾಗಿರಲಿದೆ ನೋಡಿ:

ಮೇಷ ರಾಶಿ
ವೃತ್ತಿ ಜೀವನದ ದೃಷ್ಟಿಯಿಂದ ಮೇಷ ರಾಶಿಯವರಿಗೆ ಅನುಕೂಲಕರವಾಗಿದೆ, ಹೊಸ ವರ್ಷದಲ್ಲಿ ನಿಮ್ಮ ವೃತ್ತಿ ಬದುಕಿನಲ್ಲಿ ಭದ್ರತೆ ಕಾಣಬಹುದು. ರಾಹು ಮತ್ತು ಶನಿಯ ಸಂಚಾರವಿದೆ ಅಲ್ಲದೆ ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಕೂಡ ಪ್ರಾರಂಭವಾಗಲಿದೆ. ಆದರೆ ವೃತ್ತಿ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ವರ್ಷ ಕೆಲವೊಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೀರಿ, ಅಲ್ಲದೆ ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
ವೃಷಭ ರಾಶಿ
ಶನಿಯು ವೃಷಭ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಲು ಸಾಧ್ಯವಾಗುವುದು. ವಿದೇಶದಲ್ಲಿ ಕೆಲಸ ಹುಡುಕುತ್ತಿದ್ದರೆ ಅಥವಾ ಉದ್ಯೋಗ ಬದಲಾವಣೆಯ ಆಲೋಚನೆ ಮಾಡುತ್ತಿದ್ದರೆ ಅಥವಾ ಹೊಸ ವ್ಯಾಪಾರ ಪ್ರಾರಂಭಿಸಬೇಕು, ವ್ಯಾಪಾರವನ್ನು ವಿಸ್ತರಣೆ ಮಾಡಬೇಕೆಂಬ ಆಲೋಚನೆಯಲ್ಲಿ ಹೊಸ ವರ್ಷ ನಿಮಗೆ ಅದ್ಭುತವಾಗಿರಲಿದೆ ಎಂದು ಗ್ರಹಗತಿಗಳ ಸ್ಥಾನವು ಹೇಳುತ್ತಿವೆ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಶನಿಯು 10ನೇ ಮನೆಗೆ ಸಂಚರಿಸಲಿದೆ, ಶನಿಯು ಕರ್ಮದ ಮನೆಯಲ್ಲಿ ಇರುವುದರಿಂದ ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ತುಂಬಾನೇ ಒಳ್ಳೆಯದಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಇರಲಿದೆ, ವೃತ್ತಿ ಜೀವನದಲ್ಲಿ ನಿಮ್ಮ ಗುರಿ ಮುಟ್ಟಲು ರಾಹು ಮತ್ತು ಶನಿಯ ಬೆಂಬಲ ಇರಲಿದೆ. ಹೀಗಾಗಿ ನಿಮ್ಮ ವೃತ್ತಿ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸು ಪಡೆಯಬಹುದು.
ಕರ್ಕ ರಾಶಿ
ಈ ವರ್ಷ ಅನೇಕ ಅಡೆತಡೆ ಎದುರಿಸಿರಬಹುದು, ಆದರೆ 2025 ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ಅದ್ಭುತವಾಗಿರಲಿದೆ. ಹೊಸ ಅವಕಾಶಗಳು ನಿಮ್ಮ ಪಾಲಿಗೆ ದೊರೆಯಲಿದೆ. ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಅಥವಾ ವ್ಯಾಪಾರವನ್ನು ವಿಸ್ತರಣೆ ಮಾಡಬೇಕು ಎನ್ನುವವರಿಗೆ ಈ ಅವಧಿ ತುಂಬಾನೇ ಪ್ರಯೋಜನಕಾರಿಯಾಗಿದೆ.
ತುಲಾ ರಾಶಿ
2025ನೇ ವರ್ಷದಲ್ಲಿ ತುಲಾ ರಾಶಿಯವರಿಗೂ ಗ್ರಹಗತಿಗಳ ಸ್ಥಾನ ಅನುಕೂಲಕರವಾಗಿರುವುದರಿಂದ ನೀವು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ನಿಮಗೆ ಒಳ್ಳೆಯ ಅವಕಾಶ ದೊರೆಯಲಿದೆ, ಅದರಲ್ಲಿ ಆಗಸ್ಟ್ ಬಳಿಕ ವೃತ್ತಿ ಬದುಕಿನಲಲಿ ಮತ್ತಷ್ಟು ಪ್ರಗತಿ ಕಾಣುತ್ತೀರಿ.
ಧನು ರಾಶಿ
2025ನೇ ವರ್ಷ ಧನು ರಾಶಿಯವರಿಗೆ ಅನುಕೂಲಕರವಾಗಿದೆ. ನೀವು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವುದಾದರೆ ಏಪ್ರಿಲ್ ನಂತರದ ಸಮಯ ನಿಮಗೆ ತುಂಬಾ ಒಳ್ಳೆಯದಿದೆ. ಕೆಲಸದಲ್ಲಿನ ಅಭದ್ರತೆ ದೂರಾಗಲಿದೆ. ಹಣದ ಸ್ಥಿತಿಯೂ ಚೆನ್ನಾಗಿರಲಿದೆ, ಅಗ್ಯತ ಮೀರಿ ಖರ್ಚು ಮಾಡಲು ಹೋಗಬೇಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಮಾರ್ಚ್ ಬಳಿಕ ಶನಿ ಸಾಡೇಸತಿ ಮುಕ್ತಾಯವಾಗಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ವೃತ್ತಿ ಬದುಕಿನಲ್ಲಿ ಅಭಿವೃದ್ಧಿ ಉಂಟಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರು ಉತ್ತಮ ಬೆಳವಣಿಗೆ ದೊರೆಯಲಿದೆ. ಹೊಸ ವೃತ್ತ ಬದುಕು ತುಂಬಾ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











