Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2024 ವರ್ಷದ ಮೊದಲ ಗ್ರಹ ಸಂಚಾರ: ಮಾರ್ಗಿಯಾದ ಬುಧ, 3 ರಾಶಿಯವರಿಗೆ ಅದೃಷ್ಟಕರ, 2 ರಾಶಿಯವರು ಜಾಗ್ರತೆ
ವರ್ಷದ ಮೊದಲ ಗ್ರಹ ಸಂಚಾರ ಜನವರಿ 2ರಂದು ಸಂಭವಿಸಿದೆ. ಬುಧನು ವೃಶ್ಚಿಕ ರಾಶಿಯಲ್ಲಿ ಮಾರ್ಗಿಯಾಗಿದ್ದಾರೆ. ಈ ಸಂಚಾರ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಿದ್ದು 3 ರಾಶಿಯವರಿಗೆ ಅದೃಷ್ಟಕರ, 2 ರಾಶಿಯವರು ಜಾಗ್ರತೆ, ಉಳಿದವರಿಗೆ ಸಾಧಾರಣವಾಗಿದೆ ನೋಡಿ:
ಈ ರಾಶಿಯವರಿಗೆ ಅದೃಷ್ಟ

ಸಿಂಹ ರಾಶಿ
ಬುಧನು ಐಷಾರಾಮಿ, ಸೌಕರ್ಯಗಳು, ತಾಯಿ, ಸಂತೋಷ ಇತ್ಯಾದಿಗಳ ಮನೆಯಾದ ನಾಲ್ಕನೇ ಮನೆಯಲ್ಲಿ ಮಾರ್ಗಿಯಾಗಿದೆ. ವ್ಯಾಪಾರದ ಅಂಶವು ನಾಲ್ಕನೇ ಮನೆಯಲ್ಲಿ ನೇರವಾಗುವುದರಿಂದ ಈ ಸಮಯವು ವ್ಯಾಪಾರ ಮಾಲೀಕರಿಗೆ ವಿಶೇಷವಾಗಿ ಫಲಪ್ರದವಾಗಿರುತ್ತದೆ. ಉತ್ತಮ ಲಾಭವನ್ನು ಗಳಿಸುವ ಸಾಧ್ಯವಾಗುವುದು. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬಹುದು, ಆರ್ಥಿಕ ಸಮೃದ್ಧಿಯನ್ನು ಪಡೆಯಬಹುದು. ಈ ಅವಧಿಯಲ್ಲಿ ಆರ್ಥಿಕ ಭದ್ರತೆ ಅನುಭವಿಸುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಬುಧ 10ನೇ ಮನೆಯಲ್ಲಿ ಮಾರ್ಗಿಯಾಗಿ ಸಂಚರಿಸಿದೆ. ಈ ಮನೆ ಪ್ರಯಾಣ, ಸಂವಹನ ಕೌಶಲ್ಯಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಕನ್ಯಾ ರಾಶಿಯವರೇ, ಬುಧ ಮೂರನೇ ಮನೆಯಲ್ಲಿ 'ನೇರ' ಆಗಿರುವುದು ಈ ಸಮಯದಲ್ಲಿ ನೀವು ಧನಾತ್ಮಕ ಫಲಿತಾಂಶ ಕಾಣಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ಸಾಕಷ್ಟು ಹಠಾತ್ ಬದಲಾವಣೆಗಳನ್ನು ಕಾಣಬಹುದು. ಇದ್ದಕ್ಕಿದ್ದಂತೆ ನೀವು ಬಡ್ತಿ ಅಥವಾ ಇತರ ಉದ್ಯೋಗ ಸಂಬಂಧಿತ ಪ್ರಯೋಜನಗಳನ್ನು ಪಡೆಯಬಹುದು. ನೀವು ಕೆಲವು ಉತ್ತಮ ಉದ್ಯೋಗಾವಕಾಶಗಳನ್ನು ಸಹ ಪಡೆಯಬಹುದು.ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ತುಂಬಾ ಚೆನ್ನಾಗಿದೆ. ಷೇರುಗಳಲ್ಲಿ ಹೂಡಿಕೆ ಮಾಡಿರುವವರು ಉತ್ತಮ ಆದಾಯಗಳಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಬುಧ 2ನೇ ಮನೆಯಲ್ಲಿ ಮಾರ್ಗಿಯಾಗಿ ಸಂಚರಿಸಿದೆ. ಕುಟುಂಬದ ವಾತಾವರಣ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ಹೆಚ್ಚುವರಿ ಆದಾಯ ಪಡೆಯುತ್ತೀರಿ. ಈ ಅವಧಿಯು ಆರ್ಥಿಕ ದೃಷ್ಟಿಯಿಂದ ಧನಾತ್ಮಕವಾಗಿರುತ್ತದೆ, ಆದಾಯವೂ ಹೆಚ್ಚಾಗುತ್ತದೆ. ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತೀರಿ. ಜನರು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ. ಆಸ್ತಿ ಖರೀದಿ, ಮಾರಾಟದಿಂದ ಲಾಭವಿದೆ.
ಈ ರಾಶಿಯವರು ಜಾಗ್ರತೆ
ಮೇಷ ರಾಶಿ
ಬುಧ ನಿಮ್ಮ ಎಂಟನೇ ಮನೆಯಾದ ವೃಶ್ಚಿಕ ರಾಶಿಯಲ್ಲಿ 'ನೇರ'ವಾಗಿ ಚಲಿಸುತ್ತಿದೆ. ಈ ಸಮಯದಲ್ಲಿಎಲ್ಲಾ ಹಣಕಾಸು ಸಂಬಂಧಿತ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತದೆ. ನೀವು ಕಾನೂನು ತೊಂದರೆಗಳು, ವಿವಾದಗಳು, ಮೊಕದ್ದಮೆಗಳು ಇತ್ಯಾದಿಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಬುಧವು ನಿಮ್ಮ ಎರಡನೇ ಮನೆ ಮಾತು ಮತ್ತು ಗಳಿಕೆಯನ್ನು ನೇರವಾಗಿ ನೋಡುವುದರಿಂದ ಹಣಕಾಸಿನ ತೊಂದರೆಗಳು ನಿಮ್ಮ ಕಳವಳಕ್ಕೆ ಕಾರಣವಾಗುವುದು.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಬುಧ ಆರನೇ ಮನೆಯಲ್ಲಿ 'ಮಾರ್ಗಿ'ಯಾಗಿ ಸಂಚಾರ ಪ್ರಾರಂಭಿಸಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಆರನೇ ಮನೆಯಲ್ಲಿ ವೃಶ್ಚಿಕ ರಾಶಿಯಲ್ಲಿ ಬುಧದ ಈ 'ನೇರ' ಸಂಚಾರ ಅನುಕೂಲಕರವಲ್ಲ. ಕಾನೂನು ವಿವಾದಗಳಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು.ಆರ್ಥಿಕವಾಗಿ ಸವಾಲುಗಳು ಎದುರಾಗಬಹುದು. ಎಲ್ಲಾ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications