Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ಕನ್ಯಾ ರಾಶಿಯವರ ರಾಶಿಫಲ ಹೇಗಿದೆ?
2024 ರಲ್ಲಿ ಶನಿಯು ಕನ್ಯಾ ರಾಶಿಯವರಲ್ಲಿ6 ನೇ ಮನೆಯಲ್ಲಿ, ರಾಹು 7 ನೇ ಮನೆಯಲ್ಲಿ, ಕೇತು ಲಗ್ನ ಮನೆಯಲ್ಲಿದೆ. . ಮೇ 1 ರವರೆಗೆ, ಗುರುವು 8 ನೇ ಮನೆಯಲ್ಲಿರುತ್ತದೆ, ನಂತರ 9ನೇ ಮನೆ ಸಂಚರಿಸಲಿದೆ.
ಈ ಗ್ರಹಗಳ ಸ್ಥಾನವು ಕನ್ಯಾ ರಾಶಿಯವರ ಮೇಲೆ ಪ್ರಭಾವ ಬೀರಲಿದೆ, ಈ ಯುಗಾದಿ ಬಳಿಕ ನಿಮ್ಮ ಆರ್ಥಿಕ, ವೃತ್ತಿ ಬದುಕು ಹೇಗಿರಲಿದೆ ಎಂದು ನೋಡೋಣ ಬನ್ನಿ:

ವ್ಯಾಪಾರ ಭವಿಷ್ಯ
ಕನ್ಯಾರಾಶಿ ಉದ್ಯಮಿಗಳಿಗೆ ಈ ವರ್ಷ ಮಿಶ್ರ ಫಲಿತಾಂಶ. ವರ್ಷವಿಡೀ 7ನೇ ಮನೆಯಲ್ಲಿ ರಾಹು ಇರುವಾಗ ವ್ಯಾಪಾರದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಹಣದ ಖರ್ಚು ಹೆಚ್ಚಾಗಲಿದೆ. ಗುರುವಿನ ಅನುಕೂಲಕರವಾದ ಸಾಗಣೆಯು ವ್ಯಾಪಾರದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶನಿಯು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ದೊಡ್ಡ ಸಮಸ್ಯೆಯಾಗಲ್ಲ.
ವೃತ್ತಿ ಭವಿಷ್ಯ
2024 ವರ್ಷವು ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ . ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕಾರ್ಯಗಳಲ್ಲಿ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು, ಶನಿಯ ಅನುಕೂಲಕರ ಸಾಗಣೆಯು ಉದ್ಯೋಗ ಭದ್ರತೆ ನೀಡುತ್ತದೆ. ಮೇ 1 ರಿಂದ, 9 ನೇ ಮನೆಯಲ್ಲಿ ಗುರುವಿನ ಅನುಕೂಲಕರ ಸಾಗಣೆಯೊಂದಿಗೆ, ವೃತ್ತಿಪರ ಸಮಸ್ಯೆಗಳನ್ನು ಪರಿಹಾರವಾಗುವುದು. ನಿಮಗೆ ಬಡ್ತಿ ದೊರೆಯಲಿದೆ. ಆರ್ಥಿಕವಾಗಿ, ಈ ಅವಧಿಯು ಪ್ರಯೋಜನಕಾರಿಯಾಗಿದೆ.
ಆರ್ಥಿಕ ಭವಿಷ್ಯ
ಯುಗಾದಿ ಬಳಿಕ ಮೊದಲ ನಾಲ್ಕು ತಿಂಗಳು ಸರಾಸರಿಯಾಗಿರುತ್ತದೆ. ಉಳಿದ ಎಂಟು ತಿಂಗಳುಗಳು ಹೆಚ್ಚು ಅನುಕೂಲಕರವಾಗಿರುತ್ತದೆ . ಈ ಅವಧಿಯು ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸುತ್ತೀರಿ. ಮೇ 1 ರಿಂದ, ಗುರುಗ್ರಹದ ಸಂಚಾರವು ಅನುಕೂಲಕರವಾಗುವುದರಿಂದ , ನಿಮ್ಮ ಹಣಕಾಸಿನ ಪರಿಸ್ಥಿತಿಯು ಸುಧಾರಿಸಲು ಪ್ರಾರಂಭಿಸುತ್ತದೆ. ನೀವು ಆರ್ಥಿಕ ಬೆಳವಣಿಗೆಯನ್ನು ಕಾಣಬಹುದು. ನಿಮ್ಮ ವೃತ್ತಿ ಮತ್ತು ವ್ಯಾಪಾರ ಎರಡರಲ್ಲೂ ಉತ್ತಮ ಲಾಭ ಗಳಿಸುತ್ತೀರಿ.
ಕುಟುಂಬ ಭವಿಷ್ಯ
ಈ ವರ್ಷ ಕೌಟುಂಬಿಕ ವಿಷಯಗಳಲ್ಲಿ ಮಿಶ್ರ ಫಲಿತಾಂಶ. ಮೊದಲ ನಾಲ್ಕು ತಿಂಗಳುಗಳು ರಾಹು ಮತ್ತು ಗುರುಗ್ರಹದ ಅನುಕೂಲಕರವಲ್ಲದ ಸ್ಥಾನದಿಂದಾಗಿ ಕೆಲವು ಸಮಸ್ಯೆ ಎದುರಿಸಬಹುದು .ಮೂರನೇಯ ವ್ಯಕ್ತಿಗಳ ಹಸ್ತಕ್ಷೇಪ ಅನಗತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಯ ಹೆಚ್ಚಾಗುವುದು. ಸಂಗಾತಿ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದನಿಸುವುದು. 1ನೇ ಮನೆಯಲ್ಲಿ ಕೇತುವಿನ ಸಂಚಾರವು ಅನಗತ್ಯ ಭಯ ಮತ್ತು ಅನುಮಾನಗಳನ್ನು ಉಂಟುಮಾಡಬಹುದು. ಆದರೆ ಅನಗತ್ಯ ಚಿಂತೆ ಅಗತ್ಯವಿಲ್ಲ .
ಕನ್ಯಾ ರಾಶಿಯವರ ಆರೋಗ್ಯ ಭವಿಷ್ಯ
ಮೊದಲ ನಾಲ್ಕು ತಿಂಗಳು ಸ್ವಲ್ಪ ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ಯಕೃತ್ತು, ಬೆನ್ನುಮೂಳೆ ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ, ಮಾನಸಿಕ ಒತ್ತಡ ಅಧಿಕವಿರಬಹುದು, ನಾಲ್ಕು ತಿಂಗಳ ನಂತರ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಶನಿಯ ಸಂಚಾರವು ನಿಮ್ಮ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಕನ್ಯಾ ರಾಶಿಯ ವಿದ್ಯಾರ್ಥಿಗಳ ಭವಿಷ್ಯ
ಈ ವರ್ಷವು ಸಾಮಾನ್ಯವಾಗಿ ಅನುಕೂಲಕರವಾಗಿರುತ್ತದೆ . ವರ್ಷದ ಆರಂಭದಲ್ಲಿ ಶಿಕ್ಷಣದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಅವುಗಳನ್ನು ಯಶಸ್ವಿಯಾಗಿ ಜಯಿಸಲು ಸಾಧ್ಯವಾಗುವದು. ಮೇ 1 ರವರೆಗೆ, 8 ನೇ ಮನೆಯಲ್ಲಿ ಗುರುವಿನ ಸಂಚಾರವು ಅಧ್ಯಯನದ ಬಗ್ಗೆ ಕೊರತೆಯ ಮನೋಭಾವವನ್ನು ಉಂಟುಮಾಡಬಹುದು. ನಂತರದ ಅವದಿ ನಿಮಗೆ ಅನುಕೂಲಕರವಾಗಿದೆ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸಿದರೆ ಅವಕಾಶ ದೊರೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









