Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರ ರಾಶಿಫಲ ಹೇಗಿದೆ?
ವೃಶ್ಚಿಕ ರಾಶಿಯಲ್ಲಿ ಗ್ರಹಗಳ ಸ್ಥಾನದ ಬಗ್ಗೆ ಹೇಳುವುದಾರೆ 4 ನೇ ಮನೆಯಲ್ಲಿ ಶನಿ, 5 ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತು ಇದೆ. ಗುರುವು ವೃಷಭ ರಾಶಿಗೆ ಚಲಿಸಿದಾಗ ಗುರುವು ನಿಮ್ಮ 7ನೇ ಮನೆಯಲ್ಲಿ ಇರಲಿದೆ.
ಈ ಗ್ರಹಗಳ ಸ್ಥಾನದ ಮೇಲೆ ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ ಹೇಳಲಾಗಿದೆ ನೋಡಿ:

ವ್ಯಾಪಾರ ಭವಿಷ್ಯ
ವ್ಯಾಪಾರಸ್ಥರಿಗೆ ವರ್ಷವು ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ . ಮೊದಲ ನಾಲ್ಕು ತಿಂಗಳುಗಳು ಸರಾಸರಿಯಾಗಿರಲಿದೆ, ಆದರೆ ಗುರುವಿನ ಸಂಚಾರದ ಬಳಿಕ ತುಂಬಾನೇ ಅನುಕೂಲಕರವಾಗಿರುತ್ತದೆ . ಗುರುವು 6 ನೇ ಮನೆಯಲ್ಲಿದ್ದಾಗ, ವ್ಯವಹಾರವು ಸಾಮಾನ್ಯವಾಗಿ ಪ್ರಗತಿ ಸಾಧಿಸುತ್ತದೆ. ಆರ್ಥಿಕವಾಗಿ ಉತ್ತಮ, ಆದರೆ ವ್ಯಾಪಾರದಲ್ಲಿ ಬೆಳವಣಿಗೆ ಮಧ್ಯಮವಾಗಿರುತ್ತದೆ. ಹೊಸ ವ್ಯಾಪಾರ ವ್ಯವಹಾರಗಳು ಆರಂಭದಲ್ಲಿ ಸ್ಥಗಿತಗೊಳ್ಳಬಹುದು ಅಥವಾ ವಿಳಂಬವಾಗಬಹುದು.
ಮೇ 1 ರಿಂದ ಗುರುವು 7ನೇ ಮನೆಗೆ ಸಾಗಿದಾಗ ವ್ಯಾಪಾರದಲ್ಲಿ ತುಂಬಾನೇ ಬೆಳವಣಿಗೆ ಉಂಟಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ. ಈ ಅವಧಿಯಲ್ಲಿ ಮಾಡಿದ ವ್ಯಾಪಾರ ವ್ಯವಹಾರಗಳಿಂದ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಆದರೆ 5 ನೇ ಮನೆಯಲ್ಲಿರುವ ರಾಹು ನಿಮ್ಮಿಂದ ಕೆಲವೊಂದು ಆತುರದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುತ್ತಾನೆ, ಇದರಿಂದ ನಷ್ಟವಾಗುವುದು, ಈ ಬಗ್ಗೆ ಜಾಗ್ರತೆವಹಿಸಿ.
ವೃತ್ತಿ ಭವಿಷ್ಯ
ಈ ವರ್ಷ ನಿಮಗೆ ಅನುಕೂಲಕರವಾಗಿರಲಿದೆ . ಆದರೆ ಕೆಲಸದ ಒತ್ತಡ ಅಧಿಕವಿರಲಿದೆ. ಮೇ ತಿಂಗಳವರೆಗೆ ಉದ್ಯೋಗವನ್ನು ಬದಲಾಯಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಮೇ 1ರಿಂದ ನಿಮ್ಮ ಕೆಲಸದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಕೆಲಸದ ಒತ್ತಡವು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ನೀವು ವರ್ಗಾವಣೆ ಅಥವಾ ಕೆಲಸ ಬದಲಾಯಿಸಲು ಪ್ರಯತ್ನಿಸಿದರೆ, ನೀವು ಯಶಸ್ವಿಯಾಗುವ ಸಾಧ್ಯತೆಗಳಿವೆ.
ಆರ್ಥಿಕ ಭವಿಷ್ಯ
ವೃಶ್ಚಿಕ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ . ಆದರೆ ಸಾಲ ಮರು ಪಾವತಿ ಮಾಡುವ ಒತ್ತಡವಿರಬಹುದು. ಆದರೆ ಆಸ್ತಿಯಲ್ಲಿ ಹೂಡಿಕೆಗೆ ಮೇ ತಿಂಗಳವರೆಗೆ ಒಳ್ಳೆಯದಲ್ಲ, ಅದರ ನಂತರ ಬೇಕಾದರೆ ಆಸ್ತಿ, ವಾಹನದಲ್ಲಿ ಹೂಡಿಕೆ ಮಾಡಬಹುದು. 11 ನೇ ಮನೆಯಲ್ಲಿ ಕೇತುವಿನ ಸಂಚಾರವು ಕೆಲವೊಮ್ಮೆ ಅನಿರೀಕ್ಷಿತ ಲಾಭಗಳನ್ನು ನೀಡುವುದು, ಒಟ್ಟಾರೆಯಾಗಿ ಹಣಕಾಸು ಚೆನ್ನಾಗಿರಲಿದೆ, ಆದರೆ ನೀವು ಜಾಗ್ರತೆಯಿಂದ ಹಣವನ್ನು ಬಳಸಿಕೊಳ್ಳಬೇಕು.
ಕುಟುಂಬ ಜೀವನ
ಈ ವರ್ಷ ಮೇ. 1 ಗುರುವಿನ ಸಂಚಾರದವರೆಗೆ ಕುಟುಂಬದಲ್ಲಿ ಕೆಲ ಸಮಸ್ಯೆಗಳು ಇರಬಹುದು, ಆದರೆ ನಂತರ ಎಲ್ಲವೂ ಸರಿಯಾಗಲಿದೆ, ಕುಟುಂಬದಲ್ಲಿ ಸಾಮರಸ್ಯ ಇರಲಿದೆ, ನೀವು ಹೊಸ ಮನೆಗೆ ಹೋಗಬಹುದು, ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಆರೋಗ್ಯ ಭವಿಷ್ಯ
ಆರೋಗ್ಯದ ಬಗ್ಗೆ ನೋಡುವುದದರೆ ಈ ವರ್ಷ ಮಿಶ್ರಫಲ. ಕೆಲಸದ ಒತ್ತಡ ಆರೋಗ್ಯ ಸಮಸ್ಯೆ ಹೆಚ್ಚಿಸಬಹುದು. ಆರೋಗ್ಯಕರ ಜೀವನಶೈಲಿಯತ್ತ ಗಮನಹರಿಸಿ.
ಉದ್ಯೋಗ ಭವಿಷ್ಯ
ವಿದ್ಯಾರ್ಥಿಗಳು ಓದಿನ ಕಡೆಗೆ ತುಂಬಾನೇ ಗಮನಹರಿಸಬೇಕು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಗೆ ಅನುಕೂಲಕರವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ, ವರ್ಷದ ಉತ್ತರಾರ್ಧವು ಹೆಚ್ಚು ಆಶಾದಾಯಕವಾಗಿರುತ್ತದೆ. ಮೇ 1 ರವರೆಗೆ ಗುರು, ಶನಿ ಮತ್ತು ರಾಹುವಿನ ಪ್ರತಿಕೂಲವಾದ ಸಂಚಾರದಿಂದ ಆರಂಭಿಕ ಸವಾಲುಗಳ ಹೊರತಾಗಿಯೂ , ಅಧ್ಯಯನದಲ್ಲಿ ನಿರಂತರತೆ ಅತ್ಯಗತ್ಯ. ಅವರು ಗೊಂದಲವನ್ನು ತಪ್ಪಿಸಬೇಕು ಮತ್ತು ಅವರ ಗುರಿಗಳ ಮೇಲೆ ಕೇಂದ್ರೀಕರಿಸಬೇಕು. ಮೇ 1 ರ ನಂತರದ ಗುರುಗ್ರಹದ ಅನುಕೂಲಕರ ಸಾಗಣೆಯೊಂದಿಗೆ, ಅವರ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ .
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications