ಈ 3 ರಾಶಿಗಳ ಜೀವನದಲ್ಲಿ ಹೊಸ ತಿರುವು! ಇವರು ಲವರ್‌ನ ಕುಟುಂಬದವರಿಗೆ ಪರಿಚಯಿಸಬಹುದು

ಮೂರು ರಾಶಿಯವರ ಪ್ರೇಮ ಜೀವನದಲ್ಲಿ ಹೊಸ ಅಲೆ! ವಿವಾಹ ಯೋಗವೂ ಇವರಿಗೆ ದಕ್ಕಲಿದೆ. ವೃಷಭ ರಾಶಿಯವರು ತಮ್ಮ ಪ್ರೇಯಸಿಯನ್ನು ಕುಟುಂಬಕ್ಕೆ ಪರಿಚಯಿಸಬಹುದು. ಮಿಥುನ ರಾಶಿಯವರಿಗೆ ತಮ್ಮ ಲವರ್ ಅಥವಾ ಸಂಗಾತಿ ಜೊತೆಗೆ ಪ್ರಯಾಣಿಸುವ ಅವಕಾಶವಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (07 October Love Horoscope) ಪ್ರೇಮ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಇಂದಿನ ದಿನವು ಮೇಷ ರಾಶಿಯವರ ಪ್ರೇಮ ಜೀವನಕ್ಕೆ ಸಂತೋಷ ತರಲಿದೆ. ನಿಮ್ಮ ಮನಸ್ಸಿನ ಮಾತನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ. ಸಿಂಗಲ್ಸ್ ಆಗಿರುವವರು ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುವರು. ಇದು ನಿಮಗೆ ಹೊಸ ಅವಕಾಶಗಳನ್ನು ಒದಗಿಸಲಿದೆ.

ವೃಷಭ ರಾಶಿ

ವೃಷಭ ರಾಶಿಯವರ ಹಳೆಯ ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಗಳು ದೂರಾಗಲಿವೆ. ನಿಮ್ಮ ಪ್ರೇಯಸಿಯನ್ನು ಕುಟುಂಬಕ್ಕೆ ಪರಿಚಯಿಸಬಹುದು. ಕೆಲಸದ ಒತ್ತಡ ಮಾನಸಿಕ ಸ್ಥಿತಿಗೆ ಧಕ್ಕೆ ತರಬಹುದು. ಇದರಿಂದ ಪ್ರಮುಖ ಸಂಬಂಧಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

Today Love Horoscope 07 October 2025

ಮಿಥುನ ರಾಶಿ

ಮಿಥುನ ರಾಶಿಯವರ ವೈವಾಹಿಕ ಜೀವನ ಸುಖಮಯವಾಗಿರಲಿದೆ. ನಿಮಗೆ ಸಂಗಾತಿಯೊಂದಿಗೆ ಪ್ರಯಾಣಿಸುವ ಅವಕಾಶವಿದೆ. ಅಲ್ಲಿ ನೀವು ಅವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮಿಬ್ಬರ ಸಂಬಂಧಗಳಲ್ಲಿ ಪ್ರೀತಿ ಹೆಚ್ಚುತ್ತದೆ. ಸಿಂಗಲ್ಸ್ ಮದುವೆಯ ಮಾತುಕತೆ ನಡೆಸಲಿದ್ದಾರೆ. ಮನದ ಮಾತುಗಳನ್ನು ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ.

ಕರ್ಕಾಟಕ ರಾಶಿ

ಪ್ರೀತಿಯಲ್ಲಿ ನೋವು ಅನುಭವಿಸಿದ ಕರ್ಕಾಟಕ ರಾಶಿಯವರು, ಇಂದು ಆ ವಿಷಯವನ್ನು ತಮ್ಮ ಆಪ್ತರೊಂದಿಗೆ ಚರ್ಚಿಸುವರು. ನಿಮ್ಮ ಕ್ರಶ್ ಜೊತೆ ಮಾತನಾಡುವುದರಿಂದ ಸಂಬಂಧ ಗಾಢವಾಗಬಹುದು. ಕುಟುಂಬ ಸದಸ್ಯರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಮೂಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರ ಪ್ರೇಮ ಜೀವನವು ಸಂತೋಷದಿಂದ ಕೂಡಿರುತ್ತದೆ. ಆದರೆ, ನಿಮ್ಮ ಮನಸ್ಸು ಹಳೆಯ ವಿಷಯಗಳಲ್ಲಿ ಸಿಲುಕಿಕೊಳ್ಳಬಹುದು. ಜೀವನದಲ್ಲಿ ಬಂದ ಹೊಸ ವ್ಯಕ್ತಿಯೊಂದಿಗೆ ಹಿಂಜರಿಕೆ ಇಲ್ಲದೆ ಮುನ್ನಡೆಯಿರಿ. ನಿಮಗೆ ಪ್ರಣಯದ ಅವಕಾಶಗಳು ದೊರೆಯಲಿದ್ದು, ಈ ದಿನ ಸ್ಮರಣೀಯವಾಗಲಿದೆ.

ಕನ್ಯಾ ರಾಶಿ

ಇಂದು ಕನ್ಯಾ ರಾಶಿಯವರಿಗೆ ಶುಭ ದಿನ. ಕುಟುಂಬ ಸದಸ್ಯರ ಮುಂದೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಮುಖ್ಯ. ನೀವು ಇಂದು ಪ್ರೇಯಸಿಯನ್ನು ಭೇಟಿಯಾಗಲು ಯೋಜಿಸಬಹುದು.

ತುಲಾ ರಾಶಿ

ತುಲಾ ರಾಶಿಯವರು ತಮ್ಮ ಸಂಬಂಧಗಳಲ್ಲಿ ಪ್ರೀತಿಯನ್ನು ಹೆಚ್ಚಿಸಲು ಪ್ರಯತ್ನಿಸುವಿರಿ. ಕೆಲಸದ ಒತ್ತಡದಿಂದಾಗಿ ಉಂಟಾದ ಸಮಸ್ಯೆಯನ್ನು ಸಂಗಾತಿಯೊಂದಿಗೆ ಚರ್ಚಿಸುವಿರಿ. ಈ ದಿನ ಡಿನ್ನರ್ ಡೇಟ್ ಮೂಲಕ ಸಂಬಂಧಕ್ಕೆ ಹೊಸ ಮೆರಗು ನೀಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ವಿವಾಹಕ್ಕಾಗಿ ವಿಶೇಷ ಪ್ರಸ್ತಾಪವೊಂದು ಬರಲಿದೆ. ಕುಟುಂಬ ಸದಸ್ಯರಿಗಾಗಿ ಸಂಗಾತಿಯೊಂದಿಗೆ ಸೇರಿ ಪಾರ್ಟಿ ಆಯೋಜಿಸುವಿರಿ. ಈ ಸಮಯದಲ್ಲಿ ನಿಮಗಾಗಿ ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಉತ್ತಮ.

ಧನು ರಾಶಿ

ಧನು ರಾಶಿಯವರಿಗೆ ಈ ದಿನವು ಪ್ರಣಯದಿಂದ ಕೂಡಿರುತ್ತದೆ. ನಿಮ್ಮ ಸಂಬಂಧದಲ್ಲಿ ಏಕತೆಗೆ ನೀವು ಆದ್ಯತೆ ನೀಡುವಿರಿ. ಸಾಧ್ಯವಾದಷ್ಟು ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ ಮತ್ತು ಯಾವುದೇ ವಿವಾದಗಳಲ್ಲಿ ತೊಡಗಬೇಡಿ.

ಮಕರ ರಾಶಿ

ಮಕರ ರಾಶಿಯವರ ಪ್ರೇಮ ಜೀವನದಲ್ಲಿ ಹಲವು ಬದಲಾವಣೆಗಳು ಬರಲಿವೆ. ನೀವು ಸಂಗಾತಿಯೊಂದಿಗೆ ಮಾತನಾಡಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಮದುವೆಯ ಕಡೆಗೆ ಹೆಜ್ಜೆ ಇಡಬಹುದು.

ಕುಂಭ ರಾಶಿ

ನಿಮ್ಮ ಈ ದಿನವು ನಿರೀಕ್ಷೆಗಳಿಂದ ಕೂಡಿರುತ್ತದೆ. ಮನೆಯಲ್ಲಿ ಮತ್ತು ಹೊರಗೆ ಕುಟುಂಬದ ಬೆಂಬಲ ಸಿಗಲಿದೆ. ಕುಂಭ ರಾಶಿಯ ಅವಿವಾಹಿತರ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಸಮಯ ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಯಾವುದೋ ಮಾತು ನಿಮಗೆ ನೋವುಂಟು ಮಾಡಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

07 October Love Horoscope: daily horoscope prediction For 12 Zodiac signs in kannada

07 October Love Horoscope: daily horoscope prediction For 12 Zodiac signs in kannada
Story first published: Tuesday, October 7, 2025, 7:00 [IST]
X
Desktop Bottom Promotion