ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ತುಲಾ ರಾಶಿಯವರ ರಾಶಿಫಲ ಹೇಗಿದೆ?

ಈ ವರ್ಷ ಶನಿಯು ಕುಂಭ ರಾಶಿಯಲ್ಲಿ ಇರಲಿದ್ದು ತುಲಾ ರಾಶಿಯವರಲ್ಲಿ ಶನಿಯು 5 ನೇ ಮನೆಯಲ್ಲಿ ಇರಲಿದೆ. ರಾಹು 6ನೇ ಮನೆಯಲ್ಲಿ, ಕೇತು 12ನೇ ಮನೆಯಲ್ಲಿ ಇರಲಿದೆ. ಗುರುವು ಮೇ 1 ರವರೆಗೆ 7 ನೇ ಮನೆಯಲ್ಲಿರುತ್ತದೆ ನಂತರ ವೃಷಭ ರಾಶಿಗೆ ಗುರು ಸಂಚಾರವಾದಾಗ ತುಲಾ ರಾಶಿಯಲ್ಲಿ 8ನೇ ಮನೆಯಲ್ಲಿ ಇರಲಿದೆ.

ಈ ಗ್ರಹಗಳ ಸ್ಥಾನದ ಮೇಲೆ ಯುಗಾದಿ ಭವಿಷ್ಯ ಹೇಳಲಾಗುದ್ದು ಯುಗಾದಿ ಹೊಸ ವರ್ಷ ತುಲಾ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

Ugadi Prediction 2024

ವ್ಯಾಪಾರ ಭವಿಷ್ಯ

ತುಲಾ ರಾಶಿಯ ವ್ಯಾಪಾರಿಗಳಿಗೆ ಮೇ 1 ರವರೆಗಿನ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ದಿನಾಂಕದವರೆಗೆ 7 ನೇ ಮನೆಯಲ್ಲಿ ಗುರುವಿನ ಸಂಚಾರವು ವ್ಯವಹಾರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ತರುತ್ತದೆ. ಈ ಸಮಯದಲ್ಲಿ ಹೊಸ ವ್ಯಾಪಾರ ವ್ಯವಹಾರಗಳು ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು. ನೀವು ಏನಾದರೂ ಹೊಸ ಉದ್ಯಮ ಮಾಡಬೇಕೆಂದಿದ್ದರೆ ಮೇ 1 ರ ಮೊದಲು ಮಾಡುವುದು ಒಳ್ಳೆಯದು. ನಂತರದ ಅವಧಿಯು ಹೂಡಿಕೆಗಳಿಗೆ ಅನುಕೂಲಕರವಾಗಿಲ್ಲ. ಮೇ 1ರ ನಂತರ ವ್ಯಾಪಾರದಲ್ಲಿ ಮೋಸ ಹೋಗದಂತೆ ಜಾಗ್ರತೆವಹಿಸಬೇಕು.

ವೃತ್ತಿ ಭವಿಷ್ಯ

ತುಲಾ ರಾಶಿಯವರಿಗೆ ಉದ್ಯೋಗದ ವಿಷಯದಲ್ಲಿ ಮಿಶ್ರ ಫಲಿತಾಂಶ, ಗುರುವಿನ ಸಂಚಾರವು ಮೇ 1 ರವರೆಗೆ ಅನುಕೂಲಕರವಾಗಿರುತ್ತದೆ, ಈ ಅವಧಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ ಎಲ್ಲಾ ಕಾಣಬಹುದು. ಮೇ 1 ರ ನಂತರ ವೃತ್ತಿ ಜೀವನದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಹಲವು ಸವಾಲುಗಳು ಎದುರಾಗುವುದು. ಕೆಲಸದ ಸಮಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಆತುರದ ನಿರ್ಧಾರಗಳು ಮತ್ತಷ್ಟು ಸಮಸ್ಯೆ ಉಂಟು ಮಾಡಬಹುದು. ಮೇ. 1ರ ನಂತರ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನಹರಿಸಬೇಕು.

ಆರ್ಥಿಕ ಭವಿಷ್ಯ

ಆರ್ಥಿಕ ದೃಷ್ಟಿಯಿಂದ ಈ ವಾರ ಮಿಶ್ರಫಲ. ವರ್ಷದ ಮೊದಲಾರ್ಧವು ಅನುಕೂಲಕರವಾಗಿದೆ. ಮೇ 1ರವರೆಗೆ ಹೂಡಿಕೆಗಳು, ವಿಶೇಷವಾಗಿ ರಿಯಲ್ ಎಸ್ಟೇಟ್ ಅಥವಾ ಹಿಂದೆ ಮಾಡಿದ ವ್ಯವಹಾರಗಳಲ್ಲಿ ಲಭ ಗಳಿಸಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುತ್ತದೆ. ಮೇ 1ರ ನಂತೆ ಆದಾಯದಲ್ಲಿ ಇಳಿಕೆ ಅಥವಾ ನಿರೀಕ್ಷಿತ ಹಣಕಾಸು ಪಡೆಯದಿರುವುದು ಉಂಟಾಗಬಹುದು. ಈ ಸಮಯದಲ್ಲಿ ಮಾಡಿದ ಹೂಡಿಕೆಗಳು ನಿರೀಕ್ಷಿತ ಲಾಭವನ್ನು ತರದೇ ಇರಬಹುದು ಮತ್ತು ನಷ್ಟಕ್ಕೂ ಕಾರಣವಾಗಬಹುದು. ಅತಿಯಾದ ಆತ್ಮವಿಶ್ವಾಸದಿಂದ ಯಾವುದೇ ಕೆಲಸ ಮಾಡಬೇಡಿ. ಶನಿ ಹಾಗೂ ಕೇತುವಿನ ಸ್ಥಾನವೂ ಅನುಕೂಲಕರವಲ್ಲ. ಆರ್ಥಿಕವಾಗಿ ಮೋಸ ಹೋಗಬಹುದು, ಆದ್ದರಿಂದ ಜಾಗ್ರತೆವಹಿಸಿ.

ಕುಟುಂಬ ಜೀವನ
ಕುಟುಂಬ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗುವುದು. ತಪ್ಪು ತಿಳುವಳಿಕೆ ಪರಿಹರಿಸಬೇಕು. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾಗುವುದು. ಈ ಅವಧಿಯಲ್ಲಿ ಎಂಥದ್ದೇ ಸಂದರ್ಭದಲ್ಲಿ ತಾಳ್ಮೆಯಿಂದ ಮಾತನಾಡಿ, ಕೋಪದ ವರ್ತನೆ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದು, ಕೇತು ಪರಿಹಾರ ಮಾಡಿದರೆ ಒಳ್ಳೆಯದು.

ಆರೋಗ್ಯ ಭವಿಷ್ಯ

ಹಿಂದಿನ ಆರೋಗ್ಯ ಸಮಸ್ಯೆ ಮರುಕಳಿಸದಂತೆ ಜಾಗ್ರತೆವಹಿಸಬೇಕು. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಈ ಅವಧಿಯಲ್ಲಿ ಮಾನಸಿಕ ಒತ್ತಡ ಅಧಿಕವಿರಲಿದೆ. ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಿ.

ವಿದ್ಯಾರ್ಥಿ ಜೀವನ

ವಿದ್ಯಾರ್ಥಿಗಳು ತುಂಬಾನೇ ಗಮನಹರಿಸಬೇಕು. ಬಯಸಿದ ಮಟ್ಟವನ್ನು ಸಾಧಿಸಲು ಹೆಚ್ಚು ಶ್ರಮಹಾಕಿ. ಉನ್ನತ ಅಧ್ಯಯನಕ್ಕಾಗಿ ತಮ್ಮ ಅಪೇಕ್ಷಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರೆಗೆ ಈ ಅವಧಿ ಅನುಕೂಲಕರವಾಗಿದೆ.

ನೀವು ಉತ್ತಮ ಫಲಿತಾಂಶ ಪಡೆಯಲು ಗುರು, ಶನಿ ಮತ್ತು ಕೇತುಗಳಿಗೆ ಪರಿಹಾರ ಮಾಡಿದರೆ ತುಂಬಾನೇ ಒಳ್ಳೆಯದು. ಹನುಮಾನ್ ಚಾಲೀಸಾ ಪ್ರತಿನಿತ್ಯ ಪಠಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024: Ugadi Prediction Of Tula Rashi Or Libra Zodiac Signs In Kannada

Here are Ugadi Prediction Of Tula Rashi Or Libra Zodiac Signs, read on.....
Story first published: Thursday, April 4, 2024, 12:30 [IST]
X
Desktop Bottom Promotion