ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ಮೀನ ರಾಶಿಯವರ ರಾಶಿಫಲ ಹೇಗಿದೆ?

ಮೀನ ರಾಶಿಯವರಲ್ಲಿ ಈ ವರ್ಷ ಶನಿಯು 12ನೇ ಮನೆಯಲ್ಲಿ ಇರಲಿದೆ. ರಾಹು 1ನೇ ಮನೆಯಲ್ಲಿ, ಕೇತು 7ನೇ ಮನೆಯಲ್ಲಿ ಇರಲಿದೆ. ಇದೀಗ ಗುರು ನಿಮ್ಮ ರಾಶಿಯ 2ನೇ ಮನೆಯಲ್ಲಿ ಇರಲಿದೆ. ಮೇ.1ರಿಂದ 3ನೇ ಮನೆಗೆ ಸಂಚರಿಸಲಿದೆ.

ಈ ಗ್ರಹಗಳ ಸ್ಥಾನವನ್ನು ನೋಡಿ ಜ್ಯೋತಿಷ್ಯ ಶಾಸ್ತ್ರವು ಯುಗಾದಿ ಭವಿಷ್ಯ ನೀಡಿದೆ ನೋಡಿ:

Ugadi Prediction 2024

ವ್ಯಾಪಾರ ಭವಿಷ್ಯ

ವ್ಯಾಪಾರ ಭವಿಷ್ಯ ನೋಡುವುದಾದರೆ ಮೀನ ರಾಶಿಯ ಉದ್ಯಮಿಗಳಿಗೆ ಅನುಕೂಲಕರವಾಗಿದೆ . ಮೇ 1 ರವರೆಗೆ, 2 ನೇ ಮನೆಯಲ್ಲಿ ಗುರು ಸಂಚಾರ ಲಾಭದಾಯಕವಾಗಿದೆ. ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಆದರೆ ಪಾಲುದಾರಕೆಯ ವ್ಯವಹಾತ ಮಾಡುವವರು ಸ್ವಲ್ಪ ಜಾಗ್ರತೆವಹಿಸಿಬೇಕು. ಗುರು 3ನೇ ಮನೆಗೆ ಸಂಚರಿಸಿದಾಗ ಅದು ಕೂಡ ಅನುಕೂಲಕರವಾಗಿದೆ.

ವ್ಯಾಪಾರವನ್ನು ವಿಸ್ತರಿಸಲು ಬಯಸುವವರೆಗೆ ಅನುಕೂಲಕರವಾಗಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ, ಆದರೆ ವಿವಾದಗಳು ಉಂಟಾಗದಂತೆ ನೋಡಿಕೊಳ್ಳಬೇಕು. 7 ನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ಅನಗತ್ಯ ಭಯವನ್ನು ಉಂಟುಮಾಡಬಹುದು, ಈ ಭಯವೇ ಪ್ರಗತಿಗೆ ಅಡ್ಡಿಯಾಗಬಹುದು. ಸಾಧ್ಯವಾದಷ್ಟು ನಿಮ್ಮ ವ್ಯವಹಾರದಲ್ಲಿ ಸಂಪೂರ್ಣ ಗಮನ ನೀಡಿ ಎಲ್ಲವೂ ಸರಿಯಾಗುವುದು.

ಉದ್ಯೋಗ ಭವಿಷ್ಯ

ಈ ವರ್ಷ ಉದ್ಯೋಗಿಗಳಿಗೆ ಮಿಶ್ರಫಲ.ಮೇ 1 ರವರೆಗೆ 2 ನೇ ಮನೆಯಲ್ಲಿ ಗುರುವಿನ ಸ್ಥಾನ ಹೆಚ್ಚು ಅನುಕೂಲಕರವಾಗಿದೆ, ವತ್ತಿ ಬದುಕಿನಲ್ಲಿ ಬೆಳವಣಿಗೆಯನ್ನು ಕಾಣಬಹುದು. ಹೊಸ ಉದ್ಯೋಗ ಅಥವಾ ಬಡ್ತಿಗಾಗಿ ಕಾಯುತ್ತಿರುವವರಿಗೆ ಈ ಅವಧಿಯು ಅನುಕೂಲಕರವಾಗಿದೆ . ಮೇ.1ಕ್ಕೆ ಗುರು ಮೂರನೇ ಮನೆಗೆ ಸಂಚರಿಸಲಿದೆ.

ಈ ಅವಧಿಯು ಅನುಕೂಲಕರವಾಗಿರುತ್ತದೆ, ಆದರೆ ವರ್ಗಾವಣೆಯಾಗಬಹುದು, ಕೆಲಸ ಬದಲಾಗಬಹುದು. 12ನೇ ಮನೆಯಲ್ಲಿ ಶನಿಯ ಸಂಚಾರವು ನಿಮ್ಮ ಕೆಲಸದಲ್ಲಿ ಸವಾಲುಗಳನ್ನು ತರಬಹುದು. ಗುರುವು 2 ನೇ ಮನೆಯಲ್ಲಿ ಇರುವಾಗ ಸಮಸ್ಯೆಗಳು ಗಮನಾರ್ಹವಲ್ಲದಿದ್ದರೂ, ಗುರುವು 3 ನೇ ಮನೆಗೆ ಚಲಿಸುವಾಗ ಆ ಸಮಸ್ಯೆ ಹೆಚ್ಚಾಗಬಹುದು. ವೃತ್ತಿಯಲ್ಲಿ ಪ್ರಾಮಾನಿಕವಾಗಿರುವುದು ವೈಯಕ್ತಿಕ ಬದುಕಿನ ದೃಷ್ಟಿಯಿಂದಲೂ ಒಳ್ಳೆಯದು.

ಆರ್ಥಿಕ ಭವಿಷ್ಯ

ಮೀನ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿಯು ಮೊದಲ ನಾಲ್ಕು ತಿಂಗಳುಗಳಲ್ಲಿ ಅನುಕೂಲಕರವಾಗಿರುತ್ತದೆ ಗುರುವಿನ ಸ್ಥಾನ ಆರ್ಥಿಕವಾಗಿ ಅತ್ಯಂತ ಅನುಕೂಲಕರವಾಗಿರುತ್ತದೆ . ಉದ್ಯೋಗ ಅಥವಾ ವ್ಯಾಪಾರದ ಮೂಲಕ ಆದಾಯವು ಹೆಚ್ಚಾಗುತ್ತ, ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ. ವಾಹನ ಖರೀದಿಸಲು ಮೇ1ರೊಳಗೆ ಅವಧಿ ತುಂಬಾನೇ ಸೂಕ್ತವಾಗಿದೆ. ಮೇ 1 ರಿಂದ ಖರ್ಚುಗಳು ಹೆಚ್ಚಾಗುವುದು. ನಿಮ್ಮ ಜೀವನ ಸಂಗಾತಿಯಲ್ಲಿ ಆರ್ಥಿಕ ಬೆಳವಣಿಗೆ ಕಂಡು ಬರಲಿದೆ. ಆಸ್ತಿಗಳನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ವ್ಯವಹಾರದಲ್ಲಿ ಜಾಗ್ರತೆವಹಿಸಿ, ಇಲ್ಲದಿದ್ದರೆ ನಷ್ಟವಾಗುವುದು.

ಕುಟುಂಬ ಭವಿಷ್ಯ

ಮೇ.1ರವರೆಗೆ ಕುಟುಂಬದಲ್ಲಿ ತುಂಬಾನೇ ಸಂತೋಷದ ವಾತಾವರಣ ಇರಲಿದೆ. ಅವಾಹಿತರಿಗೆ ಒಳ್ಳೆಯ ಮದುವೆ ಸಂಬಂಧ ಕೂಡಿ ಬರಬಹುದು. ಮೇ. 1ರಿಂದ ಕುಟುಂಬದಲ್ಲಿ ಕೆಲ ಬದಲಾವಣೆಯಾಗುವುದು. ವ್ಯಾಪಾರ ಅಥವಾ ಉದ್ಯೋಗದ ಕಾರಣಕ್ಕೆ ಮನೆಯಿಂದ ದೂರವಿರಬಹುದು.

ಆರೋಗ್ಯ ಭವಿಷ್ಯ

ಆರೋಗ್ಯದ ವಿಷಯದಲ್ಲಿ ಮಿಶ್ರಫಲ. ಮೇ.1ರ ನಂತರ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ಕುತ್ತಿಗೆ, ತಲೆ ಮತ್ತು ಗ್ಯಾಸ್ಟ್ರಿಕ್-ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಬೇಕು. ಈ ವರ್ಷ ಆಹಾರಕ್ರಮದ ಕಡೆಗೆ ಗಮನಹರಿಸಿ, ಪ್ರತಿನಿತ್ಯ ವ್ಯಾಯಾಮ ಮಾಡಿ.

ಶಿಕ್ಷಣ ಭವಿಷ್ಯ

ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಮೊದಲಾರ್ಧವು ಅನುಕೂಲಕರವಾಗಿರುತ್ತದೆ . ಆದರೆ, ವರ್ಷದ ಉತ್ತರಾರ್ಧವು ಮಿಶ್ರ ಫಲಿತಾಂಶ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಿ.

ಈ ಯುಗಾದಿ ಭವಿಷ್ಯವನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಿದ್ದು ಇದುವೇ ನಿಖರ ಎಂದು ಹೇಳುತ್ತಿಲ್ಲ. ಜ್ಯೋತಿಷ್ಯ ಎಂಬುವುದು ಭವಿಷ್ಯದ ಬಗ್ಗೆ ಊಹೆ ಮಾಡುವುದು ಅಷ್ಟೇ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024: Ugadi Prediction Of Meena Or Pisces Zodiac Signs In Kannada

Here are Ugadi Prediction Of Meena Rasi Or Pisces Zodiac Signs, read on.....
Story first published: Friday, April 5, 2024, 13:15 [IST]
X
Desktop Bottom Promotion