Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
2025ರ ವರ್ಷ ಭವಿಷ್ಯ ಪ್ರಕಾರ ಕನ್ಯಾ ರಾಶಿಗೆ ಯಾವೆಲ್ಲಾ ವಿಷಯದಲ್ಲಿ ಶುಭ?
2025ರ ವರ್ಷ ರಾಶಿಫಲ ಪ್ರಕಾರ ಹೊಸ ವರ್ಷವು ಕನ್ಯಾ ರಾಶಿಗೆ ಮಿಶ್ರಫಲ ಎಂದು ಹೇಳಬಹುದು, ಕೆಲವೊಂದು ವಿಚಾರದಲ್ಲಿ ತುಂಬಾ ಒಳ್ಳೆಯದಿದೆ, ಕೆಲವು ವಿಷಯಗಳ ಬಗ್ಗೆ ಜಾಗ್ರತೆ, ಬನ್ನಿ ಕನ್ಯಾ ರಾಶಿಯ ವರ್ಷ ಫಲ ನೋಡೋಣ:

ವೃತ್ತಿ ಬದುಕು
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ವರ್ಷ ನಿಮಗೆ ಸರಾಸರಿಯಾಗಲಿದೆ, ವೃತ್ತಿ ಬದುಕಿನಲ್ಲಿ ಕೆಲವೊಂದು ಸಮಯದಲ್ಲಿ ಏರಳಿತವಿರಲಿದೆ, ಆದರೆ ಶನಿಯ ಸ್ಥಾನ ನಿಮಗೆ ಅನುಕೂಲಕರವಾಗಿರಲಿದೆ, ಹೀಗಾಗಿ ಶನಿಯು ನಿಮ್ಮ ವೃತ್ತಿ ಬದುಕಿನಲ್ಲಿ ಏಳಿಗೆಯನ್ನು ತರಲಿದೆ. ನೀವು ಈ ವರ್ಷ ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಮೇ ತಿಂಗಳಿನಿಂದ ರಾಹು ಸಂಚಾರ ಕೆಲಸದಲ್ಲಿ ಚಿಕ್ಕ ಪುಟ್ಟ ಅಡೆತಡೆ ಉಂಟು ಮಾಡಬಹುದು, ಆದರೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ, ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.
2025 ವ್ಯಾಪಾರಿಗಳಿಗೆ ಹೇಗಿದೆಯೆಂದು ನೋಡುವುದಾದರೆ ಈ ವರ್ಷ ನಿಮಗೆ ಮಿಶ್ರಫಲ. ವ್ಯಾಪಾರದಲ್ಲಿ ಏರಳಿತ ಕಾಣಬಹುದು. ನಿಮ್ಮ ಹತ್ತನೇ ಮನೆಯಲ್ಲಿ ಗುರು ಇರುವುದರಿಂದ ಗುರುವಿನ ಪ್ರಭಾವ ನಿಮ್ಮ ರಾಶಿಯಲ್ಲಿ ಅಷ್ಟೇನು ಇರುವುದಿಲ್ಲ. ನೀವು ಹಿರಿಯರ ಅಥವಾ ಅನುಭವಿಗಳ ಸಲಹೆ ಪಡೆಯುವುದು ಒಳ್ಳೆಯದು. ರಿಸ್ಕಿ ಹೂಡಿಕೆ ಮಾಡಲು ಹೋಗಬೇಡಿ. ವ್ಯಾಪಾರವನ್ನು ವಿಸ್ತರಿಸಲು ಹೋಗದೆ ಇರುವ ವ್ಯಾಪಾರ ಚೆನ್ನಾಗಿ ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸುವುದು ಒಳ್ಳೆಯದು.
ಆರ್ಥಿಕ ಜೀವನ
ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ, ಹಣಕಾಸಿನ ವಿಷಯದಲ್ಲಿ ಈ ವರ್ಷ ನಿಮಗೆ ಸರಾಸರಿಯಾಗಿರಲಿದೆ. ನೀವು ಪ್ರಯತ್ನ ಮಾಡಿದರೆ ಉಳಿತಾಯ ಮಾಡಲು ಸಾಧ್ಯವಾಗುವುದು. ಗುರುವು ಸಂಪತ್ತಿನ ಮನೆಯನ್ನು ನೋಡುವುದರಿಂದ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ. ವ್ಯವಹಾರಸ್ಥರಿಗೆ ಈ ವರ್ಷ ಸ್ವಲ್ಪ ನಿಧಾನವಾಗಿದ್ದರು ಲಾಭ ಗಳಿಸಲು ಸಾಧ್ಯವಾಗುವುದು.
ಮನೆ ಅಥವಾ ಗಾಡಿ ಖರೀದಿಗೆ ಈ ಅವಧಿ ಹೇಗಿರಲಿದೆ?
ಗುರುವು ಮೇ ತಿಂಗಳವರೆಗೆ ನಿಮ್ಮ ಅದೃಷ್ಟದ ಮನೆಯಲ್ಲಿರಲಿದೆ. ಈ ಅವಧಿ ಭೂಮಿ ಖರೀದಿ ಅಥವಾ ಮನೆ ಖರೀದಿಗೆ ಅನುಕೂಲಕರವಾಗಿದೆ. ನೀವು ಹೊಸ ವರ್ಷದಲ್ಲಿ ಮನೆಯ ಪ್ಲ್ಯಾನ್ ಮಾಡುತ್ತಿದ್ದರೆ ನೀವು ಮೇ ತಿಂಗಳ ಒಳಗಡೆ ಪ್ರಯತ್ನಿಸುವುದು ಒಳ್ಳೆಯದು. ವಾಹನಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಮೇ ತಿಂಗಳ ಒಳಗಡೆ ಖರೀದಿಗೆ ಪ್ರಯತ್ನ ಮಾಡುವುದು ಒಳ್ಳೆಯದು.
ಪ್ರೀತಿ, ಕುಟುಂಬ ಜೀವನ
ಪ್ರೇಮಿಗಳಿಗೆ 2025 ಮಿಶ್ರಫಲ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ನೀವು ಪ್ರೇಮವಿವಾಹವಾಗಲು ಬಯಸುವುದಾದರೆಈ ಅವಧಿ ನಿಮಗೆ ಅನುಕೂಲಕರವಾಗಿದೆ. ಆದರೆ ನಿಮ್ಮ ನಡುವೆ ಚಿಕ್ಕ ಪುಟ್ಟ ಅಭಿಪ್ರಾಯ ವ್ಯತ್ಯಾಸ ತಪ್ಪಿಸುವುದು ಒಳ್ಳೆಯದು.
ಅವಾಹಿತರು ಮದುವೆಗೆಸಂಬಂಧ ಹುಡುಕುತ್ತಿದ್ದರೆ 2025ನೇ ವರ್ಷ ಅನುಕೂಲಕರವಾಗಿದೆ, ಗುರು ನಿಮ್ಮ 7ನೇ ಮನೆಯಲ್ಲಿದೆ, ಮೇ ಮಧ್ಯದ ನಂತರ ಮದುವೆಯ ಸಾಧ್ಯತೆ ಇದೆ.
ವಿವಾಹಿತರಿಗೆ ಈ ವರ್ಷ ಏರಳಿತವಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಮನಸ್ತಾಪ ಬರಬಹುದು ಅಥವಾ ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಆದರೆ ನೀವು ಯಾವುದೇ ಸಮಸ್ಯೆ ದೊಡ್ಡದಾಗಲು ಬಿಡಬೇಡಿ.
ಆರೋಗ್ಯ
ಈ ವರ್ಷ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಅಷ್ಟೇನೂ ಅನುಕೂಲಕರವಾಗಿಲ್ಲ, ಶನಿಯು ರಾಶಿ ಬದಲಾವಣೆ ಮಾಡಿದಾಗ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಶನಿಯು ಮಾನಸಿಕ ಒತ್ತಡ ಹೆಚ್ಚಿಸಬಹುದು, ನೀವು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











