Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈ ಮಾಸದ ಭವಿಷ್ಯ ಪ್ರಕಾರ ಈ 3 ರಾಶಿಯವರು ಜಾಗ್ರತೆವಹಿಸಬೇಕು
ಜುಲೈ ಮಾಸ ಭವಿಷ್ಯದ ಪ್ರಕಾರ ಈ ಮಾಸದಲ್ಲಿ ಈ ರಾಶಿಗಳು ಸ್ವಲ್ಪ ಜಾಗ್ರತೆವಹಿಸಿ......
ಕನ್ಯಾ ರಾಶಿ
ಈ ಅವಧಿಯಲ್ಲಿ ನೀವು ನಿಮ್ಮ ಬಗ್ಗೆ ಹೆಚ್ಚು ಗಮನಹರಿಸಿದರೆ ಒಳ್ಳೆಯದು. ಬೇರೆಯವರನ್ನ ದೂಷಿಸುವ ಬದಲಿಗೆ ನಿಮ್ಮ ನ್ಯೂನತೆಯೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಉದ್ಯೋಗವನ್ನು ಹುಡುಕುತ್ತಿರುವ ಜನರು ಉತ್ತಮ ಉದ್ಯೋಗವನ್ನು ಪಡೆಯಬಹುದು. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು, ಹೂಡಿಕೆ ಬಗ್ಗೆ ಜಾಗ್ರತೆವಹಿಸಬೇಕು.

ಇನ್ನು ಹಣದ ಬಗ್ಗೆ ನೋಡುವುದಾದರೆ ಈ ಮಾಸ ಮಿಶ್ರಫಲ. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಮತ್ತು ಪ್ರಮುಖ ಕೆಲಸವನ್ನು ಮಾಡುವುದಾದರೆ ನೀವೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಡಿ, ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಆತಂಕ ಮತ್ತು ಒತ್ತಡದಿಂದ ದೂರವಿರಬೇಕು.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2,12,25,33,42
ಶುಭ ದಿನಗಳು: ಗುರುವಾರ, ಬುಧವಾರ, ಮಂಗಳವಾರ, ಭಾನುವಾರ
ಶುಭ ಬಣ್ಣಗಳು: ಕಿತ್ತಳೆ, ಪೀಚ್, ನೀಲಿ, ಕೆಂಪು
ವೃಶ್ಚಿಕ ರಾಶಿ
ನಿಮ್ಮ ಕೋಪದ ಸ್ವಭಾವವೇ ಸಮಸ್ಯೆಗಳನ್ನು ಹೆಚ್ಚಿಸಬಹುದು, ಆದ್ದರಿಂದ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಈ ಸಮಯದಲ್ಲಿ ಸಂಬಂಧದ ಕಡೆಗೆ ಗಮನಹರಿಸಿ, ಹೆಚ್ಚಿನ ಲಾಭಕ್ಕಾಗಿ ನೀವು ಯಾವುದೇ ಶಾರ್ಟ್‌ಕಟ್ ಮಾರ್ಗ ಹಿಡಿಯಬೇಡಿ, ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ಹೆಚ್ಚಾಗುವುದು. ಈ ಅವಧಿಯಲ್ಲಿ ನೀವು ಕೆಲಸದ ಕಡೆಗೆ ಹಚ್ಚಿನ ಗಮನಹರಿಸಬೇಕು, ಈ ಅವಧಿಯಲ್ಲಿ ಒತ್ತಡ ಹೆಚ್ಚಿರಲಿದೆ, ನೀವು ಕೆಲಸದ ಕಡೆಗೆ ಎಷ್ಟು ಗಮನ ಕೊಡುತ್ತೀರೋ ಅಷ್ಟು ಒಳ್ಳೆಯದು. ಆರ್ಥಿಕವಾಗಿ ನೋಡುವುದಾದರೆ ಈ ದಿನ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ಪ್ರೇಮಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ನೀವು ಅತಿಯಾದ ಕೋಪ ಮತ್ತು ಒತ್ತಡವನ್ನು ತಪ್ಪಿಸಬೇಕು ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಮಂಗಳ ಮತ್ತು ಪ್ಲುಟೊ
ಅದೃಷ್ಟದ ಸಂಖ್ಯೆಗಳು: 5, 19, 20, 31, 40, 56
ಶುಭ ದಿನಗಳು: ಗುರುವಾರ, ಸೋಮವಾರ, ಶನಿವಾರ, ಬುಧವಾರ
ಶುಭ ಬಣ್ಣಗಳು: ಮರೂನ್, ಕೆಂಪು, ಗುಲಾಬಿ, ಆಕಾಶ ನೀಲಿ
ಕುಂಭ ರಾಶಿ
ಈ ತಿಂಗಳು ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಅನಗ್ಯತ ಚಿಂತೆಗಳು ಮನಸ್ಸನ್ನು ಆವರಿಸುವುದು, ಈ ಸಮಯದಲ್ಲಿ ಆತ್ಮವಿಶ್ವಾಸ ಕಡಿಮೆಯಾಗಲಿದೆ. ಈ ಸಮಯದಲ್ಲಿ ನೀವು ಸರಿಯಾಗಿ ಯೋಚಿಸದೆ ಯಾವುದೇ ಹೆಜ್ಜೆ ಇಟ್ಟರೆ, ನಿಮ್ಮ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಹೊಂದಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ನಿಯಂತ್ರಿಸಬೇಕಾಗುತ್ತದೆ.
ಮನೆಯಲ್ಲಿ ಹಿರಿಯರ ಮಾತುಗಖನ್ನು ನಿರ್ಲಕ್ಷ್ಯ ಮಾಡಲು ಬಿಡಬೇಡಿ, ನಿಮ್ಮ ಪ್ರೀತಿಪಾತ್ರರನ್ನು ನೀವು ಗೌರವದಿಂದ ನಡೆಸಿಕೊಳ್ಳಬೇಕು, ಕೆಲಸದ ಕಡೆಗೆ ನೀವು ತುಂಬಾ ಗಮನಹರಿಸಬೇಕು. ಭಯ ಮತ್ತು ನಕಾರಾತ್ಮಕತೆಯು ನಿಮ್ಮ ಮೇಲೆ ಪ್ರಭಾವ ಬೀರಲು ಬಿಡದಿರಿ . ಈ ಅವಧಿಯಲ್ಲಿ ನೀವು ಜಾಗ್ರತೆವಹಿಸಿ.
ರಾಶಿಚಕ್ರದ ಅಂಶ: ಗಾಳಿ
ರಾಶಿ ಅಧಿಪತಿ: ಶನಿ
ಅದೃಷ್ಟ ಸಂಖ್ಯೆಗಳು: 4, 11, 26, 35, 44, 54
ಶುಭ ದಿನಗಳು: ಬುಧವಾರ, ಭಾನುವಾರ, ಗುರುವಾರ, ಮಂಗಳವಾರ
ಶುಭ ಬಣ್ಣಗಳು: ಕೆನೆ, ಕೆಂಪು, ಕೆಂಗಂದು, ಹಸಿರು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications