Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2024ರ ಭವಿಷ್ಯ: ಹೊಸ ವರ್ಷವೃಶ್ಚಿಕ ರಾಶಿಯವರ ವೃತ್ತಿ, ಆರ್ಥಿಕ, ಪ್ರೀತಿ, ಕುಟುಂಬ, ಆರೋಗ್ಯ ಬದುಕು ಹೇಗಿರಲಿದೆ?
ಹೊಸ ವರ್ಷ ವೃಶ್ಚಿಕ ರಾಶಿಯವರ ವೃತ್ತಿ ಜೀವನ, ಆರ್ಥಿಕ, ಕುಟುಂಬ, ಪ್ರೀತಿ, ಆರೋಗ್ಯ ಜೀವನ ಹೇಗಿರಲಿದೆ ಎಂದು ನೋಡೋಣ:
ವೃಶ್ಚಿಕ ರಾಶಿಯವರಿಗೆ ಹೊಸ ವರ್ಷ ನಿಮ್ಮ ಜೀವನದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸಬಹುದು. ನೀವು ಆರ್ಥಿಕವಾಗಿ ಪ್ರಗತಿ ಹೊಂದಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ವರ್ಷದ ಆರಂಭದಲ್ಲಿ ಖರ್ಚುಗಳು ಅಧಿಕವಾಗಲಿದ್ದು, ತಿಂಗಳುಗಳು ಕಳೆದಂತೆ ಕಡಿಮೆಯಾಗುತ್ತದೆ, ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ. ಹೊಸ ವರ್ಷವು ವಿದ್ಯಾರ್ಥಿಗಳಿಗೆ ಅನುಕೂಲಕರವಲ್ಲ, ಆದ್ದರಿಂದ ಅವರು ಕಠಿಣ ಪರಿಶ್ರಮದತ್ತ ಗಮನ ಹರಿಸಬೇಕು. ನೀವು ಕೆಲಸದಲ್ಲಿ ಹೆಚ್ಚು ನಿರತರಾಗಿರುತ್ತೀರಿ.

ನೀವು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗದಂತೆ ಜಾಗ್ರತೆವಹಿಸಬೇಕು. ಈ ವರ್ಷದ ಮೇ ತಿಂಗಳಿನಿಂದ, ನೀವು ಹೊಸ ವ್ಯಾಪಾರವನ್ನು ಪ್ರಾರಂಭಿಸಬಹುದು. ಮದುವೆಯಾಗಲು ಬಯಸುವ ಅವಾಹಿತರಿಗೆ ಈ ತಿಂಗಳು ಚೆನ್ನಾಗಿದೆ.
ವರ್ಷದ ಆರಂಭವು ತುಂಬಾ ಅನುಕೂಲಕರವಾಗಿರುತ್ತದೆ. , ಏಪ್ರಿಲ್ 23 ರಿಂದ ಜೂನ್ 1 ರ ನಡುವೆ ನಿಮ್ಮ ಐದನೇ ಮನೆಯಲ್ಲಿ ರಾಹುವಿನ ಮೇಲೆ ಮಂಗಳವು ಸಾಗಿದಾಗ, ಆ ಸಮಯವು ನಿಮಗೆ ಒಳ್ಳೆಯದಲ್ಲ. ಮಾರ್ಚ್ ತಿಂಗಳು ಮತ್ತು ನಂತರ ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳುಗಳು ಸಂಬಂಧದ ವಿಷಯದಲ್ಲಿ ಉತ್ತಮವಾಗಿದೆ.
ವೃಶ್ಚಿಕ ರಾಶಿಯವರ ವೃತ್ತಿ ಬದುಕು 2024
ವೃತ್ತಿಜೀವನದ ದೃಷ್ಟಿಯಿಂದ ನೋಡಿದರೆ ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ. ಕಾಲಕಾಲಕ್ಕೆ ಗ್ರಹಗಳ ಸ್ಥಾನವು ನಿಮ್ಮ ಕೆಲಸವನ್ನು ಬದಲಾಯಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ, ಅವಕಾಶವನ್ನು ಪರಿಗಣಿಸಿ ನೀವು ಬದಲಾಯಿಸಬಹುದು, ಆದರೆ ಶನಿ ಮಹಾರಾಜನು ವರ್ಷವಿಡೀ ನಾಲ್ಕನೇ ಮನೆಯಲ್ಲಿರುತ್ತಾನೆ ಮತ್ತು ನಿಮ್ಮ ಆರನೇ ಮನೆ ಮತ್ತು ಹತ್ತನೇ ಮನೆಯನ್ನು ನೋಡುತ್ತಾನೆ. ನಿಮ್ಮ ಕೆಲಸದಲ್ಲಿ ನೀವು ಸ್ಥಿರತೆಯನ್ನು ಅನುಭವಿಸುವಿರಿ.ಆಗಸ್ಟ್ ನಿಂದ ಅಕ್ಟೋಬರ್ ನಡುವೆ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ದರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇರುತ್ತದೆ.
2024 ವೃಶ್ಚಿಕ ರಾಶಿಯ ವಿದ್ಯಾರ್ಥಿಗಳಿಗೆ ಹೇಗಿರಲಿದೆ?
ಈ ವರ್ಷ ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ. ನಿಮ್ಮ ನೆನಪಿನ ಶಕ್ತಿಯೂ ಚುರುಕಾಗುತ್ತದೆ. ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ವರ್ಷದ ಮೊದಲಾರ್ಧವು ಸ್ವಲ್ಪ ದುರ್ಬಲವಾಗಿರುತ್ತದೆ. ಕಠಿಣ ಪರಿಶ್ರಮವನ್ನು ಮುಂದುವರಿಸುವ ಮೂಲಕ, ಮುಂಬರುವ ಅರ್ಧದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು. ಮೇ ಮತ್ತು ಅಕ್ಟೋಬರ್ ನಡುವೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತೀರಿ.
ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಕನಸು ಹೊಂದಿರುವವರು ಆಗಸ್ಟ್ ಮತ್ತು ನವೆಂಬರ್ ನಡುವೆ ಯಶಸ್ಸನ್ನು ಪಡೆಯಬಹುದು.
ವೃಶ್ಚಿಕ ರಾಶಿಯವರ ಆರ್ಥಿಕ ಭವಿಷ್ಯ
ಈ ವರ್ಷ ಆರ್ಥಿಕ ಸ್ಥಿರತೆಯನ್ನು ಕಾಣಬಹುದು. ಆದರೆ ವರ್ಷದ ಪ್ರಾರಂಭದಲ್ಲಿ ಕೆಲವು ಸವಾಲುಗಳಿವೆ. ಈ ಅವಧಿಯಲ್ಲಿ ಖರ್ಚು ಕಡಿಮೆ ಮಾಡಬೇಕು. ಕ್ರಮೇಣ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಾಧ್ಯವಾಗುವುದು. ಗುರುವು ಏಳನೇ ಮನೆಗೆ ಪ್ರವೇಶಿಸುತ್ತಾನೆ, ಗುರುವಿನ ಈ ಸ್ಥಾನ ಆರ್ಥಿಕವಾಗಿ ಒಳ್ಳೆಯದಿದೆ.
ಕುಟುಂಬ ಭವಿಷ್ಯ
ಕೌಟುಂಬಿಕ ಜೀವನ ಸರಾಸರಿ ಆಗಿರಲಿದೆ. ಕೆಲಸದಲ್ಲಿ ಹೆಚ್ಚು ಬ್ಯುಸಿಯಾಗುವುದರಿಂದ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುವುದಿಲ್ಲ.
ಆಗಸ್ಟ್ ತಿಂಗಳಿನಿಂದ, ನಿಮ್ಮ ಕುಟುಂಬ ಜೀವನವು ಚೆನ್ನಾಗಿರಲಿದೆ, ನೀವು ಕುಟುಂಬದೊಂದಿಗೆ ಸಂತೋಷವಾಗಿ ಇರಲು ಸಾದ್ಯವಾಗುವುದು.
ವೃಶ್ಚಿಕ ರಾಶಿಯ ಮಕ್ಕಳ ಭವಿಷ್ಯ
ರಾಹುವು ಐದನೇ ಮನೆಯ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿರುವುದರಿಂದ ಮಕ್ಕಳು ಅವರ ಇಷ್ಟದಂತೆ ವರ್ತಿಸಬಹುದು. ಅವರನ್ನು ಸರಿಯಾದ ದಿಕ್ಕಿನಲ್ಲಿ ತರಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಅವರು ಅಧ್ಯಯನದಲ್ಲಿ ಹೆಚ್ಚು ಗಮನ ನೀಡುವುದಿಲ್ಲ. ಅವರು ಅವರ ಇಷ್ಟದ ಕೆಲಸವನ್ನು ವೃತ್ತಿಯನ್ನಾಗಿ ಮಾಡಬಹುದು. ಅವರು ಯಾವುದೇ ರೀತಿಯ ಕೆಲಸವನ್ನು ಮಾಡಿದರೆ ಈ ವರ್ಷ ಅವರಿಗೆ ಜೀವನದಲ್ಲಿ ಉತ್ತಮ ಯಶಸ್ಸು, ಪ್ರಗತಿ ಕಾಣಬಹುದು.
ವೈವಾಹಿಕ ಜೀವನ 2024
ವಿವಾಹಿತರಿಗೆ ಈ ವರ್ಷ ಏರಿಳಿತಗಳಿಂದ ತುಂಬಿರುತ್ತದೆ. ವರ್ಷದ ಆರಂಭವು ಉತ್ತಮವಾಗಿರುತ್ತದೆ . ಆದರೆ ನೀವು ನಿಮ್ಮ ಕೆಲಸದಲ್ಲಿ ಹೆಚ್ಚು ನಿರತರಾಗುತ್ತೀರಿ. ಇದು ನಿಮ್ಮ ಸಂಗಾತಿಯ ಅಸಮಧಾನಕ್ಕೆ ಕಾರಣವಾಗಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.
2024 ವೃರ್ಶಚಿಕ ರಾಶಿಯ ವ್ಯಾಪಾರಿಗಳಿಗೆ ಹೇಗಿರಲಿದೆ?
ವ್ಯಾಪಾರದ ದೃಷ್ಟಿಯಿಂದ ವರ್ಷದ ಆರಂಭವು ಉತ್ತಮವಾಗಿರುತ್ತದೆ. ನಿಮ್ಮ ವ್ಯವಹಾರವನ್ನು ಮುನ್ನಡೆಸಲು ನೀವು ಸಂತೋಷದಿಂದ ಪ್ರಯತ್ನಗಳನ್ನು ಮಾಡುತ್ತೀರಿ. ನಿರ್ಮಾಣ ಕಾರ್ಯಗಳನ್ನು ಮಾಡುವವರು ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಮಾರ್ಚ್ ಮತ್ತು ಮೇ ನಡುವಿನ ಸಮಯವು ಸ್ವಲ್ಪ ಒತ್ತಡದಿಂದ ಕೂಡಿರಲಿದೆ. ಈ ಅವಧಿಯಲ್ಲಿಖರ್ಚುಗಳು ಅಧಿಕವಿರಲಿದೆ. ಮೇ ತಿಂಗಳಿನಿಂದ ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರವು ವಿಸ್ತರಿಸಬಹುದು .
ವೃಶ್ಚಿಕ ರಾಶಿಯ ಆಸ್ತಿ, ವಾಹನ ಭವಿಷ್ಯ 2024
ಆಸ್ತಿ ಮತ್ತು ವಾಹನ ಉದ್ದೇಶಗಳಿಗಾಗಿ ಈ ವರ್ಷವು ಉತ್ತಮವಾಗಿರುತ್ತದೆ. ಮನೆ ನಿರ್ಮಿಸಲು ಬಯಸುವವರಿಗೆ ಈ ವಾರ ಉತ್ತಮವಾಗಿದೆ. ನೀವು ಬ್ಯಾಂಕ್‌ನಿಂದ ಸಾಲ ಪಡೆದು ಆಸ್ತಿಯನ್ನು ಖರೀದಿಸಲು ಅಥವಾ ನಿಮ್ಮ ಸ್ವಂತ ಮನೆಯನ್ನು ಖರೀದಿಸಲು ಬಯಸಿದರೆ, ಜೂನ್ 1 ರಿಂದ ಜುಲೈ 12 ರ ನಡುವಿನ ಸಮಯವು ಅದಕ್ಕೆ ಸೂಕ್ತವಾಗಿರುತ್ತದೆ. ನೀವು ವಾಹನವನ್ನು ಖರೀದಿಸಲು ಬಯಸಿದರೆ, ಅದಕ್ಕೆ ಅತ್ಯಂತ ಸೂಕ್ತವಾದ ಸಮಯ ಮಾರ್ಚ್ 7 ರಿಂದ ಮಾರ್ಚ್ 31 ರ ನಡುವೆ ಇರುತ್ತದೆ. ಇದರ ನಂತರ, ನೀವು ಜುಲೈ 31 ರಿಂದ ಆಗಸ್ಟ್ 25 ರ ನಡುವೆ ಮತ್ತು ನಂತರ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 13 ರ ನಡುವೆ ಮತ್ತು ಡಿಸೆಂಬರ್ 28 ರ ನಂತರ ವಾಹನವನ್ನು ಖರೀದಿಸಲು ಅನುಕೂಲಕರವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











