Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
20 September Horoscope: ಸೆಪ್ಟೆಂಬರ್ 20ರ ಈ ದಿನ ಶನಿಯ ಆಶೀರ್ವಾದ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 20ರಂದು (20 September Horoscope) ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭಕರ ಆರಂಭ ಇರಲಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ವ್ಯಾಪಾರದಲ್ಲಿ ಲಾಭ ನೋಡುವ ದಿನ.
ವೃಷಭ ರಾಶಿ
ವೃಷಭ ರಾಶಿಯವರು ಇಂದು ಸಮಸ್ಯೆಗಳ ದಿನ. ನಿಮ್ಮ ದುಂದು ವೆಚ್ಚದ ಕಾರಣದಿಂದ ದಿನದ ಅಂತ್ಯದಲ್ಲಿ ಒತ್ತಡ ಬರಬಹುದು. ಹಾಗೆ ಹಣ ಹೊಂದಿಸಲು ನೀವು ಹೆಚ್ಚು ಚಿಂತೆ ಮಾಡಬೇಕಾಗುತ್ತದೆ. ಪ್ರಯಾಣ ಮಾಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಕೆಲಸದ ಪ್ರಯತ್ನಗಳಲ್ಲಿ ಸಫಲತೆ ಇರಲಿದೆ. ಅನೇಕರಿಗೆ ಇಂದು ಸವಾಲುಗಳು ಎದುರಾದರು ಅದನ್ನು ಬುದ್ದಿವಂತಿಕೆಯಿಂದ ನಿರ್ವಹಿಸುತ್ತೀರಿ. ಆರೋಗ್ಯದ ಕಡೆ ಗಮನವಿಡಿ.
ಕರ್ಕ ರಾಶಿ
ನಿಮಗಿಂದು ಮಿಶ್ರಫಲದ ದಿನ. ಬೆನ್ನು ನೋವಿನಂತಹ ದೀರ್ಘಕಾಲದ ಸಮಸ್ಯೆ ಹೊಂದಿರುವ ಮಂದಿಗೆ ಇಂದು ನೀವು ಅನುಭವಿಸುವ ದಿನ. ಹಣ ಖರ್ಚು ಮಾಡುವ ಮುನ್ನ ಮತ್ತೆ ಆಲೋಚಿಸುವುದು ಉತ್ತಮ. ಸಂಬಂಧಗಳಲ್ಲಿ ತಾಳ್ಮೆಯಿಂದಿರಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭಕರ ಹಾಗೂ ಧನಾತ್ಮಕ ವಿಚಾರಗಳಿವೆ. ಸವಾಲುಗಳ ಎದುರಿಸುವುದು ನಿಮಗೆ ನೆಮ್ಮದಿ ತರಲಿದೆ. ಅಪಾಯಕಾರಿ ಕೆಲಸ ಮಾಡುವ ಮಂದಿ ಎಚ್ಚರಿಕೆಯಿಂದ ಇರಬೇಕಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇದು ಬಹಳ ಉತ್ತಮ ದಿನ. ಕೆಲಸ ಸಂಬಂಧವಾಗಿ ನೀವು ಮಾಡುವ ಪ್ರಯಾಣಗಳು ಶುಭಫಲ ನೀಡಲಿವೆ. ಯಾರೊಂದಿಗೂ ಅನಗತ್ಯ ಚರ್ಚೆಗಳು, ಕಲಹಗಳಲ್ಲಿ ಭಾಗಿಯಾಗಬೇಡಿ. ಆರ್ಥಿಕ ಸ್ಥಿತಿಯಲ್ಲಿ ಯಥಾಸ್ಥಿತಿ ಇರಲಿದೆ.
ತುಲಾ ರಾಶಿ
ನಿಮಗಿಂದು ಅತ್ಯಂತ ಶುಭಕರ ದಿನವಾಗಲಿದೆ. ಅವಿವಾಹಿತರಲ್ಲಿ ಸಂತಸದ ದಿನ. ನಿರುದ್ಯೋಗಿಗಳು ಆಪ್ತರ ಸಹಕಾರರಿಂದ ಉತ್ತಮ ಲಾಭದಾಯಕ ಹುದ್ದೆ ಪಡೆಯಬಹುದು. ಆಪ್ತರಿಂದ ದೊಡ್ಡ ಸಹಾಯ ನಿಮಗಿದೆ. ಆಧ್ಯಾತ್ಮಿಕವಾಗಿ ನೀವಿಂದು ಸದೃಢರಾಗುವ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಇಂದು ಓಡಾಟಗಳಲ್ಲಿ ಕಳೆಯಬೇಕಾಗುತ್ತದೆ. ಗೃಹಿಣಿಯರು ಇಂದು ದೊಡ್ಡ ಸವಾಲುಗಳ ಎದುರಿಸುವರು. ಗೃಹಿಣಿಯರಲ್ಲಿ ಇಂದು ದುಂದು ವೆಚ್ಚ ಕಡಿಮೆ ಮಾಡುವುದು ಉತ್ತಮ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಧನು ರಾಶಿ
ಧನು ರಾಶಿಯ ಮಂದಿ ಇಂದು ಪ್ರಯಾಣ ಮಾಡಬಹುದು. ನಿಮಗೆ ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ಪ್ರಯತ್ನ ಬಿಡಬೇಡಿ. ದಿನದ ಅಂತ್ಯದಲ್ಲಿ ಪ್ರಯಾಣ, ಖರ್ಚು ಇರಲಿದೆ. ಅನೇಕ ರೀತಿಯ ಸಮಸ್ಯೆಗಳಿಗೆ ನೀವು ಪರಿಹಾರ ಪಡೆಯುವ ದಿನವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಹಣ ಖರ್ಚಾಗುವ ದಿನ. ಮನೆಗಾಗಿ ನೀವು ವಸ್ತುಗಳ ಖರೀದಿಸಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧ ಶುಭ ಸುದ್ದಿ ಇರಲಿದೆ. ಆರ್ಥಿಕ ವಿಚಾರದಲ್ಲಿ ನಿಮಗೆ ಶುಭ ದಿನ. ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಹಲವು ದಿನದಿಂದ ಸಿಲುಕಿದ್ದ ಹಣವೊಂದು ನಿಮ್ಮ ಕೈ ಸೇರಲಿದೆ. ಕೆಲಸದ ವಿಚಾರವಾಗಿ ಆಪ್ತರೊಬ್ಬರ ಭೇಟಿಯಾಗುವಿರಿ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಮಿಶ್ರ ಫಲ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಯಥಾಸ್ಥಿತಿ ಇರಲಿದೆ. ದಿನದ ಅಂತ್ಯದಲ್ಲಿ ನೆಮ್ಮದಿ ನೋಡಬಹುದು. ಖರ್ಚುಗಳ ಮೇಲೆ ಹಿಡಿತ ಇರಲಿ. ಯಾರೊಂದಿಗೂ ವ್ಯವಹಾರ ಸಂಬಂಧಿತ ಮಾಹಿತಿ ಹಂಚಿಕೊಳ್ಳಬೇಡಿ.



Click it and Unblock the Notifications




