ಕಾಳ ಸರ್ಪ ದೋಷದಲ್ಲಿ 12 ವಿಧಗಳಿವೆ: ಈ ದೋಷದಿಂದ ಉಂಟಾಗುವ ಪರಿಣಾಮವೇನು?

ಕಾಳಸರ್ಪ ದೋಷ ವ್ಯಕ್ತಿಯ ಹಿಂದಿನ ಕರ್ಮದಿಂದಾಗಿ ಉಂಟಾಗುವುದು ಎಂದು ಹೇಳಲಾಗುವುದು. ಇನ್ನು ಹಾವನ್ನು ಸಾಯಿಸುವುದರಿಂದ ಕೂಡ ಸರ್ಪ ದೋಷ ಉಂಟಾಗುವುದು.

ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ರಾಹು-ಕೇತುವನ್ನು ನೆರಳಿನ ಗ್ರಹವೆಂದು ಪರಿಗಣಿಸಲಾಗಿದೆ. ಇತರ ಗ್ರಹಗಳು ರಾಹು-ಕೇತು ನಡುವೆ ಬಂದಾಗ ಅವಳ ಒಳ್ಳೆಯ ಪ್ರಭಾವ ಬೀರಲು ಬಿಡುವುದಿಲ್ಲ , ಇದರಿಂದಾಗಿ ಆ ವ್ಯಕ್ತಿ ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ.

ಈ ಕಾಳ ಸರ್ಪ ದೋಷದಲ್ಲಿ ಒಟ್ಟು 12 ಬಗೆಯ ಸರ್ಪ ದೋಷವಿದೆ:

Kala sarpa dosha

ಅನಂತ್‌ ಕಾಳ ಸರ್ಪ ದೋಷ

ರಾಹು- ಕುಂಡಲಿಯ ಮೊದಲ ಮನೆಯಲ್ಲಿ ಕೇತು 7ನೇ ಮನೆಯಲ್ಲಿ ಇದ್ದಾಗ ರಾಹು-ಕೇತು ದೋಷ ಉಂಟಾಗುವುದು. ಈ ಅನಂತ್‌ ಕಾಳ ಸರ್ಪ ದೋಷವಿದ್ದರೆ ವ್ಯಕ್ತಿ ದೀರ್ಘಾವಧಿ ಕಷ್ಟವನ್ನು ಅನುಭವಿಸಬೇಕಾಗುವುದು.

ಗುಳಿಗ ಕಾಲ ಸರ್ಪ ದೋಷ

ರಾಹು 2ನೇ ಮನೆಯಲ್ಲಿ ಕತು 8ನೇ ಮನೆಯಲ್ಲಿ ಇದ್ದಾಗ ಗಿಳಿಗ ಕಾಲ ಸರ್ಪ ದೋಷ ಉಂಟಾಗುವುದು. ಇದರಿಂದಾಗಿ ಆರ್ಥಿಕವಾಗಿ ತುಂಬಾನೇ ನಷ್ಟ ಉಂಟಾಗುವುದು, ಅವಮಾನ, ಹಲವಾರು ಸಮಸ್ಯೆಗಳನ್ನು ಉಂಟಾಗುವುದು.

ವಾಸುಕಿ ಕಾಳ ಸರ್ಪ ದೋಷ

ರಾಹು 3ನೇ ಮನೆಯಲ್ಲಿ ಕೇತು 9ನೇ ಮನೆಯಲ್ಲಿ ಇದ್ದಾಗ ವಾಸುಕಿ ಕಾಳ ಸರ್ಪ ದೋಷ ಉಂಟಾಗುವುದು. ಇದರಿಂದಾಗಿ ಕುಟುಂಬದಲ್ಲಿ ನೆಮ್ಮದಿ ಕಡಿಮೆಯಾಗುವುದು, ಆದರೆ ಒಂದು ಒಳ್ಳೆಯ ವಿಷಯವೆಂದರೆ ಆರ್ಥಿಕವಾಗಿ ಪ್ರಗತಿ ಇರಲಿದೆ.

ಶಂಖಫಲ ಕಾಳ ಸರ್ಪ ದೋಷ

ಕುಂಡಲಿಯ 4ನೇ ಮನೆಯಲ್ಲಿ ರಾಹು 10ನೇ ಮನೆಯಲ್ಲಿ ಕೇತುವಿದ್ದರೆ ಶಂಖಫಲ ಕಾಳ ಸರ್ಪ ದೋಷ ಉಂಟಾಗುವುದು. ಇದರಿಂದಾಗಿ ಆರ್ಥಿಕ ನಷ್ಟ ಉಂಟಾಗುವುದು, ಜೀವನದಲ್ಲಿ ಸೆಟ್ಲ್‌ ಆಗುವುದು ಕಷ್ಟವಾಗುವುದು.

ಪದ್ಮ ಕಾಳ ಸರ್ಪ ದೋಷ

ರಾಹು 5ನೇ ಮನೆಯಲ್ಲಿ ಕೇತು 11ನೇ ಮನೆಯಲ್ಲಿ ಇದ್ದಾಗ ಪದ್ಮ ಕಾಳ ಸರ್ಪ ದೋಷ ಉಂಟಾಗುವುದು. ಇದು ವಿದ್ಯಾರ್ಥಿಗಳಿಗೆ ಯಶಸ್ಸು ಕೊಡುವುದಿಲ್ಲ. ಈ ಅವಧಿಯಲ್ಲಿ ಮಕ್ಕಳ ಕಡೆಗೆ ಗಮನಹರಿಸಬೇಕು. ವೃತ್ತಿ ಬದುಕಿನಲ್ಲಿ ಹಲವು ಸಮಸ್ಯೆಗಳು ಇರುವುದು.

ಮಹಾಪದ್ಮ ಕಾಳ ಸರ್ಪ ದೋಷ

ಕುಂಡಲಿಯಲ್ಲಿ ರಾಹು 6ನೇ ಮನೆಯಲ್ಲಿ ಕೇತು 12ನೇ ಮನೆಯಲ್ಲಿ ಇದ್ದಾಗ ಮಹಾಪದ್ಮ ಕಾಳ ಸರ್ಪ ದೋಷ ಉಂಟಾಗುವುದು. ಈ ದೋಷದಿಂದಾಗಿ ಮನಸ್ಸಿನ ನೆಮ್ಮದಿ ಹಾಳಾಗುವುದು, ನಕರಾತ್ಮಕ ಚಿಂತೆ ಹೆಚ್ಚಾಗುವುದು.

ತಕ್ಷಕ ಕಾಳ ಸರ್ಪ ದೋಷ

ರಾಹು 7ನೇ ಮನೆಯಲ್ಲಿ ಕೇತು 1ನೇ ಮನೆಯಲ್ಲಿ ಇದ್ದಾಗ ತಕ್ಷಕ ಕಾಳ ಸರ್ಪ ದೋಷ ಉಂಟಾಗುವುದು, ಈ ದೋಷವಿದ್ದರೆ ಮದುವೆ ವಿಳಂಬವಾಗುವುದು. ವೈವಾಹಿಕ ಜೀವನದಲ್ಲಿ ತುಂಬಾನೇ ಸಮಸ್ಯೆಗಳು ಉಂಟಾಗುವುದು. ಈ ದೋಷವಿದ್ದರೆ ಪ್ರೀತಿ ಮದುವೆಯಾದರೆ ತುಂಬಾನೇ ಸಮಸ್ಯೆ ಉಂಟಾಗುವುದು.

ಕಾರ್ಕೋಟಕ ಕಾಳ ಸರ್ಪ ದೋಷ

ರಾಹು 8ನೇ ಮನೆಯಲ್ಲಿ ಕೇತು 2ನೇ ಮನೆಯಲ್ಲಿ ಇದ್ದಾಗ ಕಾರ್ಕೋಟಕ ಕಾಳ ಸರ್ಪ ದೋಷ ಉಂಟಾಗುವುದು. ಈ ದೋಷದಿಂದಾಗಿ ವೃತ್ತಿ ಬದುಕಿನಲ್ಲಿ ಸಮಸ್ಯೆ ಉಂಟಾಗುವುದು, ಅಲ್ಲದೆ ಇವರು ಹೇಳುವ ಸತ್ಯಗಳು ಇವರಿಗೆ ತುಂಬಾನೇ ಸಮಸ್ಯೆಯನ್ನುಂಟು ಮಾಡುವುದು.

ಶಂಖಚೂರು ಕಾಳ ಸರ್ಪ ದೋಷ

12ನೇ ಮನೆಯಲ್ಲಿ ರಾಹು 6ನೇ ಮನೆಯಲ್ಲಿ ಕೇತುವಿದ್ದಾಗ ಈ ದೋಷ ಉಂಟಾಗುವುದು. ಇವರು ಬದುಕಿನಲ್ಲಿ ತುಂಬಾನೇ ನೋವು ಅನುಭವಿಸಬೇಕಾಗುತ್ತದೆ.

ಘಟಕ ಕಾಳ ಸರ್ಪ ದೋಷ

ರಾಹು 10ನೇ ಮನೆಯಲ್ಲು ಕೇತು 4ನೇ ಮನೆಯಲ್ಲಿ ಇದ್ದಾಗ ಘಟಕ ಕಾಳ ಸರ್ಪ ದೋಷ ಉಂಟಾಗುವುದು, ಈ ಸರ್ಪ ದೋಷದಿಂದಾಗಿ ಆ ವ್ಯಕ್ತಿಯಲ್ಲಿ ಅಹಂ ಹೆಚ್ಚಿರುತ್ತದೆ, ಇದರಿಂದಾಗಿ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುವುದು

ವಿಷಧರ ಕಾಳ ಸರ್ಪ ದೋಷ

ರಾಹು 11ನೇ ಮನೆಯಲ್ಲಿ ಕೇತು 5ನೇ ಮನೆಯಲ್ಲಿ ಇದ್ದಾಗ ಈ ಸರ್ಪ ದೋಷ ಉಂಟಾಗಯವುದು. ಇದರಿಂದ ವ್ಯಕ್ತಿ ಖಿನ್ನತೆ, ಅತಿಯಾದ ಮಾನಸಿಕ ಒತ್ತಡ ಹೆಚ್ಚಾಗುವುದು. ಹಣವನ್ನು ಜೂಜು-ಲಾಟರಿ ಅಂತ ಖರ್ಚು ಮಾಡುತ್ತಾರೆ.

ಶೇಷನಾಗ ಕಾಳ ಸರ್ಪ ದೋಷ
ರಾಹು 12ನೇ ಮನೆಯಲ್ಲಿ ಕೇತು 6ನೇ ಮನೆಯಲ್ಲಿ ಇದ್ದಾಗ ಈ ಸರ್ಪ ದೋಷ ಉಂಟಾಗುವುದು. ಈ ದೋಷದಲ್ಲಿ ಹುಟ್ಟಿದವರ ಆಸೆ ಈಡೇರುವುದು, ಆದರೆ ಸ್ವಲ್ಪ ನಿಧಾನವಾಗುವುದು. ಆದರೆ ಇವರಿಗೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಗುಣವಿರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

12 Types Of Kala Sarapa Dosha : How It Affects In Kannada

There are 12 types of Kala sarpa dosha, what are the problem people face due to this dosha, read on...
Story first published: Friday, June 7, 2024, 13:30 [IST]
X
Desktop Bottom Promotion