Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2024ರ ಭವಿಷ್ಯ: ಹೊಸ ವರ್ಷ ಧನು ರಾಶಿಯವರ ವೃತ್ತಿ, ಆರ್ಥಿಕ, ಪ್ರೀತಿ, ಕುಟುಂಬ, ಆರೋಗ್ಯ ಬದುಕು ಹೇಗಿರಲಿದೆ?
ಹೊಸ ವರ್ಷ ಧನು ರಾಶಿಯವರ ವೃತ್ತಿ ಜೀವನ, ಆರ್ಥಿಕ, ಕುಟುಂಬ, ಪ್ರೀತಿ, ಆರೋಗ್ಯ ಜೀವನ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಜೀವನ 2024
ವೃತ್ತಿಯ ಬಗ್ಗೆ ನೋಡುವುದಾದರೆ ಈ ವರ್ಷ ನಿಮ್ಮ ಉದ್ಯೋಗದಲ್ಲಿ ಏರಿಳಿತಗಳಿರಲಿದೆ.ಈ ವರ್ಷ ಕೇತು ನಿಮ್ಮ 10ನೇ ಮನೆಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು. ನಿಮ್ಮ ಶ್ರಮಕ್ಕೆ ಫಲ ಸಿಗದೆ ಹೋದಾಗ ನಿಮಗೆ ತುಂಬಾ ನಿರಾಸೆ ಉಂಟಾಗುವುದು. ಏಪ್ರಿಲ್ ನಿಂದ ಆಗಸ್ಟ್ವರೆಗೆ ಕೆಲಸದಲ್ಲಿ ಜಾಗರೂಕರಾಗಿರಿ, ಹೊಸ ಕೆಲಸ ಸಿಗುವ ಮುನ್ನವೇ ಇರುವ ಕೆಲಸ ಬಿಡಬೇಡಿ.
ನೀವು ಏಪ್ರಿಲ್ ಮತ್ತು ಆಗಸ್ಟ್ ನಡುವೆ ಹೊಸ ಉದ್ಯೋಗವನ್ನು ಪಡೆಯಬಹುದು. ಉದ್ಯೋಗ ಬದಲಾವಣೆಯು ನಿಮಗೆ ಲಾಭದಾಯಕವಾಗಿರುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ಸೆಪ್ಟೆಂಬರ್ ತಿಂಗಳು ತುಂಬಾ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಇದ್ದಕ್ಕಿದ್ದಂತೆ ದೊಡ್ಡ ಸ್ಥಾನವನ್ನು ಪಡೆಯಬಹುದು. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ಕೆಲಸದಲ್ಲಿ ಸಾಧಾರಣವಾಗಿರಲಿದೆ.

ಆರ್ಥಿಕ ಜೀವನ 2024
ಹಣದ ವಿಷಯದಲ್ಲಿ ವರ್ಷದ ಮೊದಲಾರ್ಧವು ಹೆಚ್ಚು ಅನುಕೂಲಕರವಾಗಿರುತ್ತದೆ. ಉತ್ತರಾರ್ಧದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದೇವ ಗುರು ಗುರುವು ಐದನೇ ಮನೆಯಲ್ಲಿ ಇರುವುದರಿಂದ ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮೇ ತಿಂಗಳ ಆರಂಭದಲ್ಲಿ ಗುರುವು ನಿಮ್ಮ ಆರನೇ ಮನೆಗೆ ಬಂದಾಗ, ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ, ನಿಮ್ಮ ಆರ್ಥಿಕ ಸ್ಥಿತಿಗೆ ಉತ್ತಮವಾಗಿಲ್ಲ. ಈ ವರ್ಷ ನೀವು ನಿಮ್ಮ ಆದಾಯ ಮತ್ತು ನಿಮ್ಮ ಖರ್ಚುಗಳ ನಡುವೆ ಹಣಕಾಸಿನ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
2024 ವಿದ್ಯಾರ್ಥಿಗಳಿಗೆ ಹೇಗಿರಲಿದೆ?
ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಮೇ 1 ರವರೆಗೆ ದೇವ ಗುರು ಗುರು ನಿಮ್ಮ ಐದನೇ ಮನೆಯಲ್ಲಿರುತ್ತಾನೆ, ರಾಹು ನಿಮ್ಮ ನಾಲ್ಕನೇ ಮನೆಯ ಮೇಲೆ ಪ್ರಭಾವ ಬೀರುತ್ತಾನೆ. ಇದರಿಂದ ನಿಮ್ಮ ಬುದ್ಧಿಮತ್ತೆ ಚುರುಕಾಗುತ್ತದೆ. ನೀವು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಐದನೇ ಮನೆಯ ಮೇಲೆ ಶನಿದೇವನ ಅಂಶದಿಂದಾಗಿ, ಅಧ್ಯಯನದಲ್ಲಿ ಕೆಲವು ಅಡೆತಡೆಗಳು ಉಂಟಾಗುತ್ತವೆ ಆದರೆ ಕ್ರಮೇಣ ಎಲ್ಲವೂ ಚೆನ್ನಾಗಿರುತ್ತದೆ.
ಅದೇ ಸಮಯದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ವರ್ಷದ ಆರಂಭದಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ಜನವರಿ, ಮೇ ಮತ್ತು ಜೂನ್‌ನಲ್ಲಿ ಯಾವುದೇ ಪರೀಕ್ಷೆಯನ್ನು ನೀಡಿದರೆ ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉಳಿದ ತಿಂಗಳುಗಳಲ್ಲಿ, ನೀವು ಸಾಕಷ್ಟು ಪ್ರಯತ್ನದ ನಂತರವೇ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದು. ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಜೂನ್, ಜುಲೈ ಅದೃಷ್ಟದ ಸಮಯವಾಗಿದೆ.
ಕುಟುಂಬ ಭವಿಷ್ಯ 2024
ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ. ರಾಹು ವರ್ಷವಿಡೀ ನಿಮ್ಮ ನಾಲ್ಕನೇ ಮನೆಯಲ್ಲಿರುತ್ತಾನೆ ಮತ್ತು ಕೇತು ವರ್ಷವಿಡೀ ನಿಮ್ಮ ಹತ್ತನೇ ಮನೆಯಲ್ಲಿರುತ್ತಾನೆ, ಇದರಿಂದಾಗಿ ಕುಟುಂಬ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತವೆ.ಮನೆಯ ಖರ್ಚುಗಳು ಹೆಚ್ಚಾಗುವುದು. ಫೆಬ್ರವರಿ, ಮಾರ್ಚ್ ಹೆಚ್ಚು ಒತ್ತಡದಿಂದ ಕೂಡಿರಲಿದೆ. ತಾಯಿಯ ಆರೋಗ್ಯ ಸಮಸ್ಯೆ ನಿಮ್ಮ ಚಿಂತೆ ಹೆಚ್ಚಿಸಬಹುದು.
ಸಂತಾನ ಭವಿಷ್ಯ 2024
ಈ ವರ್ಷದ ಮೊದಲಾರ್ಧವು ಹೆಚ್ಚು ಅನುಕೂಲಕರವಾಗಿರುತ್ತದೆ. ದೇವ ಗುರು ಗುರುವು ಐದನೇ ಮನೆಯಲ್ಲಿರುತ್ತಾನೆ, ಮಕ್ಕಳಿಲ್ಲದ ದಂಪತಿ ಈ ಅವಧಿಯಲ್ಲಿ ಸಿಹಿ ಸುದ್ದಿ ಒಡೆಯಬಹುದು. ಈಗಾಗಲೇ ಮಕ್ಕಳನ್ನು ಹೊಂದಿರುವ ದಂಪತಿಗಳು ಮಕ್ಕಳ ಪ್ರಗತಿ ನೋಡಿ ಖುಷಿ ಪಡುತ್ತೀರಿ. ಅಕ್ಟೋಬರ್ ನಿಂದ ಡಿಸೆಂಬರ್ ಈ ಅವಧಿಯಲ್ಲಿ ನೀವು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ವಿವಾಹ ಭವಿಷ್ಯ 2024
ವಿವಾಹಿತರಿಗೆ ವರ್ಷದ ಆರಂಭವು ಅಷ್ಟು ಚೆನ್ನಾಗಿರಲ್ಲ. ದಂಪತಿ ನಡುವೆ ಹೊಂದಾಣಿಕೆ ಕೊರತೆ ಕಾಡಬಹುದು. ಮಾರ್ಚ್ ಮಧ್ಯದವರೆಗೆ ಸಮಯವು ಒತ್ತಡದಿಂದ ಕೂಡಿರುತ್ತದೆ .ಆರೋಗ್ಯ ಸಮಸ್ಯೆಗಳು ನಿಮ್ಮ ಜೀವನ ಸಂಗಾತಿಯನ್ನು ತೊಂದರೆಗೊಳಿಸಬಹುದು. ಜೂನ್ ನಿಂದ ಜುಲೈವರೆಗಿನ ಅವಧಿಯು ನಿಮಗೆ ಉತ್ತಮವಾಗಿರುತ್ತದೆ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ವರ್ಷದ ಕೊನೆಯ ದಿನಗಳಲ್ಲಿ, ನೀವು ನಿಮ್ಮ ವೈವಾಹಿಕ ಜೀವನವನ್ನು ಬಹಳ ಸಂತೋಷದಿಂದ ಕಳೆಯುತ್ತೀರಿ.
2024 ವ್ಯಾಪಾರಿಗಳಿಗೆ ಹೇಗಿರಲಿದೆ?
ವ್ಯಾಪಾರ ಮಾಡುವ ಧನು ರಾಶಿಯವರಿಗೆ ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಈ ವರ್ಷ ನಿಮಗೆ ಮೊದಲಿನಿಂದಲೂ ಉತ್ತಮ ಲಾಭವನ್ನು ನೀಡುತ್ತದೆ. ಈ ವರ್ಷದಲ್ಲಿ, ನೀವು ಏಪ್ರಿಲ್, ಆಗಸ್ಟ್ ಮತ್ತು ನವೆಂಬರ್ ನಿಂದ ಡಿಸೆಂಬರ್ ನಡುವೆ ವ್ಯವಹಾರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ನೀವು ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಕೆಲವು ಹೊಸ ಮಾರ್ಗಗಳನ್ನು ಆರಿಸಿಕೊಳ್ಳಬೇಕು. ವರ್ಷದ ಮಧ್ಯಭಾಗವು ನಿಮ್ಮ ವ್ಯವಹಾರಕ್ಕೆ ಉತ್ತಮವಾಗಿದೆ.
ವಾಹನ ಭವಿಷ್ಯ 2024
ವರ್ಷದ ಆರಂಭದಲ್ಲಿ ಯಾವುದೇ ಆಸ್ತಿ, ವಾಹನ ಖರೀದಿಸಬೇಎಇ. ಫೆಬ್ರವರಿ ಮತ್ತು ಏಪ್ರಿಲ್ ಅಂತ್ಯದ ನಡುವೆ, ನೀವು ದೊಡ್ಡ ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಫೆಬ್ರವರಿಯಿಂದ ಏಪ್ರಿಲ್ ವರೆಗಿನ ಸಮಯವು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ವಾಹನವನ್ನು ಖರೀದಿಸಲು ಆಸಕ್ತಿ ಹೊಂದಿದ್ದರೆ ಏಪ್ರಿಲ್ ತಿಂಗಳು ನಿಮಗೆ ಅತ್ಯಂತ ಸೂಕ್ತವಾಗಿರುತ್ತದೆ. ಏಪ್ರಿಲ್ ನಂತರ, ನೀವು ಮೇ ತಿಂಗಳಿನಲ್ಲಿ ವಾಹನವನ್ನು ಖರೀದಿಸುವಲ್ಲಿ ಯಶಸ್ವಿಯಾಗಬಹುದು. ಈ ಸಮಯದಲ್ಲಿ ಯಾವುದೋ ಕಾರಣದಿಂದ ವಾಹನವನ್ನು ಖರೀದಿಸಲು ಸಾಧ್ಯವಾಗದೇ ಇದ್ದರೆ ಆಗಸ್ಟ್‌ನಲ್ಲಿ ಪ್ರಯತ್ನಿಸಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications