Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಅಕ್ಟೋಬರ್‌ನಲ್ಲಿ ಸಂಭವಿಸಲಿದೆ 2 ಗ್ರಹಣ: ಗ್ರಹಣ ನವರಾತ್ರಿ ಪೂಜೆ ಮೇಲೆ ಪ್ರಭಾವ ಬೀರುವುದೇ?
ಅಕ್ಟೋಬರ್ ತಿಂಗಳಿನಲ್ಲಿ ಎರಡು ಗ್ರಹಗಳು ಸಂಭವಿಸಲಿದೆ. ಗ್ರಹಣವನ್ನು ವಿಜ್ಞಾನವು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ಜ್ಯೋತಿಷ್ಯ ಶಾಸ್ತ್ರವು ಗ್ರಹಣವನ್ನು ಅಶುಭ ಎಂದು ಪರಿಗಣಿಸುತ್ತದೆ. ಗ್ರಹಣ ಎಂಬುವುದು ನಭೋಮಂಡಲದಲ್ಲಿ ನಡೆಯುವ ಒಂದು ಘಟನೆಯಾಗಿದೆ. ಎರಡು ಬಗೆಯ ಗ್ರಹಣವು ಸಂಭವಿಸುವುದು. ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ. ಈ ಅಕ್ಟೋಬರ್‌ನಲ್ಲಿ ಈ ಎರಡೂ ಗ್ರಹಣಗಳು ಅಕ್ಟೋಬರ್‌ನಲ್ಲಿ ಸಂಭವಿಸಲಿದೆ.

ಸೂರ್ಯಗ್ರಹಣ ಯಾವಾಗ ಸಂಭವಿಸುವುದು?
ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯ ಹಾಗೂ ಭೂಮಿಯ ಮಧ್ಯೆ ಬಂದಾಗ ಸೂರ್ಯನಿಂದ ಭೂಮಿಗೆ ಬರುವ ಬೆಳಕನ್ನು ತಡೆಹಿಡಿಯುತ್ತದೆ. ಹೀಗಾಗಿ ಆ ಸಮಯದಲ್ಲಿ ಗ್ರಹಣ ಉಂಟಾಗುವುದು. ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಾಗ ಸೂರ್ಯಗ್ರಹಣ ಸಂಭವಿಸುವುದು.
ಚಂದ್ರಗ್ರಹಣ ಎಂದರೇನು?
ಚಂದ್ರ ಹಾಗೂ ಸೂರ್ಯನ ನಡುವೆ ಭೂಮಿ ಅಡ್ಡ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುತ್ತದೆ, ಹೀಗೆ ಸುತ್ತುವಾಗ ಚಂದ್ರನ ಮೇಲೆ ಭೂಮಿಯ ನೆರಳು ಬಿದ್ದಾಗ ಚಂದ್ರಗ್ರಹಣ ಸಂಭವಿಸುವುದು.
ಅಕ್ಟೋಬರ್‌ನಲ್ಲಿ ಸಂಭವಿಸಲಿದೆ 2 ಗ್ರಹಣ
ಅಕ್ಟೋಬರ್‌ನಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ
ಸೂರ್ಯಗ್ರಹಣ ಈ ತಿಂಗಳು ಅಕ್ಟೋಬರ್ 14ರಂದು ಸಂಭವಿಸಲಿದೆ.
ಸೂರ್ಯಗ್ರಹಣ ಸಮಯ: ಅಕ್ಟೋಬರ್ 14 ರಾತ್ರಿ 11:29ಕ್ಕೆ ಪ್ರಾರಂಭವಾಗಿ 11:34ಕ್ಕೆ ಮುಕ್ತಾಯವಾಗಲಿದೆ. (ಭಾರತದ ಕಾಲಮಾನ)
ಎಲ್ಲೆಲ್ಲಿ ಗೋಚರಿಸಲಿದೆ?
ಆಫ್ರಿಕಾದ ಪಶ್ಚಿಮ ಭಾಗ, ಫೆಸಿಪಿಕ್, ಅಂಟ್ಲಾಟಿಕ್ ಸಾಗರ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಮೆಕ್ಸಿಕೋ ಈ ಭಾಗದಲ್ಲಿ ಗೋಚರಿಸುವುದು.
ಚಂದ್ರಗ್ರಹಣ
ಚಂದ್ರಗ್ರಹಣ ಸಮಯ: ಅಕ್ಟೋಬರ್ 28 ರಾತ್ರಿ 11:31ಕ್ಕೆ ಪ್ರಾರಂಭವಾಗಿ ಮುಂಜಾನೆ 3:36ರವರೆಗೆ ಇರಲಿದೆ.
ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ
ಸೂರ್ಯಗ್ರಹಣ ಅಕ್ಟೋಬರ್ 14ರಂದು ಭಾರತದ ಕಾಲಮಾನ ರಾತ್ರಿಯಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ.
ನವರಾತ್ರಿ ಸಮಯದಲ್ಲಿ ಸೂರ್ಯಗ್ರಹಣ
ಗ್ರಹಣವನ್ನು ಹಿಂದೂ ಧರ್ಮದಲ್ಲಿ ಶುಭ ಎಂದು ಪರಿಗಣಿಸುವುದಿಲ್ಲ. ನವರಾತ್ರಿಯ ಸಮಯದಲ್ಲಿ ಗ್ರಹಣ ಬಂದಿರುವುದಿಂದ ನವರಾತ್ರಿಯ ಪೂಜೆಗೆ ಧಕ್ಕೆಯಾಗುವುದೇ ಎಂಬ ಪ್ರಶ್ನೆ ಕೆಲವರ ಮನದಲ್ಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಅಲ್ಲದೆ ಗ್ರಹಣದ 9 ಗಂಟೆಯ ಮೊದಲು ಸೂತಕದ ಅವಧಿಯು ಮುಗಿಯುತ್ತದೆ. ಆದ್ದರಿಂದ ನವರಾತ್ರಿ ಶುರುವಾಗುವಾಗ ಸೂರ್ಯಗ್ರಹಣದ ಸೂತಕವಿರುವುದಿಲ್ಲ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
