2024ರ ಭವಿಷ್ಯ: ಹೊಸ ವರ್ಷ ಕುಂಭ ರಾಶಿಯವರ ವೃತ್ತಿ, ಆರ್ಥಿಕ, ಪ್ರೀತಿ, ಕುಟುಂಬ, ಆರೋಗ್ಯ ಬದುಕು ಹೇಗಿರಲಿದೆ?

ಹೊಸ ವರ್ಷ ಕುಂಭ ರಾಶಿಯವರ ವೃತ್ತಿ ಜೀವನ, ಆರ್ಥಿಕ, ಕುಟುಂಬ, ಪ್ರೀತಿ, ಆರೋಗ್ಯ ಜೀವನ ಹೇಗಿರಲಿದೆ ಎಂದು ನೋಡೋಣ:
ವೃತ್ತಿ ಭವಿಷ್ಯ2024
ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ. ಶನಿಯ ಸ್ಥಾನ ನಿಮ್ಮ ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ.

ಫೆಬ್ರವರಿ ಮತ್ತು ಮಾರ್ಚ್ ನಡುವೆ, ನಿಮ್ಮ ಕೆಲಸದ ವಿಷಯದಲ್ಲಿ ನೀವು ತುಂಬಾ ಬ್ಯುಸಿಯಾಗುತ್ತೀರಿ, ಈ ವರ್ಷ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಜನವರಿ ತಿಂಗಳಲ್ಲಿ ನೀವು ಗುರುತಿಸಿಕೊಳ್ಳುವಿರಿ. ಜುಲೈ-ಆಗಸ್ಟ್ ವರೆಗೆ ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ವರ್ಷ ಕೊನೆಯ ತಿಂಗಳು ಕೆಲಸದ ದೃಷ್ಟಿಯಿಂದ ಉತ್ತಮವಾಗಿದೆ.

2024 Horoscope

ಆರ್ಥಿಕ ಭವಿಷ್ಯ 2024
ಆರ್ಥಿಕವಾಗಿ, ಈ ವರ್ಷವು ಉತ್ತಮವಾಗಿರುತ್ತದೆ. ಈ ವರ್ಷ ನೀವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಮಾರ್ಚ್ ತಿಂಗಳಲ್ಲಿ ಹಣಕಾಸಿನಲ್ಲಿ ಏರಳಿತವಿರಲಿದೆ, ಖರ್ಚು ಹೆಚ್ಚಾಗಲಿದೆ, ಆದರೆ ಆದಾಯ ಚೆನ್ನಾಗಿ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮಿತಿಯಲ್ಲಿ ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರಲ್ಲ. ಆರ್ಥಿಕ ಸ್ಥಿರತೆ ಇರಲಿದೆ.

2024 ವಿದ್ಯಾರ್ಥಿಗಳಿಗೆ ಹೇಗಿರಲಿದೆ?
ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಸ್ವಲ್ಪ ದುರ್ಬಲವಾಗಿರುತ್ತದೆ. ನೀವು ನಿಮ್ಮ ಅಧ್ಯಯನದ ಮೇಲೆ ಎಷ್ಟೇ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿದರೂ ಸಹ ಓದಿನತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಫೆಬ್ರವರಿ, ಮಾರ್ಚ್‌ ತಿಂಗಳಿನಲ್ಲಿ ಅಧ್ಯಯನದ ಡೆ ಗಮನಹರಿಸಲು ಸಾಧ್ಯವಾಗುವುದು. ಏಪ್ರಿಲ್, ಆಗಸ್ಟ್ ಮತ್ತು ನವೆಂಬರ್ ತಿಂಗಳುಗಳು ನಿಮಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮಾರ್ಚ್ ಮತ್ತು ಆಗಸ್ಟ್ ನಡುವೆ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ನೀವು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸಿದರೆ ಈ ವರ್ಷ ನಿಮ್ಮ ಆಸೆ ಈಡೇರಲಿದೆ.

ಹೊಸ ವರ್ಷ ಪ್ರೇಮಿಗಳಿಗೆ ಹೇಗಿರಲಿದೆ?
ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ, ನಿಮ್ಮಿಬ್ಬರ ನಡುವೆ ಹೊಂದಾಣಿಕೆಯ ಸಮಸ್ಯೆ ಕಂಡು ಬರಬಹುದು. ನಿಮಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ತುಂಬಾ ಒಳ್ಳೆಯದು, ಇದರ ನಂತರ ನಿಮ್ಮ ನಡುವೆ ಪ್ರೀತಿ ಹೆಚ್ಚಾಗಲಿದೆ, ಮದುವೆಯಾಗುವುದರ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳಬಹುದು.

ಕುಟುಂಬ ಜೀವನ ಹೇಗಿರಲಿದೆ?
ವರ್ಷದ ಆರಂಭದಲ್ಲಿ ಕುಟುಂಬದಲ್ಲಿ ನೆಮ್ಮದಿ, ಖುಷಿ ಇರಲಿದೆ. ಈ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ನಿಮ್ಮ ತಂದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು, ಆದ್ದರಿಂದ ಅವರ ಆರೈಕೆ ಕಡೆ ಹೆಚ್ಚಿನ ಗಮನಹರಿಸಿ. ಮನೆಯವರ ಜೊತೆ ಅಹಂಕಾರದಿಂದ ವರ್ತಿಸಬೇಡಿ.

ಸಂತಾನ ಭವಿಷ್ಯ
ಮಕ್ಕಳ ಬಗ್ಗೆ ಹೇಳುವುದಾದರೆ ಮಿಶ್ರಫಲ. ವರ್ಷದ ಆರಂಭದಲ್ಲಿ ನಿಮ್ಮ ಮಕ್ಕಳು ಕೆಲವು ಸಮಸ್ಯೆಗಳು ಉಂಟಾಗಬಹುದು. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು, ಅವರ ಆರೋಗ್ಯದ ಕಡೆ ಗಮನಹರಿಸಿ. ಸಂತಾನ ಅಪೇಕ್ಷಿತ ದಂಪತಿಗಳಲ್ಲಿ ಕೆಲವರು ಇನ್ನೂ ಸ್ವಲ್ಪ ಕಾಯಬೇಕು, ವೈದ್ಯರನ್ನು ಭೇಟಿ ಮಾಡಿ.

ವೈವಾಹಿಕ ಜೀವನ 2024
ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತಗಳು ಕಂಡುಬರಲಿದೆ. ಫೆಬ್ರವರಿ 5 ಮತ್ತು ಏಪ್ರಿಲ್ 23 ರ ನಡುವೆ, ಮಂಗಳವು ನಿಮ್ಮ ಹನ್ನೆರಡನೇ ಮತ್ತು ಮೊದಲ ಮನೆಯ ಮೇಲೆಯಲ್ಲಿ ಸಾಗಲಿದೆ. ಈ ಮಂಗಳನ ಈ ಸ್ಥಾನ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು. ಜುಲೈ 12 ಮತ್ತು ಆಗಸ್ಟ್ 26 ರ ನಡುವೆ, ನಿಮ್ಮ ನಡುವೆ ಸಮಸ್ಯೆಗಳು ಮತ್ತೊಮ್ಮೆ ಹೆಚ್ಚಾಗಬಹುದು, ಆದರೆ ತಾಳ್ಮೆಯಿಂದ ವರ್ತಿಸಿ ಎಲ್ಲವೂ ಸರಿಯಾಗಲಿದೆ.

ವ್ಯಾಪಾರಿಗಳಿಗೆ ಹೇಗಿರಲಿದೆ?
ವ್ಯಾಪಾರಿಗಳಿಗೆ ಈ ವರ್ಷ ಶುಭವಾಗಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಬೆಳವಣಿಗೆಯ ಬಲವಾದ ಲಕ್ಷಣಗಳಿವೆ. ನಿಮ್ಮ ಯೋಜನೆಗಳನ್ನು ವಿಸ್ತರಿಸಲು ನಿಮಗೆ ಉತ್ತಮ ಅವಕಾಶ ಸಿಗಲಿದೆ. ನಿಮ್ಮ ವ್ಯಾಪಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ನೀವು ಏಪ್ರಿಲ್ ಮತ್ತು ಜುಲೈ ನಡುವೆ ಮಾಡಬಹುದು. ಏಪ್ರಿಲ್ ತಿಂಗಳು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಅವಧಿಯು ಸ್ವಲ್ಪ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಿ .

ವಾಹನ ಖರೀದಿಸಲು ಸೂಕ್ತ ಸಮಯ
ವಾಹನ ಖರೀದಿಸಲು ಬಯಸಿದರೆ ವರ್ಷದ ಆರಂಭದಲ್ಲಿ ಯಾವುದೇ ವಾಹನ, ಆಸ್ತಿಯನ್ನು ಖರೀದಿಸಬಹುದು. ಶುಕ್ರ ಮತ್ತು ಬುಧದಂತಹ ಶುಭ ಗ್ರಹಗಳು ನಿಮ್ಮ ನಾಲ್ಕನೇ ಮನೆಯನ್ನು ನೋಡುತ್ತಿವೆ. ಜನವರಿ ತಿಂಗಳು ಎಲ್ಲ ರೀತಿಯಲ್ಲೂ ಸೂಕ್ತವಾಗಿರುತ್ತದೆ. ಫೆಬ್ರವರಿಯಿಂದ ಏಪ್ರಿಲ್ ಆರಂಭದವರೆಗಿನ ಸಮಯವು ಅನುಕೂಲಕರವಾಗಿಲ್ಲ.

ಈ ಅವಧಿಯಲ್ಲಿ, ಯಾವುದೇ ರೀತಿಯ ಆಸ್ತಿಯಲ್ಲಿ ನಿಮ್ಮ ಕೈಗಳನ್ನು ಹಾಕುವುದನ್ನು ತಪ್ಪಿಸಿ. ನೀವು ವಾಹನವನ್ನು ಖರೀದಿಸಲು ಬಯಸಿದರೆ, ಮೇ 19 ಮತ್ತು ಜೂನ್ 12 ರ ನಡುವೆ ಹೆಚ್ಚು ಸೂಕ್ತವಾಗಿದೆ. ಈ ಅವಧಿಯಲ್ಲಿ, ನೀವು ವಾಹನವನ್ನು ಖರೀದಿಸುವಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024 Horoscope: Aquarius Or Kumbha Zodiac Signs Job, Finance, Family,Love Horoscope In Kannada

2024 Horoscope: Here are Aquarius zodiac sign horoscope of job, finance, love, family horoscope, read on..
Story first published: Monday, December 11, 2023, 11:22 [IST]
X
Desktop Bottom Promotion