Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ಮಕರ ರಾಶಿಯವರ ರಾಶಿಫಲ ಹೇಗಿದೆ?
ಈ ವರ್ಷ ಮಕರ ರಾಶಿಯಲ್ಲಿ ಶನಿಯು 2ನೇ ಮನೆಯಲ್ಲಿ, ರಾಹು 3ನೇ ಮನೆಯಲ್ಲಿ, ಕೇತು 9ನೇ ಮನೆಯಲ್ಲಿ ಇರಲಿದೆ. ಮೇ 1ರಿಂದ ಗುರು ಮಕರ ರಾಶಿಯ 5ನೇ ಮನೆಯಲ್ಲಿ ಇರಲಿದೆ.
ಈ ಸ್ಥಾನಗಳು ನಿಮಗೆ ಅನುಕೂಲಕರವಾಗಿದೆಯೇ? ಮಕರ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ:

ವ್ಯಾಪಾರ ಭವಿಷ್ಯ
ಮಕರ ರಾಶಿಯವರಿಗೆ ಈ ವರ್ಷ ಮಿಶ್ರ ಫಲಿತಾಂಶ. ಈ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ವ್ಯವಹಾರದಲ್ಲಿ ಬಯಸಿದಷ್ಟು ಲಾಭ ಗಳಿಸಲು ಕಷ್ಟವಾಗುವುದು. ನೀವು ನಿಮ್ಮ ವ್ಯವಹಾರದ ಪ್ರಗತಿಗೆ ಹೆಚ್ಚಿನ ಪ್ರಯತ್ನ ಹಾಕಬೇಕು. ಯಾವುದೇ ಹೊಸ ವ್ಯಾಪಾರ ವ್ಯವಹಾರ ಮಾಡದಂತೆ ಸಲಹೆ ನೀಡಲಾಗುವುದು.
ಮೇ.1ರ ನಂತರ ವ್ಯಾಪಾರದಲ್ಲಿ ಅನುಕೂಲಕರ ಬದಲಾವಣೆಗಳು ಕಂಡು ಬರುವುದು. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸ್ವಲ್ಪ ಉತ್ತಮವಾಗಲಿದೆ. ಈ ವರ್ಷ ಅರ್ಧ ಆಗುತ್ತಿದ್ದಂತೆ ಹೊಸ ಸ್ಥಳಗಳಲ್ಲಿ ವ್ಯವಹಾರ ಮಾಡುವ ಸಾಧ್ಯತೆ ಇದೆ.
ಉದ್ಯೋಗ ಭವಿಷ್ಯ
ಮಕರ ರಾಶಿಯ ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದಲ್ಲಿ ಕೆಲ ಸಮಸ್ಯೆ ಕಂಡು ಬಂದರೂ ಅದು ತಾತ್ಕಾಲಿಕವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಚಿಂತೆಯ ಅಗತ್ಯವಿಲ್ಲ. ನೀವು ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಈ ವರ್ಷ ಉತ್ತಮ ಅವಕಾಶ ಸಿಗಲಿದೆ. ಮೇ 1 ರಿಂದ ಗುರುಗ್ರಹದ ಸಂಚಾರವು ಅನುಕೂಲಕರವಾಗುವುದರಿಂದ ವೃತ್ತಿಯಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವೃತ್ತಿ ಜೀವನದಲ್ಲಿ ಪರಗತಿ ಸಿಗಲಿದೆ.
ಆರ್ಥಿಕ ಭವಿಷ್ಯ
ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ . ಪ್ರಾರಂಭದಲ್ಲಿ ಸರಾಸರಿ ಇರುತ್ತದೆ, ನಂತರ ಪ್ರಗತಿ ಕಂಡು ಬರಲಿದೆ. ಈ ವರ್ಷ ನೀವು ಖರ್ಚು ಕಡಿಮೆ ಮಾಡಿದರೆ ಒಳ್ಳೆಯದು. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವುದು ಒಳ್ಳೆಯದು..ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುತ್ತವೆ. ಉದ್ಯೋಗ ಮತ್ತು ವ್ಯವಹಾರದಿಂದ ಆದಾಯ ಹೆಚ್ಚಾಗುವುದು. ಆಸ್ತಿ, ವಾಹನ ಖರೀದಿಸಲು ಈ ಅವಧಿ ಅನುಕೂಲಕರವಾಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ.
ಕುಟುಂಬ ಜೀವನ
ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರಲ್ಲ, ಮನೆಯಲ್ಲಿನ ಕೆಲ ಸಮಸ್ಯೆ ಮಾನಸಿಕ ನೆಮ್ಮದಿ ಹಾಳು ಮಾಡುವುದು. ಆದರೆ ಗುರು ಸಂಚಾರದ ಬಳಿಕ ನಿಮ್ಮ ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ತಂದೆಯ ಆರೋಗ್ಯದ ಕಡೆಗೆ ಗಮನಹರಿಸಿ. ಆದರೆ ಗುರುವಿನ ಸ್ಥಾನ ನಿಮ್ಮ ಸಮಸ್ಯೆ ಬಗೆಹರಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಜೀವನ
ಆರೋಗ್ಯದಲ್ಲಿ ಮಿಶ್ರಫಲ. ನೀವು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ರಾಹುವಿನ ಸ್ಥಾನ ನಿಮ್ಮ ಆರೋಗ್ಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಅನಾರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ವಿದ್ಯಾರ್ಥಿಗಳ ಭವಿಷ್ಯ
ಮಕರ ರಾಶಿಯ ವಿದ್ಯಾರ್ಥಿಗಳುಮೊದಲ ನಾಲ್ಕು ತಿಂಗಳು ತುಂಬಾನೇ ಜಾಗ್ರತೆವಹಿಸಬೇಕು, ನಂತರ ನಿಮ್ಮ ಏಕಾಗ್ರತೆ ಹೆಚ್ಚಾಗಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಬಯಸುವವರಿಗೂ ಈ ಅವಧಿಯು ಅನುಕೂಲಕರವಾಗಿದೆ .
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











