Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮೇ ತಿಂಗಳಿನಲ್ಲಿ 2 ಬಾರಿ ಉಂಟಾಗಲಿದೆ ಬುಧಾದಿತ್ಯ ಯೋಗ: ಈ 4 ರಾಶಿಯವರಿಗೆ ಹೆಚ್ಚು ಮಂಗಳಕರ
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗ ಮಂಗಳಕರ ಯೋಗವೆಂದು ಕರೆಯಲಾಗುವುದು. ಏಕೆಂದರೆ ಈ ಎರಡೂ ಗ್ರಹದ ಪ್ರಭಾವದಿಂದಾಗಿ ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯಬಹುದು. ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಬಂದಾಗ ಬುಧಾದಿತ್ಯ ಯೋಗ ಉಂಟಾಗುವುದು.
ಈ ಮೇ ತಿಂಗಳಿನಲ್ಲಿ ಎರಡು ಬಾರಿ ಬುಧಾದಿತ್ಯ ಯೋಗ ಉಂಟಾಗುವುದರಿಂದ ಮತ್ತಷ್ಟು ವಿಶೇಷವಾಗಿದೆ. ಇದೀಗ ಸೂರ್ಯ ಮೇಷ ರಾಶಿಯಲ್ಲಿ ಇದೆ, ಮೇ 14ಕ್ಕೆ ವೃಷಭ ರಾಶಿಗೆ ಸಂಚರಿಸಲಿದೆ, ಮೇ 10ಕ್ಕೆ ಬುಧ ಕೂಡ ಮೇಷ ರಾಶಿಯನ್ನು ಪ್ರವೇಶಿಸಿದೆ. ಇದರಿಂದಾಗಿ ಬುಧಾದಿತ್ಯ ಯೋಗ ಉಂಟಾಗಿದೆ.

ಇನ್ನು ಮೇ 14ಕ್ಕೆ ಸೂರ್ಯ ವೃಷಭ ರಾಶಿಗೆ ಸಂಚರಿಸಲಿದೆ, ಮೇ 31ಕ್ಕೆ ಬುಧನು ವೃಷಭ ರಾಶಿಗೆ ಸಂಚರಿಸಲಿದೆ, ಆಗಲೂ ಬುಧಾದಿತ್ಯ ಯೋಗ ಉಂಟಾಗುವುದು. ಈ ಯೋಗದಿಂದಾಗಿ ಈ ರಾಶಿಗಳಿಗೆ ತುಂಬಾನೇ ಅನುಕೂಲಕರ ಪ್ರಯೋಜನ ಪಡೆಯಬಹುದು:
ಮೇಷ ರಾಶಿ
ಈ ಬುಧಾದಿತ್ಯ ಯೋಗ ಮೊದಲು ಮೇಷ ರಾಶಿಯ ಲಗ್ನ ಮನೆಯಲ್ಲಿ ನಡೆಯುತ್ತಿದೆ, ನಂತರ ನಿಮ್ಮ 12ನೇ ಮನೆಯಲ್ಲಿ ನಡೆಯಲಿದೆ. ಇದರಿಂದಾಗಿ ತುಂಬಾನೇ ಪ್ರಯೋಜನ ಪಡೆಯಬಹುದು. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಪಡೆಯುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬ ಜೀವನ ಕೂಡ ಉತ್ತಮವಾಗಿರಲಿದೆ.
ವೃಷಭ ರಾಶಿ
ಮೇ 31ರಿಂದ ಬುಧಾದಿತ್ಯ ಯೋಗ ವೃಷಭ ರಾಶಿಯ ಲಗ್ನ ಮನೆಯಲ್ಲಿ ನಡೆಯುವುದು. ಈ ಯೋಗವು ನಿಮಗೆ ತುಂಬಾ ಫಲಪ್ರದವಾಗಿದೆ. ಈ ಯೋಗದಿಂದಾಗಿ ನಿಮಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ, ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ಇನ್ನು ನಿಮ್ಮ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶ ಸಿಗಲಿದೆ. ಇನ್ನು ನಿಮ್ಮ ಯಾವುದಾದರು ಕೆಲಸ ಅಪೂರ್ಣವಾಗಿದ್ದರೆ ಅದು ಪೂರ್ಣವಾಗಲಿದೆ. ಆರ್ಥಿಕವಾಗಿಯೂ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ
ಬುಧಾದಿತ್ಯ ಯೋಗದಿಂದಾಗಿ ಕರ್ಕ ರಾಶಿಯವರೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಅದರಲ್ಲೂ ವೃಷಭ ರಾಶಿಯಲ್ಲಿ ಬುಧಾದಿತ್ಯ ಯೋಗ ಉಂಟಾದಾಗ ನೀವು ನಿಮ್ಮ ಆದಾಯದಲ್ಲಿ ಹೆಚ್ಚಳ ಕಾಣಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಇನ್ನು ಕೆಲಸದಲ್ಲಿಯೂ ಹೊಸ ಜವಾಬ್ದಾರಿ ಸಿಗಲಿದೆ. ನಿಮ್ಮ ಸ್ಥಾನದಲ್ಲಿ ಬಡ್ತಿ ಸಿಗಲಿದೆ, ಸಂಬಳವೂ ಹೆಚ್ಚಾಗುವುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ನಿರ್ಧಾರ ತೆಗೆದುಕೊಳ್ಳುವ ಸೂಚನೆಯಿದೆ. ಇನ್ನು ಈ ಅವಧಿಯಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಬುಧಾದಿತ್ಯ ಯೋಗದಿಂದಾಗಿ ನಿವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಉದ್ಯೋಗಿಗಳು ಈ ಅವಧಿಯಲ್ಲಿ ಶುಭ ಸುದ್ದಿ ಪಡೆಯುತ್ತೀರಿ, ನಿಮ್ಮ ಸಂಬಳ ಹೆಚ್ಚಾಗಲಿದೆ. ಇನ್ನು ಈ ಅವಧಿಯಲ್ಲಿ ನೀವು ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದರ ಈ ಅವಧಿ ಉತ್ತಮವಾಗಿರಲಿದೆ. ನಿರುದ್ಯೋಗಿಗಳು ಕೆಲಸಕ್ಕಾಗಿ ಪ್ರಯತ್ನಿಸಿದರೆ ನಿಮಗೆ ಉತ್ತಮ ಪ್ರಯೋಜನ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











