ಮೇ 2024 ಪ್ರೀತಿ ಭವಿಷ್ಯ: ಈ ಮಾಸ ನಿಮ್ಮ ರೊಮ್ಯಾಂಟಿಕ್ ಜೀವನ ಹೇಗಿರಲಿದೆ?

ಜ್ಯೋತಿಷ್ಯ ಶಾಸ್ತ್ರವು ಗ್ರಹಗಳು ನಿಮ್ಮ ರಾಶಿಯ ಮೇಲೆ ಪ್ರಭಾವದ ಮೇಲೆ ಭವಿಷ್ಯ ಹೇಳುತ್ತದೆ, ಮೇ ತಿಂಗಳ ಪ್ರೀತಿ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಈ ತಿಂಗಳು ಪ್ರೇಮಿಗಳ ಪ್ರೀತಿ ಜೀವನ, ವಿವಾಹಿತರ ವೈವಾಹಿಕ ಜೀವನ, ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ತಿಂಗಳು ಶುಭ ಸೂಚನೆ ಇದೆಯೇ ಎಂಬುವುದರ ಬಗ್ಗೆ ಭವಿಷ್ಯ ನೀಡಲಾಗಿದೆ ನೋಡಿ:

May month love horoscope

ಮೇಷ ರಾಶಿ

ಈ ತಿಂಗಲು ನಿಮಗೆ ಕೆಲವು ಸಮಸ್ಯೆಗಳಿರಬಹುದು, ಆದರೆ ಪ್ರೀತಿ ಹಾಗೂ ನಿಯತ್ತು ಸಂಬಂಧದಲ್ಲಿನ ಸಮಸ್ಯೆ ಹೊರ ಹಾಕಲು ಸಹಾಯ ಮಾಡುತ್ತದೆ. ನೀವಿಬ್ಬರು ಜೊತೆಯಾಗಿ ಸಮಸ್ಯೆಗಳನ್ನುಎದುರಿಸಲು ಪ್ರಯತ್ನಿಸುತ್ತೀರಿ. ನೀವು ರಿಲೇಷನ್‌ಶಿಪ್‌ನಲ್ಲಿದ್ದರೆ ತಾಳ್ಮೆ ತುಂಬಾನೇ ಮುಖ್ಯ, ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಇನ್ನು ಅವಾಹಿತರು ಸಂಗಾತಿಯ ಹುಡುಕಾಟ ನಡೆಸಬಹುದು.

ವೃಷಭ ರಾಶಿ

ಮನೆಯ ವಾತಾವರಣ ಅಷ್ಟೊಂದು ಚೆನ್ನಾಗಿರಲ್ಲ. ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲ ಭಿನ್ನಾಭಿಪ್ರಾಯ ಸಾಧ್ಯತೆ ಇದೆ, ಇನ್ನು ಪ್ರೀತಿಯಲ್ಲಿ ಇರುವವರಿಗೆ ಪೊಸೆಸಿವ್‌ ಸಮಸ್ಯೆ ಕಾಡಬಹುದು, ಸಂಗಾತಿ ಈ ಸ್ವಭಾವ ರಿಲೇಷನ್‌ಶಿಪ್‌ನಲ್ಲಿ ಅನೇಕ ಸಮಸ್ಯೆಗಳನ್ನು ತರಬಹುದು, ಇನ್ನು ಯಾವುದೇ ಪ್ರೀತಿಯಲ್ಲಿ ಇಲ್ಲದವರು ಸೂಕ್ತ ಸಂಗಾತಿಗಾಗಿ ಇನ್ನೂ ಸ್ವಲ್ಪ ಕಾಯುವುದು ಒಳ್ಳೆಯದು.

ಮಿಥುನ ರಾಶಿ

ಈ ತಿಂಗಳು ವಿವಾಹಿತರಿಗೆ, ಪ್ರೇಮಿಗಳಿಗೆ ಅನುಕೂಲಕರವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ನೀವಿಬ್ಬರು ಜೊತೆಯಾಗಿ ಮುಂದಿನ ಭವಿಷ್ಯದ ಬಗ್ಗೆ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಆದರೆ ಸಂಗಾತಿಗೆ ನಿಮ್ಮ ಮಾತಿನಿಂದ ನೋವಾಗದಂತೆ ನಡೆದುಕೊಳ್ಳಿ.

ಕರ್ಕ ರಾಶಿ

ವಿವಾಹ ಸಂಬಂಧ ನೋಡುತ್ತಿದ್ದರೆ ಈ ಸಮಯ ನಿಮಗೆ ಅನುಕೂಲಕರವಾಗಿರಲಿದೆ. ನಿಮಗೆ ಮದುವೆ ಸಂಬಂಧ ಕೂಡಿ ಬರಬಹುದು, ಇನ್ನು ರಿಲೇಷನ್‌ಶಿಪ್‌ನಲ್ಲಿ ಇರುವವರಿಗೆ ಈ ಅವಧಿ ತುಂಬಾ ಒಳ್ಳೆಯದಿದೆ, ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ಕುಟುಂಬದಲ್ಲಿ ತಂದೆಯೊಂದಿಗೆ ಭಿನ್ನಾಭಿಪ್ರಾಯವಾಗದಂತೆ ನೋಡಿಕೊಳ್ಳಿ.

ಸಿಂಹ ರಾಶಿ

ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ವಿವಾಹಿತರಿಗೆ ಈ ಅವಧಿ ಅನುಕೂಲಕರವಾಗಿದ್ದು ನಿಮ್ಮಿಬ್ಬರ ನಡುವೆ ಪ್ರೇಮ ಸಂಬಂಧ ಬಿಗಿಯಾಗಲಿದೆ. ಇನ್ನು ಒಂಟಿಯಾಗಿರುವವರೆಗೆ ಅನಿರೀಕ್ಷಿತ ಭೇಟಿ ಪ್ರೇಮಕ್ಕೆ ಬದಲಾಗಬಹುದು.

ಕನ್ಯಾ ರಾಶಿ

ನೀವು ಯಾವುದೇ ಪ್ರೀತಿ ಸಂಬಂಧದಲ್ಲಿ ಇಲ್ಲ ಎಂದಾದರೆ ಈ ತಿಂಗಳಿನಲ್ಲಿ ಜಾಗ್ರತೆವಹಿಸಿ, ಪ್ರೀತಿಯ ಹೆಸರಿನಲ್ಲಿ ಮೋಸ ಹೋಗಬೇಡಿ, ವಿವಾಹಿತರು ಹಾಗೂ ಪ್ರೇಮಿಗಳಿಗೆ ಈ ತಿಂಗಳು ಏರಳಿತಗಳಿರಲಿದೆ. ಕೆಲ ಭಿನ್ನಾಭಿಪ್ರಾಯ ಬರಬಹುದು, ಆದರೆ ನಂತರ ಎಲ್ಲಾ ಬಗೆಹರಿಸಿ ಮುಂದುವರೆಯಲು ಪ್ರಯತ್ನ ಪಡುತ್ತೀರಿ.

ತುಲಾ ರಾಶಿ

ಅವಾಹಿತರಿಗೆ ಜೋಡಿ ಸಿಗಲಿದೆ, ವಿವಾಹಿತರ ನಡುವೆ ಭಿನ್ನಾಭಿಪ್ರಾಯ ಎಲ್ಲವೂ ದೂರಾಗಲಿದೆ. ಏನೇ ಸಮಸ್ಯೆಯಿದ್ದರೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ

ಅವಾಹಿತರು ಮದುವೆಗೆ ಸಂಬಂಧ ನೋಡುತ್ತಿದ್ದರೆ ಉತ್ತಮ ಜೋಡಿ ಸಿಗಲಿದೆ. ನೀವಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಪ್ರೇಮಿಗಳು ವಿವಾಹದ ನಿರ್ಧಾರ ತೆಗೆದುಕೊಳ್ಳಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ.

ಧನು ರಾಶಿ
ವಿವಾಹಿತರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಕೆಲವೊಂದು ಹಳೆಯ ವಿಷಯಗಳೇ ನಿಮ್ಮ ನಡುವಿನ ಸಮಸ್ಯೆ ಹೆಚ್ಚಾಗಲಿದೆ. ನೀವು ಯಾವುದೋ ವಿಷಯ ಮನಸ್ಸಿನಲ್ಲಿಟ್ಟು ಜಗಳವಾಡಿ ಮನಸ್ಸು ಕೆಡಿಸಿಕೊಳ್ಳುವ ಬದಲಿಗೆ ಮನಸ್ಸು ಬಿಚ್ಚಿ ಮಾತನಾಡುವುದು ಒಳ್ಳೆಯದು.

ಮಕರ ರಾಶಿ

ಜೋಡಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಈ ಸಮಯ ಉತ್ತಮವಾಗಿದೆ, ಒಬ್ಬರಿಗೊಬ್ಬರು ಸಮಯ ಕೊಡಿ, ಇದರಿಂದ ಬಾಂಧವ್ಯ ಗಟ್ಟಿಯಾಗಲಿದೆ, ಇನ್ನು ಜೋಡಿಯ ಹುಡುಕಾಟ ಮಾಡುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ.

ಕುಂಭ ರಾಶಿ

ಅವಾಹಿತರಿಗೆ ಈ ತಿಂಗಳು ತುಂಬಾ ಚೆನ್ನಾಗಿದೆ, ನಿಮಗೆ ಸರಿಯಾದ ಜೋಡಿ ಸಿಗಬಹುದು. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ, ಚಿಕ್ಕ ಸಮಸ್ಯೆಗೆ ಕೋಪಗೊಂಡು ಸಮಸ್ಯೆ ಹೆಚ್ಚಿಸಿಕೊಳ್ಳಬೇಡಿ. ನಿಮ್ಮ ಸಂಗಾತಿಯಿಂದ ಸರ್‌ಫ್ರೈಸ್‌ ಸಿಗಲಿದೆ.

ಮೀನ ರಾಶಿ

ಈ ಸಮಯದಲ್ಲಿ ನಿಮ್ಮಿಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು, ಅವರು ನಿಮ್ಮ ಬದುಕಿಗೆ ಬಂದಿರುವುದು ತುಂಬಾನೇ ಅರ್ಥಪೂರ್ಣ ಅನಿಸುವುದು. ಇನ್ನು ಪ್ರೀತಿ ಪ್ರಪೋಸ್ ಮಾಡಬೇಕು, ಮದುವೆಗೆ ಸಂಗಾತಿ ನೋಡಬೇಕೆನ್ನುವವರಿಗೂ ಈ ಸಮಯ ಅನುಕೂಲಕರವಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024 May Month Love Horoscope Of 12 Zodiac Signs In Kannada

Here are May month love horoscope to each zodiac signs, how will be your romantic life In this time
Story first published: Tuesday, April 30, 2024, 13:31 [IST]
X
Desktop Bottom Promotion