ವಿರಾಟ್‌ಗೆ 2ನೇ ಮಗುವಾಗುತ್ತೆ ಅಂತ 2016ರಲ್ಲಿಯೇ ಭವಿಷ್ಯ ನುಡಿದಿತ್ತು, ವಿರಾಟ್‌ ಕುರಿತ 8 ಭವಿಷ್ಯಗಳಲ್ಲಿ ಕೊನೆಯ ಭವಿಷ್ಯ ತುಂಬ

ಜ್ಯೋತಿಷ್ಯ ಎಂಬುವುದು ಭವಿಷ್ಯದ ಬಗ್ಗೆ ಕೆಲವೊಂದು ಅಂಶಗಳನ್ನು ಹೇಳುತ್ತದೆ, ಗ್ರಹಗತಿಗಳ ಸ್ಥಾನ, ನಮ್ಮ ಕುಂಡಲಿಯಲ್ಲಿ ಗ್ರಹಗಳ ಸ್ಥಾನ, ಗ್ರಹಗಳ ಸಂಚಾರ, ನಕ್ಷತ್ರಗಳ ಸಂಚಾರ ಇವುಗಳ ಪ್ರಭಾವವನ್ನು ಲೆಕ್ಕಾಚಾರ ಮಾಡಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯ ಹೇಳಲಾಗುವುದು, ಅದರಂತೆ 2016ರಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ ಭವಿಷ್ಯ ವೈರಲ್ ಆಗುತ್ತಿದೆ.

prediction about virat kohli

ಅದರಲ್ಲಿ ಹೇಳಿರುವ ಬಹುತೇಕ ಅಂಶಗಳು ನಿಜವಾಗಿದ್ದು, ಕೆಲವೊಂದು ವಿಚಾರಗಳು ನಿಜವಾಗುವ ಲಕ್ಷಣಗಳು ಕಂಡು ಬಂದಿರುವುದರಿಂದ ಈ ಭವಿಷ್ಯ ವೈರಲ್ ಆಗಿದೆ. ಈ ಭವಿಷ್ಯ ಸ್ಟಾರ್‌ ಅಂಡ್‌ ಅಸ್ಟ್ರೋಲಜಿಯ ಸಾಮಾಜಿಕ ತಾಣದಲ್ಲಿ ಹೇಳಲಾಗಿದೆ, ಅದರಲ್ಲಿ ಹೇಳಿರುವ ವಿಚಾರಗಳೆಂದರೆ...

ಎರಡನೇ ಮಗುವಿನ ಆಗಮನದ ಬಗ್ಗೆ ಭವಿಷ್ಯ ಹೇಳಲಾಗಿತ್ತು

ವಿರುಷ್ಕಾ ದಂಪತಿಗೆ ಎರಡು ಮಕ್ಕಳಾಗಿದೆ, ಮೊದಲ ಮಗುವಿಗೆ ಗರ್ಭಿಣಿಯಾಗಿದ್ದ ಆ ವಿಚಾರ ಹೇಳಿಕೊಂಡಿದ್ದರು. ಆದರೆ ಯಾಕೋ ಗೊತ್ತಿಲ್ಲ ಎರಡನೇ ಮಗುವಿನ ಆಗಮನದ ಬಗ್ಗೆ ತುಂಬಾ ರಹಸ್ಯ ಕಾಯ್ದುಕೊಂಡಿದ್ದರು. ಅನುಷ್ಕಾ 2ನೇ ಬಾರಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರು ದಂಪತಿ ಈ ಬಗ್ಗೆ ಏನು ಹೇಳಿರಲಿಲ್ಲ. ಆದರೆ ಈಗ ಅವರಿಗೆ ಗಂಡು ಮಗು ಜನಿಸಿರುವ ವಿಷಯ ಬಹಿರಂಗ ಪಡಿಸಲಾಗಿದ್ದು ಮಗುವಿಗೆ ಅಕಾಯ್ ಕೊಹ್ಲಿ ಎಂದು ಹೆಸರಿಡಲಾಗಿದೆ. ಆದರೆ ಇದರ ಬಗ್ಗೆ ಭವಿಷ್ಯವನ್ನು 2016ರಲ್ಲಿಯೇ ಹೇಳಲಾಗಿತ್ತು. ಅನುಷ್ಕಾ ಜೊತೆ ಮದುವೆಯಿಂದ ಹಿಡಿದು ಕೊಹ್ಲಿ ಕುರಿತ 8 ಭವಿಷ್ಯ ಹೇಳಲಾಗಿತ್ತು, ಅದರಲ್ಲಿ ಕೊಹ್ಲಿ ಬಗ್ಗೆ ಹೇಳಿದ ಭವಿಷ್ಯದಲ್ಲಿ ಬೇಸರದ ಸಂಗತಿಯೆಂದರೆ 2028ರಲ್ಲಿ ಕೊಹ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಾರೆ ಎಂದು ಹೇಳಲಾಗಿದೆ.

ಕೊಹ್ಲಿ ಬಗ್ಗೆ ಹೇಳಿದ ಭವಿಷ್ಯ ಹೀಗಿತ್ತು ನೋಡಿ:

* ವಿರಾಟ್‌ 2026ರಲ್ಲಿ ಮತ್ತು 2017ರಲ್ಲಿ ತುಂಬಾನೇ ಪ್ರಸಿದ್ಧಿ ಪಡೆಯುತ್ತಾರೆ , ಕೊಹ್ಲಿಯ ಕ್ರಿಕೆಟ್‌ ಕೌಶಲ್ಯವನ್ನು ತುಂಬಾ ಮೆಚ್ಚಿಕೊಳ್ಳಲಾಗುವುದು, ಶನುಯ ಪ್ರಭಾವದಿಂದ 2016ಗಿಂತ 2017 ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಇದು ನಿಜವಾಗಿದೆ.

ಇನ್ನು ಕೊಹ್ಲಿಯ ವೈಯಕ್ತಿಕ ಬದುಕಿನ ಬಗ್ಗೆ ಹೇಳುತ್ತಾ 2017 ಕೊನೆಯಲ್ಲಿ ಅಥವಾ 2018 ಪ್ರಾರಂಭದಲ್ಲಿ ಕೊಹ್ಲಿಯ ಮದುವೆ ನಡೆಯಲಿದೆ ಎಂದು ಭವಿಷ್ಯ ನೀಡಲಾಗಿತ್ತು, ಈ ಭವಿಷ್ಯವೂ ನಿಜವಾಗಿದೆ. ಕೊಹ್ಲಿ ಮತ್ತು ಅನುಷ್ಕಾ 2017ರಲ್ಲಿ ಸಪ್ತಪದಿ ತುಳಿದರು.

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತುಂಬಾನೇ ಆದಾಯ ಗಳಿಸುತ್ತಾರೆ. ಕೊಹ್ಲಿಗೆ 2018-2020ರ ನಡುವೆ ಮಗುವಾಗಲಿದೆ, ಆ ಮಗು ತಂದೆಗೆ ಅದೃಷ್ಟ ತರಲಿದೆ ಎಂದು ಭವಿಷ್ಯ ನುಡಿದಿತ್ತು.

ವಿರಾಟ್‌ಗೆ 2020 ಸೆಪ್ಟೆಂಬರ್‌ನಿಂದ 2021ರ ಅವಧಿ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ , ಇದು ಕೂಡ ನಿಜವಾಯ್ತು, ಏಕೆಂದರೆ ಈ ಅವಧಿಯಲ್ಲಿ ಪಾಪ ಅನುಷ್ಕಾ ಕೂಡ ತುಂಬಾ ಟೀಕೆಗಳನ್ನು ಕೇಳಬೇಕಾಯ್ತು.
ಆದರೆ 2021-2025ರಲ್ಲಿ ವಿರಾಟ್‌ ಮತ್ತೆ ಆಟದಲ್ಲಿ ಸದ್ದು ಮಾಡುತ್ತಾರೆ. ವೃತ್ತಿ ಜೀವನದಲ್ಲಿ ತುಂಬಾ ಪ್ರಗತಿಯನ್ನು ಕಾಣುವಿರಿ.

ಅಲ್ಲದೆ 2021-2014ರ ನಡುವೆ ಮತ್ತೊಂದು ಮಗುವಾಗಲಿದೆ.
2025ರಿಂದ 2027ರ ಫೆಬ್ರವರಿ ನಡುವೆ ವೃತ್ತಿ ಬದುಕು ಅಷ್ಟೊಂದು ಅನುಕೂಲಕರವಾಗಿರಲ್ಲ, ಆದರೆ 2027 ಫೆಬ್ರವರಿ ನಂತರ ವಿರಾಟ್‌ ಮತ್ತೆ ಸದ್ದು ಮಾಡುತ್ತಾರೆ. 2028 ಮಾರ್ಚ್‌ಗೆ ಮೊದಲೇ ವೃತ್ತಿ ಬದುಕಿನಿಂದ ನಿವೃತ್ತಿಯಾಗುತ್ತಾರೆ.

ಇದರಲ್ಲಿ 2024ರವರೆಗೆ ಹೇಳಿದ ಅಷ್ಟೂ ಭವಿಷ್ಯ ನಿಜವಾಗಿದ್ದು 2028ರಲ್ಲಿ ವಿರಾಟ್‌ ನಿವೃತ್ತಿ ಭವಿಷ್ಯ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ.

Analysis of Virat Kohli's horoscope:

1. Virat will continue to achieve greater stardom in 2016 and 2017. His cricketing skills will continue to impress the planet.As Saturn transits out of Scorpio in Jan 2017 his success will be even greater in 2017 as compared to 2016.
2.Talks of Virats marriage will surface in Mar/Apr 2017 and he will tie the knot by the end of 2017 and early 2018. If I were to look at the crystal ball chances are very conducive for marriage in Dec 2017-Jan 2018.
3.Subsequent to marriage he will gain in income from endorsements and he will also be blessed with a child between Feb 2018 and Sep 2020. The child will bring immense luck and fortune to the father.
4. Virat will have a lean period between Sep 2020-Sep 2021
5. Virat will come back strongly between Sep 2021-2025 with huge success professionally and monetarily.
6.Additionally, Virat will have an opportunity for another child between 2021-2024.
7.Virat's career will partially flounder between Aug 2025-Feb 2027.
8. Virat's career will pick up in 2027 and he will retire on a very high note before Mar 2028)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2016 Astrologer's 'Prediction' About Virat Kohli's second Child And Retire Life, Fan Shocks

2016 Astrologer's 'Prediction' About Virat Kohli's second Child And Retire Life, in that till 2024 prediction become true
X
Desktop Bottom Promotion