2025ರ ಸಿಂಹ ರಾಶಿ ಭವಿಷ್ಯ:ಶನಿ ಅಷ್ಟಮದಲ್ಲಿ, ಗುರು ಲಾಭದ ಸ್ಥಾನದಲ್ಲಿರುವಾಗ ಹೊಸ ವರ್ಷ ಹೇಗಿರಲಿದೆ?

2025ನೇ ವರ್ಷವು ಸಿಂಹ ರಾಶಿಯವರಿಗೆ ಕೆಲವು ವಿಷಯದಲ್ಲಿ ಒಳ್ಳೆಯದಿದೆ, ಇನ್ನು ಕೆಲವು ವಿಷಯದಲ್ಲಿ ಮಿಶ್ರಫಲ, ಈ ವರ್ಷ ಶನಿಯ ಸ್ಥಾನ ನಿಮಗೆ ಅನುಕೂಲಕರವಲ್ಲ, ಆದರೆ ಗುರುವು ನಿಮಗೆ ಅನುಕೂಲಕರವಾಗಿದ್ದಾನೆ. ಗ್ರಹಗತಿಗಳ ಸ್ಥಾನದ ಪ್ರಕಾರ 2025 ವೃತ್ತಿ ಬದುಕು, ಆರ್ಥಿಕ ಬದುಕು, ಕುಟುಂಬ ಜೀವನ, ಆರೋಗ್ಯ ಇವುಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

2025 Yearly Horoscope

ಉದ್ಯೋಗ ಭವಿಷ್ಯ:
ಸಿಂಹ ರಾಶಿಯವರಿಗೆ ಉದ್ಯೋಗ ವಿಷಯದಲ್ಲಿ 2025ನೇ ವರ್ಷಮಿಶ್ರಫಲ, ವರ್ಷದ ಆರಂಭದಿಂದ ಮಾರ್ಚ್‌ವರೆಗೆ ಕೆಲ ಸವಾಲುಗಳು ಇರಲಿದೆ. ಈ ಅವಧಿಯಲ್ಲಿ ನೀವು ಕೆಲಸದ ಕಡೆಗೆ ತುಂಬಾನೇ ಗಮನಹರಿಸುತ್ತೀರಿ. ಆದರೆ ಮಾರ್ಚ್‌ ನಂತರ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗಲಿದೆ, ನೀವು ಕೆಲಸದಲ್ಲಿ ಎಷ್ಟು ಶ್ರದ್ಧೆ ತೋರಿಸುತ್ತೀರೋ ಅಷ್ಟು ಪ್ರಯೋಜನ ಸಿಗಲಿದೆ. ಮೇ ನಂತರ ನಿಮ್ಮ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ, ಗುರುವು ಲಾಭದ ಮನೆಯಲ್ಲಿರುವಾಗ ವೃತ್ತಿ ಬದುಕಿನಲ್ಲಿ ನೀವು ಪ್ರಯೋಜನ ಪಡೆಯುತ್ತೀರಿ. ಪ್ರತಿಕೂಲ ಸಂದರ್ಭದಲ್ಲಿ ಗುರುವಿನ ಬೆಂಬಲ ನಿಮಗಿರಲಿದೆ.

ವ್ಯಾಪಾರಿಗಳಿಗೆ ಹೊಸವರ್ಷ ಮಿಶ್ರಫಲ. ಮಾರ್ಚ್‌ ತಿಂಗಳವರೆಗೆ ನೀವು ಬಯಸಿದಂತೆ ಲಾಭ ಪಡೆಯುವುದು ಕಷ್ಟವಾಗಬಹುದು, ಆದರೆ ನತರ ಪರಿಸ್ಥಿತಿ ಸುಧಾರಿಸಲಿದೆ. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡುವುದಾದರೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು, ಯಾವುದೇ ದೊಡ್ಡ ರಿಸ್ಕ್‌ ತೆಗೆದು ತೆಗೆದುಕೊಳ್ಳಲು ಅವಧಿ ಸೂಕ್ತವಲ್ಲ.

ಆರ್ಥಿಕ ಜೀವನ
2025ನೇ ವರ್ಷವು ಆರ್ಥಿಕವಾಗಿ ಈ ಅವಧಿ ಅನುಕೂಲಕರವಲ್ಲ, ಆದಾಯದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಸರಾಸರಿಯಾಗಿರಲಿದೆ. ವರ್ಷದ ಆರಂಭದಿಂದ ಮೇವರೆಗೆ ನಿಮಗೆ ಅಷ್ಟು ಉತ್ತಮವಾಗಿಲ್ಲ, ಆದರೆ ನಂತರ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಗುರುವು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಪ್ರಯತ್ನಿಸಿದಾಗ ಶನಿ ಹಾಗೂ ರಾಹು ನಿಮಗೆ ತೊಂದರೆ ಪಡಿಸುತ್ತಾನೆ, ಹಾಗಾಗ ಈ ವರ್ಷ ಹಣಕಾಸಿನಲ್ಲಿ ಏರಳಿತವಿರಲಿದೆ. ಆದರೆ ನಿಮ್ಮ ಶ್ರಮಕ್ಕೆ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಕುಟುಂಬ ಹಾಗೂ ಪ್ರೀತಿ ಜೀವನ
ಪ್ರೀತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ. ಗುರುವು ನಿಮ್ಮ ಕರ್ಮದಲ್ಲಿ ಮನೆಯಲ್ಲಿರುವಾಗ
(ಮೇ ತಿಂಗಳವರೆಗೆ) ನೀವು ಸರಾಸರಿ ಫಲಿತಾಂಶ ಪಡೆಯುತ್ತೀರಿ. ಮದುವೆ ತೀರ್ಮಾನಕ್ಕೆ ಮೇ ತಿಂಗಳ ನಂತರದ ಸಮಯ ನಿಮಗೆ ಅನುಕೂಲಕರವಾಗಿದೆ. ಪ್ರೇಮ ವಿವಾಹವಾಗ ಬಯಸುವವರು ಮನೆಯವರ ಬೆಂಬಲ ಪಡೆಯಲು ಸಾಧ್ಯವಾಗುವುದು. ಈ ವರ್ಷ ನೀವು ವೈವಾಹಿಕ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವರ್ಷದ ಪ್ರಾರಂಭದಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ಮೇ ನಂತರ ಸಂಬಂಧದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ವೈವಾಹಿಕ ಬದುಕಿನಲ್ಲಿನ ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಬೇಕು. ನಿಮ್ಮ ನಡುವೆ ಹೊಂದಾಣಿಕೆ ತುಂಬಾನೇ ಮುಖ್ಯವಾಗಿರುತ್ತದೆ, ಆ ಕಡೆ ಗಮನಹರಿಸಿ.

ವಾಹನ, ಆಸ್ತಿ ಖರೀದಿಗೆ 2025ರ ವರ್ಷ ಶುಭವಾಗಿದೆಯೇ?
ನೀವು ಆಸ್ತಿ ಖರೀದಿ ಮಾಡುವುದಾದರೆ ಸರಿಯಾದ ದಾಖಲೆ ಪರಿಶೀಲಿಸಿ ಖರೀದಿ ಮಾಡುವುದು ಒಳ್ಳೆಯದು. ಇನ್ನು ಹೊಸ ವಾಹನಕ್ಕಿಂತ ಇರುವ ವಾಹನ ಬಳಸುವುದೇ ಸೂಕ್ತ, ನೀವು ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಆಖಲೆ ಪರಿಶೀಲನೆ ಮಾಡದೆ ಖರೀದಿಸಲು ಹೋಗಬೇಡಿ. ಮನೆ ಕಟ್ಟುವುದಾದರೆ ತುಂಬಾ ಸಾಲ ಮಾಡಲು ಹೋಗಬೇಡಿ.

ಆರೋಗ್ಯ
ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ದುರ್ಬಲವಾಗಿದೆ,ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ನಿಮ್ಮ 8ನೇ ಮನೆಯಲ್ಲಿ ಶನಿಯ ಸ್ಥಾನ ಇರುವುದರಿಂದ ಅಷ್ಟಮದಲ್ಲಿರುವ ಶನಿ ಆರೋಗ್ಯ ಸಂಬಂಧಿತ ಸಮಸ್ಯೆ ನೀಡುತ್ತಿರುತ್ತಾನೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಯಾಗದರೂ ನಿರ್ಲಕ್ಷ್ಯ ಮಾಡಬೇಡಿ, ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಿ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2025 Horoscope: New Year Prediction For Leo Zodiac Signs Or Simha Rashi In Kannada

2025 Yearly Horoscope: New Year Prediction For Leo Zodiac Signs, read on...
Story first published: Monday, December 9, 2024, 19:35 [IST]
X
Desktop Bottom Promotion